ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣ ಬಂದಿದೆಯೇ? ಇಲ್ಲವೇ ಹೇಗೆ ಚೆಕ್‌ ಮಾಡುವುದು, ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

0

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ಆರಂಭಿಸಿದ ಖಾತರಿ ಯೋಜನೆಯಾದ ಭಾಗ್ಯ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರವು ಫಲಾನುಭವಿಗಳಿಗೆ ನೇರನಗದನ್ನು ವರ್ಗಾಯಿಸುವಂತೆ ಹೇಳಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ನೇರನಗದು ವರ್ಗಾಯಿಸುವ ಪ್ರಕ್ರಿಯೆಯನ್ನು ಸೋಮವಾರದಂದು ಚಾಲನೆ ನೀಡಿದ್ದರು. ಅದರಂತೆ ನಿಮ್ಮ ಖಾತೆಗಳಿಗೆ ಹಣವು ವರ್ಗಾವಣೆ ಆಗಿದೆಯೇ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನೀವು ಆಹಾರ ಇಲಾಖೆಯ ವೆಬ್ಸೈಟ್ ಲಿಂಕ್ ಗೆ ಹೋಗಿ ಅಲ್ಲಿ ನಿಮ್ಮ ಹಣವು ವರ್ಗಾವಣೆ ಆಗಿದೆಯೇ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

Annabhagya Money Transfer Information
Annabhagya Money Transfer Information

ವೆಬ್ ಸೈಟ್ ಲಿಂಕ್ :

ಅತ್ತಿಗೆ ಬದಲಾಗಿ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಹಣವನ್ನು ಹಾಕುತ್ತಿದ್ದು ಈ ಹಣವು ನಿಮ್ಮ ಖಾತೆಗೆ ಬಂದಿದೆಯೇ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಲು ಹಾಗೂ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಎಷ್ಟು ಹಣ ಜಮಾ ಆಗಿದೆ ಹಾಗೂ ಯಾರ ಖಾತೆಗೆ ಹಣವು ಜಮಾ ಆಗಿದೆ.

ಹಣ ವರ್ಗಾವಣೆ :

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿ ದಾಸ್ತಾನು ಕೊರತೆಯಿಂದಾಗಿ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯ ಬದಲು ಹಣವನ್ನು ಜಮಾ ಮಾಡಲು ರಾಜ್ಯ ಸರ್ಕಾರವು ನಿರ್ಧಾರವನ್ನು ಮಾಡಿತ್ತು ಅದರಂತೆ ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಫಲಾನುಭವಿಗಳ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಿದರು. ಈ ಹಣ ವರ್ಗಾವಣೆಯು ಸದ್ಯ ಎರಡು ಜಿಲ್ಲೆಗಳಲ್ಲಿ ಫಲಾನುಭವಿಗಳಿಗೆ ವರ್ಗಾವಣೆ ಯಾಗುತ್ತಿದ್ದು ವಿವಿಧ ಜಿಲ್ಲೆಗಳ ಫಲಾನುಭವಿಗಳ ಖಾತೆಗೆ ಹಂತ ಹಂತವಾಗಿ ಹಣ ವರ್ಗಾವಣೆಯಾಗಲಿದೆ.

ವೆಬ್ಸೈಟ್ ಲಿಂಕ್ :

ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹಣ ವರ್ಗಾವಣೆ ಆಗಿದೆ ಎಂಬುದರ ಮಾಹಿತಿಯನ್ನು ತಿಳಿಸಿಕೊಡುವ ಪ್ರಯತ್ನದಲ್ಲಿ ಒಂದು ವೆಬ್ಸೈಟ್ ಅನ್ನ ಪೆರಿಯಲಾಗಿದ್ದು ಆ ವೆಬ್ಸೈಟ್ನ ಮೂಲಕ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳು ತಮ್ಮ ಹಣವು ಬಂದಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿನ ಅಧಿಕೃತ ವೆಬ್ಸೈಟ್ ಎಂದರೆ https://ahar.kar.in/status/status_of_dbt.aspx ಈ ವೆಬ್ ಸೈಟನ್ನು ಬಳಸಿ ಅನ್ನಭಾಗ್ಯ ದ ಹಣ ವರ್ಗಾವಣೆ ಆಗಿದೆ ಎಂಬುದರ ಫಲಾನುಭವಿಗಳು ತಿಳಿದುಕೊಳ್ಳಬಹುದಾಗಿದೆ.

ಅನ್ನಭಾಗ್ಯ ಹಣ ವರ್ಗಾವಣೆಯ ಮಾಹಿತಿಗಳು :

ಅನ್ನಭಾಗ್ಯ ವರ್ಗಾವಣೆಗೆ ಸಂಬಂಧಿಸಿದಂತೆ ಸರ್ಕಾರವು ಬಿಡುಗಡೆ ಮಾಡಿರುವ ಅಧಿಕೃತ ವೆಬ್ಸೈಟ್ನಲ್ಲಿ ತಮ್ಮ ಹಣ ವರ್ಗಾವಣೆಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ವೆಬ್ಸೈಟ್ನಲ್ಲಿ ಪರಿಶೀಲಿಸಿದಾಗ ಕುಟುಂಬದ ಮುಖ್ಯಸ್ಥರ ಹೆಸರು , ಸದಸ್ಯರ ಯುಐಡಿ ,ಕುಟುಂಬದ ಸದಸ್ಯರು ಹಾಗೂ ಪಡಿತರ ಚೀಟಿ ವಿಧಾನ ಜೊತೆಗೆ ಅಕ್ಕಿ ಅರ್ಹತೆ ಪ್ರಮಾಣ ಪತ್ರ ಅಂದರೆ ಇಂತಿಷ್ಟು ಕೆಜಿ ಎಂದು ಹಾಗೂ ಹಣ ವರ್ಗಾವಣೆಯ ಮಾಹಿತಿಯ ಬಗ್ಗೆ ಈ ವೆಬ್ಸೈಟ್ನಲ್ಲಿ ತಿಳಿದುಕೊಳ್ಳಬಹುದಾಗಿದೆ.

ಇದನ್ನು ಓದಿ : Good News : ರಾಜ್ಯದ ಎಲ್ಲಾ ಮಹಿಳೆಯರಿಗೆ 3 ಲಕ್ಷ ಸಾಲ ಅಲ್ಲದೆ 1 ಲಕ್ಷದ 50 ಸಾವಿರ ಸಬ್ಸಿಡಿ ಸಿಗಲಿದೆ

ಮೈಸೂರಿನ ಫಲಾನುಭವಿಗಳು :

ಸುಮಾರು 23 ಲಕ್ಷ ಫಲಾನುಭವಿಗಳಿಗೆ 34 ಕೋಟಿ ಹಣವನ್ನು ವರ್ಗಾವಣೆ ಮಾಡಿದೆ ಎಂದು ರಾಜ್ಯ ಸರ್ಕಾರವು ತಿಳಿಸಿದ್ದು ಮೈಸೂರು ಜಿಲ್ಲೆ ಒಂದರಲ್ಲಿ ಅಂದಾಜು 6. 6 ಲಕ್ಷ ಎಪಿಎಲ್ ಹಾಗೂ ಅಂತಿಯೋದಯ ಕಾರ್ಡುಗಳ ಅಂದಾಜು ಲೆಕ್ಕ 23 ಲಕ್ಷ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ 34 ಕೋಟಿ ರೂಪಾಯಿಗಳನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವೆ ಯಾದ ಕುಮುದಾ ಅವರು ತಿಳಿಸಿದ್ದಾರೆ. ಅನ್ನಭಾಗ್ಯ ಯೋಜನೆಯ ಹಣವು ರಾಜ್ಯದಲ್ಲಿ ಮೊದಲ ಹಂತದಲ್ಲಿಯೇ ಮೈಸೂರು ಜಿಲ್ಲೆಯ ಜನರಿಗೆ ದೊರತಿದ್ದು ಈ ಯೋಜನೆಗೆ ಸಂಬಂಧಿಸಿ ದಂತೆ ವಿವಿಧ ಜಿಲ್ಲೆಗಳಿಗೂ ಸಹ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರವು ಮಾಹಿತಿ ನೀಡಿದೆ.

ಹೀಗೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಹಣ ವರ್ಗಾವಣೆ ಆಗಿದೆ ಎಂಬುದರ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ಫಲಾನುಭವಿಗಳು ತಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಹೀಗೆ ಈ ಲೇಖನದಲ್ಲಿ ಅನ್ನಭಾಗ್ಯ ಯೋಜನೆಯ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಹಾಗೂ ಈ ಯೋಜನೆಗೆ ಸಂಬಂಧಿಸಿದೆ ಮಾಹಿತಿಯನ್ನು ಸಹ ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೆ ಶೇರ್ ಮಾಡಿ ಅವರು ಸಹ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರದಿಂದ ರೇಷನ್ ಕಾರ್ಡ್ ಇದ್ದವರಿಗೆ ಸಿಹಿ..!ಸುದ್ದಿ ಸರ್ಕಾರದಿಂದ ಹೊಸ ವಿಧಾನ

ಅಕ್ಕಿ ಹಣ ಪಡೆಯಲು ನೀವು ಈ ಕೆಲಸವನ್ನು ತಕ್ಷಣವೇ ಮಾಡಬೇಕು : ಇಲ್ಲದಿದ್ದರೆ ಅಕ್ಕಿ ಹಣ ಪಡೆಯಲು ಸಾಧ್ಯವಿಲ್ಲ

Leave A Reply

Your email address will not be published.