ಸಾವಯವ ಕೃಷಿ ಬಗ್ಗೆ ಪ್ರಬಂಧ | Organic Farming Essay in Kannada

0

ಸಾವಯವ ಕೃಷಿ ಬಗ್ಗೆ ಪ್ರಬಂಧ, Organic Farming Essay in Kannada, savayava krishi prabandha kannada, savayava krishi essay in kannada, Agricultural information in kannada

ಸಾವಯವ ಕೃಷಿ ಬಗ್ಗೆ ಪ್ರಬಂಧ

ಹಲೋ ನನ್ನ ಪ್ರೀತಿಯ ಬಂದುಗಳೇ ನಾನು ನಿಮಗೆಲ್ಲಾಈ ಪ್ರಬಂಧದಲ್ಲಿ ಸಾವಯವ ಕೃಷಿ ಬಗ್ಗೆ ತಿಳಿಸಿಕೊಡುತ್ತಿದ್ದೆನೆ. ಇದು ನೀವೆಲ್ಲಾ ತಿಳಿದುಕೊಳ್ಳಲೇಬೇಕಾದ ವಿಷಯವಾಗಿದೆ. ಕೃಷಿ ಯಾವ ರೀತಿಯಲ್ಲಿ ಮಾಡಿದರೆ ಒಳ್ಳೆಯದು ಹೇಗೆ ಮಾಡಿದರೆ ಹೆಚ್ಚಿನ ಲಾಭವನ್ನು ಗಳಿಸಬಹುದು ಮತ್ತು ಸಾವಯವ ಕೃಷಿ ಅನುಕೂಲತೆ ಅನಾನುಕೂಲತೆ ತಿಳಿಯಲು. ಭಾರತದಲ್ಲಿ ಈ ಕೃಷಿ ಪದ್ದತಿ ಯಾವ ರೀತಿಯಲ್ಲಿ ನೆಡೆಯುತ್ತಿದೆ ಎಂಬುದನ್ನು ಸಂಪೂರ್ಣವಾಗಿ ತಿಳಿಯಲು ನಮ್ಮ ಈ ಲೇಖನವನ್ನು ಕೊನೆಯವರೆಗು ಓದಿ.

Organic Farming Essay in Kannada
ಸಾವಯವ ಕೃಷಿ ಬಗ್ಗೆ ಪ್ರಬಂಧ

ಪೀಠಿಕೆ

ಸಾವಯವ ಕೃಷಿಯು ಜೀವಿಗಳಿಗೆ ಪರಿಸರಕ್ಕೆ ತೊಂದರೆ ಆಗದಂತೆ ಮತ್ತು ಮಣ್ಣಿನ ಫಲವತ್ತತೆ ಹಾಳಗದಂತೆ ಕೃಷಿಯನ್ನು ಅಭಿವೃದ್ದಿಪಡಿಸುವುದಾಗಿದೆ. ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಕೃಷಿ ಮಾಡುವುದರಿಂದ ಪರಿಸರದ ಅಭಿವೃದ್ದಿ ಸಾದ್ಯವಾಗುತ್ತದೆ.

ಸಂಪೂರ್ಣ ವಿವರಣೆ

ಇವತ್ತಿನ ದಿನಗಳಲ್ಲಿ ಹೆಚ್ಚಿನ ಬೆಳೆ ಅಥವ ಇಳುವರಿ ತೆಗೆಯುವ ಸಲುವಾಗಿ ಜನರು ವಿವಿಧ ರೀತಿಯ ರಾಸಾಯನಿಕ ಗೊಬ್ಬರವನ್ನು ಕೃಷಿ ಬಳಕೆಗೆ ಉಪಯೊಗಿಸುತ್ತಿದ್ದರೆ. ಇದರಿಂದ ಮಣ್ಣಿನ ಸಧೃಡತೆ ಫಲವತ್ತತೆ ಹಾಳಾಗುತ್ತಿದೆ, ಆಹಾರದಲ್ಲಿ ಫೊಷಕಾಂಶದ ಕೊರತೆ ಕೂಡ ಉಂಟಾಗುತ್ತದೆ. ಆದರೆ ಸಾವಯವ ಕೃಷಿಯಲ್ಲಿ ದನಗಳ ಸಗಣಿ ಗೋಬ್ಬರ,ಕುರಿ,ಕೋಳಿ ಮತ್ತು ಎರೆಹುಳು ಗೋಬ್ಬರ ಬಳಸಲಾಗುತ್ತದೆ. ಇದೆಲ್ಲವನ್ನು ಬಳಸುವುದರಿಂದ ಸಾವಯವ ಕೃಷಿ ಮಾಡುವುದು ಉತ್ತಮ.ಇದು ಆಹಾರದ ಫೊಷಕಾಂಶ ಕಾಪಡುತ್ತದೆ ಮತ್ತುಎಲ್ಲಾ ಬೆಳೆಗಳು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಸಾವಯವ ಕೃಷಿ ಮಾಡುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬಹುದು.

ಸಾವಯವ ಕೃಷಿಯಿಂದ ಒಳ್ಳೆಯ ಮತ್ತುಆರೋಗ್ಯಕರ ಪರಿಸರ ವೃಧ್ಧಿಯಾಗುತ್ತದೆ. ಮಣ್ಣಿನ ಮಾಲಿನ್ಯತಡೆಗಟ್ಟಬಹುದು, ಅರಣ್ಯ ನಾಶ ಕಡಿಮೆ ಮಾಡಬಹುದು ಮತ್ತು ಪರಿಸರ ಸಮತೋಲನಯನ್ನು ಕಾಪಾಡಿಕೊಳ್ಳಬಹುದು.

ಸಾವಯವ ಕೃಷಿಯ ಮಹತ್ವ ಮತ್ತು ಅನುಕೂಲಗಳು;

ಇದು ಹಳೆಯ ಪದ್ದತಿ ಅಗಿರುವುದರಿಂದ ಮುಂದಿನ ಪೀಳಿಗೆಗೆ ಹೆಚ್ಚು ಉತ್ತಮವಾಗಿದೆ. ಸಾವಯವ ಕೃಷಿ ರೈತರಿಗೆ ನೆಮ್ಮದಿ ತರುತ್ತದೆ ಮತ್ತು ಹಸುಗಳ ಸಂರಕ್ಷಣೆಗೆ ಕಾರಣವಾಗುತ್ತದೆ. ಇದು ಮಣ್ಣಿನ ಉತ್ತಮತೆ ಕಾಪಾಡುತ್ತದೆ ಮತ್ತು ಸಂರಕ್ಷಣೆ ಕೂಡ ಮಾಡುತ್ತದೆ ಇದರಿಂದ ವಾತಾವರಣದಲ್ಲಿ ಬಿಡುಗಡೆ ಆಗುವ ಹೆಚ್ಚಿನ CO2 ಹೀರಿಕೊಳ್ಳುತ್ತದೆ. ಮಣ್ಣಿನ ರಾಸಾಯನಿಕ ಗುಣ ಹೆಚ್ಚಿಸುತ್ತದೆ ಇದರಿಂದ ಯಾವುದೆ ಆಹಾರ ಫೊಷಕಾಂಶಗಳಿಂದ ಕುಡಿರುತ್ತದೆ.

ಸಾವಯವ ಕೃಷಿಯ ಅನಾನುಕೂಲಗಳು;

ಸಾವಯವ ಆಹಾರ ದಾನ್ಯಗಳ ಬೆಲೆ ಹೆಚ್ಚಾಗಿರುತ್ತದೆ .ಏಕೆಂದರೆ ರಾಸಾಯನಿಕ ಗೊಬ್ಬರ ಉಪಯೋಗಿಸಿ ಬೆಳೆ ತಗಿಯುವಸ್ಟು ವೇಗವಾಗಿ ಸಾವಯವ ಕೃಷಿಯಲ್ಲಿ ಬೆಳೆ ತಗಿಯಲು ಸಾದ್ಯವಿಲ್ಲ. ಕೆಚ್ಚಿನ ಕೆಲಸಗಾರರು ಬೇಕಾಗುತ್ತಾರೆ ಇದರಿಂದ ಉತ್ಪಾದನಾ ರ್ಖಚು ಕೂಡ ಹೆಚ್ಚಾಗಿರುತ್ತದೆ. ಮಾರ್ಕೆಟಿಂಗ್‌ ಮತ್ತು ವಿತರಣೆ ಅನುಕೂಲಕರವಾಗಿರುವುದಿಲ್ಲಏಕೆಂದರೆ ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆ ಬೆಳೆಯಲಾಗುತ್ತದೆ.

ಭಾರತದಲ್ಲಿ ಸಾವಯವ ಕೃಷಿ;

ಸಾವಯವ ಕೃಷಿಯಲ್ಲಿ ಭಾರತದ ಸಿಕ್ಕಿಂ ರಾಜ್ಯವು 100% ಅವಲಂಬಿತವಾಗಿದೆ. ಸಿಕ್ಕಿಂ ಒಂದು ಲಕ್ಷದ್ವೀಪ ಮತ್ತು ಕೇಂದ್ರಾಡಳಿತ ಪ್ರದೇಶವಾಗಿದೆ. ಭಾರತದಲಲ್ಲಿ ಈ ಪದ್ದತಿಯು ಹಳೆಯ ಕಾಲದಿಂದಲು ನೆಡೆದು ಬಂದಿದೆ. ಸಾವಯವ ಕೃಷಿಯನ್ನು ಪರಿಸರ ಕೃಷಿ ಎಂದು ಕೂಡ ಕರೆಯುತ್ತಾರೆ. ಭಾರತದ ಇಲ್ಲಾ ರಾಜ್ಯದಲ್ಲಿ ಈ ಪದ್ದತಿ ನೆಡೆದುಬಂದಿದೆ. ಭಾರತದಲ್ಲಿ ಸಾವಯವ ಕೃಷಿಯನ್ನು ಮಣ್ಣಿನ ನಿರ್ವಹಣೆ, ಬೆಳೆ ವೈವಿಧ್ಯ ,ಜೈವಿಕ ಕೀಟ ನಿಯಂತ್ರಣ ಈ ಮೂರು ವಿಧಾನದಲ್ಲಿ ಮಾಡಲಾಗುತ್ತದೆ.

ಉಪಸಂಹಾರ:

ಹಳೆಯ ಕಾಲದ ಜನರು ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸದೆ ಕೃಷಿ ಮಾಡುತ್ತಿದ್ದರು.ಆದ್ದರಿಂದ ಆ ಕಾಲದ ಆಹಾರ ಬೆಳೆಗಳು ಆರೋಗ್ಯಕರ ಶಕ್ತಿಯುತ ಮತ್ತು ಫೊಷಕಾಂಶಗಳಿಂದ ಕೂಡಿರುತ್ತಿದ್ದವು ಜನರು ಕೂಡ ಆರೋಗ್ಯಕರ ಶಕ್ತಿಯುತರಾಗಿದ್ದರು.ಇದೆಲ್ಲಾದರ ಕಾರಣ ಹಳೆಯ ಕಾಲದ ಜನರು ಸಾವಯವ ಕೃಷಿ ಅವಲಂಭಿಸಿದ್ದರು ಆದ್ದರಿಂದ ನಾವು ಕೂಡ ಸಾವಯವ ಕೃಷಿಗೆ ಪ್ರಮುಖ್ಯತೆ ಕೊಡೊಣ.

FAQ

ಸಾವಯವ ಕೃಷಿ ಎಂದರೇನು?

ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಜೈವಿಕ ಅಥವ ತ್ಯಜ್ಯ ವಸ್ತುಗಳನ್ನು ಮಾಡುವುದೆ ಸಾವಯವ ಕೃಷಿ.

ಭಾರತದಲ್ಲಿ ಸಾವಯವ ಕೃಷಿಯ ವಿಧಾನಗಳು ಯಾವುವು?

1.ಮಣ್ಣಿನ ನಿರ್ವಹಣೆ
2.ಬೆಳೆ ವೈವಿಧ್ಯ
3.ಜೈವಿಕ ಕೀಟ ನಿಯಂತ್ರಣ

ಸಾವಯವ ಕೃಷಿಯ 2 ಮುಖ್ಯ ಅನುಕೂಲಗಳು ಯಾವುವು?

1.ಮಣ್ಣಿನ ರಾಸಾಯನಿಕ ಗುಣ ಹೆಚ್ಚಿಸುತ್ತದೆ ಮತ್ತು ಫಲವತ್ತತೆ ಕಾಪಾಡಿಕೊಳ್ಳುತ್ತದೆ.
2.ಜೀವಿಗಳ ಸಂರಕ್ಷಣೆಗೆ ಕಾರಣವಾಗುತ್ತದೆ.

ಇತರೆ ವಿಷಯಗಳು:

ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ

ಪರಿಸರ ಮಾಲಿನ್ಯ ಪ್ರಬಂಧ

ರೈತ ದೇಶದ ಬೆನ್ನೆಲುಬು ಪ್ರಬಂಧ

Leave A Reply

Your email address will not be published.