Rupay ಮತ್ತು Visa ಈ ಎರಡರಲ್ಲಿ ಯಾವ ಕಾರ್ಡ್ ಬಳಸಿದರೆ ಹೆಚ್ಚು ಉಪಯೋಗ
ನಮಸ್ಕಾರ ಸ್ನೇಹಿತರೇ, ಆಧುನಿಕ ಕಾಲದಲ್ಲಿ ಕ್ಯಾಶ್ ಲೆಸ್ ಹಾಗೂ ಆನ್ಲೈನ್ ಪಾವತಿ ಮಾಡುವಲ್ಲಿ ಹೆಚ್ಚಿನ ಜನರು ತೊಡಗಿದ್ದಾರೆ. ಅವುಗಳಲ್ಲಿ ಜನಸಾಮಾನ್ಯರು ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳ ಮೂಲಕ ದಿನ ನಿತ್ಯದ ವ್ಯವಹಾರಗಳನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಅಲ್ಲದೆ ಸುಲಭವಾಗಿ ಪ್ರತಿಯೊಬ್ಬರ ಹತ್ತಿರ ಬಹುತೇಕ ಕ್ರೆಡಿಟ್ ಕಾರ್ಡ್ ಲಭ್ಯವಿರುವುದನ್ನು ನೋಡಬಹುದು ಅದರಂತೆ ರುಪೆ ಕಾರ್ಡ್ ಹಾಗೂ ವೀಸಾ ಕಾರ್ಡ್ ಗಳು ಸಹ ಚಾಲ್ತಿಯಲ್ಲಿರುವುದನ್ನು ನೋಡಬಹುದು. ಈ ಎರಡು ಕಾರ್ಡ್ ಗಳ ಉಪಯುಕ್ತ ಮಾಹಿತಿಯ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ರೂಪೇ ಕಾರ್ಡ್ ಹಾಗೂ ವೀಸಾ ಕಾರ್ಡ್ ನಡುವಿನ ವ್ಯತ್ಯಾಸ :
ರುಪೇ ಕಾರ್ಡ್ ಹಾಗೂ ವೀಸಾ ಕಾರ್ಡ್ ಗಳನ್ನು ಜನತೆ ಈಗ ಹೆಚ್ಚು ಹೆಚ್ಚು ಬಳಸುತ್ತಿದ್ದು ಇದರಲ್ಲಿ ಯಾವ ಕಾರ್ಡ್ ಅನ್ನು ಹೆಚ್ಚು ಉಪಯೋಗಿಸಿದರೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ನೋಡಬಹುದು. ಅದರಂತೆ ರೂಪೆ ಕಾರ್ಡ್ ಹಾಗೂ ವೀಸಾ ಕಾರ್ಡ್ ನಡುವಿನ ವ್ಯತ್ಯಾಸ ಗಳು ಏನು ಎಂಬುದು ನೋಡುವುದಾದರೆ, ರೂಪೇ ಕಾರ್ಡ್ ಹಾಗೂ ವೀಸಾ ಕಾರ್ಡ್ ಈ ಎರಡು ಕಾರ್ಡ್ ಗಳು ವಿಭಿನ್ನ ರೀತಿಯ ಕಾರ್ಡ್ ಗಳಾಗಿವೆ.
ಭಾರತದೊಳಗಿನ ವ್ಯಾಪಾರ ವಹಿವಾಟನ್ನು ಮಾಡಲು ಮಾತ್ರ ರೂಪೇ ಕಾರ್ಡ್ ಅನ್ನು ಬಳಸಲಾಗುತ್ತದೆ. ಈ ರೂಪೇ ಕಾರ್ಡ್ ಒಂದು ಭಾರತೀಯ ದೇಶೀಯ ಕಾರ್ಡ್ ಆಗಿದ್ದು, ಇದನ್ನು ಭಾರತದ ಒಳಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ಬಳಸಬೇಕು.
ವೀಸಾ ಕಾರ್ಡ್ ಒಂದು ಅಂತರ್ ರಾಷ್ಟ್ರೀಯ ಕಾರ್ಡ್ ಆಗಿದ್ದು, ಇದನ್ನು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಗುವ ವ್ಯಾಪಾರ ವಹಿವಾಟನ್ನು ಮಾಡಲು ಈ ಕಾರ್ಡ್ ಹೆಚ್ಚು ಸಹಕಾರಿಯಾಗಿದೆ.
ಇದನ್ನು ಓದಿ : ಆಧಾರ್ ಅಪ್ಡೇಟ್ ಕಡ್ಡಾಯ.! ಈ ದಿನಾಂಕದೊಳಗೆ ಈ ಕೆಲಸ ಮಾಡದಿದ್ದರೆ ಆಧಾರ್ ಬಂದ್ ಗ್ಯಾರಂಟಿ
ರೂಪೇ ಕಾರ್ಡ್ ಹಾಗೂ ವೀಸಾ ಕಾರ್ಡ್ ಮ ಪ್ರಮುಖ ವ್ಯತ್ಯಾಸ ಎಂದರೆ ಕಾರ್ಯಾಚರಣೆಯ ವೆಚ್ಚದಲ್ಲಿ ನೋಡಬಹುದು.
ವೀಸಾ ಕಾರ್ಡ್ ಪಾವತಿ ಗೇಟ್ ವಾಯ್ ನಲ್ಲಿ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ರೂಪೇ ಕಾರ್ಡ್ ಗೆ ಕಡಿಮೆ ಶುಲ್ಕ ವನ್ನು ನೋಡಬಹುದು ಏಕೆಂದರೆ ಇದು ದೇಶದೊಳಗೆ ಬಳಸುವ ಒಂದು ಸಾಧನ ವಾಗಿರುವುದರಿಂದ ರೂಪೇ ಕಾರ್ಡ್ ಅನ್ನು ಹೆಚ್ಚು ಹೆಚ್ಚು ಬಳಸುವುದು ಒಂದು ದೊಡ್ಡ ಪ್ರಯೋಜನವಾಗಿದೆ.
ಬ್ಯಾಂಕ್ ಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿ ರೂಪೇ ಕಾರ್ಡ್ ಗಳು ಕಾರ್ಯನಿರ್ವಹಿಸಿದರೆ, ಸಾಗರೋತ್ತರ ಅಂದರೆ ಅಂತರ್ ರಾಷ್ಟ್ರೀಯ ಮಟ್ಟದ ಪಾವತಿ ನೆಟ್ವರ್ಕ್ ಗಳಿಗೆ ಸೇರಲು ಬಯಸಿದ ಬ್ಯಾಂಕ್ ಗಳು ತ್ರೈಮಾಸಿಕ ಶುಲ್ಕವನ್ನು ಪಾವತಿಸಬೇಕು. ಆದರೆ ರೂಪೇ ಕಾರ್ಡ್ ನಲ್ಲಿ ಇಂತಹ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ.
ಅಲ್ಲದೆ ಯಾವುದೇ ಬ್ಯಾಂಕ್ ಸಹ ಯಾವುದೇ ಶುಲ್ಕವಿಲ್ಲದೇ ರೂಪೇ ನೆಟ್ವರ್ಕ್ ಸೇರಿಕೊಳ್ಳಬಹುದು. ಆದರೆ ರೂಪೇ ಕಾರ್ಡ್ ಬಳಕೆಗೆ ಮಿತಿ ಗಳನ್ನು ಹೇರಲಾಗಿದೆ. ಏಕೆಂದರೆ ಇದು ಈ ವಹಿವಾಟಿಗೆ ಒಂದೇ ಒಂದು ಡೆಬಿಟ್ ಕಾರ್ಡ್ ಅನ್ನು ಒದಗಿಸಲಾಗಿದೆ.
ಸಾರ್ವಜನಿಕ ವಲಯದ ಬ್ಯಾಂಕ್ ಗಳು, ಕೆಲವು ಆಯ್ದ ಖಾಸಗಿ ಬ್ಯಾಂಕ್ ಗಳು ಹಾಗೂ ಸಹಕಾರಿ ಬ್ಯಾಂಕ್ ಗಳು ರೂಪೇ ಕಾರ್ಡ್ ಅನ್ನು ನೀಡಲಾಗುತ್ತಿದೆ ಎಂದು ತಿಳಿಯಬಹುದು. ಆದರೆ ಸಣ್ಣ ಬ್ಯಾಂಕ್ ಗಳಲ್ಲಿ ವೀಸಾ ಕಾರ್ಡ್ ಮ ನೆಟ್ವರ್ಕ್ ಅನ್ನು ಸೇರಿಸಿಕೊಳ್ಳುವುದಿಲ್ಲ.
ಒಟ್ಟಾರೆ ಅಂತರ್ ರಾಷ್ಟ್ರೀಯ ವಹಿವಾಟನ್ನು ಸಕ್ರಿಯಗೊಳಿಸಲು ವೀಸಾ ಅಥವಾ ಮಾಸ್ಟರ್ ಕಾರ್ಡ್ ಅನ್ನು ನೋಡಬಹುದಾಗಿದೆ.
ಇತರೆ ವಿಷಯಗಳು :
ಆಧಾರ್ ಅಪ್ಡೇಟ್ ಕಡ್ಡಾಯ.! ಈ ದಿನಾಂಕದೊಳಗೆ ಈ ಕೆಲಸ ಮಾಡದಿದ್ದರೆ ಆಧಾರ್ ಬಂದ್ ಗ್ಯಾರಂಟಿ