ಉಚಿತ ಬಸ್ ಪ್ರಯಾಣದ ಬೆನ್ನಲ್ಲೇ ಮತ್ತೊಂದು ಸಿಹಿಸುದ್ದಿ, ರಾಜ್ಯದಲ್ಲಿ 100 ಸ್ಥಳಗಳಲ್ಲಿ ಪೆಟ್ರೋಲ್ ಬಂಕ್ ಗಳ ಸ್ಥಾಪನೆ,

0

ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರವು ಮಹಿಳೆಯರಿಗೆ ಶಕ್ತಿ ಯೋಜನೆಯ ಮೂಲಕ ಉಚಿತ ಬಸ್ ಪ್ರಯಾಣದ ಅವಕಾಶ ನೀಡಿರುವುದಲ್ಲದೆ ಉದ್ಯಮಶಕ್ತಿ ಯೋಜನೆಯನ್ನು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಈ ಶಕ್ತಿ ಯೋಜನೆಯ ಮೂಲಕ ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಉದ್ಯಮಶೀಲತೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರವು ಮುಂದಾಗಿದೆ.

ರಾಜ್ಯದ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುನ್ನಡೆಯುತ್ತಿದ್ದು, ಉದ್ಯಮಶಕ್ತಿ ಯೋಜನೆಯನ್ನು ಈ ವರ್ಷದ ಕರ್ನಾಟಕ ಬಜೆಟ್ 2023ರಲ್ಲಿ ಘೋಷಿಸಿ ಗಮನ ಸೆಳೆದಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಇದೀಗ ನೋಡಬಹುದು.

Industry Power Project
Industry Power Project

ಉದ್ಯಮ ಶಕ್ತಿ ಯೋಜನೆ :

ರಾಜ್ಯ ಸರ್ಕಾರವು ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳ ಸಹಯೋಗದೊಂದಿಗೆ ಉದ್ಯಮಶಕ್ತಿ ಎಂಬ ಯೋಜನೆಯನ್ನು ಜಾರಿಗೊಳಿಸಲಿದೆ. ಈ ಯೋಜನೆಯ ಮೂಲಕ ಕರ್ನಾಟಕ ರಾಜ್ಯದಲ್ಲಿ 100 ಸ್ಥಳಗಳಲ್ಲಿ ಪೆಟ್ರೋಲ್ ಬಂಕ್ಗಳನ್ನು ಸ್ಥಾಪಿಸಿ, ಇದರಲ್ಲಿ ಮಹಿಳಾ ಸಹಕಾರಿ ಸ್ವಸಹಾಯ ಸಂಘಗಳ ಮೂಲಕ ಇವುಗಳ ಸಂಪೂರ್ಣ ನಿರ್ವಹಣೆ ಮಾಡಲು ಕ್ರಮ ವಹಿಸಲಿದೆ ಎಂದು ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

ಪೆಟ್ರೋಲ್ ಬಂಕ್ ಸ್ಥಾಪನೆ :

ಪೆಟ್ರೋಲಿಯನ್ ಕಂಪನಿಗಳ ಸಹಯೋಗ ಇರುವ ಕಾರಣ ಉದ್ಯಮ ಶಕ್ತಿ ಯೋಜನೆಗೆ, ಪೆಟ್ರೋಲ್ ಬಂಕ್ ಸ್ಥಾಪನೆಗಾಗಿ ಬೇಕಾದ ಆರ್ಥಿಕ ನೆರವನ್ನು ಆಯಾ ಕಂಪನಿಗಳೇ ಹೂಡಿಕೆ ಮಾಡಲಿದ್ದು, ಇದಕ್ಕೆ ಪೂರಕವಾಗಿ ಪೆಟ್ರೋಲ್ ಬಂಕ್ ಸ್ಥಾಪನೆಗೆ ಬೇಕಾದ ಭೂಮಿಯನ್ನು ರಾಜ್ಯ ಸರ್ಕಾರವು ಒದಗಿಸಲಿದೆ ಎಂದು ಸಿಎಂ ವಿವರಿಸಿದರು.

ಇದನ್ನು ಓದಿ : ಗೃಹಜ್ಯೋತಿ ಲಾಭವನ್ನು ವಿದ್ಯುತ್ ಬಿಲ್ ಬಾಕಿ ಇದ್ದರೂ ಸಹ ಪಡೆಯಬಹುದು : ಮಹತ್ವದ ಸೂಚನೆ ನೀಡಿದ ಇಲಾಖೆ

ಉದ್ಯಮಶೀಲತೆಯನ್ನು ಹೆಚ್ಚಿಸಲು :

ಪೆಟ್ರೋಲ್ ಬಂಕ್ ಸ್ಥಾಪನೆಯಿಂದ ಸರ್ಕಾರವು ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಉದ್ಯಮಶೀಲತೆಯನ್ನು ಹೆಚ್ಚಿಸುವುದರ ಮೂಲಕ ಜೊತೆಗೆ ಕೌಶಲ್ಯವನ್ನು ಹೆಚ್ಚಿಸಲು ಅಗತ್ಯ ತರಬೇತಿಯನ್ನು ನೀಡಲಿದೆ. ರಾಜ್ಯ ಸರ್ಕಾರವೇ ಪೆಟ್ರೋಲ್ ಬಂಕ್ ಗೆ ಬೇಕಾದಂತಹ ಪರವಾನಗಿ ಮತ್ತು ಪೂರಕ ಬೆಂಬಲವನ್ನು ಸಹ ನೀಡಲಿದೆ ಎಂದು ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಹೀಗೆ ಕರ್ನಾಟಕ ಸರ್ಕಾರವು ಮಹಿಳೆಯರಿಗೆ ಶಕ್ತಿ ಯೋಜನೆಯ ಮೂಲಕ ಉದ್ಯಮಶಕ್ತಿ ಎಂಬ ಮತ್ತೊಂದು ಯೋಜನೆಯನ್ನು ಮಹಿಳೆಯರಿಗಾಗಿ ನೀಡುತ್ತಿದ್ದು ಅವರ ಉದ್ಯಮಶೀಲತೆಯನ್ನು ಹೆಚ್ಚಿಸಲು ಸರ್ಕಾರ ಮುಂದಾಗಿರುವುದನ್ನು ನಾವು ನೋಡಬಹುದು. ಬಜೆಟ್ ನಲ್ಲಿ ಘೋಷಿಸಿದ ಉದ್ಯಮಶಕ್ತಿ ಎಂಬ ಯೋಜನೆಯ ಬಗ್ಗೆ ನಿಮ್ಮ ಮಹಿಳಾ ಸ್ನೇಹಿತರು ಹಾಗೂ ಸಂಬಂಧಿಕರಿಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಉಚಿತ ಲ್ಯಾಪ್ ಟಾಪ್ : ಸರ್ಕಾರದಿಂದ ಉಚಿತ ಲ್ಯಾಪ್ಟಾಪ್ ಗೆ ಅರ್ಹ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ

ಮನೆಯ ಹೆಸರಿನಲ್ಲಿ ಪ್ರತೀ ಖಾತೆಗೂ ಪ್ರತಿ ವರ್ಷ 20,000 ಸಿಗಲಿದೆ : ಈ ಕೂಡಲೇ ಹೆಸರನ್ನು ನೋಂದಾಯಿಸಿ

Leave A Reply

Your email address will not be published.