ವಿಶ್ವ ಅರಣ್ಯ ದಿನಾಚರಣೆ ಬಗ್ಗೆ ಮಾಹಿತಿ | Information about World Forestry Day in Kannada

0

ವಿಶ್ವ ಅರಣ್ಯ ದಿನಾಚರಣೆ ಬಗ್ಗೆ ಮಾಹಿತಿ Information about World Forestry Day Vishwa Aranya Dinacharaneya bagge Mahithi in Kannada

ವಿಶ್ವ ಅರಣ್ಯ ದಿನಾಚರಣೆ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ವಿಶ್ವ ಅರಣ್ಯ ದಿನಾಚರಣೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ವಿಶ್ವ ಅರಣ್ಯ ದಿನಾಚರಣೆ :

ಅರಣ್ಯವು ನಮ್ಮೆಲ್ಲರ ಉಸಿರು, ಅರಣ್ಯವು ಪ್ರಕೃತಿದತ್ತವಾಗಿ ನಮ್ಮೆಲ್ಲರಿಗೂ ಸಿಕ್ಕಿರುವ ಅತ್ಯಮೂಲ್ಯವಾದ ಸಂಪತ್ತಾಗಿದೆ. ವಿಶ್ವ ಅರಣ್ಯ ದಿನವನ್ನು ಮಾರ್ಚ್‌ 21 ರಂದು ಆಚರಿಸಲಾಗುತ್ತದೆ. ಜನರಲ್ಲಿ ಅರಣ್ಯದ ಬಗ್ಗೆ ಸಷ್ಟ ಕಲ್ಪನೆಯನ್ನು ಮೂಡಿಸಲು ವಿಶ್ವ ಅರಣ್ಯ ದಿನವನ್ನು 1971 ಮಾರ್ಚ್‌ 21 ರಿಂದ ಆಚರಿಸಲು ನಿರ್ಧರಿಸಲಾಗಿದೆ. ಹಾಗಾಗಿ ಅಂದಿನಂದ ಇಂದಿನವರೆಗೂ ಕೂಡ ಮಾರ್ಚ್‌ ೨೧ ರಂದು ಅರಣ್ಯ ದಿನವನ್ನು ಆಚರಿಸಲಾಗುತ್ತಿದೆ. ಕೇವಲ ಅರಣ್ಯದ ಬಗ್ಗೆ, ಅರಣ್ಯದ ಸಂರಕ್ಷಣೆಯ ಬಗ್ಗೆ ಮಾರ್ಚ21 ಕೇವಲ ಈ ದಿನ ಮಾತ್ರ ಸೀಮಿತವಾಗದೆ ಅರಣ್ಯ ಸಂರಕ್ಷಣೆಯು ಪ್ರತಿಯೊಬ್ಬರ ಕರ್ತವ್ಯವಾಗಿರಬೇಕು.

ಆಚರಣೆಯ ಹಿನ್ನಲೆ :

  • 2012 ನವೆಂಬರ್‌ 28ರಂದು ಕೈಗೊಂಡ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿಯಮಾವಳಿಯಂತೆ
  • 2013 ಮಾರ್ಚ್‌ 21ರಿಂದ ಅಂತರಾಷ್ಟ್ರೀಯ ಅರಣ್ಯ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತದೆ.
  • ಆಹಾರ ಮತ್ತು ಕೃಷಿ ಸಂಘಟನೆ, ಅರಣ್ಯಗಳ ಮೇಲಿನ ವಿಶ್ವ ರಾಷ್ಟ್ರಗಳ ವೇದಿಕೆ ಇವುಗಳ ಸಹಭಾಗಿತ್ವದಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

ಇದಕ್ಕೆ ಸಂಬಂಧಿಸಿದ ಅಂಶಗಳು :

  • ವಿಶ್ವಸಂಸ್ಥೆಯು 2011ನ್ನು ಅಂತರಾಷ್ಟ್ರೀಯ ಅರಣ್ಯ ವರ್ಷವನ್ನಾಗಿ ಘೋಷಣೆ ಮಾಡಿದೆ.
  • ಹಾಗೂ ವಿಶ್ವಸಂಸ್ಥೆಯು ವಿಶ್ವಮಟ್ಟದಲ್ಲಿ ಆರ್ಥಿಕ ವ್ಯವಸ್ಥೆ ಪರಿಸರ ಸಂರಕ್ಷಣೆಗಾಗಿ 2021-2030 ದಶಕವನ್ನು “ecosystem restoration” ಎಂದು ಘೋಷಣೆ ಮಾಡಿದೆ.

ಭಾರತದಲ್ಲಿ ಅರಣ್ಯ ವರದಿ :

  • ಕೇಂದ್ರ ಪರಿಸರ, ಅರಣ್ಯ, ಹವಾಮಾನ ಸಚಿವಾಲಯದ ಅಧೀನದಲ್ಲಿ ಭಾರತದಲ್ಲಿ ರಾಜ್ಯಗಳ ಅರಣ್ಯ ವರದಿಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಪ್ರಕಟಿಸುತ್ತಿದೆ.
  • ಈ ವರದಿಯನ್ನು 1987 ರಿಂದ ಪ್ರಕಟಿಸಲಾಗುತ್ತಿದೆ.

2021ರ ಅರಣ್ಯ ವರದಿ :

  • ಜಗತ್ತಿನಲ್ಲಿ ಅತಿ ಹೆಚ್ಚು ಅರಣ್ಯವನ್ನು ಹೊಂದಿರುವ ರಾಷ್ಟ್ರಗಳು ರಷ್ಯಾ, ಬ್ರೆಜಿಲ್‌, ಕೆನಡಾ, ಅಮೇರಿಕಾ, ಚೀನಾ
  • ಭಾರತವು ಜಗತ್ತಿನಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಭಾರತದ ಅರಣ್ಯ ಪ್ರಮಾಣ 24.56%
  • ಅತಿ ಹೆಚ್ಚು ಅರಣ್ಯಗಳನ್ನು ಹೊಂದಿರುವ ಭಾರತದ ರಾಜ್ಯಗಳು ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಛತ್ತೀಸಗಢ, ಓಡಿಸ್ಸಾ, ಮಹಾರಾಷ್ಟ್ರ.
  • ಭಾರತದಲ್ಲಿ ಶೇಕಡವಾರು ಪ್ರಮಾಣದಲ್ಲಿ ಮಿಜೋರಾಂ ಹೆಚ್ಚು ಅರಣ್ಯವನ್ನು ಹೊಂದಿದೆ.
  • ಅತಿ ಕಡಿಮೆ ಅರಣ್ಯ ಹೊಂದಿರುವ ರಾಜ್ಯ – ಹರಿಯಾಣ
  • ರಾಜ್ಯದಲ್ಲಿ ಅಧಿಕ ಪ್ರಮಾಣದ ಅರಣ್ಯ ಹೊಂದಿರುವ ಜಿಲ್ಲೆ – ಉತ್ತರ ಕನ್ನಡ
  • ಕಡಿಮೆ ಪ್ರಮಾಣದ ಅರಣ್ಯ ಹೊಂದಿರುವ ಜಿಲ್ಲೆ – ವಿಜಯಪುರ

ಅರಣ್ಯ ಸಂರಕ್ಷಣಾ ಕ್ರಮಗಳು :

  • ಅರಣ್ಯ ರಕ್ಷಣೆಯ ಕಾರ್ಯದಲ್ಲಿ ಸರ್ಕಾರದೊಂದಿಗೆ ಸಹಕರಿಸಬೇಕು.
  • ಅರಣ್ಯ ರಕ್ಷಣೆ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಬೇಕು.
  • ಅರಣ್ಯ ಲೂಟಿ ಮಾಡುವವರ ವಿರುದ್ದ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.
  • ವನಮಹೋತ್ಸವದಂತಹ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ವ್ಯಾಪಕವಾಗಿ ಕಡ್ಡಾಯವಾಗಿ ಹಮ್ಮಿಕೊಳ್ಳಬೇಕು.
  • ಮನೆ, ಶಾಲೆ, ಕಾರ್ಖಾನೆಗಳ ಸುತ್ತ ಮುತ್ತ ಮರಗಿಡಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು.
  • ಕಳ್ಳಸಾಗಾಣಿಕೆಗೆ ಕಡಿವಾಣ ಹಾಕಬೇಕು.
  • ಕೃಷಿ ಭೂಮಿಯ ಅಂಚಿನಲ್ಲಿ ಸುತ್ತಮುತ್ತಲಿನ ಖಾಲಿ ಜಾಗಗಳಲ್ಲಿ ಮರಗಿಡಗಳನ್ನು ಬೆಳೆಸಬೇಕು.

FAQ :

ಅತಿ ಕಡಿಮೆ ಅರಣ್ಯ ಹೊಂದಿರುವ ರಾಜ್ಯ ಯಾವುದು?

ಹರಿಯಾಣ

ರಾಜ್ಯದಲ್ಲಿ ಅಧಿಕ ಪ್ರಮಾಣದ ಅರಣ್ಯ ಹೊಂದಿರುವ ಜಿಲ್ಲೆ ಯಾವುದು?

ಉತ್ತರ ಕನ್ನಡ

ಇತರೆ ವಿಷಯಗಳು :

ಪ್ರಾಮಾಣಿಕತೆಯ ಬಗ್ಗೆ ಪ್ರಬಂಧ

ಅಂತರ್ಜಾಲದ ಉಪಯೋಗಗಳು ಪ್ರಬಂಧ

Leave A Reply

Your email address will not be published.