ಕರ್ನಾಟಕದ ಬಗ್ಗೆ ಪ್ರಬಂಧ | Karnataka Essay in Kannada

0

ಕರ್ನಾಟಕದ ಬಗ್ಗೆ ಪ್ರಬಂಧ, Karnataka Essay in Kannada, Karnatakada Bagge Prabandha in Kannada

ಕರ್ನಾಟಕದ ಬಗ್ಗೆ ಪ್ರಬಂಧ

ಹಲೋ ಗೆಳೆಯರೆ ನಾವಿಂದು ಈ ಪ್ರಬಂಧದಲ್ಲಿ ಕರ್ನಾಟಕದ ಬಗ್ಗೆ ತಿಳಿಸಿದ್ದೆವೆ. ಕರ್ನಾಟಕದ ಪರಂಪರೆ ಇತಿಹಾಸ ವೈವಿಧ್ಯತೆ, ಸಂಸ್ಕೃತಿ ಮತ್ತು ಬೇರೆ ರಾಜ್ಯಗಳಿಗಿಂತ ಹೇಗೆ ಬಿನ್ನವಾಗಿದೆ ಎಂಬ ಎಲ್ಲಾ ವಿಷಯದ ಬಗ್ಗೆ ತಿಳಿಯಲು ಈ ಪ್ರಬಂಧವನ್ನು ಸಂಪೂರ್ಣವಾಗಿ ಓದಿ.

Karnataka Essay in Kannada
Karnataka Essay in Kannada

ಪೀಠಿಕೆ:

ಕರ್ನಾಟಕ ಭಾರತದ ದಕ್ಷಿಣ ಭಾಗವಾಗಿದೆ ಮತ್ತು ಇದು ದಕ್ಷಿಣ ಭಾಗದ ಅತಿ ದೊಡ್ಡ ರಾಜ್ಯವಾಗಿದೆ. ಕರ್ನಾಟಕದ ಹೆಸರನ್ನು ಮೊದಲು ಮೈಸೂರು ರಾಜ್ಯ ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಕರ್ನಾಟಕದ ಏಕೀಕರಣದ ಮೊದಲು ಮೈಸೂರು ಮಹಾಸಂಸ್ಥಾನ ಆಳ್ವಿಕಯಲ್ಲಿತ್ತು(1950). 1956 ರಲ್ಲಿ ರಾಜ್ಯವನ್ನು ಕನ್ನಡ ಪ್ರಧಾನ ಪ್ರದೇಶವನ್ನಾಗಿ ಸೇರಿಸಲಾಯಿತು.ಕರ್ನಾಟಕ ಭಾರತದ 6 ದೊಡ್ಡು ರಾಜ್ಯವಾಗಿದೆ.

ವಿವರಣೆ:

ಕರ್ನಾಟಕಕ್ಕೆ ತುಂಬ ಹಳೆಯ ಪರಂಪರೆ ಮತ್ತು ತನ್ನದೆ ಆದ ಇತಿಹಾಸವಿದೆ. ಕರ್ನಾಟಕ ರಾಜ್ಯದ ಭಾಷೆ ಕನ್ನಡ ಇಲ್ಲಿನ ಜನರು ಸಂಸ್ಕೃತಿಕ ಮತ್ತು ಸಹನೆವುಳ್ಳವರು. ಕರ್ನಾಟಕವನ್ನು ಕರುನಾಡು ಎಂದು ಕೂಡ ಕರೆಯಾಲಾಗುತ್ತದೆ. ಮೈಸೂರು ರಾಜ್ಯ ಎಂದಿದ್ದ ಕರ್ನಾಟಕದ ಹೆಸರನ್ನು 1973 ರಲ್ಲಿ ಕರ್ನಾಟಕ ಎಂದು ಕರೆಯಲಾಯಿತು.ನವೆಂಬರ್‌ 1 ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಕನ್ನಡದ ಮೊಟ್ಟಮೊದಲ ಶಾಸನ ಹಲ್ಮಿಡಿ ಶಾಸನ. ಇದು ಕದಂಬರ ಆಳ್ವಿಕೆಗೆ ಸೇರಿತ್ತು. ಪಂಪನನ್ನು ಕರ್ನಾಟಕದ ಆದಿ ಕವಿ ಎಂದು ಕರೆಯಾಲಾಗುತ್ತದೆ ಮತ್ತು ʼವಿಕ್ರಮಾರ್ಜುನ ವಿಜಯʼ ಮೊದಲ ಕೃತಿ. ಮೈಸೂರು ಕರ್ನಾಟಕದ ಸ್ವಚ್ಚ ಜಿಲ್ಲೆಯಾಗಿದೆ.

ಕರ್ನಾಟಕದ ಇತಿಹಾಸ:

ಕರ್ನಾಟಕದ ಇತಿಹಾಸ 2000 ವರ್ಷಕ್ಕು ಹಳೆಯದು. ಮೊದಲು ರಾಜರುಗಳ ಆಳ್ವಿಕೆ ನಡೆಯುತ್ತಿತ್ತು. ಸುಮಾರು ರಾಜವಂಶಗಳು ಆಳ್ವಿಕೆ ನಡೆಸಿ ಇತಿಹಾಸ ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣವಾಗಿವೆ. ಕರ್ನಾಟಕದಿಂದಾಗಿದೆ ಭಾರತದ ಎಲ್ಲಾ ರಾಜ್ಯದಲ್ಲಿ ರಾಜರುಗಳ ಆಳ್ವಿಕೆ ಪ್ರಾರಂಭವಾಯಿತು. ಬಂಗಾಳದ ಸೇನ ರಾಜವಂಶ ತಮ್ಮನ್ನು ಕರ್ನಾಟ ಕ್ಷತ್ರಿಯರು ಎಂದು ಕರೆದುಕೊಳ್ಳುತಿದ್ದರು. ಕದಂಬ ವಂಶವು ಕರ್ನಾಟಕದ ಮೊಟ್ಟಮೊದಲ ರಾಜವಂಶ. ಕರ್ನಾಟಕ ಎನ್ನುವ ಹೆಸರು ದ್ರಾವಿಡ ಭಾಷೆಯಿಂದು ಬಂದಿದೆ, ಆಗುಂಬೆಯನ್ನು ಕರ್ನಾಟಕದ ʼಚಿರಾಪುಂಜಿʼ ಎಂದು ಕರೆಯಲಾಗುತ್ತದೆ. ಬೆಂಗಳೂರು ಕರ್ನಾಟಕದ ರಾಜಧಾನಿಯಾಗಿದೆ. 1991-2021ರ ವರೆಗೆ ʼಕರ್ನಾಟಕ ರತ್ನʼ ಪ್ರಶಸ್ತಿ 10 ಜನರಿಗೆ ನಿಡಲಾಗಿದೆ.

ಕರ್ನಾಟಕ ಇತರ ರಾಜ್ಯಗಳಿಗಿಂತ ಹೇಗೆ ಭಿನ್ನವಾಗಿದೆ:

ಭಾರತ ಹೇಗೆ ಅತ್ಯಂತ ವೈವಿಧ್ಯಮಯ ದೇಶವೋ ಹಾಗೆ ಕರ್ನಾಟಕ ವೈವಿಧ್ಯಮಯ ರಾಜ್ಯವಾಗಿದೆ. ಇದು ಒಂದು ಸಣ್ಣ ದೇಶದ ರೀತಿಯಲ್ಲಿದೆ.

ಭೌಗೋಳಿಕತೆ;

ಜನಸಂಕೆಯಲ್ಲಿ 2ದೊಡ್ಡ ರಾಜ್ಯವಾಗಿದೆ, ದಕ್ಷಿಣ ಭಾಗದ ಅತಿ ದೊಡ್ಡ ರಾಜ್ಯವಾಗಿದೆ. ದಕ್ಷಿಣ ಭಾರತದ ಅತ್ಯಂತ ಕಡಿಮೆ ಸಮುದ್ರ ತೀರ ಹೊಂದಿದೆ. ಮಂಗಳೂರು ಉಡುಪಿ ಕಾರವಾರ ಎಂಬ 3 ಕರಾವಳಿ ಜಿಲ್ಲೆಗಳನ್ನು ಒಳಗೊಂಡಿದೆ.

ಸಾರಿಗೆ;

ಉತ್ತಮ ಸಾರಿಗೆ ವ್ಯವಸ್ಥೆ ಹೊಂದಿದೆ, ಕಡಿಮೆ ರೈಲು ಜಾಲವನ್ನು ಹೊಂದಿದೆ ಮತ್ತು ಬೆಂಗಳೂರಿನಲ್ಲಿ ಮೆಟ್ರೋ ರೈಲು ಪಡೆದ ದಕ್ಷಿಣ ಭಾರತದ ಮೊದಲ ರಾಜ್ಯವಾಗಿದೆ. ಅಂತರರಾಷ್ಷ್ರಿಯ ವಿಮಾನ ನಿಲ್ದಾಣ ಹೊಂದಿದೆ.

ಧರ್ಮಗಳು;

ಕರ್ನಾಟಕ ಹಲವು ಧರ್ಮಗಳನ್ನು ಒಳಗೊಂಡಿದೆ, ಹಿಂದುಧರ್ಮ ಪ್ರಬಲವಾಗಿದೆ ,ಬೌದ್ಧಧರ್ಮ ಬಹಳ ಕಡಿಮೆ ಇದೆ. ಹಿಂದುಧರ್ಮದಲ್ಲಿ ಹಲಾವಾರು ಉಪಜಾತಿಗಳಿವೆ. ಕ್ರಿಶ್ಚಿಯನ್‌‌, ಜೈನ, ಇಸ್ಲಾಂ ಮತ್ತು ಸಿಖ್ ಧರ್ಮಗಳಿವೆ.

ಭಾಷೆಗಳು;

ಕನ್ನಡ ಮುಖ್ಯ ಭಾಷೆಯಾಗಿದೆ, ಬೇರೆ ಬೇರೆ ಭಾಷೆ ಮಾತನಾಡುವ ಜನರು ಕರ್ನಾಟಕದಲ್ಲಿದ್ದರೆ. ಸುಮಾರು 150 ಭಾಷೆಗಳಿವೆ. ಉರ್ದು, ಕೊಡವ ಮತ್ತು ತುಳು ಹೆಚ್ಚಾಗಿಮಾತನಾಡುತ್ತಾರೆ

ಸಂಸ್ಕೃತಿ;

ವೈವಿಧ್ಯಮಯ ರಾಜ್ಯವಾಗಿದೆ, ಕರ್ನಾಟಕ ದಸರಾವನ್ನು ರಾಜ್ಯ ಹಬ್ಬವಾಗಿ ಆಚರಿಸುತ್ತದೆ. ಅನೇಕ ರೀತಿಯ ಹಬ್ಬಗಳನ್ನು ಕರ್ನಾಟಕದಲ್ಲಿ ಆಚರಿಸುತ್ತಾರೆ. ಸಂಗೀತ ಕಲೆಗಳೆಂದರೆ ಹಿಂದುಸ್ತಾನಿ ಮತ್ತು ಕರ್ನಾಟಿಕ್. ನೃತ್ಯ ಪ್ರಕಾರಗಳು ಭರತನಾಟ್ಯ, ಕಥಕ್‌, ಯಕ್ಷಗಾನ, ಇನ್ನು ಮುಂತಾದುವುಗಳನ್ನು ಹೊಂದಿದೆ.

ರಾಜಕೀಯ;

2 ರಾಷ್ಷ್ರಿಯ ಪಕ್ಷಗಳನ್ನು ಒಳಗೊಂಡಿದೆ ʼಕಾಂಗ್ರೆಸ್‌ʼ ಮತ್ತುʼಬಿಜೆಪಿʼ. ಜೆಡಿಎಸ್‌ ಒಂದು ಸಣ್ಣ ಪಕ್ಷವಾಗಿದೆ. ರಾಜ್ಯ ಧ್ವಜವನ್ನು ಕೂಡ ಹೊಂದಿದೆ. ನಾಡಗೀತೆಯನ್ನು ತುಂಬ ಬಳಸುತ್ತಾರೆ. ನವೆಂಬರ್‌ 1 ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ.

ಕ್ರಿಡೆ;

ಕರ್ನಾಟಕದಲ್ಲಿ ಅನೇಕ ರೀತಿಯ ಕ್ರಿಡೆಗಳನ್ನು ಆಟಲಾಗುತ್ತದೆ. ಕ್ರಿಕೆಟ್‌ ಹೆಚ್ಚಾಗಿ ಆಡಲಾಗುತ್ತದೆ. ಕರ್ನಾಟಕ ಕೊಡಗು ಹಾಕಿಗೆ ಪ್ರಮುಖ ಕೊಡುಗೆ ನೀಡಿದೆ.

ಬೆಳೆಗಳು;

ಭತ್ತ,ರಾಗಿ, ಗೋದಿ ಮತ್ತು ಜೋಳ ವನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕಡಿಕೆ ಮೆಣಸು ಕಾಫಿ ರೇಷ್ಮೆ ಶ್ರೀಗಂಧ ಮುಂತಾದುವುಗಳನ್ನು ಬೆಳೆಯಾಲಾಗುತ್ತದೆ.

ಆರ್ಥಕತೆ;

ಐಟಿ ಬಿಟಿ ಯಲ್ಲಿ ಪ್ರಥಮ ಸ್ಥಾನದಲ್ಲಿದೆ, ಉದ್ಯೋಗ ವನ್ನು ಹೆಚ್ಚು ಕಲ್ಪಸುತ್ತದೆ. ಹೆಚ್ಚು ಸಂಬಳ ನೀಡುವ ಉದ್ಯೋಗ ಸೃಷ್ಷಿಸುತ್ತದೆ. ಹಲಾವಾರು ಚಲನಚಿತ್ರ ಮಂದಿರಗಳನ್ನು ಹೊಂದಿದೆ. ಬೆಂಗಳೂರು ಐಟಿ ಕಂಪನಿಗಳಿಗೆ ದಾರಿಮಾಡಿಕೊಟ್ಟಿದೆ. HAL NAL BEL BHEL ITI BEML ಕಂಪನಿಗಳನ್ನು ಹೊಂದಿದೆ. Startup capital ಕರ್ನಾಟಕದಲ್ಲಿದೆ.

ಉಪಸಂಹಾರ:

ಕರ್ನಾಟಕ ಕಲೆ ನೆಲೆಗಳ ಬಿಡಾಗಿದೆ . ಹಳೆಯ ಸಂಸ್ಕೃತಿ ಪರಂಪರೆಯನ್ನು ಹಾಳುಮಾಡದೆ ಉಳಿಸಿ ಬೆಳಿಸಿಕೊಂಡು ಹೊಗೋಣ ಮತ್ತು ಮುಂದಿನ ಪೀಳಿಗೆಗು ಕಲಿಸೋಣ. ಇಂತ ಪುಣ್ಯ ಭೂಮಿಯಲ್ಲಿ ಹುಟ್ಟಿದ ನಾವೇ ಪುಣ್ಯವಂತರು.

FAQ

ಕರ್ನಾಟಕ ಭಾರತದ ಯಾವ ಭಾಗದಲ್ಲಿದೆ?

ಕರ್ನಾಟಕ ಭಾರತದ ದಕ್ಷಿಣ ಭಾಗದಲ್ಲಿದೆ.

ಕರ್ನಾಟಕದ ರಾಜಧಾನಿಯಾವುದು?

ಕರ್ನಾಟಕದ ರಾಜಧಾನಿ ಬೆಂಗಳೂರು.

ಕರ್ನಾಟಕ ರಾಜ್ಯೋತ್ಸವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

ಕರ್ನಾಟಕ ರಾಜ್ಯೋತ್ಸವನ್ನು ನವೆಂಬರ್‌ 1ರಂದು ಆಚರಿಸಲಾಗುತ್ತದೆ.

ಇತರೆ ವಿಷಯಗಳು

ಚುನಾವಣಾ ಪ್ರಕ್ರಿಯೆ ಕುರಿತು ಪ್ರಬಂಧ

ಸಾವಯವ ಕೃಷಿ ಬಗ್ಗೆ ಪ್ರಬಂಧ

ಹವಾಮಾನ ಬದಲಾವಣೆ ಪ್ರಬಂಧ

Leave A Reply

Your email address will not be published.