ಗೃಹಜ್ಯೋತಿ ಅರ್ಜಿ ಸಲ್ಲಿಸಿದವರಿಗೆ ಶಾಕಿಂಗ್ ನ್ಯೂಸ್! ಕರೆಂಟ್ ಫ್ರೀ ಸಿಗುತ್ತೆ ಅಂತಾ ಖುಷ್ ಆಗ್ಬೇಡಿ, ಮೊದಲು ಅರ್ಜಿ ಸಲ್ಲಿಸಿದವರು ಈ ಮಾಹಿತಿ ನೋಡಿ
ಎಲ್ಲಾರಿಗೂ ನಮಸ್ಕಾರ, ರಾಜ್ಯ ಸರ್ಕಾರದ 5 ಗ್ಯಾರೆಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ, ಜುಲೈ 1 ರಿಂದ ಚಾಲನೆ ದೊರಕಿದ್ದರು ಕೂಡ ಜೂನ್ 18 ರಿಂದಲೇ ಅವಕಾಶ ಮಾಡಿಕೊಡಲಾಗಿತ್ತು. ಈ ಯೋಜನೆಗೆ ಹೆಚ್ಚಿನವರು ಅತೀ ಉತ್ಸಾಹದಿಂದ ನಾಮುಂದು ತಾಮುಂದು ಎನುತ್ತಾ ಅರ್ಜಿ ಹಾಕಿದ್ದರು, ಆದರೆ ಈಗ ಅರ್ಜಿ ಸಲ್ಲಿಸಿದವರಿಗೊಂದು ಬಿಗ್ ಶಾಕ್ ಎದುರಾಗಿದ್ದು, ಆರಂಭದಲ್ಲೇ ಅರ್ಜಿ ಸಲ್ಲಿಸಿದವರ ಕೆಲವು ಅರ್ಜಿ ತಿರಸ್ಕರಿಸಲಾಗಿದೆ. ಯಾಕೆ ಅರ್ಜಿ ತಿರಸ್ಕರಿಸಲಾಗಿದೆ, ಕಾರಣವೇನು? ಉಚಿತ ಕರೆಂಟ್ ಸಿಗ್ವಲಾ ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಸದ್ಯ ಈ ವಿಷಯ ಹಲವರ ನಿದ್ದೆ ಕೆಡಿಸಿದ್ದು ಇದಕ್ಕೆ ಕಾರಣವೇನು, ಏಕೆ ಹೀಗಾಯಿತು ಇದಕ್ಕೆ ಪರಿಹಾರಗಳೇನು ಅಂತ ಗೊಂದಲಗಳಿಗೆ ಈಡಾಗಿದ್ದಾರೆ, ಚಿಂತೆ ಬಿಡಿ ಇದಕ್ಕೆ ಕಾರಣವೇನು ಪರಿಹಾರಗಳೇನು ಎಂಬುದನ್ನಾ ನಾವು ನಿಮಗೆ ತಿಳಿಸಿಕೊಡುತ್ತಿವೆ. ಈ ಹಿಂದೆ ಗೃಹಜ್ಯೋತಿ ಯೋಜನೆಗೆ ಆರಂಭದಲ್ಲೇ ಅರ್ಜಿ ಸಲ್ಲಿಸಿದವರ ಅರ್ಜಿಗಳೇ ಈಗ ತಿರಸ್ಕೃತವಾಗಿದ್ದೂ ಕಾರಣ ಏನೆಂಬುದು ಸಹ ತಿಳಿದುಬಂದಿದೆ. ಪ್ರಾರಂಭದಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ತಾಂತ್ರಿಕ ದೋಷ ಹೊಂದಿರುವುದು ಇಲ್ಲಿನ ಮುಖ್ಯ ಕಾರಣ ಏನ್ನಲಾಗುತ್ತಿದೆ. ಹೀಗಾಗಿ ಮೊದಲ 2 ದಿನದ ಅರ್ಜಿ ಸಲ್ಲಿಕೆಗಳು ಲೋಪ ಉಂಟಾಗಿದ್ದೂ ತಾಂತ್ರಿಕ ದೋಷವಾಗಿದೆ ಆ 2 ದಿನದ ಅನೇಕ ಅರ್ಜಿಗಳು ತಿರಸ್ಕೃತವಾಗಿದೆ. ಸೇವಾ ಸಿಂಧೂ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದವರೂ ಅರ್ಜಿ ಆರಂಭವಾದ ಮೊದಲೆರಡು ದಿನ ಸರ್ವರ್ ಡೌನ್ ಇತ್ತು. ಹಾಗಾಗಿ ಈ ಅರ್ಜಿ ಲಿಂಕ್ ಆಗದೇ ಇರುವ ಸಾಧ್ಯತೆ ತುಂಬಾ ಹೆಚ್ಚಾಗಿದೆ.
ಅರ್ಜಿ ಸಲ್ಲಿಸಿ ಸ್ವೀಕೃತ ಎಂದು ಬಂದರು ಕೂಡ ಅಪ್ಲೇ ಆಗದೇ ಇದ್ದಿರಬಹುದು ಅದಕೋಸ್ಕರ ಒಮ್ಮೆ ಪರಿಶೀಲನೆ ಮಾಡಿ ಪ್ರಸ್ತುತ ಸ್ಟೇಟಸ್ ಯಾವ ರೀತಿ ಎಂದು ತಿಳಿಸುವಂತೆ ಇಂಧನ ಇಲಾಖೆ ಹೇಳಿದೆ.ಅಲ್ಲದೆ ಮರು ಅರ್ಜಿ ಕೂಡ ಸಲ್ಲಿಸಬಹುದಾಗಿದೆ. ಹಾಗಾದ್ರೆ ನಿಮ್ಮ ಅರ್ಜಿ ತಿರಸ್ಕೃತಗೊಂಡಿದ್ದರೆ, ಈ ಪರಿಹಾರ ಕ್ರಮಗಳನ್ನು ನೋಡಿ ನೀವೆ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.
ಗೃಹಜ್ಯೋತಿ ಸ್ಟೇಟಸ್ ಚೆಕ್ ಮಾಡುವ ವಿಧಾನ
ಸೇವಾ ಸಿಂದೂ ಪೋರ್ಟಲ್ ಲಾಗಿನ್ ಆದ ನಂತರ ಗೃಹಜೈತಿ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಅರ್ಜಿ ಸ್ಥಿತಿ ತಿಳಿಯಲು ಕುರಿತಾದ Option ಮೇಲೆ ಕ್ಲಿಕ್ ಮಾಡಿ ಆದ ಬಳಿಕ ಇಷ್ಟು ಪ್ರಕ್ರಿಯೆ ಮುಗಿದ ಮೇಲೆ ನಿಮ್ಮ ಇಂಧನ ಇಲಾಖೆಯ ವಿಭಾಗ ಆಯ್ಕೆ ಮಾಡಬೇಕು.
ನಂತರ ನಿಮ್ಮ ಅಕೌಂಟ್ ಐಡಿ ಎಂಟರ್ ಮಾಡುವಂತೆ ತಿಳಿಸುತ್ತಾರೆ ನೀವು ಕರೆಂಟ್ ಬಿಲ್ ಸಂಖ್ಯೆ ನಮೂದಿಸುತ್ತಿರುವ ಗ್ರಾಹಕರ ಸಂಖ್ಯೆಯನ್ನು ಅಕೌಂಟ್ ಐಡಿಯಲ್ಲಿ ಹಾಕಿ ಬಳಿಕ ಚೆಕ್ ಸ್ಟೇಟಸ್ ಎಂದು ಬರುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ನಿಮ್ಮ ಅರ್ಜಿಯ ಪ್ರಸ್ತುತ ಸ್ಥಿತಿ ಏನೆಂದು ತಿಳಿಯಲಿದೆ. ಅದರಲ್ಲಿ Your Application for GruhaJyothi Scheme Recieved And Send To Escom For proccesing ಎಂದು ತಿಳಿಸುತ್ತದೆ. ಈ ರೀತಿ ಬಂದಿದ್ದೆ ಆಗಿದ್ದರೆ ನಿಮ್ಮ ಅರ್ಜಿ ಸಲ್ಲಿಕೆಯಾಗಿದೆ. ಆ ಅರ್ಜಿ ಪರಿಶೀಲನೆ ಹಂತದಲ್ಲಿದೆ ಎಂದು ತಿಳಿಸಿದ ಹಾಗೇ. ಒಂದು ವೇಳೆ ಇದರ ಹೊರತಾಗಿ Data Not Found Please Register to GruhaJyothi Scheme ಎಂದು ಬಂದರೆ ರಿಜಿಸ್ಟರ್ ಸರಿಯಾಗಿ ಅಗಿಲ್ಲ ಎಂದು ಅರ್ಥ. ಈ ಯೋಜನೆಯ ಬಗ್ಗೆ ಗೊಂದಲಗಳಿದ್ದರೆ ಅದನ್ನು ಬಗೆಹರಿಸಿಕೊಳ್ಳಲು ಸಹಾಯವಾಣಿ ತೆರೆಯಲಾಗಿದೆ 24/7 1912 ಸಹಾಯವಾಣಿ ಸಂಖ್ಯೆಗೆ ಸಂರ್ಪಕಿಸಬಹುದು.