ರಾಜ್ಯಾದ್ಯಂತ ಬಂದ್ ಗೆ ಕರೆ ನೀಡಿದೆ; ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಬಲ
ನಮಸ್ಕಾರ ಸ್ನೇಹಿತರೇ, ಇಂದು ನಿಮಗೆ ತಿಳಿಸುವ ಮಹತ್ವದ ವಿಷಯ ಎಂದರೆ ಜೂನ್ 22 ರಂದು ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ರಾಜ್ಯದಾದ್ಯಂತ ಬಂದ್ ಗೆ ಕರೆ ನೀಡಿದ್ದು, ಯಾವ ಉದ್ದೇಶಕ್ಕಾಗಿ ಬಂದ್ ಗೆ ಕರೆ ನೀಡಿದೆ ಹಾಗೂ ಈ ಬಂದ್ ಗೆ ಯಾರೆಲ್ಲ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ನಿಮಗೆ ತಿಳಿಸಲು ಇಚ್ಛಿಸುತ್ತೇನೆ.
ಜೂನ್ 22 ಕರ್ನಾಟಕ ಬಂದ್ ಕರೆ ನೀಡಿದೆ :
ಕರ್ನಾಟಕ ಸರಕಾರ ಜಾರಿಗೆ ತಂದ ಹೊಸ ಯೋಜನೆಗಳಲ್ಲಿ ಉಚಿತ ಉದ್ಯುತ್ ಸಹ ಒಂದಾಗಿದ್ದು, ಈ ಉಚಿತ ವಿದ್ಯುತ್ ಯೋಜನೆಯಿಂದ ಈಗ ವಿದ್ಯುತ್ ಶುಲ್ಕವನ್ನು ಹೆಚ್ಚಿಸಲಾಗಿದೆ. ಹೆಚ್ಚಾಗಿರುವ ಈ ವಿದ್ಯುತ್ ಶುಲ್ಕವನ್ನು ಕರ್ನಾಟಕದ ವಾಣಿಜ್ಯ ಮತ್ತು ಕೈಗಾರಿಕ ಮಹಾಸಂಸ್ಥೆಯು ( ಕೆ ಸಿ ಸಿ & ಐ )ವಿರೋಧಿಸಿ ಕರ್ನಾಟಕ ರಾಜ್ಯದಾದ್ಯಂತ ಜೂನ್ 22 ರಂದು ಬಂದ್ ಗೆ ಕರೆ ನೀಡಲಾಗಿದೆ. ಸರ್ಕಾರಕ್ಕೆ ಈ ಹೊಸ ವಿದ್ಯುತ್ ಶುಲ್ಕದಲ್ಲಿ ಹೆಚ್ಚಳ ಮಾಡಿರುವ ಪರಿಣಾಮದ ಬಗ್ಗೆ ಎಷ್ಟೇ ತಿಳಿಸಲು ಪ್ರಯತ್ನಿಸಿದರು ಸರ್ಕಾರವು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ.
ಯಾವುದೇ ರೀತಿಯಿಂದಲೂ ಸರ್ಕಾರ ಸ್ಪಂದಿಸದ ಕಾರಣ ಕರ್ನಾಟಕ ರಾಜ್ಯದಾದ್ಯಂತ ಬಂದ್ ಮಾಡಲು ನಿರ್ಧರಿಸಿದ್ದೇವೆ ಎಂದು ಕೆ ಸಿ ಸಿ & ಐ ಒಕ್ಕೂಟ ತಿಳಿಸಿದೆ. ಕಾಂಗ್ರೆಸ್ ಸರ್ಕಾರಕ್ಕೆ ವಿದ್ಯುತ್ ದರವನ್ನು ಏರಿಕೆ ಮಾಡಿದ್ದರಿಂದ ಅದರಿಂದಾದ ಪರಿಣಾಮಗಳ ಬಗ್ಗೆ ಸಂದೇಶವನ್ನು ಕಳುಹಿಸಲು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಸಂಘದ ಎಲ್ಲಾ ಸದಸ್ಯರು ಮುಷ್ಕರದಲ್ಲಿ ಭಾಗವಹಿಸುವಂತೆ ಎಲ್ಲ ಸದಸ್ಯರಿಗೆ ಪತ್ರದಲ್ಲಿ ಮನವಿ ಮಾಡುವುದರ ಮೂಲಕ ಒತ್ತಾಯಿಸಲಾಗಿದೆ.
ಸದಸ್ಯರಿಗೆ ಒಕ್ಕೂಟದ ಮನವಿ ಪತ್ರ :
ಜೂನ್ 22 ರಂದು ಕರ್ನಾಟಕದಾದ್ಯಂತ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಸಂಘದ ಸದಸ್ಯರಿಗೆ ಒಂದು ಮನವಿ ಪತ್ರವನ್ನು ನೀಡಿದೆ. ಆ ಮನವಿ ಪತ್ರದಲ್ಲಿ ಎಲ್ಲಾ ವ್ಯಾಪಾರ ಸಂಸ್ಥಗಳು ಮತ್ತು ಕೈಗಾರಿಕೆಗಳಿಗೆ ತಮ್ಮ ಸಂಸ್ಥೆಗಳನ್ನು ಜೂನ್ 22 ರಂದು ಮುಚ್ಚಲು ವಿನಂತಿಸುತ್ತೇವೆ. ಎಸ್ಕಾಮ್ ತನ್ನ ವಿದ್ಯುತ್ ಶುಲ್ಕದಲ್ಲಿ ತೀರ ಅಸಹಜ ಬೆಲೆ ಏರಿಕೆ ಮಾಡಿದ್ದು ಈ ಬೆಲೆ ಏರಿಕೆಯನ್ನು ವಿರೋಧಿಸಿ ಮುಷರ ಹೂಡಲಾಗುತ್ತಿದೆ.
ಅಲ್ಲದೆ ವಿದ್ಯುತ್ ಶುಲ್ಕದಲ್ಲಿ ಹೆಚ್ಚಳ ಮಾಡಿದ್ದರಿಂದ ಗಂಭೀರ ಪರಿಣಾಮದ ಬಗ್ಗೆ ಕಳೆದ ಎಂಟು ದಿನಗಳಿಂದಲೂ ಸರ್ಕಾರಕ್ಕೆ ತಿಳಿಸುವ ಪ್ರಯತ್ನ ಮಾಡಿದ್ದೇವೆ ಆದರೆ ಸರ್ಕಾರ ಇದರ ಯಾವುದೇ ಅರಿವಿಲ್ಲದೆ ತನ್ನ ಪಾಡಿಗಿದೆ. ಅಲ್ಲದೆ ಅಲ್ಲದೆ ಇದರಿಂದ ಯಾವುದೇ ರೀತಿಯ ಪರಿಹಾರ ದೊರೆಯುತ್ತಿಲ್ಲದ ಕಾರಣ ಮುಷ್ಕರವನ್ನು ಮಾಡಲು ಮುಂದಾಗಿದ್ದೇವೆ ಆದ್ದರಿಂದ ಈ ಮುಷ್ಕರಕ್ಕೆ ಎಲ್ಲರೂ ಬೆಂಬಲ ಸೂಚಿಸಬೇಕು ಎಂದು ತಿಳಿಸುತ್ತೇವೆ.
ಇದನ್ನು ಓದಿ : ಉದ್ಯೋಗಿಗಳ ಭವಿಷ್ಯ ನಿಧಿಯನ್ನು33% ಹೆಚ್ಚಿಸಿದ ಸರ್ಕಾರ, ಇಪಿಎಸ್ ಪಿಂಚಣಿದಾರರಿಗೆ ಗುಡ್ ನ್ಯೂಸ್.!
ಇದರಿಂದಾದರು ಸರ್ಕಾರ ವಿದ್ಯುತ್ ಶುಲ್ಕವನ್ನು ಕಡಿಮೆ ಮಾಡಲಿ ಎಂಬುದರ ಬಗ್ಗೆ ಗಮನ ಹರಿಸಲಿ ಎಂದು ಒಕ್ಕೂಟ ಆಶಿಸುತ್ತಿದೆ. ಅದರಂತೆ ನಾವು ಜೂನ್ 22 ರಂದು ಸರ್ಕಾರದ ಗಮನ ಸೆಳೆಯಲು ಬಂದ್ ಗೆ ಕರೆ ನೀಡಿದ್ದೇವೆ. ಇದರಿಂದ ನಾವು ಪರಿಹವನ್ನು ಪಡೆದುಕೊಂಡು ಹಾಗೂ ವಿದ್ಯುತ್ ದರದಲ್ಲಿ ಕಡಿಮೆ ಮಾಡಲು ಸರ್ಕಾರ ನಮ್ಮ ಮುಷ್ಕರದ ಮನವಿಗೆ ಸ್ಪಂದಿಸುತ್ತದೆ ಎಂದು ಒಕ್ಕೂಟ ಭಾವಿಸುತ್ತದೆ ಎಂದು ಒಕ್ಕೂಟ ಸದಸ್ಯರಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಮೇ 12 ರಂದು ಕರ್ನಾಟಕ ರಾಜ್ಯದಲ್ಲಿ ಪ್ರತಿ ಯೂನಿಟ್ ವಿದ್ಯುತ್ ಗೆ 70 ಪೈಸೆ ಬೆಲೆ ಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಹೆಚ್ಚಿಸಿತ್ತು. ಆದರೆ ಕರ್ನಾಟಕ ರಾಜ್ಯದಲ್ಲಿ ಹೊಸ ಸರ್ಕರವಾದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ಖರೀದಿ ಮತ್ತು ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ( ಎಫ್ ಪಿ ಪಿ ಸಿ ಎ) ಇದರ ನೆಪದಲ್ಲಿ ಸರ್ಕಾರವು ಪ್ರತಿ ಯೂನಿಟ್ ಗೆ 51 ಪೈಸೆಯ ಮತ್ತೊಂದು ಹೆಚ್ಚಳವನ್ನು ಈಗಿರುವ ಸರ್ಕಾರ ಘೋಷಿಸಿದೆ.
ಈ ವಿದ್ಯುತ್ ಶುಲ್ಕವನ್ನು ಹೆಚ್ಚಳ ಮಾಡಿರುವುದರ ಬಗ್ಗೆ ಸಿದ್ದರಾಮಯ್ಯನವರು ಸುದ್ಧಿಗೋಷ್ಠಿಯಲ್ಲಿ ಈ ವಿದ್ಯುತ್ ಶುಲ್ಕದ ಹೆಚ್ಚಳದ ಬಗ್ಗೆ ಈ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿಲ್ಲ, ಈ ನಿರ್ಧಾರವನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ತೆಗೆದು ಕೊಂಡಿದೆ ಈ ವಿಚಾರದ ಬಗ್ಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರವು ಇದ್ದು ಅದು ಈ ವಿದ್ಯುತ್ ಶುಲ್ಕವನ್ನು ನಿರ್ಧರಿಸಿದೆ ಅಲ್ಲದೆ ಈ ಹಿಂದೆಯೇ ಈ ವಿದ್ಯುತ್ ಶುಲ್ಕದ ಹೆಚ್ಚಳದ ಬಗ್ಗೆ ನಿರ್ಧರಿಸಲಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.
ಒಟ್ಟಾಗಿ ಏನಾದರೂ ಸಹ ನಮ್ಮ ತೊಂದರೆಗಳನ್ನು ಬಗೆಹರಿಸುವುದು ನಮ್ಮ ಸರಕಾರವಾಗಿರುವುದರಿಂದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ರಾಜ್ಯ ಸರ್ಕಾರದ ವಿರುದ್ಧ ಮುಷ್ಕರ ಹೂಡಲು ಜೂನ್ 22 ರಂದು ಬಂದ್ ಗೆ ಕರೆ ನೀಡಿದ್ದಾರೆ.
ಈ ಬಂದ್ ಯಶಸ್ವಿಯಾಗಿ ನಡೆದರೆ ಇವರ ಬೇಡಿಕೆಯಾದ ವಿದ್ಯುತ್ ಶುಲ್ಕದ ದರವನ್ನು ಸರ್ಕಾರ ಕಡಿಮೆ ಮಾಡಬಹುದು. ಆದರೆ ಬಂದ್ ಮಾಡದಂತೆ ಸರ್ಕಾರವು ಈ ಮಹಾಸಂಸ್ಥೆ ಯ ತೊಂದರೆಗಳನ್ನು ಗಣನೆಗೆ ತೆಗೆದುಕೊಂಡು ಬಹಳ ಬೇಗನೆ ಪರಿಹಾರ ಸೂಚಿಸಬೇಕು ಎಂಬುದು ನಮ್ಮ ಅಭಿಪ್ರಾಯವಾಗಿದೆ.
ಇತರೆ ವಿಷಯಗಳು :
ಜಮೀನು ನೋಂದಣಿ ಮಾಡಿದರೆ ಆಸ್ತಿ ನಿಮ್ಮದಾಗುವುದಿಲ್ಲ! ಕಡ್ಡಾಯವಾಗಿ ಈ ಕೆಲಸ ಮಾಡಿದ್ರೆ ಮಾತ್ರ ನೀವು ಮಾಲೀಕರಾಗುತ್ತೀರಿ.
ಅಡುಗೆ ಎಣ್ಣೆಯ ಬೆಲೆಯಲ್ಲಿಇಳಿಕೆ ಸಂತಸಗೊಂಡ ಜನತೆ ಭಾರಿ ಪ್ರಮಾಣದ ಬೆಲೆಇಳಿಕೆ!!