ಕರ್ನಾಟಕ ಏಕೀಕರಣ ಪ್ರಬಂಧ I Karnataka Unification Essay in Kannada

0

ಕರ್ನಾಟಕ ಏಕೀಕರಣ ಪ್ರಬಂಧ, Karnataka Unification Essay karnataka ekikarana prabandha in kannada

ಕರ್ನಾಟಕ ಏಕೀಕರಣ ಪ್ರಬಂಧ

ನಮಸ್ತೆ ಗೆಳೆಯರೆ, ನಾವಿಂದು ಚರ್ಚಿಸುವ ವಿಷಯ ಅದು ನಮ್ಮ ಹೆಮ್ಮೆಯ ಕರ್ನಾಟಕ ದ ಬಗ್ಗೆ. ಈ ಕರ್ನಾಟಕ ಏಕೀಕರಣದ ಹಿಂದೆ ಅನೇಕ ಜನರ ಹೋರಟ ಪ್ರಾಣ ತ್ಯಾಗ-ಬಲಿದಾನಗಳು ಇವೆ. ನಾವಿಂದು ನಮ್ಮದೆ ರಾಜ್ಯವಾದ ಕರ್ನಾಟಕದ ಹೋರಟದ ಬಗ್ಗೆ ಕರ್ನಾಟಕದ ಇತಿಹಾಸದ ಬಗ್ಗೆ,ಕಲ್ಯಾಣ ಕರ್ನಾಟಕದ ಬಗ್ಗೆ, ಪ್ರಮುಖ ಆಯೋಗಗಳು, 1924ರ ಬೆಳಗಾವಿ ಆಧಿವೇಶನದ ಬಗ್ಗೆ ನಾವಿಂದು ಈ ಪ್ರಬಂಧದಲ್ಲಿ ತಿಳಿಯೋಣ.

Karnataka Unification Essay In Kannada
Karnataka Unification Essay In Kannada

ಪೀಠಿಕೆ:

ಕರ್ನಾಟಕ ಏಕೀಕರಣ ಭಾರತ ದೇಶದಲ್ಲಿ ಹೊಸ ರಾಜ್ಯದ ಸ್ಥಾಪನೆಗೆ ನಾಂದಿಯಾಯಿತು ಎನ್ನಬಹುದು.ಕರ್ನಾಟಕವನ್ನು ಕನ್ನಡವನ್ನು ಮಾತನಾಡುವ ಜನರನ್ನು ಕನ್ನಡಿಗರು ಎಂದು ಬೇರ್‌ಪಡಿಸಲಾಯಿತು. ಬ್ರಿಟಿಷರ ಆಳ್ವಿಕೆಯಲ್ಲಿ ಇವರು ಹರಿದು ಹಂಚಿಹೊಗಿದ್ದರು. ಹಾಗಾಗಿ ಎಲ್ಲಾ ಕನ್ನಡಿಗರು ಒಟ್ಟಿಗೆ ಇರಲು ಸರಿಯಾದ ರಾಜ್ಯದ ಅವಶ್ಯಕತೆ ಇತ್ತು ಹಾಗಾಗಿ ಕರ್ನಾಟಕ ವನ್ನು 1956ರಲ್ಲಿ ಕನ್ನಡ ಮಾತನಾಡುವ ಜನರು ಎಂದು ಪ್ರತ್ಯೇಕ ರಾಜ್ಯ ಸ್ಥಾಪನೆಯಾಯಿತು ಆ ರಾಜ್ಯಕ್ಕೆ ಮೈಸೂರು ಸಂಸ್ಥಾನ ಎಂಬ ಹೆಸರನ್ನು ನೀಡಲಾಯಿತು.

ಕರ್ನಾಟಕದ ಇತಿಹಾಸ:

ಕರ್ನಾಟಕ ಮತ್ತು ಕನ್ನಡಕ್ಕೆ ತನ್ನದೆ ಆದ ಇತಿಹಾಸವಿದೆ. ಕನ್ನಡ ಭಾಷೆ 2000 ವರ್ಷಗಳಷ್ಟು ಹಳೆಯದು ಎಂಬುದು ಎಲ್ಲಾರಿಗು ತಿಳಿದಿರುವ ವಿಷಯ. ಮೊದಲು ಕರ್ನಾಟಕವನ್ನು ಅದೆಷ್ಟೋ ರಾಜ ಮನೆತನಗಳು ಆಳ್ವಿಕೆ ಮಾಡಿವೆ. ಹಾಗೆ ಹೊಯ್ಸಳರು ಮತ್ತು ಸೇವುಣರ ಆಳ್ವಿಕೆಯ ಸಮಯದಲ್ಲಿರಾಜಕೀಯ ಸೆಣಸಾಟದಲ್ಲಿ ಕರ್ನಾಟಕವನ್ನು ಎರಡು ಭಾಗಗಳಾಗಿ ವಿಭಾಗಿಸಲಾಯಿತು. ತುಂಗಾಭದ್ರಾ ನದಿಯ ಉತ್ತರಕ್ಕೆ ಸೇವುಣರೂ, ದಕ್ಷಿಣಕ್ಕೆ ಹೊಯ್ಸಳರೂ ಆಳ್ವಿಕೆ ಮಾಡಿದರು. ಈ ಎಲ್ಲಾ ಘಟನೆಗಳು ನಡೆದಿದ್ದು 13ನೇ ಶತಮಾನದ ಅಸು ಪಸಿನಲ್ಲಿ ಆದರೆ ಆ ಭಾಗಗಳು ಮತ್ತೆ ಒಟ್ಟುಗೂಡಿದ್ದು 1956ರಲ್ಲಿಯೇ ಆಗಿತ್ತು.

ಸರಿಸುಮಾರು 750 ವರ್ಷಗಳ ಕಾಲ ಕನ್ನಡಿಗರು ಯಾವಗಾಲು ಕನ್ನಡೇತರರಿಂದ ಆಳಿಸಿಕೊಳ್ಳುತ್ತಿದ್ದರು. ಹಾಗಾಗಿ ಆಳುವ ರಾಜರ ಮಾತೃ ಭಾಷೆಯೆ ಅಳ್ವಿಕೆ ಯಲ್ಲಿ ಬಳಸುವುದು ವಾಡಿಕೆ ಹಾಗೆ ಉಳಿದ ಭಾಷೆಗಳ ಪ್ರಭಾವ ಹೆಚ್ಚಿದಾಗ ಉಪಯೊಗಿಸದ ಭಾಷೆ ತನಾಗಿಯೆ ಕುಂಟಿತ ಕಾಣುತ್ತದೆ. ಭಾಷೆಯ ಅವನತಿಯೊಂದಿಗೆ ಭಾಷಿಗರ ಸಂಸ್ಕೃತಿ -ಸಂಪ್ರದಾಯಗಳು ಅವನತಿಯನ್ನು ಕಾಣುತ್ತವೆ. ಹಾಗೇ ಕ್ರಮೇಣ ಗುರುತು ಸಿಗದಷ್ಟು ಬದಲವಣೆಯನ್ನು ಅನುಭಾವಿಸುವುದು ಕಂಡಿತ ಹಾಗೇ ನಮ್ಮ ಕರ್ನಾಟಕದಲ್ಲಿಯುಕೂಡ.

ಕರ್ನಾಟಕದ ಗಡಿ ಪ್ರದೇಶ:

ಬಾದಾಮಿ ಚಾಲುಕ್ಯ, ಗಂಗ, ಕದಂಬ ವಂಶಗಳು ಆಳ್ವಿಕೆ ಮಾಡುವ ಸಮಯದಲ್ಲಿ ಗೋದವರಿ ನದಿಯಿಂದ ತಮ್ಮ ಉತ್ತರದ ಗಡಿಯನ್ನು, ಕಾವೇರಿ ಸಮುದ್ರ ಸೇರುವ ವರೆಗು ಭಾಗಗಳವರೆಗು ತನ್ನ ಗಡಿಯನ್ನು ವಿಸ್ತರಿಸಿತ್ತು. ಕರ್ನಾಟಕದ ಬಾದಾಮಿ ಚಾಳುಕ್ಯರ ದೊರೆ ಇಮ್ಮುಡಿ ಪುಲಿಕೇಶಿಯ ಕಾಲದಲ್ಲಿ ನರ್ಮದೆಯವರೆಗು ತನ್ನ ಗಡಿಯನ್ನು ವಿಸ್ತರಿಸುವ ಅವಕಾಶವಿದ್ದರು ಸಹ ಕೆಲವು ಕಾರಣಗಳಿಂದ ಅವನು ಆ ರೀತಿ ಮಾಡಲಿಲ್ಲ.

ಶ್ರೀವಿಜಯನು ತನ್ನ ಕೃತಿಯಾದ ಕವಿರಾಜಮಾರ್ಗದಲ್ಲಿ ಕರ್ನಾಟಕದ ಗಡಿಯನ್ನು ಹೀಗೆ ವಿವರಿಸಿದ್ದಾನೆ. “ಕಾವೇರಿಯಿಂದಮಾಗೋದಾವರಿವರಮಿರ್ದ” ನಾಡು ಕನ್ನಡ ದೇಶ ಎಂದು ವಿವರಿಸಿದ್ದಾರೆ. ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಸಮಯದಲ್ಲಿ ಮಹಾರಾಷ್ಟ್ರಮತ್ತು ಆಂಧ್ರದ ಕೆಲವು ಭಾಗಗಳನ್ನು ಕರ್ನಾಟಕ ರಾಜ್ಯ ಎಂದೇ ಕರೆಯುತ್ತಿದ್ದರು.

ಮರಾಠರ ಪ್ರಭಾಲ್ಯ ಭಾರತದ ಭಾಗಗಳನ್ನು ಅನೇಕ ಗಡಿ ರಜ್ಯಗಳು ತನ್ನ ಹಿಡಿತಕ್ಕೆ ತೆಗೆದು ಕೊಂಡವು. ಅಂತೆಯೇ ಬೆಳಗಾವಿ, ಬಿಜಾಪುರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಬ್ರಿಟಿಷರ ಮುಂಬಯಿ ಅಧಿಪತ್ಯಕ್ಕೂ ದಕ್ಷಿಣ ಕನ್ನಡ, ಬಳ್ಳಾರಿಗಳು ಬ್ರಿಟಿಷರ ಮದ್ರಾಸ್‌ ಅಧಿಪತ್ಯಕ್ಕೂ, ಬೀದರ್‌, ಗುಲಬರ್ಗ ಮತ್ತು ರಾಯಚೂರುಗಳು ಹೈದ್ರಬಾದ್‌ ನಿಜಾಮನ ಆಳ್ವಿಕೆಗೆ ಸೇರಿದ್ದವು. ಕೊಡಗು ಜಿಲ್ಲೆಯು ಬ್ರಿಟಿಷರ ಅಧೀನ ರಾಜ್ಯವಾಗಿತ್ತು.

ಕಲ್ಯಾಣ ಕರ್ನಾಟಕ:

ಸ್ವತಂತ್ರ್ಯ ಪೂರ್ವ ಭಾರತದಲ್ಲಿ 565 ಸಂಸ್ಥಾನಗಳು ಇದ್ದವು ಎಲ್ಲಾ ಸಂಸ್ಥಾನಗಳನ್ನು ರಾಜ ಮಹರಾಜರು ಆಳ್ವಿಕೆ ಮಾಡುತ್ತಿದ್ದರು. ಬ್ರೀಟಿಷರು ದೇಶ ಬಿಟ್ಟು ಹೊಗುವ ಸಮಯದಲ್ಲಿ ಎಲ್ಲಾ ಸಂಸ್ಥಾನಗಳಿಗೆ ಒಂದು ಕರೆಯನ್ನು ನೀಡಿದರು ಅದೆನಿಂದರೆ ಅದು ಯಾವುದೇ ಸಂಸ್ಥಾನದ ರಾಜರು ತಾವಿ ಇಚ್ಚೆಪಟ್ಟರೆ ಭಾರತದ ಒಕ್ಕೂಟವನ್ನು ಸೇರಬಹುದು ಅಥವಾ ಪ್ರತ್ಯೇಕ ದೇಶದ ಸ್ಥಾಪನೆ ಮಾಡಬಹುದು ಎಂದು ತಮ್ಮ ವಿಷಯವನ್ನು ಮಂಡಿಸಿದರು. ಇದರಿಂದ ಎಲ್ಲಾ ರಾಜರಲ್ಲಿ ಆಧಿಕಾರದ ಆಸೆಯನ್ನು ಹೆಚ್ಚಿಸಿದರು.

ಇದರಿಂದಗಿ ಭಾರತದ ಅವಿಭಾಜ್ಯ ಅಂಗವಾಗಿರುವ ಜಮು-ಕಾಶ್ಮೀರದ ರಾಜ ಹರಿಸಿಂಗ್‌, ಪಂಜಾಬ್‌ ಪ್ರಾಂತ್ಯದ ಜುನಾಗಡ ಸಂಸ್ಥಾನದ ಮಹಾರಾಜ ಮೋಹಮ್ಮದ್‌ ಮಹಾಬಾತ್‌ ಕಣಜಿ-ಖಖಖ ಹಾಗೂ ಹೈದ್ರಾಬಾದ್‌ ಸಂಸ್ಥಾನದ ನಿಜಾಮನಾದ ಮೀರ್‌ ಉಸ್ಮಾನ ಅಲೀ ಖಾನ್‌ ಇವರು ಆಗಸ್ಟ್‌ 15- 1947ರಂದು ಭಾರತದ ಒಕ್ಕೂಟ ಸೇರಲು ನಿರಕರಿಸಿದರು. ಮತ್ತು ಪ್ರತ್ಯೇಕ ದೇಶದ ಸ್ಥಾಪನೆಯ ಗುರಿಯನ್ನು ಹೊಂದಿದರು.

ಕಾಲಕ್ರಮೇಣ ಜಮ್ಮು-ಕಾಶ್ಮೀರ ಕೆಲ ಶರತ್ತುಗಳ ಮೂಲಕ ಸಂವಿಧಾನದ ಅನುಚ್ಛೇಧ 370ರ ಅಡಿಯಲ್ಲಿ ರಕ್ಷಣೆಯನ್ನು ಪಡೆದು ಭಾರತದ ಒಕ್ಕೂಟವನ್ನು ಸೇರುತ್ತದೆ. ಅದೇ ರೀತಿ ಜುನಾಗಡ್‌ನ ಸಂಸ್ಥಾನವುಕೂಡ 24ನೇ ಫೆಬ್ರವರಿ1948ರಲ್ಲಿ ಭಾರತ ಒಕ್ಕೂಟ ಸೇರಿ ಭಾರತದ ರಾಜ್ಯವಾಯಿತು.

ಭಾರತ ಸ್ವಾತಂತ್ರ್ಯಗೊಂಡನಂತರ ಹೈದ್ರಬಾದ್‌ ನಿಜಾಮರು ಕರ್ನಾಟಕ ಮತ್ತು ಕನ್ನಡಿಗರನ್ನು ತಮ್ಮ ಗುಲಾಮರಂತೆ ನಡೆಸಿಕೊಳ್ಳುತ್ತಿದ್ದರು. ಕೆಲವು ಒಪ್ಪಂದ ಗಳ ನಂತರ 17 ನೆ ಸೆಪ್ಟಂಬರ್‌ ಹೈದರಬಾದ್‌ ನ ಆಳ್ವಿಕೆ ಇಂದ ಕರ್ನಾಟಕ ಮುಕ್ತವಾಯಿತು ಹಾಗಾಗೀ ಕರ್ನಾಟಕದ ಜನರು ವರ್ಷ ಏರಡು ಬಾರಿ ಸ್ವಾತಂತ್ರ್ಯದಿನ ವನ್ನು ಆಚರಿಸುತ್ತಾರೆ ಅವುಗಳೆಂದರೆ , 15 ಆಗಸ್ಟ್ ಸ್ವಾತಂತ್ರ್ಯದಿನಾಚರಣೆ, 17 ಸೆಪ್ಟೆಂಬರ್‌ ಹೈದರಬಾದ್‌ ನಿಂದ ಕರ್ನಾಟಕ ವಿಮೊಚನ ದಿನ.

1924ರ ಬೆಳಗಾವಿ ಆಧಿವೇಶನ:

1924ರಲ್ಲಿ ಕರ್ನಾಟಕದ ಪ್ರದೇಶದಲ್ಲಿ ಕಾಂಗ್ರೇಸ್‌ ಸಮಿಯ ಆಶ್ರಯದಲ್ಲಿ ಭಾರತೀಯ ರಾಷ್ಟೀಯ ಕಾಂಗ್ರೇಸ್‌ ನ ಐತಿಹಾಸಿ ಬೆಳಗಾವಿ ಅಧಿವೇಶನ ಸಂಘಟಿಸಲಾಯಿತ್ತು. ಈ ಆಧಿವೇಶನದ ಅದ್ಯಕ್ಷತೆಯನ್ನು ಮಹಾತ್ಮ ಗಾಂಧೀಯವರು ವಹಿಸಿದ್ದರು.

ಮತ್ತು ಇದೇ ಸ್ಥಾಳದಲ್ಲಿ ಚೊಚ್ಚಲ ಕರ್ನಾಟಕ ಏಕೀಕರಣ ಸಮ್ಮೇಳನವನ್ನು ಆಯೋಜಿಸಲಾಗಿತ್ತು ಈ ಸಮ್ಮೇಳನದ ಅಧ್ಯಕ್ಷತೆಯನ್ನು ಸಿದ್ದಪ್ಪ ಕಂಬಳಿಯವರು ವಹಿಸಿದ್ದರು.

ಪ್ರಮುಖ ಆಯೋಗಗಳು:

  1. 1948ರಲ್ಲಿ ಕೇಂದ್ರ ಸರ್ಕಾರದ ಧಾರ ಆಯೋಗ
  2. 1949ರಲ್ಲಿ ಜೆ.ವಿ.ಪಿ ಸಮಿತಿ ಭಾಷವಾರು ವಿಂಗಡಣೆ ರಾಷ್ಟ್ರದ ಐಕ್ಯತೆಗೆ ದಕ್ಕೆ.
  3. 1953ರಲ್ಲಿ ಆಂಧ್ರದಲ್ಲಿ ರೊಟ್ಟಿ ಶ್ರೀರಾಮುಲು ರವರು ಉಪವಾಸ ಮಾಡಿ ತಮ್ಮ ಪ್ರಾಣತ್ಯಾಗ ಮಾಡಿದ್ದರಿಂದಾಗಿ ಭಾಷಾ ಆಧಾರದ ಮೇಲೆ ಆಂಧ್ರಪ್ರದೇಶ ರಚನೆ.
  4. 1953ರಲ್ಲಿ ಕೇಂದ್ರ ಸರ್ಕಾರ ಪಜಲ್‌ ಅಲಿ ಅಯೋಗ ನೇವಿಸಿತು. ಇದು ತನ್ನ ವರದಿಯನ್ನು 1955ರಲ್ಲಿ ಸರ್ಕಾರಕ್ಕೆ ನೀಡಿ ಭಾಷಾವಾರು ವಿಂಗಡಣೆ ಸೂಕ್ತವೆಂದು ತಿಳಿಸಿತು.

1956ರಲ್ಲಿ ರಾಜ್ಯ ಮನರ್‌ ವಿಂಗಡಣಾ ಕಾಯ್ದೆಯನ್ವಯ 1956 ನವೆಂಬರ್‌ 1 ರಂದು ವಿಶಾಲ ಮೈಸೂರು ಸಂಸ್ಥಾನವೆಂದು ಎಸ್.‌ ನಿಜಲಿಂಗಪ್ಪರ ನೇತೃತ್ವದಲ್ಲಿ ರಚನೆಯಾಯಿತು.

ಉಪಸಂಹಾರ:

ಕರ್ನಾಟಕದ ಏಕೀಕರಣ ಒಂದು ಸಾಧನೆಯ ಫಲ ಬೇರೆ ರಾಜ್ಯಗಳೆಲ್ಲ ತಮ್ಮ ರಾಜ್ಯ ಎಂದು ಹೇಳಿಕೊಳ್ಳುವ ಈ ಸಮಯದಲ್ಲಿ ನಮಗೆ ಒಂದು ಪ್ರತ್ಯೇಕ ರಾಜ್ಯವಿಲ್ಲ ಎಂಬುದು ತುಂಬ ನೋವಿನ ಸಂಗತಿ. ಪ್ರತಿ ಗೆಲುವಿನಲ್ಲು ಅದೆಷ್ಟೋ ಜನರ ನೋವಿನ ಕಥೆಗಳು ಇವೆ ಎಂಬುದು ಎಲ್ಲಾರಿಗು ಗೊತ್ತಿರುವ ವಿಷಯ. ನಮ್ಮ ಕರ್ನಾಟಕ್ಕೆ ರಾಜ್ಯ ಪುನರ್‌ ರಚನೆ ಮಾಡಿದರಾದರು ರಾಜ್ಯದಲ್ಲಿನ ಜನರು ಆ ರಾಜ್ಯ ಅಥವಾ ದೇಶದ ಸಂಸೃತಿ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೊಗುವುದು ಪ್ರತಿಯೊಬ್ಬರ ಕರ್ತವ್ಯ.

FAQ:

ವಿಶಾಲ ಮೈಸೂರು ಎಂದು ಯಾರ ನೇತೃತ್ವದಲ್ಲಿ ರಚನೆಯಾಯಿತು?

ಎಸ್.‌ ನಿಜಲಿಂಗಪ್ಪ

ಕರ್ನಾಟಕದಲ್ಲಿ ಎಂದು ಹೈದ್ರಬಾದ್‌ ವಿಮೊಚನ ದಿನವನ್ನು ಆಚರಿಸುತ್ತಾರೆ?

17 ಸೆಪ್ಟೆಂಬರ್‌

ಕವಿರಾಜಮಾರ್ಗ ಯಾರ ಕೃತಿ?

ಶ್ರೀವಿಜಯ

1924ರ ಬೆಳಗಾವಿ ಆಧಿವೇಶನದ ಅಧ್ಯಕ್ಷತೆಯನ್ನು ಯಾರುವಹಿಸಿದ್ದರು?

ಮಹಾತ್ಮ ಗಾಂಧೀಜಿ

ಇತರೆ ವಿಷಯಗಳು:

ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ

ಸ್ನೇಹಿತರ ಬಗ್ಗೆ ಪ್ರಬಂಧ

ಮತದಾನ ಪ್ರಬಂಧ 

Leave A Reply

Your email address will not be published.