ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ಪ್ರಬಂಧ | Rashtriya Bhavaikyathe Essay in Kannada
ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ಪ್ರಬಂಧ
ರಾಷ್ಟ್ರೀಯ ಭಾವೈಕ್ಯತೆ ಬಗ್ಗೆ ಪ್ರಬಂಧ Rashtriya Bhavaikyathe prabandha Essay on National Spirituality in kannada
ಪೀಠಿಕೆ
ರಾಷ್ಟ್ರೀಯ ಭಾವೈಕ್ಯವೆಂದರೆ ಒಬ್ಬರು ಇನ್ನೊಬ್ಬರ ಬಗ್ಗೆ ಅಥವಾ ಒಂದು ಜನಾಂಗ ಇನ್ನೊಂದು ಬಗ್ಗೆ ದ್ವೇಷ, ಅಸೂಯೆ ಮತ್ತು ಪೂರ್ವಾಗ್ರಹ ಪೀಡಿತರಾಗದೆ ಒಂದು ಎಂಬ ಭಾವನೆಯಿಂದ ಬದುಕುವುದು. ಬದಲಾಗಿ ಒಬ್ಬರು ಇನ್ನೊಬ್ಬರನ್ನು ಗೌರವಿಸುವುದು ಹಾಗೂ ಪರಸ್ಪರ ಸೌಹಾರ್ದತೆಯಿಂದ ಇರುವುದು. ನಮ್ಮ ದೇಶವು ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಿದೆ. ನಮ್ಮ ದೇಶದಲ್ಲಿ ಅನೇಕ ಧರ್ಮಗಳು, ಭಾಷೆಗಳು, ವೇಷಭೂಷಣಗಳು, ಅಹಾರ ಪದ್ದತಿಗಳು, ಆಚರಣೆಗಳು, ಸಂಸ್ಕೃತಿಗಳು ಕಂಡುಬರುತ್ತದೆ. ʼವಿವಿಧತೆಯಲ್ಲಿ ಏಕತೆʼ ಎಂಬುದು ನಮ್ಮ ದೇಶದ ಪರಂಪರೆಯಾಗಿದೆ.
ವಿಷಯ ವಿವರಣೆ
ನಮ್ಮ ದೇಶದಲ್ಲಿ ಏಕತೆಯನ್ನು ಮೂಡಿಸುವುದು ಸವಾಲಿನ ಕಾರ್ಯವಾಗಿದೆ. ಆದರೆ ನಮ್ಮ ಸಂಸ್ಕೃತಿಯ ಪರಮತೆಯ ಸಹಿಷ್ಣುತೆಯನ್ನು ವೇದಕಾಲದಿಂದಲೂ ಬೋಧಿಸಿಕೊಂಡು ಬಂದಿರುವುದರಿಂದ ಸಹಬಾಳ್ವೆ ಮಾಡುವುದು ಇಂದು ಎಲ್ಲರಿಗೂ ಸಾಧ್ಯವಾಗಿದೆ. ʼವಸುಧೈವ ಕುಟುಂಬಕಂʼ, ʼಸರ್ವೇಜನಾಃ ಸುಖಿನೋ ಭವಂತುʼ ಎಂಬುದು ನಮ್ಮ ನಾಡಿನ ಧ್ಯೇಯವಾಗಿದೆ.
ರಾಷ್ಟ್ರೀಯ ಭಾವೈಕ್ಯತೆಯ ಮಹತ್ವ
- ಒಂದು ರಾಷ್ಟ್ರದ ಜನರಲ್ಲಿ ಒಗ್ಗಟ್ಟು ಉಂಟುಮಾಡಲು ಭಾವೈಕ್ಯತೆ ಅಗತ್ಯವಾಗಿದೆ.
- ರಾಷ್ಟ್ರದ ಹಿತಾಸಕ್ತಿಯನ್ನು ಸಾಧಿಸಲು, ಅಭಿವೃದಿ ಹೊಂದಲು ರಾಷ್ಟ್ರದ ಜನರೂ ತಾವೆಲ್ಲರೂ ಒಂದೆಂಬ ಭಾವನೆ ಬೆಳೆಸಲು ಭಾವೈಕ್ಯತೆ ಅಗತ್ಯವಾಗಿದೆ.
- ಭಾವೈಕ್ಯತೆಯು ದೇಶದ ಸಮಗ್ರತೆ, ಸೋದರತೆ ಮತ್ತು ಸಮಾನತೆಗೆ ಪ್ರಮುಖ ಪ್ರೇರಣೆಯಾಗುತ್ತದೆ.
ರಾಷ್ಟ್ರೀಯ ಭಾವೈಕ್ಯತೆಯ ಅವಶ್ಯಕತೆ
- ಪ್ರಾಂತೀಯತೆಯನ್ನು ಹೋಗಲಾಡಿಸಲು
- ರಾಜ್ಯ ರಾಜ್ಯಗಳ ಸೌಹಾರ್ಧ ಸಹಕಾರ ಬೆಳವಣಿಗೆ
- ಸರ್ವಧರ್ಮ ಸಮನ್ವಯತೆ
- ಭಾಷಾ ಸಾಮರಸ್ಯಕ್ಕಾಗಿ
- ಪ್ರಾದೇಶಿಕ ಅಸಮತೋಲನ ನಿವಾರಣೆಗೆ
- ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲು
- ರಾಷ್ಟ್ರದ ಆರ್ಥಿಕ ಅಭಿವೃದ್ದಿಗಾಗಿ
- ಕಲೆ, ಸಾಹಿತ್ಯ, ಸಂಸ್ಲೃತಿಯ ಬೆಳವಣಿಗೆ
ರಾಷ್ಟ್ರೀಯ ಭಾವೈಕ್ಯತೆಗೆ ಮಾರಕವಾದ ಅಂಶಗಳು
ಜಾತೀಯತೆ :
ಜಾತೀಯತೆಯೆಂದರೆ ಬೇರೆ ಜಾತಿಯ ವಿರುದ್ದವಾಗಿ ತಮ್ಮ ಜಾತಿಯನ್ನು ಎತ್ತಿ ಕಟ್ಟುವುದು. ತಮ್ಮ ಜಾತಿಯೇ ಶ್ರೇಷ್ಠ ಉಳಿದವು ಕನಿಷ್ಠವೆಂಬ ಮೇಲಿರಿಮೆಯೇ ಜಾತೀಯತೆ. ಜಾತೀಯತೆ ಏಕತೆಗೆ ಮಾರಕವಾಗಿದೆ. ಇಂದು ಜಾತೀಯತೆ ಎಲ್ಲಾ ಕ್ಷೇತ್ರಗಳನ್ನು ಆವರಿಸಿದೆ. ಇದರಿಂದಾಗಿ ಸಂಕುಚಿತ ಭಾವನೆ ಬೆಳೆಯುತ್ತಿದೆ. ಹಾಗಾಗಿ ಜಾತೀಯತೆ ದೇಶದ ಐಕ್ಯತೆಗೆ ಮಾರಕವಾಗಿದೆ.
ಮತೀಯವಾದ :
ಬೇರೆ ಧರ್ಮಕ್ಕಿಂತ ತಮ್ಮಧರ್ಮವೇ ಶ್ರೇಷ್ಠವಾದುದು ಎಂದು ನಂಬುವುದು ಮತ್ತು ಕೇವಲ ತಮ್ಮಧರ್ಮದ ಸಲುವಾಗಿ ಮಾತ್ರ ಹೋರಾಡುವುದು ಮತೀಯವಾದ ಅಥವಾ ಕೋಮುವಾದ. ಕೋಮುವಾದವು ಶಾಂತಿಯನ್ನು ಕದಡುತ್ತದೆ. ಇದರಿಂದ ಜೀವ ಮತ್ತು ಆಸ್ತಿ ಪಾಸ್ತಿ ನಾಶ ಸಂಭವಿಸುತ್ತದೆ. ಅಷ್ಟೇ ಅಲ್ಲ ಇದು ಜನರ ನಡುವಿನ ಸ್ನೇಹ ಸೌಹಾರ್ದತೆಯನ್ನು ಹಾಳುಮಾಡುತ್ತದೆ. ಕೋಮುವಾದವು ನಾನಾ ಮತಧರ್ಮದ ಜನರಲ್ಲಿ ಹೊಂದಾಣಿಕೆ ಇಲ್ಲದಂತೆ ಮಾಡಿ, ದೇಶದ ಪ್ರಗತಿಗೆ ತೊಡಕಾಗಿದೆ. ಅಭಿವೃದ್ದಿ ಕಂಟಕವಾಗಿದೆ.
ಪ್ರಾದೇಶಿಕವಾದ :
ರಾಷ್ಟ್ರೀಯ ಭಾವೈಕ್ಯತೆಗೆ ಮಾರಕವಾಗಬಹುದಾದ ಮತ್ತೊಂದು ಅಂಶ ಪ್ರಾದೇಶಿಕವಾದ. ತನ್ನ ಪ್ರದೇಶದ ಕಾಳಜಿ ಕುರಿತು ವ್ಯಕ್ತಿಗಿರುವ ಏಕಪಕ್ಷೀಯ ನಿಷ್ಠೆ ಮತ್ತು ಸಂಕುಚಿತ ಭಾವನೆಯೇ ಪ್ರಾದೇಶಿಕವಾದ. ಆದರೆ ಸಂವಿದಾನದ ಪ್ರಕಾರ ನಮ್ಮದು ವಿವಿಧ ರಾಜ್ಯಗಳುಳ್ಳ ಒಕ್ಕೂಟ ವ್ಯವಸ್ಥೆಯಾದ್ದರಿಂದ ಪ್ರಾದೇಶಿಕ ಭಾಷೆ, ಸಂಸ್ಕೃತಿ, ಆಡಳಿತದ ಅಸ್ತಿತ್ವವು ಮುಖ್ಯ. ಆದ್ದರಿಂದ ರಾಷ್ಟ್ರದ ಸಮಗ್ರತೆಗೆ ಧಕ್ಕೆ ತರುವ ಏಕಪಕ್ಷೀಯ ಪ್ರಾದೇಶಿಕವಾದ ಆರೋಗ್ಯಕರವಲ್ಲ. ನಾವು ʼಮೊದಲು ಭಾರತೀಯರು ಅನಂತರ ಒಂದು ರಾಜ್ಯ ಅಥವಾ ಪ್ರದೇಶಕ್ಕೆ ಸೇರಿದವರುʼ ಎಂಬುದನ್ನು ಅರಿಯಬೇಕು.
ಉಪಸಂಹಾರ
ಶಾಲಾ ಕಾಲೇಜುಗಳಲ್ಲಿ ರಾಷ್ಟ್ರೀಯ ಭಾವೈಕ್ಯವನ್ನು ಉಂಟುಮಾಡುವ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಮಕ್ಕಳಲ್ಲಿ ಯುವಕರಲ್ಲಿ ದೇಶಾಭಿಮಾನ ಮೂಡಿಸುವ ಕಾರ್ಯ ಮಾಡಬೇಕು. ರಾಷ್ಟ್ರೀಯ ಹಬ್ಬಗಳ ಅಚರಣೆಯನ್ನು ವೈಭವದಿಂದ ನಡೆಸಬೇಕು. ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ನೆಹರೂರವರು ಹೇಳುವಂತೆ ಇದನ್ನು “ಇಟ್ಟಿಗೆ ಗಾರೆಗಳಿಂದ ಕಟ್ಟಲಾಗದು ಮಕ್ಕಳ ಮನದಾಳದಲ್ಲಿ ಬಿತ್ತಿ ಬೆಳೆಸಬೇಕಾಗಿದೆ” ಆಗ ಮಾತ್ರ ರಾಷ್ಟ್ರೀಯ ಭಾವೈಕ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ.
FAQ :
ರಾಷ್ಟ್ರೀಯ ಭಾವೈಕ್ಯತೆ ಎಂದರೇನು?
ದೇಶದಲ್ಲಿ ವಾಸಿಸುತ್ತಿರುವ ಜನರೆಲ್ಲರು ತಮ್ಮ ಧರ್ಮ, ಜಾತಿ, ಕುಲ, ಭಾಷೆಗಳನ್ನು ಬದಿಗೊತ್ತಿ ಒಂದೇ ಕುಟುಂಬದ ಸದಸ್ಯರಂತೆ ವಾಸ ಮಾಡುವುದನ್ನು ರಾಷ್ಟ್ರೀಯ ಭಾವ್ಯೆಕ್ಯತೆ ಎಂದು ಕರೆಯಬಹುದು.
ರಾಷ್ಟ್ರೀಯ ಭಾವೈಕ್ಯತೆಯ ಅವಶ್ಯಕತೆಯೇನು?
ಪ್ರಾಂತೀಯತೆಯನ್ನು ಹೋಗಲಾಡಿಸಲು ರಾಜ್ಯ ರಾಜ್ಯಗಳ ಸೌಹಾರ್ಧ ಸಹಕಾರ ಬೆಳವಣಿಗೆ
ಸರ್ವಧರ್ಮ ಸಮನ್ವಯತೆ ಭಾಷಾ ಸಾಮರಸ್ಯಕ್ಕಾಗಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲು ರಾಷ್ಟ್ರದ ಆರ್ಥಿಕ ಅಭಿವೃದ್ದಿಗಾಗಿ ಕಲೆ, ಸಾಹಿತ್ಯ, ಸಂಸ್ಲೃತಿಯ ರಾಷ್ಟ್ರೀಯ ಭಾವೈಕ್ಯತೆಯ ಅವಶ್ಯಕ.
ಇತರೆ ವಿಷಯಗಳು :