ನಿಮ್ಮ ಜಮೀನಿಗೆ ದಾರಿ ಮಾಡಿಕೊಳ್ಳಬೇಕಾದರೆ ಕೋರ್ಟಿಗೆ ಹೋಗುವ ಅವಶ್ಯಕತೆ ಇಲ್ಲ, ಇಲ್ಲಿದೆ ಹೊಸ ವಿಧಾನ
ನಮಸ್ಕಾರ ಸ್ನೇಹಿತರೆ, ನಿಮಗೆ ಈಗ ತಿಳಿಸುತ್ತಿರುವ ಮಹತ್ವದ ವಿಷಯವೇನೆಂದರೆ ಹಲವಾರು ಯೋಜನೆಗಳನ್ನು ದೇಶದ ರೈತರಿಗೆ ಜಾರಿಗೊಳಿಸಿರುವುದರ ಬಗ್ಗೆ. ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂದರೆ ಮಳೆ ಹವಾಮಾನ ಮಾರುಕಟ್ಟೆ ವೈ ಪರಿತ್ಯದ ನಡುವೆ ಆಸ್ತಿ ಜಮೀನು ದಾರಿ ವ್ಯಾಜ್ಯದಂತಹ ಹಲವಾರು ತೊಡಕುಗಳು ಇನ್ನೂ ಕೂಡ ರೈತರನ್ನು ಹೈರಾಣ ಮಾಡುತ್ತಿವೆ.
ಕಲಾಂತರದಿಂದಲೂ ಈ ಬಗ್ಗೆ ರೈತರಲ್ಲಿ ಪರಸ್ಪರ ತಕರಾರುಗಳು ನಡೆಯುತ್ತಾ ಬಂದಿವೆ. ಹಾಗೆಯೇ ರೈತರು ಬಹುತೇಕ ಕಡೆಗಳಲ್ಲಿ ತಮ್ಮ ವ್ಯಾಜ್ಯತಕರಾರುಗಳಿಗೆ ಕೋರ್ಟ್ ಮೆಟ್ಟಲು ಏರಿದಂತಹ ನಿದರ್ಶನಗಳು ಸಹ ಇವೆ. ಈ ಬಗ್ಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ನೀವು ಇದೀಗ ನೋಡಬಹುದು.
ರಾಜ್ಯದ ರೈತರಿಗೆ ಹೊಸ ವಿಧಾನ :
ರಾಮಮಟ್ಟದಲ್ಲಿಯೇ ವ್ಯಾಜ್ಯಕರಾರುಗಳು ಹಿರಿಯರ ಸಮ್ಮುಖದಲ್ಲಿ ಬಗೆ ಹರಿದರೆ ತೊಂದರೆ ಇರುವುದಿಲ್ಲ. ಆದರೆ ಬಹುತೇಕ ಗ್ರಾಮಗಳಲ್ಲಿ ರೈತರು ಪರಸ್ಪರ ಹೊಡೆದಾಡಿಕೊಂಡು ಕೋರ್ಟ್ ಮೆಟ್ಟಿಲೇರಿದಂತಹ ಸನ್ನಿವೇಶಗಳಿವೆ. ಅದಕ್ಕಾಗಿಯೇ ಸಹ ಹಲವರು ಕಡೆಗಳಲ್ಲಿ ಕೊಲೆಗಳಾಗಿರುವ ಉದಾಹರಣೆಯು ಸಹ ಇದೆ. ಹಿಂದೆ ಜಮೀನಿನ ಕಾಲುದಾರಿ ಹಾಗೂ ಬಂಡಿದಾರಿ ವಿಚಾರವಾಗಿ ಈಗಿರುವಷ್ಟು ತಕರಾರುಗಳು ಆಗಿರಲಿಲ್ಲ. ತೋಟಪಟ್ಟಿಗಳು ರಸ್ತೆ ಇರುವ ಕಡೆಗಳೆಲ್ಲ ತಲೆ ಎತ್ತಿ ಕೊಂಡಿವೆ.
ಈಗ ಆ ರೈತರಲ್ಲಿ ಮೊದಲಿನಷ್ಟು ಸಾಮರಸ್ಯ ಇಲ್ಲದಿರುವುದರಿಂದ ವ್ಯಾಜ್ಯಗಳು ಅಧಿಕವಾಗಿವೆ. ಇದರ ಪರಿಣಾಮವಾಗಿ ರೈತರು ತಮ್ಮ ಜಮೀನಿಗೆ ಹೋಗಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನು ಓದಿ : ಪೋಸ್ಟ್ ಆಫೀಸ್ ಸೇವಿಂಗ್ ಸ್ಕೀಮ್: ಇಂದೇ ಈ ಯೋಜನೆಯಲ್ಲಿ ಉಳಿತಾಯ ಮಾಡಿ, 1 ಲಕ್ಷದವರೆಗೆ ಲಾಭ ಗಳಿಸಿ
ಟಿ ಸಿ ಮಧುಸ್ವಾಮಿ ಮಾಹಿತಿ :
ರೈತರು ತಮ್ಮ ಕೃಷಿ ಜಮೀನಿಗೆ ಹೋಗುವುದಕ್ಕಾಗಿ ಹಾದಿಯನ್ನು ಬಳಸುತ್ತಿದ್ದಾರೆ ಅದನ್ನೇ ಅಧಿಕೃತ ದಾರಿ ಎಂದು ಪರಿಗಣಿಸಲು ಮಾಜಿ ಮುಖ್ಯಮಂತ್ರಿ ಆದಂತಹ ಬಸವರಾಜ ಬೊಮ್ಮಾಯಿ ಯವರು ಅಧಿಕಾರಿಗಳಿಗೆ ಅದನ್ನೇ ಅಧಿಕೃತ ಹಾದಿಯಾಗಿ ಪರಿಗಣಿಸಬೇಕೆಂದು ಸೂಚನೆ ನೀಡಿದ್ದಾರೆ ಎಂದು ಕಾನೂನು ಸಚಿವರಾದ ಟಿಸಿ ಮಧುಸ್ವಾಮಿ ಮಾಹಿತಿ ನೀಡಿದ್ದಾರೆ.
ಸುಮಾರು 30 ವರ್ಷಗಳಿಂದಲೂ ರೈತರು ಒಂದೇ ಹಾದಿಯನ್ನು ಬಳಸುತ್ತಿದ್ದ ಸಂದರ್ಭದಲ್ಲಿ ಮಾತ್ರ ಈ ತೀರ್ಮಾನವನ್ನು ತೆಗೆದುಕೊಳ್ಳಬಹುದು ಎಂದು ಸಿಎಂ ನಿರ್ದೇಶನ ನೀಡಿದ್ದಾರೆಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಟಿಸಿ ಮಧುಸ್ವಾಮಿ ಹೇಳಿದ್ದಾರೆ. ಈ ವಿಷಯದ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಅಧಿಕಾರಿಗೆ ಸೂಚನೆ ನೀಡಿದ್ದು ಹೊಸ ಮುಖ್ಯಮಂತ್ರಿಗಳು ಈ ಸೂಚನೆಯ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.
ಹೀಗೆ ರೈತರು ತಮ್ಮ ಜಮೀನಿಗೆ ಹೋಗಲು ಅನುಕೂಲ ಮಾಡಿಕೊಂಡ ಕಾಲುದಾರಿ ಹಾಗೂ ಬಂಡಿದಾರಿಗಳನ್ನು ಅಧಿಕೃತ ದಾರಿಯನ್ನಾಗಿ ಮಾಡಲು ಮಾಜಿ ಸಿಎಂ ಹೇಳಿರುವುದು ವಿಪರ್ಯಾಸವಾಗಿದೆ. ಈ ಬಗ್ಗೆ ರೈತರು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಬಹುದಾಗಿದೆ. ಈ ಮಾಹಿತಿಯನ್ನು ಜಮೀನು ಹೊಂದಿದ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಬಾಡಿಗೆ ಮನೆಯಲ್ಲಿ ಇರುವವರಿಗೆ ಹೊಸ ನಿಯಮ : ಕರ್ನಾಟಕದಾದ್ಯಂತ ಬಾಡಿಗೆ ಮನೆಯಲ್ಲಿ ಇರುವವರಿಗೆ ಹೊಸ ನಿಯಮ ಜಾರಿ
ಮಹಿಂದ್ರ ಕಂಪನಿಯಿಂದ 5 ಡೋರ್ ಖರೀದಿಸಲು ಕಾಯುತ್ತಿದ್ದ ಒಂದು ಮಹಿತಿ