ಗೃಹಲಕ್ಷ್ಮೀ ಅರ್ಜಿ ಹಣ ವಸೂಲಿಗೆ ಬಿತ್ತು ಬ್ರೇಕ್! ಹಣ ಪಡೆದವರ ವಿರುದ್ಧ ಕ್ರಿಮಿನಲ್ ಕೇಸ್, ಸಿಎಂ ಖಡಕ್ ವಾರ್ನಿಂಗ್
ಎಲ್ಲರಿಗೂ ನಮಸ್ಕಾರ, ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆ ಅರ್ಜಿ ಆರಂಭವಾಗಿದ್ದೂ, ಅರ್ಜಿ ಸಲ್ಲಿಸಲು ಎಲ್ಲಾ ಮಹಿಳೆಯರು ಮೆಸೇಜ್ ಬಂದಿಲ್ಲ ಒಟಿಪಿ ಬಂದಿಲ್ಲಾ ಅಂತಾ ಇದ್ರೆ ಇಲ್ಲಿ ಇನ್ನೊಂದು ಸಮಸ್ಯೆ ಶುರುವಾಗಿದೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ನೋಂದಣಿ ಮಾಡುವ ನೆಪದಲ್ಲಿ ಸೈಬರ್ ಸೆಂಟರ್ ನವರು ವಿಪರೀತ ದುಡ್ಡು ವಸೂಲಿ ಮಾಡುತ್ತಿದ್ದಾರೆ ಎಂಬ ಸುದ್ದಿ ಸುತ್ತಾ ಮುತ್ತಾ ಸುಳಿದಾಡುತ್ತಾ ಇದೆ. ಮತ್ತು ಯಾರೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೋ ಜನರಿಂದ ದುಡ್ಡು ವಸೂಲಿ ಮಾಡ್ತಾ ಇದ್ರೋ ಅವರ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳೋಕೆ ಸರ್ಕಾರ ಈಗ ಮುಂದಾಗಿದೆ. ಏನು ಕ್ರಮ ಕೈಗೊಳ್ಳಲಾಗುವುದು ಹೇಗೆ ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಗೃಹಲಕ್ಷ್ಮೀ ಅರ್ಜಿಗೆ ಹಣ ಪಡೆದವರೆ ಕ್ರಿಮಿನಲ್, ಸೈಬರ್ ಸೆಂಟರ್ಗಳ ಹಣ ವಸೂಲಿಗೆ ಬ್ರೇಕ್, ಸಿಎಂ ಖಡಕ್ ವಾರ್ನಿಂಗ್ ಬೆಂಗಳೂರಿನಲ್ಲಿ ಗೃಹಲಕ್ಷ್ಮೀ ಅರ್ಜಿ ನೋಂದಣಿ ನೆಪದಲ್ಲಿ ಸೈಬರ್ ಸೆಂಟರ್ ಮಾಲಿಕರು ವಸೂಲಿ ದಂಧೆ ಗೆ ಇಳಿದಿದ್ದಾರೆ, ಈ ಬಗ್ಗೆ ಕಾರ್ಯಾಚರಣೆ ನೆಡೆಸಿ ಅಕ್ರಮ ಬಯಲಿಗೆಳೆದಿದ್ದಾರೆ, ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಯಿಂದ ಸೈಬರ್ ಸೆಂಟರ್ ಮೇಲೆ ದಾಳಿ ನೆಡೆಸಿದ್ದು, ನೋಟಿಸ್ ಜಾರಿ ಮಾಡಿದ್ದು ಶಿಸ್ತು ಕ್ರಮಕ್ಕೆ ಇಲಾಖೆ ಮುಂದಾಗಿದೆ. ಇನ್ನೂ ಸಿಎಂ ಕೂಡ ಈ ಬಗ್ಗೆ ಪ್ರತಿಕ್ರಯಿಸಿದ್ದೂ ದುಡ್ಡು ತಗೊಂಡವರ ಮೇಲೆ ಕಾನೂನು ಕ್ರಮ ಎಚ್ಚರಿಕೆ ನೀಡಿದ್ದಾರೆ. ಗೃಹಲಕ್ಷ್ಮೀ ಅರ್ಜಿಗೆ ಹಣ ತಗೊಂಡವರ ಮೇಲೆ ಕ್ರಮಿನಲ್ ಕೇಸ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹಲಕ್ಷ್ಮೀ ಯೋಜನೆಗೆ ಉಚಿತವಾಗಿ ಅರ್ಜಿ ಸಲ್ಲಿಕೆ ಮಾಡಬೇಕು ಎಂದರು. ಯಾರಾದರೂ ದುಡ್ಡು ತೆಗೆದುಕೊಂಡರೆ ಸಾಕ್ಷೀ ಸಿಕ್ಕರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಎಂದರು. ರಜಾಜಿ ನಗರದ RTO ಕಛೇರಿ ಆವರಣದಲ್ಲಿರುವ ಸೈಬರ್ ಸೆಂಟರ್ ಒಂದರಲ್ಲಿ 200 ರೂ ಪಡೆದು ಅರ್ಜಿ ಹಾಕಲಾಗುತ್ತಿತ್ತು, ಬೆಂಗಳೂರು ಒನ್ ಸೆಂಟರ್ ಸಿಬ್ಭಂದಿಗಳ ಐಡಿ ಮತ್ತು ಪಾಸ್ ವರ್ಡ್ ಗಳನ್ನು ಬಳಸಿಕೊಂಡು ಅಕ್ರಮವಾಗಿ ನೋಂದಣಿ ಮಾಡಲಾಗುತ್ತಿತ್ತು. ಸುದ್ದಿ ಪ್ರಾಸಾರ ಆಗುತ್ತಾ ಇದ್ದಂತೆ, ಇಲಾಖೆ ಅಧಿಕಾರಿಗಳು ದಾಳಿ ನೆಡೆಸಿದ್ದಾರೆ. ಬೆಂಗಳೂರಿನ ಹಲವು ಸೈಬರ್ ಸೆಂಟರ್ ಗಳಲ್ಲಿ ಕದ್ದು ಮುಚ್ಚಿ ಈ ದಂಧೆ ನೆಡೆತಾ ಇದೆ. ರಾಜ್ಯದ ಹಲವು ಜಿಲ್ಲೆಗಳಲ್ಲೂ ಈ ಅಕ್ರಮ ದಂಧೆ ನೆಡೆತಾ ಇದ್ದೂ ಸಂಭಂದ ಪಟ್ಟಾ ಅಧಿಕಾರಿಗಳು ಎಚ್ಚೆತ್ತುಕೊಂಡು ವಸೂಲಿಕೋರರನ್ನಾ ಮಟ್ಟಾ ಹಾಕಬೇಕಿದೆ.