ಗೃಹ ಲಕ್ಷ್ಮೀ ಅರ್ಜಿ ಸಲ್ಲಿಕೆ ನಿಯಮ ಸಡಿಲಿಕೆ! ಮಹಿಳೆಯರೇ SMS ಬಂದಿಲ್ಲ ಅನ್ನೋ ತಲೆಬಿಸಿ ಬೇಡ, ಈ ರೀತಿ ಸುಲಭವಾಗಿ ಅರ್ಜಿ ಸಲ್ಲಿಸಿ

0

ಹಲೋ ಸ್ನೇಹಿತರೆ, ಕರ್ನಾಟಕ ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ಆರಂಭವಾಗಿದ್ದೂ ಎಲ್ಲಾ ಮಹಿಳೆಯರು ತಮ್ಮ ಹೆಸರನ್ನು ನೋಂದಾಯಿಸಲು ಮುಗಿಬೀಳುತ್ತಿದ್ದಾರೆ, ಆರಂಭದಲ್ಲಿ ಸರ್ವರ್‌ ಡೌನ್‌ ಸಮಸ್ಯೆ ಎದುರಾಗಿದ್ದರೂ ಹಲವು ಮಹಿಳೆಯರು SMS ಬರದೇ ಇರುವ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಮಾರ್ಗ ತಂದಿದೆ. ಏನು ಆ ಮಾರ್ಗ ಈಗ ಹೇಗೆ ಅರ್ಜಿ ಸಲ್ಲಿಸುವುದು? SMS ಬಂದಿಲ್ಲ ಅಂದ್ರೆ ಅರ್ಜಿ ಸಲ್ಲಿಸಬಹುದಾ ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Gruha Lakshmi Apply New Rule

ಗೃಹ ಲಕ್ಷ್ಮೀ ನೋಂದಣಿ ಮಾಡದೇ ಇರುವವರಿಗೆ ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ನಿಯಮಗಳ ಸಡಿಲಿಕೆ ಸ್ವಲ್ಪ ಮಟ್ಟಿಗೆ ಮಾಡಿದೆ ಹಾಗದ್ರೆ ಅರ್ಜಿ ಸಲ್ಲಿಕೆಯ ಸರಳೀಕರಣ ಹೇಗೆ ಯಾವ ಯಾವ ನಿಯಮದಲ್ಲಿ ಸಡಿಲೀಕರಣ ಮಾಡಿದ್ದಾರೆ ನೊಡೋಣ, ಗೃಹ ಲಕ್ಷ್ಮೀ ಅರ್ಜಿ ಸಲ್ಲಿಕೆ ನಿಯಮದಲ್ಲಿ ಸಡಿಲಿಕೆ ಗೃಹಲಕ್ಷ್ಮೀ ನೋಂದಣಿಗಾಗಿ SMS ಗೆ ಕಾಯುವಂತಿಲ್ಲ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೀ ಯೋಜನೆಯ ರಿಜಿಸ್ಷ್ರೇಷನ್‌ ಇದೀಗ ಮತ್ತಷ್ಟು ಸರಳಗೊಂಡಿದೆ ಅರ್ಹ ಫಲಾನುಭವಿಗಳು ನೇರವಾಗಿ ತಮ್ಮ ಹತ್ತಿರದ ನೋಂದಣಿ ಕೇಂದ್ರದಲ್ಲಿ ಹೆಸರನ್ನು ನೋದಾಯಿಸಿಕೊಳ್ಳಬಹುದು ಎಂದು ಮಹಿಳಾ ಮಕ್ಕಳ ಹಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

ಇದಕ್ಕೂ ಮೊದಲು ಅರ್ಹ ಫಲಾನುಭವಿಗಳು ಮೊಬೈಲ್‌ ಸಂಖ್ಯೆಗೆ ಮೆಸೇಜ್‌ ಬಂದರಷ್ಟೆ ನೋದಣಿ ಕೇಂದ್ರಗಳಿಗೆ ತೆರೆಳಬೇಕಾಗಿತ್ತು ಇದೀಗ SMS ಗೆ ಅವಲಂಭಿಸದೇ ನೇರವಾಗಿ ನೋಂದಣಿ ಕೇಂದ್ರಗಳಿಗೆ ಹೋಗಿ ದಾಖಲಾತಿಗಳೊಂದಿಗೆ ತೆರೆಳಿ ತಮ್ಮ ಹೆಸರನ್ನು ರಿಜಿಸ್ಟ್ರೇಶನ್‌ ಮಾಡಿಸಿಕೊಳ್ಳಬಹುದು ಎಂದು ಸಚಿವರು ಮಾಹಿತಿ ನೀಡಿದ್ದು ನಿಯಮಗಳಲ್ಲಿ ಸಡಿಲಿಕೆ ಮಾಡಿದ್ದಾರೆ. ಇನ್ನೂ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಕ್ಕ 7 ದಿನದಲ್ಲಿ 50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆರಂಭದಲ್ಲಿ ಸರ್ವರ್‌ ಸಮಸ್ಯೆ ಎದುರಾಯಿತು ಆದರೆ ಈಗ ಯಾವುದೇ ಸಮಸ್ಯೆ ಇಲ್ಲದೆ ಅರ್ಜಿ ಸಲ್ಲಿಕೆಯ ಕಾರ್ಯ ನೆಡೀತಾ ಇದೆ.

ಗೃಹಲಕ್ಷ್ಮಿ ನೋಂದಣಿಗೆ ಹಣವನ್ನು ಪಡೆದರೆ ಕಿಮಿನಲ್‌ ಕೇಸ್‌ ದಾಖಲಿಸಲಾಗುತ್ತೆ ಸೇವಾ ಕೇಂದ್ರಗಳಲ್ಲಿ ಅಸಡ್ಡೆ ತೋರಿದರೆ ಅಂತಹವರ ವಿರುದ್ದ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತೆ ಅಂತ ಹೇಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಚ್ಚರಿಸಿದೆ.

ಒಟ್ಟಾರೆ ಗೃಹಲಕ್ಷ್ಮೀ ಯೋಜನೆಗೆ SMS ಬರದೇ ಇರುವುದು ಒಂದು ದೊಡ್ಡ ಸಮಸ್ಯೆಯಾಗಿತ್ತು ಈಗ ಆ ನಿಯಮವನ್ನು ಕೈ ಬಿಟ್ಟು SMS ಬರದೇ ಇದ್ರು ಅರ್ಜಿ ಸಲ್ಲಿಕೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಇನ್ಮುಂದೆ ಅರ್ಜಿ ವೇಗ ಪಡೆದುಕೊಳ್ಳದೆಯಾ ಕಾದುನೋಡಬೇಕಿದೆ.

ಇತರೆ ವಿಷಯಗಳು:

Breaking News: ‘ಗೃಹಲಕ್ಷ್ಮೀ’ ಮಹಿಳೆಯರಿಗೆ ಸರ್ಕಾರದಿಂದ ಬಿಗ್ ಶಾಕ್! ಈ ‘ಯಜಮಾನಿ’ಯರಿಗೆ ಹಣವಿಲ್ಲ ಎಂದ ಸಚಿವರು!!

ಇನ್ನು 5 ದಿನ ಭಯಾನಕ ಮಳೆ ಆರ್ಭಟ! ಈ ಪ್ರದೇಶಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

Leave A Reply

Your email address will not be published.