ಮತದಾನ ಪ್ರಬಂಧ | Matadana Essay in Kannada

0

ಮತದಾನ ಪ್ರಬಂಧ Matadana Essay in Kannada, matadana prabandha in kannada, Voting Essay kannada ಮತದಾನ ಬಗ್ಗೆ ಪ್ರಬಂಧ pdf

ಮತದಾನ ಪ್ರಬಂಧ

ಹಲೋ ಸ್ನೇಹಿತರೇ, ಈ ಲೇಖನದಲ್ಲಿ ಮತದಾನ ಪ್ರಬಂಧದ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ ಪೋಸ್ಟ ನಲ್ಲಿ ತಿಳಿಸಲಾಗಿದೆ. ಈ ಕೆಳಕಂಡ ಲೇಖನದಲ್ಲಿ ಮತದಾನ ಬಗ್ಗೆ ಅಂದರೆ ಮತದಾನ ಏಕೆ ಮಾಡಬೇಕು ಮತ್ತೆ ಯಾವಗ ಮತದಾನ ಮಾಡಬೇಕು , ಮತದಾನದಿಂದ ಆಗುವ ಉಪಯೋಗಗಳೆನು, ಮತದಾನದಲ್ಲಿ ಎಷ್ಟು ವಿಧ ಅವುಗಳು ಯಾವುವು ಮತ್ತು ಮತದಾನ ಮಾಡುವುದರಿಂದ ಆಗುವ ಪ್ರಯೋಜನಗಳು ಯಾವುವು ಅದರ ಬಗ್ಗೆ ಇಲ್ಲಿ ಸುಧೀರ್ಘವಾಗಿ ವಿವರಣೆಯನ್ನು ನೀಡಲಾಗಿದೆ. ಇದು ಸಮಾಜಕ್ಕೆ ಅತಿ ಮುಖ್ಯ ಅಂಶವಾಗಿದೆ. ಈ ಎಲ್ಲಾ ಮಾಹಿತಿಗಾಗಿ ಈ ಲೇಖನವನ್ನು ಸಂಪೂರ್ಣ ಓದಿ.

Matadana Essay in Kannada

ಪೀಠಿಕೆ:

ಯಾವುದೇ ಕಾರ್ಯನಿರ್ವಹಿಸುವ ಪ್ರಜಾಫ್ರಭುತ್ವದ ಕೇಂದ್ರ ಸ್ತಂಭವೇ ಮತದಾನವಾಗಿದೆ. ಮತದಾನ ಮಾಡುವುದು ಎಲ್ಲಾಿ ನಾಗರಿಕರ ಹಕ್ಕು ಮತ್ತು ಕರ್ತವ್ಯ ಅಗಿದೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮತದಾನ ಅತಿ ಮುಖ್ಯವಾಗಿದೆ. ಮತದಾನದ ಮೂಲಕ ನಾವು ನಮ್ಮ ಸ್ವಾತಂತ್ಯಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಸಿದಾ ವೀರ ಹೋರಟಗಾರರಿಗೆ ಮತ್ತು ಹಿಂದಿನ ತಲೆಮಾರುಗಳಿಗೆ ಗೌರವವನ್ನು ಸಲ್ಲಿಸೋಣ.

ಕೆಲವರು ಪ್ರಾಮಾಣಿಕವಾಗಿ ತಮ್ಮ ಮತವನ್ನು ಚಲಾಯಿಸಿದರೆ ಇನ್ನು ಅನೇಕ ಜನರು ಅದರಲ್ಲಿಯು ವಿದ್ಯಾವಂತರೇ ಮತದಾನದ ದಿನದಂದು ಸರ್ಕಾರವು ರಜೆಯಾನ್ನು ಘೋಘಣೆ ಮಾಡಿರುತ್ತದೆ ಅದರೆ ಆ ದಿನ ವನ್ನು ಅವರ ಪ್ರವಾಸಕ್ಕಾಗಿ, ವಿಶ್ರಾಂತಿಗಾಗಿ, ಆ ದಿನವನ್ನು ಬಳಸಿಕೊಳ್ಳುತ್ತರೆ.

ಅದರೆ ಇನ್ನು ಕೆಲವರು ಆಮಿಷಗಳನ್ನು ಹಾಕುವ ಮೂಲಕ ಸಾಮಾನ್ಯ ಜನರಿಗೆ ನಿರ್ದಿಷ್ಷ ಅಭ್ಯರ್ಥಿಗೆ ಮತ ಹಾಕುವಂತೆ ಒತ್ತಯವನ್ನು ಹೆರುತ್ತಾರೆ ಇದು ಕಾನೂನಿನ ದೃಷ್ಠಿಯಲ್ಲಿ ತಪ್ಪು. ಪ್ರತಿಯೊಬ್ಬ ವ್ಯಕ್ತಿಗು ತನ್ನದೆ ಆದ ಸ್ವತಂತ್ಯವನ್ನು ಭಾರತ ಸರ್ಕಾರ ನೀಡಿದೆ. ಭಾರತದಲ್ಲಿ ಮತದಾರ ದಿನವನ್ನುʼ ಜನವರಿ 25 ʼರಂದು ಆಚರಿಸುತ್ತರೆ..

ದಿನನಿತ್ಯದ ಜಂಜಾಟದಲ್ಲಿ ಮತದಾನದ ಮಹತ್ವವನ್ನು ಎಲ್ಲಾರು ಮರೆತೆ ಹೋಗಿದ್ದರೆ ಅದರೆ ಎಲ್ಲಾರು ಸೇರಿ ಸರ್ಕಾರವನ್ನು ಬದಲಿಸಬೇಕಾಗಿದೆ ಎಂದು ಅರಿವನ್ನು ಮುಡಿಸುತ್ತಿರುವಗಲೆ ಅರ್ಧದಷ್ಷು ಜನದ ಗಮನಕ್ಕೆ ಬಾರದೆ ಚುನಾವಣೆಗಳು ಬಂದು ಹೋಗುತ್ತಿದೆ ಇದೆ ಈ ದೇಶದ ಸ್ಥಿತ್ತಿಗೆ ಕಾರಣವಾಗಿದೆ.

ಸರಿಯಾದ ಅಭ್ಯರ್ಥಿಯನ್ನು ನಾವು ಸೂಚಿಸಬೇಕು . ಶಿಕ್ಷಣ, ನೀರು, ಪರಿಸರ ಸಂರಕ್ಷಣೆ, ಕೃಷಿ, ರಸ್ತೆಗಳು, ಯೋಜಿತ ನಗರ ಅಭಿವೃದ್ಧಿ ಗಳ ಬಗ್ಗೆ ಹೆಚ್ಚು ಗಮನಹರಿಸುವುದಕ್ಕಿಂತ ಹೆಚ್ಚಾಗಿ ಎಲ್ಲರು ರಾಜಕೀಯ, ರಾಜಕೀಯ ವ್ಯಕ್ತಿಗಳ ಬಗ್ಗೆಯೆ ಅವರ ಕ್ಷುಲ್ಲಕ ವಿಷಯಗಳಲ್ಲಿಯೆ ಸುತ್ತುತ್ತದೆ ಇದು ಕೂಡ ಅಭಿವೃದ್ಧಿಗೆ ಒಂದು ಮಾರಕವಾಗಿದೆ.

ಮತದಾನದ ಹಕ್ಕು ಸಾರ್ವತ್ರಿಕ ಮತ್ತು ಸಾಮಾನವಾಗಿ ನೀಡಲಾಗಿದೆ. ಅಂದರೆ ಭಾರತದ ಪ್ರತಿಯೊಬ್ಬ 18 ವರ್ಷಗಳನ್ನು ತುಂಬಿದ ವ್ಯಕ್ತಿ ಯಾವುದೆ ಲಿಂಗ, ಜಾತಿ, ಧರ್ಮ, ಜನಾಂಗ ವನ್ನು ಲೆಕ್ಕಿಸದೆ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮಗೆ ಬೇಕಾದ ಅಭ್ಯರ್ಥಿಯನ್ನು ಅಯ್ಕೆ ಮಾಡಬಹುದು.

ಮತದಾನದ ವಿಧಗಳು

1.ನೇರ ಮತದಾನ

2. ಪರೋಕ್ಷ ಮತದಾನ

  1. ನೇರ ಮತದಾನ

ಮತದಾರರು ಜನಪ್ರತಿನಿಧಿ ಸದಸ್ಯರಿಗೆ ತಮ್ಮ ಮತವನ್ನು ಹಾಕುವುದು ಅಂದರೆ ಯಾವುದೆ ಮಧ್ಯವರ್ತಿ ಇಲ್ಲದೆ ಮತ ಚಲಾಯಿಸಿದರೆ ಅದನ್ನು ನೇರ ಮತದಾನಯೆಂದು ಕರೆಯಲಾಗುತ್ತದೆ.

2. ಪರೋಕ್ಷ ಮತದಾನ

ಮತದಾರರು ಕೇವಲ ಚುನಾಯಿತರನ್ನು ಅಥವಾ ಚುನಾವಣಾ ಕಾಲೇಜನ್ನು ಅಯ್ಕೆ ಮಾಡಿದಾಗ ಅದು ಪ್ರತಿನಿಧಿ ಸಂಸ್ಥೆಯ ಸದಸ್ಯರನ್ನು ಆಯ್ಕೆಮಾಡುತ್ತದೆ ಈ ಪ್ರಕ್ರೀಯೆಯನ್ನು ಪರೋಕ್ಷ ಮತದಾನಯೆಂದು ಕರೆಯಲಾಗೆದೆ.

ಮತದಾನಕ್ಕೆ ಕಾರಣಗಳು

ಮತದಾನ ಮಾಡಲು ಇದೆಯಂದು ಅನೇಕ ಕಾರಣಗಳಿವೆ ಅವುಗಳೆಂದರೆ.

  1. ಇದು ನಮ್ಮ ಹಕ್ಕು ಮತ್ತು ಕರ್ತವ್ಯ: ಹೌದು ಇದು ನಮ್ಮ ಕರ್ತವ್ಯವು ಹೌದು ಹಕ್ಕು ಹೌದು ಏಕೆಂದರೆ ಭಾರತದ ಪ್ರಜೆಆದ ನಾವು ನಮಗೆ ಸರ್ಕಾರ ನೀಡಿರುವ ಈ ಹಕ್ಕನ್ನು ಸದುಪಯೋಗ ಪಡೆಸಿಕೊಳ್ಳಬೇಕು ಈ ಪ್ರಕ್ರೀಯೆಯನ್ನು ಪ್ರಜಾಪ್ರಭುತ್ವ ತಳಹದಿಯ ಮೇಲೆ ಕಟ್ಟುಕೊಳ್ಳಲಾಗಿದೆ. ನಮ್ಮ ಈ ಸರ್ಕಾರವು ಜನರಿಂದ, ಜನರಿಗಾಗಿ, ಜನರಿಗೊಸ್ಕರ ನಿಂತಿದೆ. ಮತದಾನವು ಸಾಂವಿಧಾನಿಕ ಹಕ್ಕು ಅದನ್ನು ನಾವು ಲಘುವಾಗಿ ತೆಗೆದುಕೊಳ್ಳುತ್ತೇವೆ, ಆದರೆ ಸಂವಿಧಾನವು ನಮಗೆ ಬೇಕಾದವರನ್ನು ಆಯ್ಕೆ ಮಾಡುವ ಹಕ್ಕನ್ನು ಮತ್ತು ಬದಲಾಯಿಸುವ ಹಕ್ಕನ್ನು ನೀಡಿದೆ ಈ ಕಾರಣದಿಂದದರು ನಾವು ಮತದಾನವನ್ನು ಮಾಡುವುದು ಅವಶ್ಯಕ.
  2. ಅಭಿವೃದ್ಧಿಯ ಪಥ: ನಾವು ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡುವುದರಿಂದ ದೇಶದ ಅಭಿವೃದ್ಧಿಗೆ ನಾವು ಕೂಡ ಸಹಕಾರಿಸ ಬಹುದು. ಅವರ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬಹುದು. ಯಾವುದೊ ಒಂದು ಅಮಿಷದಿಂದ ಒಂದು ಪಕ್ಷಕ್ಕೆ ಮತ ಚಲಾಯಿಸಿದರೆ ಮುಂದಿನ 5 ವರ್ಷ ಕಷ್ಟದಿಂದ ಜೀವನ ನಡೆಸುವ ಪರಿಸ್ಥಿತಿ ಬರುವುದು ಕಂಡಿತವಾಗಿ ಅದ್ದರಿಂದ ನಾವು ನಮ್ಮ ಮತವನ್ನು ಸರಿಯಾದ ( ಜನ ಪರ ಕೆಲಸಗಾರರಿಗೆ ಹಾಕುವುದರಿಂದ )ಸುಭಧ್ರ ಸರ್ಕಾರವನ್ನು ನಿರ್ಮಾಣ ಸಾಧ್ಯಾ.
  3. ಬದಲವಣೆಯ ಪಥ: ಬದಲಾವಣೆಯಲ್ಲಿ ಒಂದು ಮತಕ್ಕು ತನ್ನದೆ ಅದ ಮಹತ್ವವಿದೆ. ನೀವು ಪ್ರಸ್ತುತ ಸರ್ಕಾರದಿಂದ ನೀವು ಅತೃಪ್ತರಾಗಿದ್ದರೆ ನಿಮ್ಮ ಮತವನ್ನು ಮುಂದಿನ ಚುನಾವಣೆಯಲ್ಲಿ ನಿಮ್ಮ ಮತವನ್ನು ಬೇರೆ ಪಕ್ಷಕ್ಕೆ ಹಾಕಬಹುದು. ಮತದಾನವು ದೇಶವನ್ನು ಕಟ್ಟಲು ಮತ್ತು ಕೆಡವಲು ಸಹಕಾರಿ ಅಗಿದೆ. ಜನರೆ ಒಂದೊಮ್ಮೆ ತಪ್ಪಗಿ ಮತ ಚಲಾಯಿಸಿದರೆ ಮುಂದಿನ 5 ವರ್ಷ ಅವರೆ ತಪ್ಪು ಮಾಡಿದೆವು ಯೆಂದು ಅವರನ್ನು ಅವರೆ ದೋಷ್ಸಿಕೊಳ್ಳಬೇಕಾಗುತ್ತದೆ.
  4. ಒಂದು ಮತವವು ಮುಖ್ಯ: ಕೆಲವರಲ್ಲಿ ಈ ಭಾವನೆ ಇದ್ದೆಇರುತ್ತದೆ ಅದೆನೆಂದರೆ ಅದುವೆ “ನನ್ನ ಒಂದು ಮತದಿಂದ ಎನು ಅಗುತ್ತದೆ”. ಈ ಮನೋಭಾವದಿಂದ ಜನರು ಅದಷ್ಟು ಬೇಗ ಹೋರಬರಬೇಕು ಈ ಮನೋಭಾವ ದಿಂದಲೆ ಭಾರತದಲ್ಲಿ ಮತದಾನದ ಪ್ರಮಾಣ ಕಡಿಮೆ ಅಗುತ್ತಿದೆ. ಈ ಮತದಾನವು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ . ಹಾಗಾಗಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಮ್ಮ ಅಮುಲ್ಯವಾದ ಮತವನ್ನು ಸರಿಯಾದ ವ್ಯಕ್ತಿಗೆ ಚಲಾಯಿಸ ಬೇಕು..

ಮತದಾನದಿಂದ ಅಗುವ ಪ್ರಯೋಜನಗಳು:

  1. ಸುಭಧ್ರ ಸರ್ಕಾರ ಸ್ಥಾಪನೆ: ನಮ್ಮ ಅಯ್ಕೆ ಅಂತೆಯೆ ನಾವು ಸರ್ಕಾರವನ್ನು ನಿರ್ಮಿಸಬಹುದು ಇದು ಕೇವಲ ಪ್ರಜಾಪ್ರಭುತ್ವದಿಂದ ಸಾಧ್ಯ.. ಒಳ್ಳೆಯ ಪ್ರತಿನಿಧಿಯಿಂದ ನಾವು ಒಳ್ಳೆಯ ಸೌಲಭ್ಯವನ್ನು ಪಡೆದುಕೊಳ್ಳ ಬಹುದು.
  2. ವಿಶ್ವ ಮಟ್ಟದಲ್ಲಿ ದೇಶದ ಸ್ಥಾನದ ಏರಿಕೆ: ಓಳ್ಳೆಯ ಸದಸ್ಯನಿಂದ ದೇಶದ ಗೌರವವು ಹೆಚ್ಚಾಗುತ್ತದೆ. ಒಳ್ಳೆಯ ಯೋಜನೆ ಜಾರಿಗೆ ಸಹಯಕಾ ವಾಗುತ್ತದೆ.

ಉಪಸಂಹಾರ:

ಮತದಾನದ ಹಕ್ಕನ್ನು ಮೂಲಭೂತ ರಾಜಕೀಯ ಹಕ್ಕು ಅದ್ದರಿಂದ ನಾವುಗಳ ನಮ್ಮ ಹಕ್ಕನ್ನು ಸರಿಯಾಗಿ ಬಳಸಿಕೊಳ್ಳಬೇಕು ಮತ್ತು ಈ ಬಗ್ಗೆ ಜನರಲ್ಲಿ ಜಾಗ್ರತಿ ಕಾರ್ಯಕ್ರಮಗಳನ್ನ ನಡೆಸಬೇಕು. ಸ್ಲೋವೇನಿಯನ್‌ ಶಾಸನದ ಅಡಿಯಲ್ಲಿ ಚುನಾವಣಾ ಅಯೋಗಗಳು ಮತ್ತು ರಾಷ್ಟ್ರೀಯ ಅಸೆಂಬ್ಲಿ ಮೊದಲು ಕಾರ್ಯವಿದಾನಗಳಲ್ಲಿ ಮತದಾನದ ಹಕ್ಕುಗಳ ರಕ್ಷಣೆಯನ್ನು ಜಾರಿಗೊಳಿಸಬಹುದು..

FAQ

ಮತದಾನದ ವಿಧಗಳು?

1. ನೇರ ಮತದಾನ
2. ಪರೋಕ್ಷ ಮತದಾನ

ಮತದಾನ ಎಂದರೇನು?

ಯಾವುದೇ ಕಾರ್ಯನಿರ್ವಗಿಸುವ ಪ್ರಜಾಪ್ರಭುತ್ವದ ಕೇಂದ್ರ ಅಂಶವೇ ಮತದಾನ.

ಮತದಾನ ದಿನ?

ಜನವರಿ 25

ಇತರೆ ವಿಷಯಗಳು:

ನಿರುದ್ಯೋಗದ ಬಗ್ಗೆ ಪ್ರಬಂಧ

ಶಿವರಾಮ ಕಾರಂತ ಜೀವನ ಚರಿತ್ರೆ

ಕುವೆಂಪು ಜೀವನ ಚರಿತ್ರೆ

ಕಂಪ್ಯೂಟರ್ ಬಗ್ಗೆ ಪ್ರಬಂಧ

Leave A Reply

Your email address will not be published.