ಹೊಸ ಸೌಲಭ್ಯವನ್ನು ಈಗ ಗೂಗಲ್ ಪೇ ನೀಡಿದೆ : ಗೂಗಲ್ ಪೇ ಉಪಯೋಗಿಸುವವರಿಗೆ ಇದೊಂದು ಹೊಸ ಸೇವೆಯಾಗಿದೆ
ನಮಸ್ಕಾರ ಸ್ನೇಹಿತರೆ ಇಂದು ಪ್ರಪಂಚದಾದ್ಯಂತ ಡಿಜಿಟಲ್ ಪಾವತಿ ಪ್ಲಾಟ್ ಫಾರ್ಮ್ ನಡೆಯುತ್ತಿದ್ದು, ಈ ಪಾವತಿ ಫ್ಲಾಟ್ ಫಾರ್ಮಗಳಲ್ಲಿ ಯುಪಿಐ ಕೂಡ ಒಂದಾಗಿದೆ. ಪ್ರಪಂಚದಾದ್ಯಂತ ಹಾಗೂ ನಮ್ಮ ದೇಶದಲ್ಲಿಯೂ ಸಹ ಇಂದು ಆನ್ಲೈನ್ ಮೂಲಕ ವ್ಯಾಪಾರ ವಹಿವಾಟುಗಳು ಹೆಚ್ಚಾಗುತ್ತಿದ್ದು ,ಅದರಲ್ಲಿ ಯುಪಿಐ ವಹಿವಾಟುಗಳು ಹೆಚ್ಚಾಗಿದೆ. ಇದರ ಮೂಲಕ ಅನೇಕ ರೀತಿಯ ಸೌಲಭ್ಯಗಳು ಬಿಡುಗಡೆಗೊಳ್ಳುತ್ತಲೇ ಇವೆ. ಅಂತಹ ಕೆಲವು ಸೌಲಭ್ಯಗಳನ್ನು ಈ ಕೆಳಗಿನಂತೆ ನಿಮಗೆ ತಿಳಿಸಲು ಇಚ್ಛಿಸುತ್ತೇನೆ.
ಗೂಗಲ್ ಪೇ ಅಪ್ಲಿಕೇಶನ್ ನ ಹೊಸ ಸೌಲಭ್ಯ :
ಆಧುನಿಕ ಯುಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಯುಪಿಐ ಪಾವತಿ ಅಪ್ಲಿಕೇಶನ್ ಗಳಲ್ಲಿ ಒಂದಾದ ಗೂಗಲ್ ಪೇ ತನ್ನ ಬಳಕೆದಾರರಿಗೆ ಹೊಸ ಹೊಸ ಸೌಲಭ್ಯಗಳನ್ನು ಜಾರಿಗೊಳಿಸುತ್ತಿದೆ. ಅದರಂತೆ ಈಗ ಗೂಗಲ್ ಪೇ ತಂದ ಬಳಕೆದಾರರಿಗೆ ಹೊಸ ಸೌಲಭ್ಯವನ್ನು ಪರಿಚಯಿಸಲು ಮುಂದಾಗಿದೆ.
ಈ ಸೌಲಭ್ಯದ ಲಾಭವನ್ನು ಗೂಗಲ್ ಪೇ ಬಳಕೆದಾರರು ಪಡೆಯಬಹುದಾಗಿದೆ. ಪೇಟಿಎಂ ಆಪ್ ತನ್ನ ಆಪ್ ನಲ್ಲಿ ಯುಪಿಐ ಲೈಟ್ ಅನ್ನು ಈ ವರ್ಷದ ಮಾರ್ಚ್ ನಲ್ಲಿ ಪ್ರಾರಂಭಿಸಿತು. ಅದರಂತೆ ಫೋನ್ ಪೇ ಕೂಡ ಈಗಾಗಲೇ ತನ್ನ ಆಪ್ ನಲ್ಲಿ ಯುಪಿಐ ಲೈಟ್ ಪ್ರಾರಂಭ ಗೊಳಿಸಿದೆ. ಹಾಗೆಯೇ ಗೂಗಲ್ ಪೇನು ಸಹ ಯುಪಿಐ ಲೈಟ್ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ನೀಡಲು ಮುಂದಾಗಿದೆ. ಅದರಂತೆ ಗ್ರಾಹಕರು ಇನ್ನು ಮುಂದೆ ಈ ಸೌಲಭ್ಯವನ್ನು ಬಳಸಬಹುದು.
ಯುಪಿಐ ಲೈಟ್ ಎಂದರೇನು ? :
ಫೋನ್ ಪೇ, ಪೇಟಿಎಂ ಮೊದಲಾದ ಆನ್ಲೈನ್ ಪಾವತಿ ವಹಿವಾಟುಗಳು ಈ ಯುಪಿಐ ಲೈಟ್ ಅಪ್ಲಿಕೇಶನ್ ಅನ್ನು ಪರಿಚಯಿಸುತ್ತಿವೆ. ಈ ಯುಪಿಐ ಲೈಟ್ ನಾ ಮೂಲಕ ಗ್ರಾಹಕರು ಸಣ್ಣ ಮೌಲ್ಯದ ವಹಿವಾಟುಗಳ ಜೊತೆಗೆ ಬ್ಯಾಂಕ್ ಸ್ಟೇಟ್ಮೆಂಟ್ ಗಳು ಹಾಗೂ ಪಾಸ್ ಬುಕ್ ಗಳನ್ನು ಡಿಕ್ಲೇರ್ ಮಾಡಲು ಸಹಾಯ ಮಾಡುತ್ತಿವೆ. ಈ ಒಂದು ಸೌಲಭ್ಯದಿಂದ ಬಳಕೆದಾರರಿಗೆ ಗೂಗಲ್ ಪೇ ನಲ್ಲಿ ಯುಪಿಐ ಲೈಟ್ ಬಳಕೆಯು ಸಾಕಷ್ಟು ಅನುಕೂಲವನ್ನು ಮಾಡಿಕೊಡುತ್ತದೆ. ಇದರಿಂದ ಗೂಗಲ್ ಪೇ ಬಳಕೆದಾರರು ಯುಪಿಐ ಲೈಟ್ ಲಾಭವನ್ನು ಮುಂದಿನ ದಿನಗಳಲ್ಲಿ ಪಡೆಯಬಹುದಾಗಿದೆ.
ಯಾವುದೇ ರೀತಿಯ ಪಿನ್ನನ್ನು ಯುಪಿಐ ಯಲ್ಲಿ ಹಾಕುವ ಅಗತ್ಯವಿಲ್ಲ :
ಗೂಗಲ್ ಪೇ ತನ್ನ ಬಳಕೆದಾರರಿಗೆ ಹೊಸ ಸೌಲಭ್ಯವನ್ನು ಪರಿಚಯಿಸುವುದರ ಮೂಲಕ ಪಿನ್ ಅನ್ನು ಹಾಕದೆಯೇ ತಮ್ಮ ಖಾತೆಯಿಂದ 200 ರೂಪಾಯಿಗಿಂತ ಕಡಿಮೆ ಮೌಲ್ಯದ ಪಾವತಿಗಳನ್ನು ಯುಪಿಐ ಲೈಟ್ ಮೂಲಕ ಮಾಡಬಹುದಾಗಿದೆ. ಭಾರತದ ಅತ್ಯಂತ ಇರುವ ಎಲ್ಲಾ ಪ್ರಮುಖ ಬ್ಯಾಂಕ್ ಗಳು ಗೂಗಲ್ ಪೇ ನಲ್ಲಿರುವ ಯುಪಿಐ ಲೈಟ್ ಅನ್ನು ಬೆಂಬಲಿಸಿದ್ದು, ದೇಶದಾದ್ಯಂತ ಎಲ್ಲಾ ವ್ಯಾಪಾರಿಗಳು ಯುಪಿಐ ಹಾಗೂ ಕ್ಯೂಆರ್ ಕೋಡ್ ಗಳಲ್ಲಿ ತಮ್ಮ ವ್ಯಾಪಾರ ವಹಿವಾಟುವನ್ನು ಸ್ವೀಕರಿಸಲಾಗಿದೆ ಎಂದು ಗೂಗಲ್ ಪೇ ಹೇಳಿಕೊಂಡಿದೆ.
ಇದನ್ನು ಓದಿ : ಇಡೀ ದಿನ 1 GB ಡಾಟಾ[DATA] ಖಾಲಿಯಾಗದಂತೆ ಬಳಸುವುದು ಹೇಗೆ? ಹಾಗಾದರೆ ಈ ಟ್ರಿಕ್ಸ್ ಟ್ರೈ ಮಾಡಿ
ಯುಪಿಐ ಲೈಟ್ ಅನ್ನು ಗೂಗಲ್ ಪೇ ನಲ್ಲಿ ಬಳಸುವ ವಿಧಾನ :
ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಅನ್ನು ಓಪನ್ ಮಾಡಿದ ನಂತರ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಬೇಕು. ಕ್ಲಿಕ್ ಮಾಡಿದ ನಂತರ ಯುಪಿಐ ಲೈಟ್ ಆಯ್ಕೆ ಕಾಣಿಸುತ್ತದೆ. ಅದರಲ್ಲಿ ಯುಪಿಐ ಲೈಟ್ ಪೇ ಪಿನ್ ಫ್ರೀ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಅದು ತೋರಿಸುವ ಸೂಚನೆಗಳನ್ನು ಅನುಸರಿಸಬೇಕು. ಹಾಗೆಯೇ ತಮ್ಮ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬೇಕು. ಇದರಿಂದ ನೀವು ಯಶಸ್ವಿಯಾಗಿ ಯುಪಿಐ ಪಿನ್ ನಮೂದಿಸಿದ ತಕ್ಷಣ ಯುಪಿಐ ಲೈಟ್ ಖಾತೆಯು ಸಕ್ರಿಯಗೊಳ್ಳುತ್ತದೆ. ಯುಪಿಐ ಖಾತೆಯನ್ನು ಗೂಗಲ್ ಪೇ ನಲ್ಲಿ ಕೇವಲ ಒಂದನ್ನು ಮಾತ್ರ ನೀವು ರಚಿಸಬಹುದು.
ಹೀಗೆ ಗೂಗಲ್ ಪೇ ತನ್ನ ಹೊಸ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ನೀಡಿದ್ದು ಇದರಿಂದ ನಾವುಗಳು ಸುಲಭವಾಗಿ ಆನ್ಲೈನ್ ಪಾವತಿಯನ್ನು ಬಹಳ ಬೇಗನೆ ಮಾಡಬಹುದಾಗಿದೆ. ಇದರ ಮೂಲಕ ಯಾವುದೇ ಅಡೆತಡೆಗಳಿಲ್ಲದೆ ನಮ್ಮ ಕೆಲಸಗಳನ್ನು ನಾವು ಆದಷ್ಟು ಬೇಗ ಮುಗಿಸಿಕೊಳ್ಳಲು ಸಹಕಾರಿಯಾಗುತ್ತದೆ.
ನಿಮಗೆ ತಿಳಿಸಿದ ಈ ಮಾಹಿತಿಯು ಸಹಕಾರಿಯಾಗುತ್ತದೆ ಎಂದು ಭಾವಿಸುತ್ತೇನೆ. ನೀವು ಸಹ ಈ ಸೌಲಭ್ಯವನ್ನು ಪಡೆಯಿರಿ ಹಾಗೂ ನಿಮ್ಮ ಸ್ನೇಹಿತರಿಗೂ ಈ ಸೌಲಭ್ಯದ ಬಗ್ಗೆ ತಿಳಿಸಿ ಅವರು ಸಹ ಈ ಸೌಲಭ್ಯದ ಪ್ರಯೋಜನವನ್ನು ಪಡೆಯಲಿ ಧನ್ಯವಾದಗಳು.
ಇತರೆ ವಿಷಯಗಳು :
ಹೆಚ್ಚಾಗಲಿದೆ ನಂದಿನಿ ಹಾಲಿನ ದರ 5ರೂ ಕೆಎಂಎಫ್ ಅಧ್ಯಕ್ಷರು ಹೇಳೋದೇನು ..?
ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ, ಹಿರಿಯ ನಾಗರಿಕರಿಗೆ ಉಚಿತ 3000 ರೂಪಾಯಿಯ ಯೋಜನೆ