ಮೂಢನಂಬಿಕೆ ಬಗ್ಗೆ ಪ್ರಬಂಧ | Essay on Superstition in Kannada
ಮೂಢನಂಬಿಕೆ ಬಗ್ಗೆ ಪ್ರಬಂಧ Essay on Superstition mudanambike prabandha in kannada
ಮೂಢನಂಬಿಕೆ ಬಗ್ಗೆ ಪ್ರಬಂಧ
ಈ ಲೇಖನಿಯಲ್ಲಿ ಮೂಢನಂಬಿಕೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.
ಪೀಠಿಕೆ
‘ಮೂಢನಂಬಿಕೆ’ ಎನ್ನುವುದು ಅಲೌಕಿಕತೆಯ ಕುರುಡು ನಂಬಿಕೆಯಾಗಿದ್ದು, ಪ್ರಕೃತಿಯ ನಿಯಮಗಳಿಗೆ ಅಥವಾ ಬ್ರಹ್ಮಾಂಡದ ವೈಜ್ಞಾನಿಕ ತಿಳುವಳಿಕೆಗೆ ಅನುಗುಣವಾಗಿಲ್ಲದ ಶಕ್ತಿಗಳು ಅಥವಾ ಘಟಕಗಳ ಅಸ್ತಿತ್ವದ ನಂಬಿಕೆ. ಇದು ಮಾನವನ ಅಜ್ಞಾನ ಮತ್ತು ವೈಜ್ಞಾನಿಕ ಜ್ಞಾನದ ಕೊರತೆಯಲ್ಲಿ ತಮ್ಮ ನೈಜ್ಯತೆಯನ್ನು ಮರೆಯುತ್ತಿದ್ದಾರೆ.
ವಿಷಯ ವಿವರಣೆ
ವೈಜ್ಞಾನಿಕವಲ್ಲದ ಕೇವಲ ನಂಬಿಕೆ ಮಾತ್ರದಿಂದಲೇ ಅನುಸರಿಸುವ ಅಸಂಪ್ರದಾಯಕ ಆಚರಣೆಗಳನ್ನು ಮೂಢನಂಬಿಕೆಗಳೆಂದು ಕರೆಯಲಾಗಿದೆ. ಅಂದರೆ ಯಾವ ನಂಬಿಕೆಗಳಲ್ಲಿ ಮೌಡ್ಯತೆ ತುಂಬಿರುತ್ತದೆಯೋ ಅವೇ ಮೂಢನಂಬಿಕೆಗಳು ಎನಸಿಕೊಳ್ಳುತ್ತದೆ. ಗ್ರಹಣ ನಂಬುವುದು, ವಿಧವೆತನ, ದೃಷ್ಟಿತೆಗೆಯುವುದು, ನಿವಾಳಿಯೆತ್ತುವುದು, ಬಲಿದಾನ, ಹರಕೆ, ದೇವದಾಸಿ ಪದ್ದತಿ, ಭೂತ ಬಿಡಿಸುವುದು, ಭೂತಾರಾಧನೆ, ಬೆಕ್ಕು ಅಡ್ಡ ಹೋದರೆ ಕೆಟ್ಟದು ಎಂದು ನಂಬುವುದು. ಮಾಟ ಮಂತ್ರಗಳು, ವಶೀಕರಣ ಮುಂತಾದ ಅವೈಜ್ಞಾನಿಕ ನಂಬಿಕೆಗಳು ಹರಡಿಕೊಂಡಿವೆ. ಕೆಲವೊಂದು ಅತ್ಯಂತ ಅಮಾನವೀಯವಾದ ಪದ್ದತಿಗಳು ಕೂಡ ಇವೆ.
ಅನಕ್ಷರಸ್ಥರು ಮೂಢನಂಬಿಕೆಗಳನ್ನು ನಂಬುವುದು ಹೆಚ್ಚು. ಹೆಚ್. ನರಸಿಂಹಯ್ಯನವರು ಹೇಳುವಂತೆ ಮೂಢನಂಬಿಕೆಗಳನ್ನು ನಂಬುವ ಅವಿದ್ಯಾವಂತನಿಗಿಂತ, ಮೂಢನಂಬಿಕೆಗಳನ್ನು ಪ್ರತಿಪಾದಿಸುವ ವಿದ್ಯಾವಂತನು ಸಮಾಜಕ್ಕೆ ಅಪಾಯಕಾರಿ. ಶಿಕ್ಷಣವಂತರು ಮೂಢನಂಬಿಕೆಗಳ ಬಗ್ಗೆ ತಳೆಯುವ ನಿಷ್ಕ್ರೀಯತೆ ಬಹಳ ಹಾನಿ ಉಂಟುಮಾಡುತ್ತದೆ.
ಭಯ ಅಜ್ಞಾನಗಳಿಂದ ತುಂಬಿರುವ ಮೂಢನಂಬಿಕೆಗಳು ಆತ್ನವಿಶ್ವಾಸವನ್ನು, ಸ್ವತಂತ್ರ ಆಲೋಚನೆಗಳನ್ನು ಮೊಟಕುಗೊಳಿಸುತ್ತದೆ. ಇವುಗಳು ದೇಶದ ಪ್ರಗತಿಗೆ ವಿರೋಧವಾಗಿದ್ದು, ಸಮಾಜಕ್ಕೆ ಆಘಾತವನ್ನುಂಟು ಮಾಡುತ್ತವೆ. ಅದ್ದರಿಂದ ಪ್ರತಿಯೊಬ್ಬರು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡು ಮೂಢನಂಬಿಕೆಗಳ ಹಾನಿಯ ಬಗ್ಗೆ ತಿಳಿಯಬೇಕು ಮತ್ತು ತಿಳಿಸಬೇಕು.
ಮೂಢನಂಬಿಕೆಗಳಿಗೆ ಉದಾಹರಣೆಗಳು
- ಬೆಕ್ಕು ಅಡ್ಡ ಬಂದಾಗ ಅಪಶಕುನ ಎಂದು ಭಾವಿಸುವುದು.
- ಒಳ್ಳೆ ಕೆಲಸಕ್ಕೆ ಅಥವಾ ಹೊರಗೆ ಹೋಗುವಾಗ ಖಾಲಿ ಕೊಡವನ್ನು ತರುವುದು ಅಪಶಕುನವೆಂದು ಹೇಳುವುದು.
- ಮನೆ ಮೇಲೆ ಗೂಬೆ ಕೂರುವುದು ಅಪಶಕುನವೆನ್ನುವುದು.
- ಎಡಗಣ್ಣು ಬಡಿದರೆ ಕೆಡಕಾಗುವುದು ಎಂಬ ಮೂಡನಂಬಿಕೆ.
- ಭವಿಷ್ಯ ವಾಣಿ ಯನ್ನು ದಿನನಿತ್ಯ ತಿಳಿದುಕೊಂಡು ಅದರಂತೆ ನಡೆಯುವುದು.
- ಮಾಟಿ – ಮಂತ್ರಗಳನ್ನು ಮಾಡುವುದು.
ಉಪಸಂಹಾರ
ವಿಜ್ಞಾನ ಮತ್ತು ಅದರ ಪರಿಶೋಧನೆಯಿಂದ ಮೂಢನಂಬಿಕೆಗಳ ಬಗ್ಗೆ ಸಮಾಜಕ್ಕೆ ಸಾಕಷ್ಟು ಅರಿವು ಮೂಡಿಸುವುದರ ಮೂಲಕ, ವಿವಿಧ ಸಬೇ, ಸಮ್ಮೇಳನಗಳಲ್ಲಿ ಪ್ರಚಾರಗೊಳಿಸುವ ಮೂಲಕ ಮತ್ತು ಚರ್ಚಿಸುವುದರ ಮೂಲಕ ತಡೆಗಟ್ಟಬಹುದಾಗಿದೆ. ಸಮಾಜದಲ್ಲಿ ಬೇರೂರಿರುವ ಪ್ರತಿಯೊಂದು ಮೂಢನಂಬಿಕೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಅದರಿಂದ ಆಗುವ ಅನಾಹುತ, ನಷ್ಟವನ್ನು ತಪ್ಪಿಸಿಕೊಳ್ಳುವ ಮನೋಭಾವನೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕೆಂಬುದೇ ನಮ್ಮ ಆಶಯವಾಗಬೇಕು.
FAQ
ರಕ್ತ ಕೆಂಪಾಗಲು ಕಾರಣವೇನು?
ಹಿಮೋಗ್ಲೋಬಿನ್.
ಪ್ರಪಂಚದ ಯಾವ ದೇಶದ ನದಿಯ ನೀರು ಯಾವಾಗಲೂ ಬೆಚ್ಚಗಿರುತ್ತವೆ?
ನೈಲು ನದಿ.
ಇತರೆ ವಿಷಯಗಳು :