ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ | Waste Material Management Essay in Kannada

0

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ, Waste Material Management Essay, Tyajya Vastugala Nirvahane bagge prabhanda in kannada

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ

ಹಲೋ ಗೆಳೆಯರೆ ನಾವಿಂದು ಈ ಪ್ರಬಂಧದಲ್ಲಿ ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ತ್ಯಾಜ್ಯ ವಸ್ತುಗಳು ಎಂದರೆ ಯಾವುವು ಅವುಗಳ ನಿರ್ವಹಣೆ ಹೇಗೆ ಮಾಡಬೇಕು ಅದರಿಂದಾಗುವ ಪ್ರಯೋಜನಗಳು ಮತ್ತುಅನಾನುಕೂಲಗಳು ತ್ಯಾಜ್ಯ ಸಂಗ್ರಹದ ವಿಧಗಳು ಯಾವುವು ಎಂಬ ಎಲ್ಲಾ ವಿಷಯದ ಬಗ್ಗೆ ಈ ಪ್ರಬಂಧದಲ್ಲಿ ತಿಳಿಸಿದ್ದೆವೆ .ಇದೆಲ್ಲಾದರ ಬಗ್ಗೆ ತಿಳಿಯಲು ಪ್ರಬಂಧವನ್ನು ಪೂರ್ತಿಯಾಗಿ ಓದಿ.

Waste Material Management Essay in Kannada
Waste Material Management Essay in Kannada

ಪೀಠಿಕೆ

ತ್ಯಾಜ್ಯ ವಸ್ತುಗಳ ನಿರ್ವಹಣೆ ಎಂದರೆ ಉಪಯೋಗಿಸಿದ ಅಥವಾ ಬೇಡದೆ ಇರುವ ವಸ್ತುಗಳಿಂದ ಹೊಸ ಉತ್ಪನ್ನಗಳನ್ನು ತಯಾರಿಸುವುದು.ಇದರಿಂದ ಕಚ್ಚಾ ವಸ್ತುಗಳ ಮರುಬಳಕೆ ಸಾದ್ಯವಾಗುತ್ತದೆ. ತಾಜಾ ಕಚ್ಚಾ ವಸ್ತುಗಳ ಅಪವ್ಯಯ ಕಡಿಮೆ ಮಾಡಬಹುದು.ತ್ಯಾಜ್ಯ ವಸ್ತುಗಳಿಂದ ಪರಿಸರ ಮಾಲಿನ್ಯ,ಜಲ ಮಾಲಿನ್ಯ,ವಾಯು ಮಾಲಿನ್ಯ ತಡೆಯಬಹುದು. ತ್ಯಾಜ್ಯ ವಸ್ತುಗಳ ನಿರ್ವಹಣೆಯಿಂದಾಗಿ ಹಸಿರು ಮನೆ ಪರಿಣಮ ತಡೆಗಟ್ಟಬಹುದು ಮತ್ತು ಪರಿಸರ ಸಂರಕ್ಷಿಸಬಹುದು. ಕಸದಿಂದ ರಸ ಇನ್ನುವ ಮಾತು ಸತ್ಯ ನಿತ್ಯ. ಕೈಗಾರಿಕರಣ, ನವೀಕರಣ,ಜಾಗತಿಕರಣ ಇದೆಲ್ಲಾದರಿಂದಾಗಿ ದಿನೇ ದಿನೇ ತ್ಯಾಜ್ಯ ವಸ್ತುಗಳ ನಿರ್ವಹಣೆ ಒಂದು ಸಮಸ್ಯೆ ಆಗಿದೆ.

ವಿವರಣೆ:

ಬೇಡದೆ ಇರುವ ವಸ್ತುಗಳನ್ನು ಎಲ್ಲೆಂದರಲ್ಲಿ ಹಾಕುವುದು ಸುಕ್ತವಲ್ಲ ಏಕೆಂದರೆ ಆ ವಸ್ತುಗಳು ಪರಿಸರದ ಹಾನಿಗೆ ಕಾರಣವಾಗುತ್ತವೆ. ಆದ್ದರಿಂದ ತ್ಯಾಜ್ಯ ವಸ್ತುಗಳನ್ನು ಸಂಪನ್ಮೂಲಗಳಾಗಿ ಬಳಸಿ . ಬೇಡದ ವಸ್ತುಗಳನ್ನು ಸಂಗ್ರಹಿಸಲು ಅನೇಕ ರೀತಿಯ ವ್ಯವಸ್ಥೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಇದು ಪರಿಸರದ ಸೌಂದರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಾನವನ ದುರಾಸೆ ಹೆಚ್ಚಿದಾಗ ಭೂಮಿಯ ಮೇಲಿನ ಶೋಷಣೆ ಹೆಚ್ಚಾಗುತ್ತದೆ ಜನಸಂಖ್ಯಾ ಹೆಚ್ಚಳ ಜನರ ಐಷರಾಮಿ ಜೀವನದಿಂದಾಗಿ ತ್ಯಾಜ್ಯ ವಸ್ತುಗಳ ಪ್ರಮಾಣ ಜಾಸ್ತಿಯಾಗಿದೆ.

ತ್ಯಾಜ್ಯ ಸಂಗ್ರಹದ ವಿಧಗಳು:

ತ್ಯಾಜ್ಯ ಸಂಗ್ರಹದಲ್ಲಿ 3 ವಿಧಗಳಿವೆ

1.ಕಸ ಸಂಗ್ರಹದ ಕೇಂದ್ರಗಳು

ತ್ಯಾಜ್ಯಉತ್ಪಾದಕರು ಮರುಬಳಕೆಯ ವಸ್ತುಗಳ್ಳನ್ನುಕೇಂದ್ರ ಸ್ಥಳಕ್ಕೆ ನಲೆಯಾದ ಅಥವ ಸಂಚಾರಿ ಸಂಗ್ರಹ ಸ್ಥಾನಕ್ಕೆ ತೆಗೆದುಕೊಂಡು ಬರುವಂತೆ ನೋಡಿಕೊಳ್ಳುತ್ತದೆ

2.ವಾಪಸು ಕೊಂಡುಕೊಳ್ಳುವ ಕೇಂದ್ರಗಳು

ಇಲ್ಲಿ ಶುದ್ದ ಮರುಬಳಕೆಯ ವಸ್ತುಗಳನ್ನುಖರೀದಿಸಲಾಗುತ್ತದೆ ಮತ್ತು ತಯಾರಿಸಿದ ವಸ್ತುಗಳನ್ನುಲಾಭದ ನಿರೀಕ್ಷೆಯಲ್ಲಿ ಮಾರಟ ಮಾಡಲಾಗುತ್ತದೆ.

3.ರಸ್ತೆ ಬದಿಯ ಸಂಗ್ರಹ

ಇದರಲ್ಲಿ ಸೂಕ್ಷ್ಮವಾಗಿ ವಿವಿಧ ವ್ಯವಸ್ಥೆಗಳನ್ನುಒಳಗೊಂಡಿರುತ್ತದೆ ಇದರಲ್ಲಿ ಮರುಬಳಕೆಯ ವಸ್ತುಗಳನ್ನು ವರ್ಗೀಕರಿಸಲಾಗುತ್ತದೆ.

ತ್ಯಾಜ್ಯ ವಸ್ತುಗಳ ನಿರ್ವಹಣೆಯ ವಿವಿಧಗಳು

1.ಪ್ಲಾಸ್ಟಿಕ್ ಮತ್ತು ಕೊಳಯದ ತ್ಯಾಜ್ಯವನ್ನು ವಿಲೇವಾರಿ ಮಾಡುವುದು.ತ್ಯಾಜ್ಯವನ್ನು ಪ್ಲಾಸ್ಟಿಕ ತ್ಯಾಜ್ಯ, ಸಾವಯವ ತ್ಯಾಜ್ಯ, ಅಜೈವಿಕ ತ್ಯಾಜ್ಯ, ದ್ರವ ತ್ಯಾಜ್ಯ ಎಂದು ವರ್ಗಿಕರಿಸುವುದ.

2.ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡಬೇಕು.ಬಟ್ಟೆ ಚೀಲ,ಸೆಣಬಿನ ಚೀಲ, ಗೋಣಿ ಚೀಲ ಬಳಸಬೇಕು.

3.ಸಾವಯವ ತ್ಯಾಜ್ಯವನ್ನು ಗೋಬ್ಬರ ವಾಗಿ ಪರಿವರರ್ತಿಸಬೇಕು. ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಜನರಿಗೆ ಅರಿವು ಮುಡಿಸಬೇಕು. ಜಾಗೃತಿ ಅಭಿಯಾನಗಳನ್ನು ನಡೆಸಬೇಕು.

ತ್ಯಾಜ್ಯ ವಸ್ತುಗಳ ನಿರ್ವಹಣೆಯ ಪ್ರಯೋಜನಗಳು:

ತ್ಯಾಜ್ಯ ವಸ್ತುಗಳನ್ನುಸರಿಯಾಗಿ ನಿರ್ವಹಣೆ ಮಾಡಿ ಪರಿಸರವನ್ನು ಸ್ವಚ್ಚವಾಗಿಡಬಹುದು. ವಾಯು ಮಾಲಿನ್ಯ ತಡೆಯಬಹುದು. ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬಹುದು. ಇದರಿಂದ ಒಳ್ಳೆಯ ಆರೋಗ್ಯ ಪಡೆಯಬಹುದು. ಪ್ರಾಣಿಗಳ ಆರೋಗ್ಯ ಉತ್ತಮವಾಗಿಡಬಹುದು.

ತ್ಯಾಜ್ಯ ವಸ್ತುಗಳಿಂದು ಆಗುವ ಅನಾನುಕೂಲಗಳು:

ತ್ಯಾಜ್ಯ ವಸ್ತುಗಳಿಂದು ಪರಿಸರದ ಮಾಲಿನ್ಯವಾಗುತ್ತದೆ .ತ್ಯಾಜ್ಯ ವಸ್ತುಗಳ ನಿರ್ವಹಣೆಯಿಂದ ವಿಶ ಅನಿಲಗಳ ಹೊರಸೂಸುವಿಕೆಗೆ ಕಾರಣವಾಗುತ್ತದೆ .ಇದರಿಂದ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಮತ್ತು ಜಾಗತಿಕ ತಾಪಮಾನದ ಏರಿಕೆಯಾಗುತ್ತದೆ ಪ್ರಾಣಹಾನಿ ಕೂಡ ಆಗುತ್ತದೆ. ತ್ಯಾಜ್ಯ ವಸ್ತುಗಳು ಮಣ್ಣಿನಲ್ಲಿ ಹುಗಿದು ಹೊಗುವುದರಿಂದ ಮಣ್ಣಿನ ಮಾಲಿನ್ಯವಾಗುತ್ತದೆ.

ಉಪಸಂಹಾರ:

ತ್ಯಾಜ್ಯ ವಸ್ತುಗಳಿಂದ ನಮ್ಮ ಪರಿಸರವನ್ನು ಕಾಪಾಡುವುದು ನಮ್ಮೆಲ್ಲಾರ ಕರ್ತವ್ಯ. ರಸ್ತೆ ಬದಿಯಲ್ಲಿ ಕಸವನ್ನು ಹಾಕಬಾರದು. ಮನೆ ಮುಂದೆ ತ್ಯಾಜ್ಯ ವಸ್ತುಗಳನ್ನು ಸುಡಬಾರದು. ತ್ಯಾಜ್ಯ ವಸ್ತುಗಳ ಬಗ್ಗೆ ಜನರಲ್ಲಿ ಜಾಗೃತಿ ಮುಡಿಸಬೇಕು.ಇಲ್ಲೆಂದರಲ್ಲಿ ಕಸ ಎಸೆಯುಬಾರದು. ತ್ಯಾಜ್ಯ ವಸ್ತುಗಳ ಮರುಬಳಕೆಗೆ ಎಲ್ಲರು ಪ್ರೋಸ್ಸಹಿಸೋಣ.

FAQ

1.ತ್ಯಾಜ್ಯ ವಸ್ತುಗಳ ನಿರ್ವಹಣೆ ಎಂದರೇನು?

ತ್ಯಾಜ್ಯ ವಸ್ತುಗಳ ನಿರ್ವಹಣೆ ಎಂದರೆ ಉಪಯೋಗಿಸಿದ ಅಥವಾ ಬೇಡದೆ ಇರುವ ವಸ್ತುಗಳಿಂದ ಹೊಸ ಉತ್ಪನ್ನಗಳನ್ನು ತಯಾರಿಸುವುದು.

2.ತ್ಯಾಜ್ಯ ಸಂಗ್ರಹದ ವಿಧಗಳು ಯಾವುವು?

1.ಕಸ ಸಂಗ್ರಹದ ಕೇಂದ್ರಗಳು
2.ವಾಪಸು ಕೊಂಡುಕೊಳ್ಳುವ ಕೇಂದ್ರಗಳು
3.ರಸ್ತೆ ಬದಿಯ ಸಂಗ್ರಹ

3.ತ್ಯಾಜ್ಯ ವಸ್ತುಗಳ ನಿರ್ವಹಣೆಯ 2 ಮುಖ್ಯ ಪ್ರಯೋಜನಗಳು?

1. ಒಳ್ಳೆಯ ಆರೋಗ್ಯ ಪಡೆಯಬಹುದು
2.ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿಡಬಹುದು

ಇತರೆ ವಿಷಯಗಳು:

ಸ್ನೇಹಿತರ ಬಗ್ಗೆ ಪ್ರಬಂಧ

ಸಾವಯವ ಕೃಷಿ ಬಗ್ಗೆ ಪ್ರಬಂಧ

ಹವಾಮಾನ ಬದಲಾವಣೆ ಪ್ರಬಂಧ

ಪರಿಸರ ಮಾಲಿನ್ಯ ಪ್ರಬಂಧ

Leave A Reply

Your email address will not be published.