ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyathe Prabandha in Kannada

0

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ, Rashtriya Bhavaikyathe Prabandha in Kannada, National Spirituality Essay in Kannada

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ

ಹಲೋ ಗೆಳೆಯರೆ ನಾವು ನಿಮ್ಮೆಲ್ಲರಿಗೂ ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ತಿಳಿಸಿಕೊಡುವುದರ ಸಲುವಾಗಿ ಈ ಪ್ರಬಂಧವನ್ನು ರಚಿಸಿದ್ದೆವೆ. ರಾಷ್ಟ್ರೀಯ ಭಾವೈಕ್ಯತೆ ಎಂದರೇನು, ಪ್ರಭಾವಬೀರುವ ಅಂಶಗಳು, ರಾಷ್ಟ್ರೀಯ ಭಾವೈಕ್ಯತೆಗೆ ಶಿಕ್ಷಣದ ಪಾತ್ರ, ದಿನಾಚರಣೆ ಹೇಗೆ ಆಚರಿಸಲಾಗುತ್ತದೆ ಎಂಬ ಎಲ್ಲಾ ವಿಷಯದ ಬಗ್ಗೆ ತಿಳಿಯಲು ಈ ಪ್ರಬಂಧವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ .

Rashtriya Bhavaikyathe Prabandha in Kannada
Rashtriya Bhavaikyathe Prabandha in Kannada

ಪೀಠಿಕೆ:

ಒಂದು ರಾಷ್ಟ್ರದಲ್ಲಿ ನಗರಿಕರು ತಮ್ಮ ಭಾಷೆ, ಜಾತಿ, ಧರ್ಮ,ಮತ, ಪಂಗಡ, ಪ್ರಾದೇಶಿಕತೆ ಇದೆಲ್ಲದರ ಭೇದ ಭಾವವನ್ನು ಬಿಟ್ಟು ನಾವೆಲ್ಲರು ಒಂದೇ ಎಂಬುವ ಭಾವನೆಯನ್ನ ಬೆಳೆಸಿಕೊಳ್ಳುವುದೆ ರಾಷ್ಟ್ರೀಯ ಭಾವೈಕ್ಯತೆಯಾಗಿದೆ. ರಾಷ್ಟ್ರೀಯ ಭಾವೈಕ್ಯತೆಯು ದೇಶದ ಪ್ರಜಾಪ್ರಭುತ್ವದ ತಳಹದಿಯಾಗಿದೆ. ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ನಮ್ಮ ದೇಶದಲ್ಲಿ ವಿಭಿನ್ನ ಭಾಷೆಗಳು, ಧರ್ಮಗಳು, ವೇಷಭೂಷಣಗಳು, ಆಹಾರ ಸೇವನೆಯ ಪದ್ದತಿಗಳು, ಆಚಾರ ವಿಚಾರಗಳು, ಕಲೆ ಸಂಸೃತಿಗಳು ಒಂದು ಪ್ರದೇಶದಿಂದ ಇನ್ನೊದು ಪ್ರದೇಶಕ್ಕೆ ವಿಭಿನ್ನವಾಗಿರುವುದು ಕಂಡು ಬರುತ್ತದೆ. ನಮ್ಮ ದೇಶವು ವಿವಿಧತೆಯಲ್ಲಿಏಕತೆಗೆ ಹೆಸರುವಾಸಿ ದೇಶವಾಗಿದೆ. ರಾಜಕೀಯ ಮತ್ತು ಭೌಗೋಳಿಕ, ನೈಸರ್ಗಿಕ ಸಂಪತ್ತು, ಹವಾಮಾನ, ಜನರ ಉಡುಗೆ ತೊಡುಗೆ, ಎಲ್ಲವೂ ವಿಭಿನ್ನವಾಗಿವೆ. ಇಸ್ಟೆಲ್ಲಾ ವಿಭಿನ್ನತೆ ಇದ್ದರು ನಾವೆಲ್ಲ ಒಂದೆ ಎಂದು ಬಾಳುವುದೆ ಭಾವೈಕ್ಯತೆ.

ರಾಷ್ಟ್ರೀಯ ಭಾವೈಕ್ಯತೆ ಎಂದರೇನು:

ಭಾಷೆ, ದರ್ಮ, ಸಂಸೃತಿ, ಜೀವನ ಶೈಲಿ, ಉಡುಕೆ, ನಡೆ ನುಡಿ, ಜಾತಿ, ನಂಬಿಕೆ ಬೇರೆ ಬೇರೆ ಇದ್ದರು ಐಕ್ಯತೆ ಸಾಮರಸ್ಯತೆಯಿಂದ ಒಟ್ಟಾಗಿ ಬಾಳುವುದನ್ನೆ ರಾಷ್ಟ್ರೀಯ ಭಾವೈಕ್ಯತೆ ಎನ್ನುತ್ತಾರೆ.

ರಾಷ್ಟ್ರೀಯ ಭಾವೈಕ್ಯತೆಗೆ ಪ್ರಭಾವ ಬೀರುವ ಅಥವಾ ತಡೆಯಾಗುವ ಅಂಶಗಳು:

  • ಧಾರ್ಮಿಕ ಸಂಘರ್ಷ
  • ಕೊಮುಗಲಬೆ
  • ಲೈಂಗಿಕ ದರ್ಜನ್ಯ
  • ಜಾತಿ
  • ಭ್ರಷ್ಟಚಾರ
  • ಅಜ್ಞಾನ
  • ಮದುವೆ ವಿಚಾರ
  • ಭಾಷಭಿಮಾನ
  • ಲಿಂಗ
  • ಪರಂಪರೆ ಇನ್ನೂ ಮುಂತಾದವುಗಳು

ರಾಷ್ಟ್ರೀಯ ಭಾವೈಕ್ಯತೆ ಶಿಕ್ಷಣದ ಪಾತ್ರ ಮತ್ತು ದಿನಾಚರಣೆ:

ಚಿಕ್ಕವರಿಂದಲೇ ಭಾವೈಕ್ಯತೆ ಅಂಶಗಳನ್ನು ತಿಳಿಸಿ ಬೆಳೆಸಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿ ಅನುವಂತೆ ಭಾವೈಕ್ಯತೆಯ ಪಾಠ ಮಾಡಬೇಕು. ಅವರಿಗೆ ಯಾವ ರೀತಿಯಲ್ಲಿ ಹೇಳಿದರೆ ಆರ್ಥವಾಗುವು ಎಂದು ತಿಳಿದುಕೊಂಡು ಅದೇ ರೀತಿಯಲ್ಲಿ ಹೇಳಿಕೊಡಬೇಕು. ಭಗವದ್ಗೀತೆ, ಕಥೆ, ಶ್ಲೋಕ ಮುಂತಾದ ವಿಧಾನದಲ್ಲಿ ತಿಳಿ ಹೇಳಬೇಕು. ಈ ವಿಷಯದ ಬಗ್ಗೆ ಪಾಠವನ್ನು ಪಠ್ಯ ಪಸ್ತಕದಲ್ಲಿ ಇಡಬೇಕು. ನಾಟಕ, ನೃತ್ಯ ನಾಟಕಗಳ ಮೂಲಕ ಶಿಕ್ಷಣ ಕೊಡಬೇಕು. ದೇಶದ ಬಗ್ಗೆ ಮತ್ತು ಜಾತಿ ಮತ ಎಂಬ ಭಾವನೆಯನ್ನು ಬಿಟ್ಟು ಬದುಕಬೇಕು ಎಂದು ಶಿಕ್ಷಕರು ಶಿಕ್ಷಣ ನೀಡಬೇಕು. ಭಾವೈಕ್ಯತೆ ರಾಷ್ಟ್ರೀಯತೆ ನೈತಿಕತೆಗಳು ಉಸಿರಾಗುವಂತೆ ಮಾಡಬೇಕು. ಸಾಮಾಜಿಕ ಚಟುವಟಿಕೆಗಳಲ್ಲಿ ಬಾಗವಹಿಸುವಂತೆ ಮಾಡಬೇಕು. ದೇಶವೆ ಒಂದು ಕುಟುಂಬ ನಾವೆಲ್ಲಾ ಅದರ ಸದಸ್ಯರು.

ಜಾತಿ, ಮತ ಎಂಬ ಭಾವನೆಯನ್ನು ಬಿಟ್ಟು ಬದುಕುವಂತೆ ಶಿಕ್ಷಣ ನೀಡುವುದು ಅತ್ಯಗತ್ಯ. ಚಿಕ್ಕವರಿಂದಲೇ ಇದೆಲ್ಲದರ ಬಗ್ಗೆ ಅರಿವು ಮೂಡಿಸುವುರಿಂದ ಮುಂದೆ ಅದನ್ನು ಅವರು ಬೆಳೆಸಿಕೊಂಡು ಹೊಗುತ್ತಾರೆ. ಇದು ದೇಶದ ಅಭಿವೃಧ್ಧಿಗೆ ಕಾರಣವಾಗುತ್ತದೆ.

ಸರ್ದಾರ್‌ ವಲ್ಲಭಭಾಯಿ ಪಟೇಲ್ ಹುಟ್ಟು ಹಬ್ಬದ ಸ್ಮರರ್ಥವಾಗಿ ರಾಷ್ಟ್ರೀಯ ಭಾವೈಕ್ಯತೆ ದಿನವನ್ನು ಆಚರಿಸಲಾಗುತ್ತದೆ. ಈ ದಿನ ನಮಗೆಲ್ಲಾ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವಂತಿರಬೇಕು.

ರಾಷ್ಟ್ರೀಯ ಭಾವೈಕ್ಯತೆ ವೃದ್ಧಿಗೊಳಿಸುವ ಅಂಶಗಳು:

ರಾಷ್ಟ್ರೀಯ ಭಾವೈಕ್ಯತೆಯನ್ನು ವೃದ್ಧಿಗೊಳಿಸುವ ಅಂಶಗಳಾದ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದು, ಜಾತ್ಯಾತೀತೆ ತೊರೆದು ಹಾಕುವುದು, ಸಾಮರಸ್ಯ ಮೂಡಿಸುವುದು, ರಾಷ್ಟ್ರೀಯ ಲಾಂಛನಗಳಿಗೆ ಗೌರವ ನೀಡುವುದು, ಮಕ್ಕಳಲ್ಲಿ ಸರ್ವಧರ್ಮ ಸಮನ್ವಯತೆ ಮೂಡಿಸುವುದು, ಆರೋಗ್ಯಕರವಾದ ಒಗ್ಗೂಡುವಿಕೆಯ ಮನೋಭಾವನೆ . ಸಂವಿಧಾನದ ದ್ರಷ್ಟಿಯಲ್ಲಿ ಎಲ್ಲರೂ ಸಮಾನರು. ಈ ಹಿನ್ನಲೆಯಲ್ಲಿಯೇ ಸ್ತ್ರೀ ಪುರುಷರೆಂಬ ಬೇದ ಭಾವವಿಲ್ಲ ಲಿಂಗ, ಪ್ರಾಂತ್ಯ, ಭಾಷೆ, ಜಾತಿ-ಧರ್ಮ, ಉಡುಗೆ-ತೊಡುಗೆ, ಆಹಾರ, ಆಚರಣೆ, ರೀತಿ-ನೀತಿ ಸಂಪ್ರದಾಯ ಇದ್ಯವುದರಲ್ಲು ಭೇದವಿಲ್ಲದೆ ನಾವೆಲ್ಲಾ ಒಂದೇ ಎಂದು ಪರಿಗಣಿಸಿದ್ದಾರೆ. ರಾಷ್ತ್ರೀಯ ಹಬ್ಬಗಳನ್ನು ರಾಷ್ಟ್ರ ನಾಯಕರುಗಳ ಜನ್ಮದಿನಾಚರಣೆಯನ್ನು ಶಾಲಾ ಕಾಲೇಜುಗಳಲ್ಲಿಒಟ್ಟಾಗಿ ಆಚರಿಸುವುದು ಇವುಗಳಿಗೆ ಸಾಮೂಹಿಕವಾಗಿ ಗೌರವ ಸಲ್ಲಿಸುವುದು, ಭಿನ್ನತೆ ಮರೆತು ಒಂದಾಗಿ ಶಾಂತಿಯಿಂದ ಬಾಳುವ ಮೂಲಕ ರಾಷ್ತ್ರೀಯ ಭಾವೈಕ್ಯತೆ ಮೂಡಿಸಬೇಕು. ರಾಷ್ಟ್ರ ಚಿಹ್ನೆ,ರಾಷ್ಟ್ರಗೀತೆ, ರಾಷ್ಟ್ರ ಧ್ವಜ, ರಾಷ್ಟ್ರಲಾಂಛನ,ರಾಷ್ಟ್ರ ಭಾಷೆ ಇವು ನಮ್ಮ ಏಕತೆಯ ಸಂಕೇತಗಳು.

ಗಾಂಧಿ ಜಯಂತಿ, ಸ್ವತಂತ್ರ ದಿನಾಚರಣೆ, ಗಣರಾಜ್ಯೋತ್ಸ ದಿನ ಇನ್ನೂ ಮುಂತಾದವು ರಾಷ್ತ್ರೀಯ ಹಬ್ಬಗಳಾಗಿವೆ.

ರಾಷ್ಟ್ರೀಯ ಭಾವೈಕ್ಯತೆ ಅವಶ್ಯಕತೆ:

  • ಹಲವು ದರ್ಮ, ಸಂಸ್ಕೃತಿ ,ಭಾಷೆ, ಜಾತಿಯಲ್ಲಿ ಇರುವ ತಾರತಮ್ಯ, ಎಲ್ಲದನ್ನು ಹೋಗಲಾಡಿಸಿ ಒಟ್ಟಿಗೆ ಬಾಳಲು ರಾಷ್ಟ್ರೀಯ ಭಾವೈಕ್ಯತೆ ಬೇಕು.
  • ದರ್ಮ ಜಾತಿಗಳಲ್ಲಿರುವ ಬಿನ್ನಬಿಪ್ರಾಯವನ್ನು ಹೊಗಲಾಡಿಸಿ ಬದುಕಲು ರಾಷ್ಟ್ರೀಯ ಭಾವೈಕ್ಯತೆ ಅವಶ್ಯಕವಾಗಿದೆ.
  • ರಾಷ್ಟ್ರೀಯ ಸಮಸ್ಯೆಗಳನ್ನು ಹೊಗಲಾಡಿಸಿಕೊಂಡು ಒಗ್ಗಟ್ಟಿನಿಂದ ಇರುವುದು ಅವಶ್ಯಕವಾಗಿದೆ.
  • ಪ್ರೀತಿ, ಸೌಹರ್ದದತೆಯಿಂದ, ಸಹನೆ, ಗೌರವದಿಂದ ದೇಶದ ಕೀರ್ತ ಪತಾಕೆ ಹಾರಿಸಲು ರಾಷ್ಟ್ರೀಯ ಭಾವೈಕ್ಯತೆ ಅವಶ್ಯಕ.
  • ಬಾಲ್ಯದಿಂದಲೇ ವಿವಿದತೆಯಲ್ಲಿ ಏಕತೆ ಮೂಡಿಸಿಕೊಳ್ಳುವುದು ಅವಶ್ಯಕವಾಗಿದೆ.
  • ಕೆಲಸದ ಸ್ಥಳ, ಸಮಾಜ, ಸಮುದಾಯದಲ್ಲಿ ನೈತಿಕತೆ ಹೆಚ್ಚಿಸಿಕೊಳ್ಳಲು ರಾಷ್ಟ್ರೀಯ ಭಾವೈಕ್ಯತೆ ಬೇಕು.

ಉಪಸಂಹಾರ:

ದೇಶದ ಅಭಿವೃಧ್ಧಿಯಾಗಬೇಕಾದರೆ ಅಲ್ಲಿನ ಜನರ ಒಗ್ಗಟ್ಟು ಮುಖ್ಯ ಅತ್ಯಗತ್ಯ. ನಮ್ಮ ನಾಡು ನುಡಿ ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಜನರು ಕರ್ತವ್ಯ ಪ್ರಜ್ಞೆಯಿಂದ ನಡೆದುಕೊಂಡು ಕೆಟ್ಟ ಕೆಲಸಗಳನ್ನು ಮಾಡದೆ ದೇಶದ ಭವಿಷ್ಯದ ಬಗ್ಗೆ ಅರಿವು ಮುಡಿಸಬೇಕು. ನಮ್ಮ ದೇಶ ಹಳೆಯ ಕಾಲದಿಂದಲೂ ಹಲವಾರು ಸಂಸೃತಿಗಳನ್ನು ಉಳಿಸಿ ಬೆಳಿಸಿಕೊಂಡು ಬಂದಿದೆ. ನಾವು ಕೂಡ ಅದನ್ನು ಉಳಿಸಿ ಬೆಳೆಸೋಣ.

FAQ

1.ರಾಷ್ಟ್ರೀಯ ಭಾವೈಕ್ಯತೆ ಎಂದರೇನು?

ವಿವಿಧತೆಯಲ್ಲಿ ಏಕತೆಯನ್ನು ಕಾಣುವುದೇ ರಾಷ್ಟ್ರೀಯ ಭಾವೈಕ್ಯತೆ.

2.ರಾಷ್ಟ್ರೀಯ ಭಾವೈಕ್ಯತೆ ದಿನವನ್ನುಯಾರ ಹುಟ್ಟು ಹಬ್ಬದ ದಿನವಾಗಿ ಆಚರಿಸಲಾಗುತ್ತದೆ?

ಸರ್ದಾರ್‌ ವಲ್ಲಭಭಾಯಿ ಪಟೇಲ್.

2. 3 ಮುಖ್ಯ ರಾಷ್ತ್ರೀಯ ಹಬ್ಬಗಳಾವುವು?

ಸ್ವತಂತ್ರ ದಿನಾಚರಣೆ
ಗಣರಾಜ್ಯೋತ್ಸ ದಿನ
ಗಾಂಧಿ ಜಯಂತಿ

ಇತರೆ ವಿಷಯಗಳು

ಕರ್ನಾಟಕ ಏಕೀಕರಣ ಪ್ರಬಂಧ

ಕ್ರೀಡೆ ಮತ್ತು ನಮ್ಮ ಆರೋಗ್ಯ ಪ್ರಬಂಧ

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ

Leave A Reply

Your email address will not be published.