ಕೇಂದ್ರ ಸರ್ಕಾರದಿಂದ ರೈತರಿಗಾಗಿ ವಿವಿಧ ಯೋಜನೆಗಳ ವಿಶಿಷ್ಟ ಪ್ಯಾಕೇಜ್
ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರವು ರೈತರಿಗಾಗಿ ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಿದೆ. ಅದರಂತೆ ರೈತರಿಗಾಗಿ ಈಗ ವಿಶಿಷ್ಟ ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರವು ರೈತರ ಯೋಗ ಕ್ಷೇಮ ಹಾಗೂ ಆರ್ಥಿಕ ಸುಧಾರಣೆಯ ಮೇಲೆ ಕೇಂದ್ರೀಕರಿಸುವ ವಿವಿಧ ಘಟಕಗಳನ್ನು ಒಳಗೊಂಡಂತೆ ಒಂದು ವಿಶಿಷ್ಟ ಪ್ಯಾಕೇಜ್ ಅನ್ನು ರೈತರಿಗಾಗಿ ನೀಡಲು ನಿರ್ಧರಿಸಿದೆ, ಇದರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀವು ನೋಡಬಹುದು.
ರೈತರಿಗಾಗಿ ವಿಶಿಷ್ಟ ಪ್ಯಾಕೇಜ್ :
ಕೇಂದ್ರ ಸರ್ಕಾರವು ಸುಸ್ತಿರ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಹಲವರು ವಿಶಿಷ್ಟ ಯೋಜನೆಗಳನ್ನು ರೈತರಿಗಾಗಿ ಕೈಗೊಂಡಿದೆ. ಹಾಗೆಯೇ ರೈತರ ಯೋಗಕ್ಷೇಮ ಹಾಗೂ ಆರ್ಥಿಕ ಸುಧಾರಣೆಯ ಮೇಲೆ ಕೇಂದ್ರೀಕರಿಸುವ ವಿವಿಧ ಘಟಕಗಳನ್ನು ಒಳಗೊಂಡಂತೆ ವಿಶಿಷ್ಟ ಪ್ಯಾಕೇಜ್ ಅಲ್ಲಿ ಒಟ್ಟು 3.70 ಲಕ್ಷ ಕೋಟಿ ರೂಪಾಯಿಗಳನ್ನು ರೈತರಿಗೆ ನೀಡಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದ ಎಂದು ಬುಧವಾರ ಕೇಂದ್ರ ಸಚಿವೆ ಮನ್ಸುಖ್ ಮಾಂಡವಿಯ ಅವರು ತಿಳಿಸಿದ್ದಾರೆ.
ಸುಸ್ತಿರ ಕೃಷಿ ಉತ್ತೇಜನ :
ಕೇಂದ್ರ ಸರ್ಕಾರವು ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಮಿತಿಯಲ್ಲಿ ಕೆಲವೊಂದು ತೀರ್ಮಾನಗಳನ್ನು ಕೈಗೊಂಡಿದ್ದು ಸುಸ್ಥಿರ ಯೋಜನೆಯನ್ನು ಉತ್ತೇಜಿಸುವ ಮೂಲಕ ಯೋಜನೆಗಳ ಪಟ್ಟಿಯು ರೈತರ ಒಟ್ಟಾರೆ ಯೋಗ ಕ್ಷೇಮ ಹಾಗೂ ಆರ್ಥಿಕ ಸುಧಾರಣೆಯ ಮೇಲೆ ಕೇಂದ್ರೀಕೃತವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದಂತಹ ಸಮಿತಿಯಲ್ಲಿ ತಿಳಿಸಿದ್ದಾರೆ.
ಈ ಉಪಕ್ರಮಗಳ ಮೂಲಕ ರೈತರ ಆದಾಯವನ್ನು ಕೇಂದ್ರ ಸರ್ಕಾರವು ಹೆಚ್ಚಿಸಲು ಯೋಜನೆಗಳನ್ನು ನಡೆಸುತ್ತಿದೆ. ಸಾವಯವ ಕೃಷಿಯನ್ನು ಅಥವಾ ನೈಸರ್ಗಿಕ ಕೃಷಿಯನ್ನು ಬಲಪಡಿಸಲು, ಮಣ್ಣಿನ ಉತ್ಪಾದಕತೆಯನ್ನು ಪುನರ್ಜೀವನಗೊಳಿಸಲು ಹಾಗೂ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಗಳು ಸಹಾಯಕವಾಗಿದೆ ಎಂದು ಸಚಿವರಾದ ಮನ್ಸುಕ್ ಮಾಂಡವ್ಯ ಅವರು ತಿಳಿಸಿದರು.
ಸಬ್ಸಿಡಿ ಪ್ರತ್ಯೇಕ :
ಸರ್ಕಾರವು ಮೂರು ವರ್ಷಗಳವರೆಗೆ ಈ ಯೋಜನೆಯನ್ನು ಅನುಮೋದಿಸಿದ್ದು, ಖಾರಿಫ್ ಋತುವಿಗಾಗಿ 202324ರಲ್ಲಿ 38,000 ಕೋಟಿ ರೂಪಾಯಿಗಳ ಪೋಷಕಾಂಶ ಆಧಾರಿತವಾದ ಇತ್ತೀಚಿಗೆ ಅನುಮೋದಿಸಲಾದ ಸಬ್ಸಿಡಿಯನ್ನು ಹೊರತುಪಡಿಸಿರುವoತದ್ದು, ಯೂರಿಯ ಖರೀದಿಗೆ ರೈತರು ಹೆಚ್ಚುವರಿ ಖರ್ಚನ್ನು ಮಾಡಬೇಕಾಗಿಲ್ಲ ಹಾಗೂ ಅವರ ಇನ್ಪುಟ್ ವೆಚ್ಚವನ್ನು ಮೆತಗೊಳಿಸಲು ಕೇಂದ್ರ ಸರ್ಕಾರವು ಸಹಾಯ ಮಾಡುತ್ತದೆ.
ಪಿಎಂ ಪ್ರಣಾ ಯೋಜನೆ :
ಗೋಬರ್ಧನ್ ಘಟಕಗಳನ್ನು ಮುಂಗಡಪತ್ರದಲ್ಲಿ ಘೋಷಿಸಿರುವ ಅಂತ ಪಿಎಂ ಪ್ರಣಾಮ್ ಯೋಜನೆಯ ಭಾಗವಾಗಿ ಸ್ಥಾಪಿಸುವುದರ ಮೂಲಕ ಸಾವಯವ ಗೊಬ್ಬರ ಉತ್ಪಾದನೆಯನ್ನು ಉತ್ತೇಜಿಸಲು ಹಾಗೂ ಮಾರುಕಟ್ಟೆ ಅಭಿವೃದ್ಧಿ ಸಹಾಯಕ್ಕಾಗಿ ಸಚಿವ ಸಂಪುಟವು 1451.84 ಕೋಟಿ ರೂಪಾಯಿಗಳ ಯೋಜನೆಯನ್ನು ಅನುಮೋದಿಸಿದೆ.
ಇದನ್ನು ಓದಿ : ವಂದೇ ಭಾರತ್ ರೈಲು ಪ್ರಾರಂಭ: ಈ ರೈಲ್ವೆ ಟಿಕೆಟ್ ದರದ ಡೀಟೇಲ್ಸ್ ಇಲ್ಲಿದೆ
ಕಿಸಾನ್ ಸಮೃದ್ಧಿ ಕೇಂದ್ರಗಳು :
ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳಲ್ಲಿ ಈಗಾಗಲೇ ದೇಶದಲ್ಲಿ ಸುಮಾರು ಒಂದು ಲಕ್ಷ ಕೇಂದ್ರಗಳು ಬಂದಿವೆ. ನೀವು ರೈತರ ಅನುಕೂಲಕ್ಕಾಗಿ ಒಂದು ಸ್ಟಾಪ್ ಪರಿಹಾರ ಕೇಂದ್ರವಾಗಿ ಅಂದರೆ ರೈತರ ಎಲ್ಲಾ ಅಗತ್ಯಗಳಿಗೆ ಪರಿಹಾರ ಕೇಂದ್ರವಾಗಿ ಕೃಷಿ ಒಳಹರಿವುಗಳನ್ನು ಒದಗಿಸುತ್ತವೆ.
ಹೀಗೆ ಕೇಂದ್ರ ಸರ್ಕಾರವು ರೈತರಿಗಾಗಿ ವಿವಿಧ ರೀತಿಯ ಪ್ಯಾಕೇಜ್ ಗಳನ್ನು ಘೋಷಿಸುವುದರ ಮೂಲಕ ಇನ್ನು ಹಲವಾರು ಪ್ಯಾಕೇಜ್ ಗಳನ್ನು ಘೋಷಿಸಿರುವುದನ್ನು ನಾವು ಗೂಗಲ್ನಲ್ಲಿ ಹುಡುಕಬಹುದು. ಹೀಗೆ ನಾವು ತಿಳಿಸಿರುವ ಈ ಕೆಲವು ಮಾಹಿತಿಗಳನ್ನು ನಿಮ್ಮ ತಂದೆಯು ರೈತರಾಗಿದ್ದರೆ ಅವರಿಗೆ ತಿಳಿಸಿಕೊಡಿ ಇದರಿಂದ ಅವರು ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆಯಲು ಸಹಕಾರಿಯಾಗುತ್ತದೆ ಧನ್ಯವಾದಗಳು.