ಹೊಸ ಮಾರ್ಗಸೂಚಿ ಪ್ರಕಟ, ಸಚಿವರ ಎಚ್ಚರಿಕೆ !! ದುಪ್ಪಟ್ಟು ಮಹಿಳೆಯರ ಪ್ರಯಾಣವೇ ಇದಕ್ಕೆ ಕಾರಣ?
ನಮಸ್ಕಾರ ಸ್ನೇಹಿತರೇ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗೆ ಕರ್ನಾಟಕ ರಾಜ್ಯದಾದ್ಯಂತ ಭರ್ಜರಿ ಪ್ರತಿಕ್ರಿಯೆ ದೊರೆಯುತ್ತಿದೆ. ಆದರೆ ಮಹಿಳೆಯರು ಏಕಕಾಲದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿರುವುದರಿಂದ ಕೆಎಸ್ಆರ್ಟಿಸಿ ಸಿಬ್ಬಂದಿಗಳು ಹೈರಾಣಾಗುತ್ತಿದ್ದಾರೆ. ಇದರಿಂದ ಸಾರಿಗೆ ಇಲಾಖೆಯು ಧಾರ್ಮಿಕ ಮತ್ತು ಪ್ರವಾಸಿ ಸ್ಥಳಗಳಿಗೆ ತೆರಳುವವರಿಗೆ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಲು ಮುಂದಾಗಿದೆ. ಈ ಹೊಸ ಮಾರ್ಗಸೂಚಿಯ ಬಗ್ಗೆ ಸಂಪೂರ್ಣ ಮಾಹಿತಿಯು ಇಲ್ಲಿದೆ.
ಶಕ್ತಿ ಯೋಜನೆಗೆ ಹೊಸ ಮಾರ್ಗಸೂಚಿ :
ಏಕಕಾಲಕ್ಕೆ ಮಹಿಳೆಯರು ಬರುತ್ತಿರುವುದರಿಂದ ಬಸ್ ನ ಬಾಗಿಲುಗಳು , ಕಿಟಕಿಗಳನ್ನು ಮುರಿಯುವುದು ಹಾಗೂ ಡ್ರೈವರ್ ಸೀಟಿನಲ್ಲಿ ಹತ್ತುವುದನ್ನು ನೋಡುತ್ತಿದ್ದೇವೆ. ಈ ಕಾರಣದಿಂದಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳೊಂದಿಗೆ ಸಭೆಯಲ್ಲಿ ಚರ್ಚೆ ಮಾಡಿ ಹೊಸ ಮಾರ್ಗ ಸೂಚಿಗಳನ್ನು ನಿಗದಿ ಮಾಡಲು ನಿರ್ಧರಿಸಿದ್ದಾರೆ.
ಖಾಸಗಿ ವಾಹಿನಿಗೆ ಸಚಿವರ ವರದಿ :
ಸರ್ಕಾರ ಜಾರಿಗೆ ತಂದ ಮಹಿಳಾ ಶಕ್ತಿ ಯೋಜನೆಯು ಉಚಿತ ಬಸ್ ಪ್ರಯಾಣವನ್ನು ಕಲ್ಪಿಸಿದೆ. ಈ ವಿಷಯದ ಕುರಿತಾಗಿ ಖಾಸಗಿ ವಾಹಿನಿಗೆ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಈ ರೀತಿ ಹೇಳಿದ್ದಾರೆ. ನಾಗರಿಕರು ಪ್ರಯಾಣ ಮಾಡಲಿ ಆದರೆ ಎಲ್ಲ ಜನರು ಒಂದೇ ಬಾರಿಗೆ ಪ್ರಯಾಣ ಮಾಡುವುದರಿಂದ ಜನದಟ್ಟಣೆ ಹೆಚ್ಚಾಗುತ್ತಿದೆ. ಈ ಶಕ್ತಿ ಯೋಜನೆಯು 5 ವರ್ಷ ಇರುವುದರಿಂದ ಯಾರಿಗೂ ಆತಂಕ ಬೇಡ ಆದ್ದರಿಂದ ಎಲ್ಲರೂ ಒಂದೇ ಬಾರಿಗೆ ಹೋಗದೆ ನಿಧಾನವಾಗಿ ಸ್ವಲ್ಪ ಸಮಯದವರೆಗೆ ಕಾಯಬೇಕು.
ಹೀಗೆ ಒಂದೇ ಬಾರಿ ಜನರು ಪ್ರಯಾಣ ಮಾಡುವುದರಿಂದ ಸಮಸ್ಯೆಯಾಗುತ್ತಿದೆ ಅಲ್ಲದೆ ಚಾಲಕರು ಹಾಗೂ ನಿರ್ವಾಹಕರಿಗೂ ಕಷ್ಟವಾಗುತ್ತಿದೆ. ಹೀಗಾಗಿ ಅಧಿಕಾರಿಗಳೊಂದಿಗೆ ಆನ್ಲೈನ್ ಬುಕಿಂಗ್ ಕಡ್ಡಾಯಗೊಳಿಸುವ ಬಗ್ಗೆ ಮಾತನಾಡಲಾಗಿದೆ. ಕೇವಲ ಮಾರ್ಗಸೂಚಿಯ ಇನ್ನೆರಡು ದಿನಗಳಲ್ಲಿ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷದ ಪ್ರಚೋದನೆ :
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವಿರೋಧಪಕ್ಷವಾಗಿ ಮಾರ್ಪಟ್ಟಿರುವ ಬಿಜೆಪಿ ಪಕ್ಷದ ನಾಯಕರು ಜನರಿಗೆ ದೇವಸ್ಥಾನ ಹಾಗೂ ಪ್ರವಾಸಿ ತಾಣಗಳಿಗೆ ಹೋಗಿ ಎಂಬ ಪ್ರಚೋದನೆ ನೀಡುತ್ತಿದ್ದಾರೆ. ಆದರೆ ಎಲ್ಲರೂ ಒಂದೇ ಬಾರಿಗೆ ಹೋಗುವುದು ಬೇಡ ಎಂದು ಮಹಿಳಾ ಪ್ರಯಾಣಿಕರಿಗೆ ಸಚಿವರು ಮನವಿ ಮಾಡುತ್ತಿದ್ದಾರೆ. ಹೆಚ್ಚು ಉತ್ಸಾಹದಿಂದ ಮಹಿಳೆಯರು ಪ್ರಾರಂಭದಲ್ಲಿ ಪ್ರಯಾಣ ಮಾಡಿದ್ದಾರೆ ಇದಾದ ಆರು ತಿಂಗಳ ನಂತರ ಪ್ರಯಾಣ ಮಾಡುತ್ತಾರೆ. ಅಧಿಕಾರಿಗಳು 15 ದಿನಗಳವರೆಗೆ ಕಾದು ನೋಡಬೇಕೆಂದು ಹೇಳಿದ್ದಾರೆ.
ಹೆಚ್ಚಾಗಿ ಏಕಕಾಲದಲ್ಲಿ ಬರುತ್ತಿರುವುದರಿಂದ ಜನರು ಪ್ರಯಾಣದಲ್ಲಿ ನಿಯಂತ್ರಣ ಮಾಡುವುದು ಕಷ್ಟವಾಗುತ್ತಿದೆ, ಆದ್ದರಿಂದ ಪ್ರಯಾಣಿಕರು ಬುಕಿಂಗ್ ಮಾಡುವುದರ ಮೂಲಕ ಪ್ರಯಾಣ ಮಾಡಿದಾಗ ಜನರಟ್ಟಣಿಯನ್ನು ನಿಯಂತ್ರಿಸಬಹುದು. ಒಂದು ವಾರಕ್ಕೆ ಹೋಗುವ ಜನ ನಾಲ್ಕು ವಾರದಲ್ಲಿ ಹೋದರೆ ಯಾರಿಗೂ ಸಹ ಸಮಸ್ಯೆಯಾಗುವುದಿಲ್ಲ. ಆದ್ದರಿಂದ ಹೊಸ ಮಾರ್ಗ ಸೂಚಿ ಮಾಡಲೇಬೇಕು ಇಲ್ಲವಾದರೆ ಈ ಸಮಸ್ಯೆಯನ್ನು ನಿಭಾಯಿಸುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನು ಓದಿ : I Phone ಕಂಪನಿ ವರ್ಷಕ್ಕೆ ಎಷ್ಟು ಲಾಭ ಗಳಿಸುತ್ತದೆ ಎಂದು ಕೇಳಿದರೆ ನೀವು ಆಶ್ಚರ್ಯ ಪಡುತ್ತೀರ!
ಪ್ರಯಾಣದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚು :
ರಾಜ್ಯ ಸರ್ಕಾರವು ಸ್ತ್ರೀಶಕ್ತಿ ಯೋಜನೆಯ ಅಡಿಯಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಿರುವುದರ ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣಿಸುತ್ತಿದ್ದು, ಪುರುಷರು ಕುಳಿತುಕೊಳ್ಳುವ ಜಾಗದಲ್ಲಿ ಮಹಿಳೆಯರು ಕುಳಿತುಕೊಳ್ಳುವುದರಿಂದ ಪುರುಷರಿಗೆ ತೊಂದರೆಯಾಗುತ್ತಿದೆ. ಇವರ ಈ ಪ್ರಯಾಣದಿಂದ ಶಾಲಾ ಕಾಲೇಜು ಮಕ್ಕಳಿಗೆ ಹಾಗೂ ಪುರುಷರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಹೊಸ ಮಾರ್ಗಸೂಚಿಯನ್ನು ತರಲು ಸರ್ಕಾರ ನಿರ್ಧರಿಸಿದೆ.
ಈ ಹೊಸ ಮಾರ್ಗಸೂಚಿಯಲ್ಲಿ ಅಂದರೆ ಪ್ರಯಾಣಿಸುವ ಮಹಿಳೆಯರಿಗೆ ಯಾವುದೇ ಟಿಕೆಟ್ ಶುಲ್ಕ ವಿಧಿಸುವುದಿಲ್ಲ ಅವರು ಉಚಿತವಾಗಿಯೇ ಶಿಸ್ತುಬದ್ಧವಾಗಿ ನಡೆದುಕೊಂಡು ಹೋಗ ಬೇಕೆಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಒಟ್ಟಾರೆ ಹೇಳಿರುವುದಾದರೆ ಸರ್ಕಾರ ಜಾರಿಗೆ ತಂದ ಉಚಿತ ಪ್ರಯಾಣವು ಸ್ತ್ರೀಯರಿಗೆ ಹೆಚ್ಚಿನ ಸೌಲಭ್ಯವನ್ನು ಒದಗಿಸಿದರು ಸಹ ಅಲ್ಲದೆ ಅವರಿಗೆ ಸಾಮಾಜಿಕವಾಗಿ ಸಮಾಜದಲ್ಲಿ ಬೆಂಬಲ ದೊರೆತರೂ ಸಹ, ಅವರ ಅತಿಯಾದ ವರ್ತನೆಯಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದ್ದು.
ಸರಿಯಾದ ಸಮಯಕ್ಕೆ ಶಾಲಾ-ಕಾಲೇಜು ಮಕ್ಕಳು ಶಾಲಾ ಕಾಲೇಜಿಗೆ ಹೋಗದಂತೆ ತೊಂದರೆಯಾಗುತ್ತಿದೆ. ಹೀಗಾಗಿ ಸರ್ಕಾರವು ಹೊಸ ಮಾರ್ಗಸೂಚಿಯನ್ನು ಹೊರಡಿಸಲೇಬೇಕು ಎಂಬುದು ನಮ್ಮ ಅಭಿಪ್ರಾಯವಾಗಿದೆ.
ಇತರೆ ವಿಷಯಗಳು :
ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ, ಹಿರಿಯ ನಾಗರಿಕರಿಗೆ ಉಚಿತ 3000 ರೂಪಾಯಿಯ ಯೋಜನೆ
ಉಚಿತ ಸೈಕಲ್ ಯೋಜನೆ: ಕಾರ್ಮಿಕ ವರ್ಗದವರಿಗೆ ಹಾಗೂ ಈ ಕಾರ್ಡ್ ಇದ್ದವರಿಗೆ ಮಾತ್ರ ಇದರ ಲಾಭ ಸಿಗುತ್ತೆ!