ಗೋಲ್ಡ್ ಪ್ರಿಯರಿಗೆ ಸಿಹಿ ಸುದ್ದಿ, ಬಂಗಾರ-ಬೆಳ್ಳಿ ದರದಲ್ಲಿ ಇಳಿಕೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಎಲ್ಲರ ದೃಷ್ಟಿಯಲ್ಲಿ ಚಿನ್ನ ಮನೆಯ ಆಪತ್ಭಾಂಧವ,ಮನೆಯಲ್ಲಿ ಚಿನ್ನವಿದ್ದರೆ ನೂರಾನೆ ಬಲ ಇದ್ದಂತೆ. ಹಣದ ಅನಿವಾರ್ಯತೆ ಅಂತಾ ಬಂದಾಗ ಬಂಗಾರವೇ ಪ್ರಥಮ ಮತ್ತು ಕೊನೆಯ ಆಯ್ಕೆ. ಬಂಗಾರ ಮಾರಿಯಾದ್ರೂ ತಮಗೆ ಬಂದ ಹಣದ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಲಾಗುತ್ತದೆ.
ಹೀಗೆ ಭಾರತದಲ್ಲಿ ಚಿನ್ನ ಎಲ್ಲವೂ ಆಗಿದೆ. ಇದು ಪ್ರತಿಷ್ಠೆಯನ್ನು ಪ್ರತಿನಿಧಿಸುತ್ತದೆ, ಅಲಂಕಾರಕ್ಕೆ ಬಳಕೆಯಲ್ಲಿದೆ, ಉಳಿತಾಯವಾಗಿದೆ, ಸಂಪತ್ತಾಗಿದೆ ಮತ್ತು ಅಜ್ಜಿ ಕೊಟ್ಟಿದ್ದು, ಫಸ್ಟ್ ಸ್ಯಾಲರಿಲಿ ತಗೊಂಡಿದ್ದು ಎಂಬ ನಾನಾ ನೆನಪುಗಳ ಜೊತೆ ಮಿಳಿತವಾಗಿದೆ.
ಬಂಗಾರ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಬೆಲೆಯನ್ನು ಹೆಚ್ಚಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಭಾರೀ ಏರಿಕೆ ಕಾಣುತ್ತಿರುವ ಬಂಗಾರ ಎಲ್ಲಿಗೆ ಹೋಗಿ ತಲುಪುತ್ತದೆಯೋ ಗೊತ್ತಿಲ್ಲ. ಬಂಗಾರದಷ್ಟೇ ಬೆಳ್ಳಿಯೂ ತನ್ನ ನಾಗಲೋಟ ಮುಂದುವರೆಸಿದೆ.
ಇಲ್ಲಿ ಬಂಗಾರ ಮತ್ತು ಬೆಳ್ಳಿಯ ದರದ ಬಗ್ಗೆ ತಿಳಿದುಕೊಳ್ಳೋಣ.
ಮಹಾನಗರಗಳಲ್ಲಿ ಚಿನ್ನದ ರೇಟ್
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ ( ಗ್ರಾಂ) ರೂ. 6,829 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 6,859 ರೂ. 6,829 ರೂ. 6,829 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 6,844 ರೂ. ಆಗಿದೆ.
ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರ
ಒಂದು ಗ್ರಾಂ (1GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ.5,587 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 6,829 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,450 ಆಗಿದೆ.
ಅಲ್ಲದೇ ಎಂಟು ಗ್ರಾಂ (8GM) 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 44,696 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 54,632 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 59,600 ಆಗಿದೆ.
ಇನ್ನು ಹತ್ತು ಗ್ರಾಂ (10GM)18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 55,870 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 68,290 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 74,500 ಆಗಿದೆ.
ಇನ್ನು ನೂರು ಗ್ರಾಂ (100GM) 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,58,700 ಆಗಿದ್ದು, 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 6,82,900 ಆಗಿದೆ. 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 7,45,000 ಆಗಿದೆ.
ಬೆಳ್ಳಿ ರೇಟ್
ಚಿನ್ನದಂತೆ ಬೆಳ್ಳಿ ಕೂಡ ಮಹತ್ವದ ಸ್ಥಾನ ಪಡೆದುಕೊಂಡಿದ್ದು ಹಬ್ಬ ಹರಿದಿನಗಳಲ್ಲಿ ಬೆಳ್ಳಿಗೂ ಮಹತ್ವವಿದೆ ಬೆಳ್ಳಿಯ ಆಭರಣಗಳನ್ನು ದಿನನಿತ್ಯ ಮಹಿಳೆಯರು ಧರಿಸುತ್ತಾರೆ ಹಾಗಾಗಿ ಚಿನ್ನದಂತೆ ಬೆಳ್ಳಿಯ ದರವನ್ನು ನೋಡಿಕೊಂಡು ಖರೀದಿ ಮಾಡುತ್ತಾರೆ.
ಇಂದು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿ ದರ ರೂ.94,500 ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ.924ರೂ, 9,240 ಹಾಗೂ ರೂ.92,400 ಗಳಾಗಿವೆ.
ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 98,900 ಆಗಿದ್ದರೆ, ದೆಹಲಿಯಲ್ಲಿ ರೂ. 94,500, ಮುಂಬೈನಲ್ಲಿ ರೂ. 94,500 ಹಾಗೂ ಕೊಲ್ಕತ್ತದಲ್ಲೂ ರೂ. 94,500 ಗಳಾಗಿದೆ.
Comments are closed, but trackbacks and pingbacks are open.