I Phone ಕಂಪನಿ ವರ್ಷಕ್ಕೆ ಎಷ್ಟು ಲಾಭ ಗಳಿಸುತ್ತದೆ ಎಂದು ಕೇಳಿದರೆ ನೀವು ಆಶ್ಚರ್ಯ ಪಡುತ್ತೀರ!
ನಮಸ್ಕಾರ ಸ್ನೇಹಿತರೇ ಸಮಾಜದ ಪ್ರತಿಷ್ಠೆಯ ಸಂಕೇತವಾಗಿ ಕಾಣಬರುತ್ತಿರುವ ಒಂದು ಮೊಬೈಲ್ ಫೋನ್ ಯಾವುದೆಂದರೆ ಅದು ಆಪಲ್ ಫೋನ್ ಆಗಿದೆ ಎಂದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದ್ದರಿಂದ ಪ್ರಪಂಚದಾದ್ಯಂತ ಈ ಮೊಬೈಲ್ ಫೋನ್ ಹೊಂದಲು ಸಾಕಷ್ಟು ಹಾತೊರೆಯುತ್ತಿದ್ದಾರೆ. ಇದು ಉತ್ಪ್ರೇಕ್ಷೆಯoತೆ ಕಂಡರೂ ಸಹ ಈ ಐ ಫೋನ್ ಅನ್ನು ಹೊಂದುವುದು ಒಂದು ಸ್ಟೇಟಸ್ ಆಗಿ ಕಂಡುಬರುತ್ತಿದೆ ಎಂಬುದು ಒಂದು ಸತ್ಯದ ಅಂಶವಾಗಿದೆ.
ಐ ಫೋನ್ ನಿನ ವಿಶೇಷತೆಗಳು :
ಪ್ರಪಂಚದಾದ್ಯಂತ ಜನರು ಈ ಐ ಫೋನ್ ಅನ್ನು ಹೊಂದಲು ಮುಖ್ಯ ಕಾರಣಗಳು ಹಾಗೂ ಐ ಫೋನಿನಲ್ಲಿ ಇರುವ ಕೆಲವು ವಿಶೇಷತೆಗಳೇನೆಂದರೆ, ಹೆಚ್ಚಾಗಿ ಬಳಸುವ ಇತರ ಮೊಬೈಲ್ ಗಳಿಗಿಂದ ಅಥವಾ ಸ್ಮಾರ್ಟ್ ಫೋನ್ ಗಳಿಂದ ಪ್ರತ್ಯೇಕಿಸುತ್ತದೆ. ಅಲ್ಲದೆ ಐ ಫೋನ್ ನಲ್ಲಿರುವ ಕ್ಯಾಮಾರ ದ ಗುಣಮಟ್ಟವು ಇತರ ಮೊಬೈಲ್ ಗಳ ಕ್ಯಾಮೆರಾ ಗಳಿಗೆ ಹೋಲಿಸಿದರೆ ಅಸಾಧಾರಣವಾಗಿದೆ ಅಂದರೆ ಸಾಮಾನ್ಯವಾಗಿ ಹೋಲಿಸಿದರೆ ಇತರ ವೃತ್ತಿಪರ ಕ್ಯಾಮಾರ ಗಳಾಗಿ ಬಳಸುವ DSLR ಕ್ಯಾಮಾರ ಗಳಿಗೆ ಐ ಫೋನಿನ ಕ್ಯಾಮಾರ ವನ್ನು ಹೋಲಿಸಬಹುದು.
ಅದರ ಜೊತೆಗೆ ಐ ಫೋನಿನಲ್ಲಿ ಸಾಕಷ್ಟು ಶೇಖರಣಾ ಮಟ್ಟವನ್ನು ಹೆಚ್ಚಾಗಿ ನೀಡಲಾಗುತ್ತದೆ. ಅಲ್ಲದೆ ಫೋಟೋಗಳು, ವಿಡಿಯೋಗಳು ಹಾಗೂ ಇತರ ಅಪ್ಲಿಕೇಶನ್ ಗಳು ಸೇರಿದಂತೆ ಸಾಕಷ್ಟು ಪ್ರಮಾಣದ ಡೇಟಾವನ್ನು ಸಂಗ್ರಹಿಸಲು ಬಳಕೆದಾರರಿಗೆ ಹೆಚ್ಚಿನ ಅನುವು ಮಾಡಿಕೊಡಲಾಗುತ್ತದೆ.
ಐ ಫೋನಿನ ಮಾರಾಟದ ಬೆಲೆ :
ಭಾರತಕ್ಕೆ ಇತ್ತೀಚಿಗೆ ಭೇಟಿ ನೀಡಿದ ಆಪಲ್ ನ ಸಿ ಇ ಒ ಆದ ಟಿಮ್ ಕುಕ್ ಅವರು ಆಪಲ್ ಸ್ಟೋರ್ ಅನ್ನು ಉದ್ಘಾಟಿಸಿದರು. ಅಲ್ಲದೆ ಭಾರತ ದೇಶದಲ್ಲಿ ಆಪಲ್ ಫೋನ್ ಗೆ ಇರುವ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಒತ್ತಿ ಹೇಳಿದರು. ಅಲ್ಲದೆ ಐ ಫೋನ್ ಗೆ ನಿಜವಾಗಿ ಎಷ್ಟು ಬೆಲೆಯಿದೆ ಇದರ ಮಾರಾಟದಿಂದ ನಿಜವಾಗಿ ಆ ಕಂಪನಿಯು ಎಷ್ಟು ಲಾಭ ಗಳಿಸುತ್ತಿದೆ ಎಂಬ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ.
ಉದಾಹರಣೆಗೆ ಐ ಫೋನ್ 14 ಪ್ರೊ ಮ್ಯಾಕ್ಸ್ ಮೊಬೈಲ್ ನ ಮಾರಾಟದ ಬೆಲೆ $1999 ಎಂದು ಹೇಳಿದರೆ, ಇದರ ತಯಾರಿಕೆಗೆ ತಗಲುವ ವೆಚ್ಚ ಕೇವಲ $51 ರಷ್ಟಾಗುತ್ತದೆ. ಅಂದರೆ ಪ್ರತಿಯೊಂದು ಐ ಫೋನಿನ ಮಾರಾಟವಾದ ಬೆಲೆಯಲ್ಲಿ 119 ಪ್ರತಿಷತದಷ್ಟು ಲಾಭವನ್ನು ಆ ಕಂಪನಿಯು ಗಳಿಸುತ್ತದೆ.
ಇದನ್ನು ಓದಿ : ಬ್ಯಾಂಕುಗಳ ಪರವಾನಿಗೆ ರದ್ದು! ಈ ಬ್ಯಾಂಕ್ ನಲ್ಲಿ ಹಣ ಬೇಗ ಬಿಡಿಸಿಕೊಳ್ಳಿ, RBI ಎಚ್ಚರಿಕೆ
ಆದರೆ ಜನರು ಇದರ ಯಾವುದೇ ಲೆಕ್ಕವಿಲ್ಲದೆ ತಮ್ಮ ಸಾಮಾಜಿಕ ಸ್ಥಾನಮಾನವನ್ನು ಪ್ರದರ್ಶಿಸುವ ಸಲುವಾಗಿ ಇಂತಹ ಐ ಫೋನ್ ಗೆ ಹೆಚ್ಚು ಹಣವನ್ನು ಖರ್ಚು ಮಾಡಲು ಸಿದ್ದರಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ.
ಇಷ್ಟೆಲ್ಲಾ ಇದ್ದರೂ ಸಹ ಜನತೆ ಈ ವಿಶಿಷ್ಟವಾದ ಐ ಫೋನ್ ಅನ್ನು ಬಳಸುವುದು ಒಂದು ಪ್ರತಿಷ್ಠೆಯ ವಿಷಯವಾಗಿದ್ದು, ಇದು ತಾಂತ್ರಿಕ ವಿಷಯಗಳನ್ನು ಮೀರಿದೆ. ಅಲ್ಲದೆ ಈ ಐ ಫೋನ್ ಅನೇಕ ವ್ಯಕ್ತಿಗಳಿಗೆ ನಿರ್ದಿಷ್ಟ ಜೀವನ ಶೈಲಿ, ಸ್ಥಾನಮಾನ ಹಾಗೂ ಜನತೆಯಲ್ಲಿರುವ ಆಸೆ ಆಕಕ್ಷೆಯನ್ನು ಪ್ರತಿನಿಧಿಸುತ್ತಿದೆ. ಅಲ್ಲದೆ ಈ ಐ ಫೋನ್ ವ್ಯಕ್ತಿಗೆ ಬದಲಾಗುವ ವ್ಯಕ್ತಿ ನಿಷ್ಠ ವಿಷಯವಾಗಿ ಕಂಡು ಬಂದಿದೆ.
ಒಟ್ಟಾರೆ ಇತರ ಕಂಪನಿಯ ಫೋನ್ ಗಳಿಗೆ ಆಪಲ್ ಕಂಪನಿಯ ಫೋನ್ ಅನ್ನು ಹೋಲಿಸಿದರೆ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಾಬಲ್ಯವನ್ನು ಸಾಧಿಸುತ್ತಿದೆ.
ಅಂದರೆ ಐ ಫೋನ್ ನಿನ ಬೆಲೆಯು ಹೆಚ್ಚಿದ್ದರೂ ಅದರ ಗುಣ ವಿಶೇಷತೆಗಳಿಂದ ಹಾಗೂ ಕಾರ್ಯಕ್ಷಮತೆಯ ದೃಷ್ಟಿಯಿಂದ ತನ್ನದೇ ಆದ ಛಾಪನ್ನು ಮಾರುಕಟ್ಟೆಯಲ್ಲಿ ಮೂಡಿಸಿರುವುದನ್ನು ನಾವು ಇತ್ತೀಚಿನ ದಿನಗಳಲ್ಲಿ ನೋಡಬಹುದು.
ಇತರೆ ವಿಷಯಗಳು :
ಆಧಾರ್ ಅಪ್ಡೇಟ್ ಕಡ್ಡಾಯ.! ಈ ದಿನಾಂಕದೊಳಗೆ ಈ ಕೆಲಸ ಮಾಡದಿದ್ದರೆ ಆಧಾರ್ ಬಂದ್ ಗ್ಯಾರಂಟಿ