ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಬಗ್ಗೆ ಮಾಹಿತಿ | Information About Beti Bachao Beti Padao Scheme in Kannada

0

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಬಗ್ಗೆ ಮಾಹಿತಿ Information About Beti Bachao Beti Padao Scheme yojane in Kannada

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಬಗ್ಗೆ ಮಾಹಿತಿ

Information about Beti Bachao Beti Padao scheme in Kannada
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ :

  • ಲಿಂಗ ತಾರತಮ್ಯ ತಡೆಯಲು ಹಾಗೂ ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಮಹತ್ವದ ಜಾಗೃತಿ ಅಭಿಯಾನವೇ “ಬೇಟಿ ಬಚಾವೋ ಬೇಟಿ ಪಡಾವೋ”.
  • ಜನವರಿ 22, 2015 ರಂದು ʼಹರಿಯಾಣದ ಪಾಣಿಪತ್‌ʼ ನಲ್ಲಿ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಮಾನವ ಸಂಪನ್ಮೂಲಾಭಿವೃಧ್ದಿ ಸಚಿವಾಲಯಗಳು ಈ ಆಂದೋಲನವನ್ನು ಜಂಟಿಯಾಗಿ ನಿರ್ವಹಿಸುತ್ತಿವೆ.
  • ಇದು ಕೇಂದ್ರ ವಲಯದ ಯೋಜನೆಯಾಗಿದ್ದು, ಜಿಲ್ಲಾ ಮಟ್ಟದ ಘಟಕಕ್ಕೆ 100% ಆರ್ಥಿಕ ನೆರವು ನೀಡಲಾಗುತ್ತಿದೆ. ಯೋಜನೆಯ ಸುಗಮ ಕಾರ್ಯಾಚರಣೆಗಾಗಿ ನಧಿಯನ್ನು ನೇರವಾಗಿ ಡಿಸಿ\ಡಿಎಂ ಖಾತೆಗೆ ಬಿಡುಗಡೆ ಮಾಡಲಾಗತ್ತದೆ.
  • 2011 ರ ಜನಗಣತಿ ಪ್ರಕಾರ ಪ್ರತಿ 1000 ಗಂಡು ಮಕ್ಕಳಿಗೆ 918 ಹೆಣ್ಣು ಮಕ್ಕಳ್ಳಿದ್ದಾರೆ. ಈ ಲಿಂಗಾನುಪಾತ ಹೀಗೆ ಮುಂದುವರಿದರೆ ಅದು ಮನುಕುಲಕ್ಕೆ ಗಂಡಾಂತರ ಎಂದು ಅರಿತ ಕೇಂದ್ರ ಸರ್ಕಾರ ದೇಶದಾದ್ಯಂತ ಸಮೂಹ ತಿಳಿವಳಿಕೆಯ ಆಂದೋಲನವನ್ನು ಹಮ್ಮಿಕೊಂಡಿದೆ.

ಈ ಯೋಜನೆಯ ಉದ್ದೇಶ :

  • ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸಿರುವ ದೇಶದ 100 ಜಿಲ್ಲೆಗಳನ್ನು ಗುರುತಿಸಿ ಬಹುವಿಧಧ ಕ್ರಮಗಳ ಮೂಲಕ ಪರಿಸ್ಥಿತಿ ಸುಧಾರಣೆ ತರುವುದು. ಹೆಣ್ಣು ಮಗುವಿನ ಹುಟ್ಟನ್ನು ಸಂಭ್ರಮಿಸುವುದು, ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವವನ್ನು ಸಾರುವುದು ಹಾಗೂ ಆ ಕುರಿತು ಅರಿವು ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ.
  • 5 ವರ್ಷ್ಕಿಂತ ಕಡಿಮೆಯಿರುವ ಹೆಣ್ಣುಮಕ್ಕಳು ಅತಿ ಕಡಿಮೆ ತೂಕದವರಾಗಿದ್ದರೆ ಪೌಷ್ಟಿಕಾಂಶ ಆರೈಕೆಗೆ ಪ್ರೋತ್ಸಾಹಿಸುವುದು.
  • ಹೆಣ್ಣು ಮಕ್ಕಳ ಶಾಲಾ ದಾಖಲಾತಿಯನ್ನು ಪ್ರೋತ್ಸಾಹಿಸುವುದು ಮತ್ತು 2013-2014ರಲ್ಲಿ ಶೇ76% ರಷ್ಟಿದ್ದ ಹೆಣ್ಣು ಮಕ್ಕಳ ದಾಖಲಾತಿಯನ್ನು 2017 ಕ್ಕೆ 79% ಕ್ಕೆ ಏರಿಸುವುದು ಕೇಂದ್ರ ಸರ್ಕಾರದ ಗುರಿ.
  • ಪ್ರತಿ ಶಾಲೆಯಲ್ಲಿ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಶೌಚಾಲಯ ಸೌಲಭ್ಯ ಕಲ್ಪಿಸುವುದು. ಲೈಂಗಿಕ ದೌರ್ಜನ್ಯಗಳ ವಿರುದ್ದ ಮಕ್ಕಳಿಗೆ ರಕ್ಷಣೆ ಒದಗಿಸುವುದು. ಈ ಅಭಿಯಾನದ ಬಹಳ ಮುಖ್ಯ ಉದ್ದೆಶ.
  • ಕ್ಷೀಣಿಸುತ್ತಿರುವ ಮಕ್ಕಳ ಲೈಂಗಿಕ ಅನುಪಾತ ಮತ್ತು ಮಹಿಳೆಯರ ಸಬಲೀಕರಣದ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವುದು.
  • ಲಿಂಗಪಕ್ಷಪಾತದ ಮೇಲೆ ಮಕ್ಕಳನ್ನು ಪಡೆಯುವುದನ್ನು ತಡೆಗಟ್ಟುವುದು, ಹೆಣ್ಣು ಮಗುವಿನ ಉಳಿವು ಮತ್ತು ರಕ್ಷಣೆಯನ್ನು ಖಾತರಿಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಯೋಜನೆಗೆ ಇರಬೇಕಾದ ಅರ್ಹತೆಗಳು :

  • ಕುಟುಂಬವು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವನ್ನು ಹೊಂದಿರಬೇಕು.
  • ಕುಟುಂಬದ ಹೆಣ್ಣು ಮಗುವಿನ ಹೆಸರಿನಲ್ಲಿ ಯಾವುದೇ ಭಾರತೀಯ ಬ್ಯಾಂಕ್ನಲ್ಲಿ ತೆರೆಯಲಾದ ಸುಕನ್ಯಾ ಸಮೃದ್ದಿ ಖಾತೆ ಅಥವಾ SSA ಇರಬೇಕು.
  • ಹೆಣ್ಣು ಮಗು ಭಾರತೀಯ ನಿವಾಸಿಯಾಗಿರಬೇಕು. NRI ನಾಗರಿಕರು BBBP ಯೋಜನೆಗೆ ಅರ್ಹತೆಯನ್ನು ಹೊಂದಿಲ್ಲ.

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :

  • ಅರ್ಜಿದಾರನ ಜನನ ಪ್ರಮಾಣ ಪತ್ರ
  • ಪೋಷಕರ ಗುರುತಿನ ಚೀಟಿ
  • ಆಧಾರ್‌ ಕಾರ್ಡ್‌
  • ವಿಳಾಸ ಪುರಾವೆ- ಚಾಲನಾ ಪರವಾನಗಿ, ಯುಟಿಲಿಟಿ ಬಿಲ್ಗಳು, ಪಾಸ್ಪೋರ್ಟ್‌, ವಿದ್ಯುತ್‌ ಬಿಲ್‌, ಇತ್ಯಾದಿ
  • ಪಾಸ್ಪೋರ್ಟ್‌ ಅಳತೆಯ ಭಾವಚಿತ್ರ.

FAQ :

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಉದ್ಘಾಟನೆಯನ್ನು ಎಲ್ಲಿ ಮಾಡಲಾಗಿದೆ ?

ಹರಿಯಾಣದ ಪಾಣಿಪತ್‌

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಉದ್ಘಾಟನೆಯನ್ನು ಯಾವಾಗ ಮಾಡಲಾಗಿದೆ ?

೨೨\೦೧\ ೨೦೧೫

ಇತರೆ ವಿಷಯಗಳು :

ಮದರ್ ತೆರೇಸಾ ಅವರ ಬಗ್ಗೆ ಪ್ರಬಂಧ

ಅಟಲ್‌ ಬಿಹಾರಿ ವಾಜ್ ಪೇಯಿ ಜೀವನ ಚರಿತ್ರೆ

Leave A Reply

Your email address will not be published.