ಅನ್ನಭಾಗ್ಯ ಯೋಜನೆಯು ಜುಲೈ 1 ರಿಂದ ಜಾರಿ : ಈ ಬಗ್ಗೆ ಆಹಾರ ಸಚಿವ ಕೆಎಚ್ ಮುನಿಯಪ್ಪ ಘೋಷಣೆ
ನಮಸ್ಕಾರ ಸ್ನೇಹಿತರೇ ಕರ್ನಾಟಕ ಸರ್ಕಾರವು 5 ಗ್ಯಾರಂಟಿಗಳನ್ನು ಘೋಷಿಸಿದ್ದು ಅದರಲ್ಲಿ ಅನ್ನಭಾಗ್ಯ ಯೋಜನೆಯು ಒಂದಾಗಿದೆ. ಈ ಯೋಜನೆಯ ಜಾರಿಯ ಬಗ್ಗೆ ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ರವರು ಸ್ಪಷ್ಟನೆ ನೀಡಿದ್ದಾರೆ. ಇದರ ಸಂಪೂರ್ಣ ವಿವರಣವನ್ನು ನೀವು ಇದಾಗ ನೋಡಬಹುದು.
ಜುಲೈ ಒಂದರಿಂದ ಅನ್ನ ಭಾಗ್ಯ ಯೋಜನೆ :
ಆಹಾರ ಸಚಿವ ಕೆಎಚ್ ಮುನಿಯಪ್ಪ ಇವರು ಅನ್ನಭಾಗ್ಯ ಯೋಜನೆಯನ್ನು ಜುಲೈ ಒಂದರಿಂದಲೇ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ಹೇಳುವ ಮೂಲಕ ಕೇಂದ್ರದ ಜೊತೆಗಿನ ಹಗ್ಗ ಜಗ್ಗಾಟದ ನಡುವೆ ಅನ್ನಭಾಗ್ಯ ಯೋಜನೆಯನ್ನು ನಾಳೆಯಿಂದಲೇ ಅಂದರೆ ಜುಲೈ ಒಂದರಿಂದಲೇ ಜಾರಿ ಮಾಡಲು ನಿರ್ಧರಿಸಿದೆ.
5 ಕೆಜಿ ಅಕ್ಕಿ ಮತ್ತು ಹಣ :
ಕೇಂದ್ರ ಸರ್ಕಾರವು ಅಕ್ಕಿಯನ್ನು ಕೊಡದ ಕಾರಣ ಕರ್ನಾಟಕ ಸರ್ಕಾರವು 5 ಕೆಜಿ ಉಚಿತ ಹಕ್ಕಿ ಹಾಗೂ ಇನ್ನ 5 ಕೆಜಿ ಅಕ್ಕಿಗೆ ಹಣವನ್ನು ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆಎಚ್ ಮುನಿಯಪ್ಪ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು ಅನ್ನಭಾಗ್ಯ ಯೋಜನೆಯ ನಾಳೆಯಿಂದಲೇ ಜಾರಿಯಾಗಲಿದೆ ಎಂದು ಹೇಳಿದ್ದಾರೆ.
ಕೆಜಿಗೆ 34 ರೂಪಾಯಿ :
ಅನ್ನಭಾಗ್ಯ ಯೋಜನೆಯಲ್ಲಿ 5 ಕೆಜಿ ಹಕ್ಕಿ ಹಾಗೂ ಐದು ಕೆಜಿಗೆ ಅಕ್ಕಿಗೆ ಬದಲಾಗಿ ಹಣವನ್ನು ನೀಡಲು ಕರ್ನಾಟಕ ಸರ್ಕಾರವು ನಿರ್ಧರಿಸಿದ್ದು ಪ್ರತಿ ಕೆಜಿಗೆ 34 ರೂಪಾಯಿಯಂತೆ ಹಣವನ್ನು ಜುಲೈ ಒಂದರಿಂದಲೇ ನೀಡಲು ನಿರ್ಧರಿಸಿದೆ. ಈ ಹಣವನ್ನು ಅಕ್ಕಿ ಸಿಗುವವರೆಗೂ ಅಂದರೆ ಲಭ್ಯವಾಗುವವರೆಗೂ ಇದೇ ರೀತಿ ಹಣವನ್ನು ನೀಡುವ ವ್ಯವಸ್ಥೆಯನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದು ಬ್ಯಾಂಕ್ ಖಾತೆಯನ್ನು ಬಹುತೇಕ ಫಲಾನುಭವಿಗಳು ಹೊಂದಿದ್ದಾರೆ. ಬ್ಯಾಂಕ್ ಖಾತೆಯನ್ನು ಹೊಂದಿಲ್ಲದವರು ಶೀಘ್ರವೇ ಅಕೌಂಟನ್ನು ಮಾಡಿಸಿಕೊಳ್ಳಬೇಕೆಂದು ಸಚಿವ ತಿಳಿಸಿದ್ದಾರೆ.
ಅಕ್ಕಿಯ ಜೊತೆಗೆ ಕೆಲವೊಂದು ಧಾನ್ಯಗಳ ವಿತರಣೆ :
ಕಾಂಗ್ರೆಸ್ ಸರ್ಕಾರವು ಆಕೆ ಜೊತೆಗೆ ಕೆಲವೊಂದು ಧಾನ್ಯಗಳನ್ನು ಸಹ ಕೊಡಲು ನಿರ್ಧರಿಸಿದೆ. ಅದರಂತೆ ಉತ್ತರ ಕರ್ನಾಟಕದ ಜನರಿಗೆ ಜೋಳ ದಕ್ಷಿಣ ಭಾಗದ ಜನರಿಗೆ ರಾಗಿಯನ್ನು ಕೊಡಲಾಗುತ್ತದೆ ಎಂದು ಹೇಳಿದ್ದು ರಾಗಿ ದಾಸ್ತನಾಗಿದ್ದು ಜೋಳಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದೆ. ನೇರವಾಗಿ ಫಲಾನುಭವಿಗಳ ಖಾತೆಗೆ ಅಕ್ಕಿಯ ಬದಲು ಹಣವನ್ನು ನೀಡಲು ಸಿದ್ದರುವಿದ್ದೇವೆ ಹಾಗಾಗಿ ನೇರವಾಗಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಪಿಎಲ್ ಕಾರ್ಡ್ದಾರರು 5 ಕೆ.ಜಿ ಹೆಚ್ಚು ಬದಲು ಒಂದು ಕೆಜಿ ಅಕ್ಕಿಗೆ 34 ರೂಪಾಯಿ 170 ರೂಪಾಯಿಗಳನ್ನು ಫಲಾನುಭವಿಗಳಿಗೆ ಕರ್ನಾಟಕ ಸರ್ಕಾರ ಹಣವನ್ನು ನೀಡಲು ತೀರ್ಮಾನಿಸಿದೆ.
ಹೀಗೆ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದೊಂದಿಗಿನ ಸುಧೀರ್ಘ ಹಗ್ಗ ಜಗ್ಗಾಟ ನಡೆಸಿದ ನಂತರ ಉಚಿತ ಅಕ್ಕಿ ವಿತರಣೆಯನ್ನು ಹಾಗೂ ಉಚಿತ 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ನೀಡಲು ಬುಧವಾರದಿಂದಲೇ ಕರ್ನಾಟಕ ಸರ್ಕಾರವು ಮಹತ್ವದ ತೀರ್ಮಾನನ ಕೈಗೊಂಡಿದೆ ಎಂಬುದನ್ನು ನೋಡಬಹುದಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.