ಅರಣ್ಯ ಸಂರಕ್ಷಣೆ ಬಗ್ಗೆ ಪ್ರಬಂಧ | Essay on Forest Conservation in Kannada
ಅರಣ್ಯ ಸಂರಕ್ಷಣೆ ಬಗ್ಗೆ ಪ್ರಬಂಧ Essay on Forest Conservation Aranya Samrakshane bagge Prabandha in Kannada
ಅರಣ್ಯ ಸಂರಕ್ಷಣೆ ಬಗ್ಗೆ ಪ್ರಬಂಧ
ಈ ಲೇಖನಿಯಲ್ಲಿ ಅರಣ್ಯ ಸಂರಕ್ಷಣೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಪೀಠಿಕೆ
ಗಿಡ, ಮರ,ಬಳ್ಳಿ ರೀತಿಯ ಸಸ್ಯ ಸಮುದಾಯವಿರುವ ಪ್ರದೇಶವನ್ನು ಕಾಡು ಅಥವಾ ಅರಣ್ಯ ಎಂದು ಕರೆಯುತ್ತಾರೆ. ಸಸ್ಯಗಳಿಗೆ ಸಹಬಾಳ್ವೆ ನಡೆಸುವ ಕ್ರೀಮಿ ಕೀಟ, ಪಕ್ಷಿ, ಪ್ರಾಣಿ ಎಲ್ಲವೂ ಕಾಡಿಗೆ ಸೇರಿದವು. ನಾಗರಿಕತೆ ಬೆಳೆದಂತೆ ಕಾಡುಗಳು ನಾಶಗೊಳ್ಳ ತೊಡಗಿದವು. ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಮುಂದಿನ ಪೀಳಿಗೆಗೂ ಅರಣ್ಯ ಸಂಪತ್ತನ್ನು ಉಳಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ.
ವಿಷಯ ವಿವರಣೆ
- ಭೌಗೋಳಿಕ ಸ್ಥಿತಿ, ಮಣ್ಣು, ಋತು ಭೇದ ಇತ್ಯಾದಿ ಕಾರಣಗಳಿಂದ ಉಂಟಾಗುವ ಹವಗುಣಗಳು ಅರಣ್ಯದ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತವೆ. ಪ್ರಪಂಚದ ಕಾಡುಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಶಂಕು ವೃಕ್ಷದ ಕಾಡುಗಳು : ಇವು ತುಂದ್ರಾ ಪ್ರದೇಶದಿಂದ ದಕ್ಷಿಣಕ್ಕೆ ತಂಪು ಹವೆ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಫರ್, ಫೈನ್ ಮರಗಳು ಈ ಅರಣ್ಯದಲ್ಲಿವೆ.
- ಸನಶೀತೋಷ್ಣ ಪ್ರದೇಶದಲ್ಲಿರುವ ಕಾಲಕಾಲಕ್ಕೆ ಎಲೆಯುದುರುವ ಮರಗಳಿರುವ ಕಾಡುಗಳು ಓಕ್, ಎಲ್ ಎಫ್ ದೇವದಾರು ಮೊದಲಾದ ಮರಗಳು ಇಲ್ಲಿ ಬೆಳೆಯುತ್ತವೆ. ಉಷ್ಣವಲಯದಲ್ಲಿ ಹಬ್ಬಿರುವ ಕಾಲಕಾಲಕ್ಕೆ ಎಲೆ ಉದುರುವ ಮರಗಳಿರುವ ಕಾಡುಗಳು ಭಾರತ ಬರ್ಮಾಗಳಲ್ಲಿ ಇಂತಹ ಕಾಡುಗಳಿವೆ.
- ಉತ್ತರ ಅಮೇರಿಕಾದಲ್ಲಿ ಶಂಕು ವೃಕ್ಷಗಳ ಆಕರ್ಷಕ ಕಾಡುಗಳಿವೆ. ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದ ನದಿ ಪ್ರದೇಶಗಳಲ್ಲಿ ಅತಿ ನಿಬಿಡವಾದ ಉಷ್ಣವಲಯದ ಕಾಡುಗಳಿವೆ.
ಅರಣ್ಯಗಳ ಉಪಯೋಗ
- ಕಾಡುಗಳು ಮಳೆ ಬೀಳಲು ಸಹಾಯಕವಾಗಿವೆ. ಗಾಳಿಯ ಹೊಡೆತ, ನೀರಿನ ಕೊರತೆಗಳಿಂದ ರಕ್ಷಿಸಿ ಮಣ್ಣಿನ ಫಲವತ್ತತೆಯನ್ನು ಅರಣ್ಯಗಳನ್ನು ರಕ್ಷಿಸುತ್ತವೆ. ನೆಲದಲ್ಲಿ ನೀರಿನ ತೇವ ಬೇಗ ಆರದಂತೆ ಮಾಡುತ್ತವೆ. ಸುತ್ತಲಿನ ಪ್ರದೇಶದ ಹವಾಗುಣದ ಮೇಲೆ ಪ್ರಭಾವ ಬೀರುತ್ತವೆ. ಬೇರೆ ಬೇರೆ ಕಾರಣಗಳಿಂದ ಭೂಮಿಯಲ್ಲಿ ಹುದುಗಿಹೋದ ಅರಣ್ಯಗಳು ಕಾಲಾಂತರದಲ್ಲಿ ಕಲ್ಲಿದ್ದಲು, ಕಲ್ಲಣ್ಣೆಗಳಂತಹ ಇಂಧನವಾಗಿ ಮಾರ್ಪಡುತ್ತದೆ. ಅನೇಕ ಸಸ್ಯ ಜನ್ಯ ತೈಲಗಳು ಅರಣ್ಯದಿಂದ ದೊರೆಯುತ್ತವೆ. ಕಾಗದ, ಗಂಧದ ಎಣ್ಣೆ, ಅರಗು, ಕರ್ಪೂರದಂತಹ ದ್ರವ್ಯಗಳ ಕೈಗಾರಿಕೆಗಳಿಗೆ ಕಾಡುಗಳು ಅತ್ಯಗತ್ಯ. ಬಿದಿರು, ಮರಮಟ್ಟು, ಗೊಂದು, ರಾಳ, ಸಾಂಬಾರ್, ದಿನಿಸು ಇತ್ಯಾದಿ ಜೀವನೋಪಯೋಗಿ ವಸ್ತುಗಳು, ಚರ್ಮ, ದಂತ, ಮಾಂಸ ಇತ್ಯಾದಿ ಅರಣ್ಯವಾಸಿ ಪ್ರಾಣಿಗಳಿಂದ ದೊರೆಯುತ್ತದೆ.
ಅರಣ್ಯ ಸಂರಕ್ಷಣೆ
ಅರಣ್ಯಗಳ ಸಂರಕ್ಷಣೆ ಅತಿಮುಖ್ಯವಾದುದು. ಬಿಡಬಹುದಾದ ಮರಗಳನ್ನು ಗುರುತಿಸಿ ಅದನ್ನು ಕಡಿದು ಅದರ ಜಾಗದಲ್ಲಿ ಉಪಯೋಗಿ ಹೊಸ ಗಿಡಗಳನ್ನು ನೆಡಬೇಕು. ಆರಿಸಿದ ಗಿಡಗಳು ಇಲ್ಲದಿದ್ದರೆ ಆರಿಸಿದ ಬೀಜಗಳನ್ನು ಆದರೂ ಬಿತ್ತಬೇಕು. ಅರಣ್ಯದಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಎಲ್ಲರ ಜವಬ್ದಾರಿ. ಬೇಟೆಯಾಡಲು ನಿರ್ದಿಷ್ಟ ಜಾಗವನ್ನು ಗೊತ್ತು ಮಾಡುವುದರಿಂದ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಸಾಧ್ಯವಾಗುತ್ತದೆ. ಕಾಡುಗಳಲ್ಲಿ ಸಸ್ಯಗಳು ಚೆನ್ನಾಗಿ ಬೆಳೆಯುವಂತೆ,
ಉಪಸಂಹಾರ
ಹೊಸ ಸಸಿಗಳನ್ನು ಸರಿಯಾಗಿ ನೆಡುವುದು, ಹೊಸದಾಗಿ ಅರಣ್ಯಗಳನ್ನು ಹಬ್ಬಿಸುವುದು, ಇದನ್ನು ಮಾಡಲು ಒಂದು ಮಾರ್ಗವೆಂದರೆ ಅರಣ್ಯ ಸಂರಕ್ಷಣೆ, ಇದು ಅರಣ್ಯ ಪ್ರದೇಶಗಳನ್ನು ರಕ್ಷಿಸುವ ಮತ್ತು ಅವುಗಳನ್ನು ಸುಸ್ಥಿರ ರೀತಿಯಲ್ಲಿ ನಿರ್ವಹಿಸುವ ಅಭ್ಯಾಸವಾಗಿದೆ. ಸಂರಕ್ಷಣಾ ಪ್ರಯತ್ನಗಳು ರಾಷ್ಟ್ರೀಯ ಉದ್ಯಾನವನಗಳಂತಹ ಸಂರಕ್ಷಿತ ಪ್ರದೇಶಗಳನ್ನು ರಚಿಸುವುದು ಅಥವಾ ಸುಸ್ಥಿರ ಅರಣ್ಯ ಅಭ್ಯಾಸಗಳನ್ನು ಉತ್ತೇಜಿಸಲು ಸ್ಥಳೀಯ ಸಮುದಾಯಗಳೊಂದಿಗೆ ಕೆಲಸ ಮಾಡುವುದನ್ನು ಒಳಗೊಂಡಿರುತ್ತದೆ.
FAQ
ಗೆಲೀನಾ ಯಾವ ಲೋಹದ ಅದಿರಾಗಿದೆ?
ಸೀಸ (Pb)
ಲೂ ಮಾರುತಗಳು ಎಲ್ಲಿ ಕಂಡುಬರುತ್ತವೆ?
ಉತ್ತರ ಭಾರತ ಮತ್ತು ಪಾಕಿಸ್ತಾನ.
ಇತರೆ ವಿಷಯಗಳು :
ವಿಶ್ವ ಹವಾಮಾನ ದಿನದ ಬಗ್ಗೆ ಮಾಹಿತಿ