ಮೊಬೈಲ್ ನಲ್ಲಿ RC ಕಾರ್ಡ್ ಮತ್ತು ಡಿ ಎಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
ನಮಸ್ಕಾರ ಸ್ನೇಹಿತರೇ, ಈಗ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ನಮ್ಮ ಮೊಬೈಲ್ ಫೋನ್ ನಲ್ಲಿಯೇ ನಮ್ಮ ವಿರ್ಚುವಲ್ ಆರ್ ಸಿ ಕಾರ್ಡ್ ಮತ್ತು ವಿರ್ಚುವಲ್ ಡಿ ಎಲ್ ಕಾರ್ಡ್ ಅನ್ನು ಯಾವ ರೀತಿ ಡೌನ್ಲೋಡ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಹೇಳಲಾಗುತ್ತಿದೆ.ನಮ್ಮ ದಿನ ನಿತ್ಯದ ಜೀವನದಲ್ಲಿ ನಮಗೆಲ್ಲಾ ತಿಳಿದಿರುವಂತೆ ಆರ್ ಸಿ ಕಾರ್ಡ್ ಮತ್ತು ಡಿ ಎಲ್ ಮುಖ್ಯವಾಗಿವೆ.
ಯಾವುದೇ ನಗರ ಪಟ್ಟಣಗಳಿಗೆ ನಾವು ಹೋದರೆ ಪೊಲೀಸ್ ಕೇಳುವುದು ಸಹಜ ವಾಗಿದೆ. ಆದ್ದರಿಂದ ಹೀಗೆ ಅಗತ್ಯವಾದ ಆರ್ ಸಿ ಕಾರ್ಡ್ ಮತ್ತು ಡಿ ಎಲ್ ಅನ್ನು ನಮ್ಮ ಮೊಬೈಲ್ ನಲ್ಲಿಯೇ ಇಟ್ಟುಕೊಂಡರೆ ಯಾವುದೇ ಸಮಸ್ಯೆಯಾಗುವುದಿಲ್ಲ,
ಆದ್ದರಿಂದ ಈ ಎರಡನ್ನೂ ನಮ್ಮ ಮೊಬೈಲ್ ನಲ್ಲಿ ಹೇಗೆ ಡೌನ್ಲೋಡ್ ಮಾಡ್ಬೇಕು ಎಂದು ಈ ಕೆಳಗೆ ವಿವರವಾಗಿ ತಿಳಿಸಲಾಗಿದೆ. ಇವುಗಳನ್ನು ಡೌನ್ಲೋಡ್ ಮಾಡುವುದರಿಂದ ಎಲ್ಲ ರೀತಿಯ ಸಮಸ್ಯೆಗಳಿಂದ ಪಾರಾಗಬಹುದು.
RC ಕಾರ್ಡ್ ಮತ್ತು DL ನ್ನು ಡೌನ್ಲೋಡ್ ಮಾಡುವ ವಿಧಾನ :
ನಮ್ಮ ಮೊಬೈಲ್ ನಲ್ಲಿ ಮೊದಲನೆಯದಾಗಿ NextGen mParivahan ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಓಪನ್ ಮಾಡಿಕೊಂಡ ನಂತರ ಅನೇಕ ಸ್ಲೈಡ್ ಗಳು ಬರುತ್ತವೆ ಅವೆಲ್ಲವನ್ನೂ ಸ್ಕಿಪ್ ಮಾಡ್ಬೇಕು. ಸ್ಕಿಪ್ ಮಾಡಿದ ನಂತರ ನಮಗೆ ಯಾವ ಭಾಷೆ ಅಗತ್ಯವಿದೆಯೋ ಆ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಲ್ಲಿರುವ ಒಂದು ಸಮಾಧಾನಕರ ಹಾಗೂ ಖುಷಿಯ ಸಂಗತಿ ಎಂದರೆ ನಮ್ಮ ಹೆಮ್ಮೆಯ ಭಾಷೆಯಾದ ಕನ್ನಡ ಭಾಷೆಯು ಕೂಡ ದೊರೆಯುತ್ತದೆ.
ಮೊದಲು ನಮ್ಮ ಅಕೌಂಟ್ ಅನ್ನು ಕ್ರಿಯೇಟ್ ಮಾಡಿ ಸೈನ್ ಇನ್ ಆಗಬೇಕು. ಸೈನ್ ಇನ್ ಆಗಲು ಮೂರು ಚುಕ್ಕಿಗಳು ಡ್ಯಾಶ್ ಕೋಡ್ ನಲ್ಲಿ ಕಾಣಸಿಗುತ್ತವೆ ಅವುಗಳ ಮೇಲೆ ಕ್ಲಿಕ್ ಮಾಡಿದರೆ ನಮಗೆ ಸೈನ್ ಇನ್ ಎಂಬ ಆಪ್ಷನ್ ದೊರೆಯುತ್ತದೆ.
ಸೈನ್ ಇನ್ ಆದ ನಂತರ ಮೊಬೈಲ್ ನಂಬರ್ ಅನ್ನು ಕೇಳುತ್ತದೆ ಈ ನಂಬರ್ ಗೆ OTP ನಂಬರ್ ಬರುತ್ತದೆ. ಆದ್ದರಿಂದ ನಮ್ಮ ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿದ ನಂತರ ಬಂದ OTP ನಂಬರ್ ಅನ್ನು ಎಂಟರ್ ಮಾಡಿ ಅಕೌಂಟ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬೇಕು.
ಅಕೌಂಟ್ ಕ್ರಿಯೇಟ್ ಆದ ನಂತರ ಡ್ಯಾಶ್ ಬೋರ್ಡ್ ನಲ್ಲಿ ಆರ್ ಸಿ ಡ್ಯಾಶ್ ಬೋರ್ಡ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಮ್ಮ ಆರ್ ಸಿ ನಂಬರ್ ಅನ್ನು ಎಂಟರ್ ಮಾಡಿದ ನಂತರ ಸಲ್ಲಿಸು ಮೇಲೆ ಕ್ಲಿಕ್ ಮಾಡಬೇಕು ಇದರಿಂದ ಆರ್ ಸಿ ಕಾರ್ಡಿನ ಸಂಪೂರ್ಣ ಮಾಹಿತಿಯು ದೊರೆಯುತ್ತದೆ.
ಇದಾದ ನಂತರ ಕೆಳ ಭಾಗದಲ್ಲಿ ಆಡ್ ಟು ಡ್ಯಾಶ್ ಬೋರ್ಡ್ ಫಾರ್ ವಿರ್ಚುಯಲ್ ಆರ್ ಸಿ ಎಂಬ ಆಪ್ಷನ್ ಮೇಲ್ ಕ್ಲಿಕ್ ಮಾಡಬೇಕು. ಕ್ಲಿಕ್ ಮಾಡಿದ ನಂತರ ಆರ್ ಸಿ ಕಾರ್ಡ್ ನಲ್ಲಿರುವ ಚಾಸಿ ನಂಬರ್ ಅಂದರೆ ಕೊನೆಯಲ್ಲಿರುವ ನಾಲ್ಕು ಡಿಜಿಟ್ ನಂಬರ್ ಗಳನ್ನು ಎಂಟರ್ ಮಾಡಬೇಕು.
ಎಂಟರ್ ಮಾಡಿದ ನಂತರ ವೇರಿಫೈ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಇದರಿಂದ ನಮ್ಮ ಆರ್ ಸಿ ಕಾರ್ಡ್ ನಮಗೆ ಡೌನ್ಲೋಡ್ ಆಗುತ್ತದೆ. ಅಲ್ಲದೆ ಅದರ ಜೊತೆಗೆ ಕ್ಯು ಆರ್ ಕೂಡ ಜನರೇಟ್ ಆಗಿರುತ್ತದೆ ಇದರಿಂದ ಆರ್ ಸಿ ಕಾರ್ಡ್ ನ ಡೀಟೇಲ್ಸ್ ಅನ್ನು ಬೇಕಾದಾಗ ಸ್ಕ್ಯಾನ್ ಮಾಡಿದರೆ ಸಾಕು ಆರ್ ಸಿ ಕಾರ್ಡ್ ನ ಸಂಪೂರ್ಣ ಮಾಹಿತಿ ದೊರೆಯುತ್ತದೆ.
ಇದೇ ರೀತಿ ಆರ್ ಸಿ ಕಾರ್ಡ್ ನಂತೆಯೇ ಡಿ ಎಲ್ ಅನ್ನು ಸಹ ಪಡೆಯಬಹುದು. ಡ್ಯಾಶ್ ಬೋರ್ಡ್ ಮೇಲೆ ಕ್ಲಿಕ್ ಮಾಡಿದ ನಂತರ ಸರ್ಚ್ ಬಾರ್ ನಲ್ಲಿ ನಾವು ಡಿ ಎಲ್ ನಂಬರ್ ಅನ್ನು ಎಂಟರ್ ಮಾಡಬೇಕು. ನಂತರ ವಿರ್ಚುಯಲ್ ಡಿ ಎಲ್ ಮೇಲೆ ಕ್ಲಿಕ್ ಮಾಡಿದ ನಂತರ ನಮ್ಮ ಡೇಟ್ ಆಫ್ ಬರ್ತ್ ಅನ್ನು ಎಂಟರ್ ಮಾಡಿ ವೇರಿಫೈ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
ಮಾತ್ರ ಆರ್ ಸಿ ಕಾರ್ಡ್ ನಲ್ಲಿ ತೋರಿಸಿದ ಹಾಗೆ ಇದರಲ್ಲಿಯೂ ಕ್ಯೂ ಆರ್ ಕೋಡ್ ದೊರೆಯುತ್ತದೆ. ಈ ಕ್ಯೂ ಆರ್ ಕೋಡ್ ನಿಂದ ನಮ್ಮ ಡಿ ಎಲ್ ನ ಎಲ್ಲ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಪಡೆಯಬಹುದು ಅಲ್ಲದೆ ಇದು ನಮ್ಮ ಮೊಬೈಲ್ ನಲ್ಲಿಯೇ ಯಾವಾಗ ಬೇಕಾದರೂ ಅದರ ಮಾಹಿತಿಯನ್ನು ಪಡೆಯಬಹುದು.
ಹೀಗೆ ಒಂದು ಅಪ್ಲಿಕೇಶನ್ ಮೂಲಕ ನಮ್ಮ ಮೊಬೈಲ್ ನಲ್ಲಿಯೇ ಆರ್ ಸಿ ಕಾರ್ಡ್ ಮತ್ತು ಡಿ ಎಲ್ ಅನ್ನು ಪಡೆದು ಕೊಂಡು ಎಲ್ಲಾ ರೀತಿಯ ಸಮಸ್ಯೆಗಳಿಂದ ಸುಲಭವಾಗಿ ಪಾರಾಗಬಹುದು.
ಇತರೆ ವಿಷಯಗಳು :
ಉದ್ಯೋಗಿಗಳ ಭವಿಷ್ಯ ನಿಧಿಯನ್ನು33% ಹೆಚ್ಚಿಸಿದ ಸರ್ಕಾರ, ಇಪಿಎಸ್ ಪಿಂಚಣಿದಾರರಿಗೆ ಗುಡ್ ನ್ಯೂಸ್.!
ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಸುಳಿವು ಕೊಟ್ಟ ಸಿದ್ಧರಾಮಯ್ಯ! ಕೊನೆಗೂ ರೈತರ ಕೈ ಹಿಡಿದ ಸರ್ಕಾರ