ಕೆನರಾ ಬ್ಯಾಂಕ್ ನಿಂದ 50,000 ಉಚಿತ ಸ್ಕಾಲರ್ಶಿಪ್ ಇದರಿಂದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ
ನಮಸ್ಕಾರ ಸ್ನೇಹಿತರೆ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧಿಸಲು ಸಹಾಯಮಾಡುವ ವಿದ್ಯಾರ್ಥಿವೇತನವನ್ನು ಹುಡುಕುತ್ತಿದ್ದರೆ ಅವರಿಗೆ ಸಹಾಯ ಮಾಡಲು ಕೆನರಾ ಬ್ಯಾಂಕ್ ನೆರವಾಗುತ್ತಿದೆ. ಕೆನರಾ ಬ್ಯಾಂಕ್ ನೀಡುತ್ತಿರುವ ಈ ವಿದ್ಯಾರ್ಥಿ ವೇತನದ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ನೀವು ನೋಡಬಹುದು.
ಕೆನರಾ ಬ್ಯಾಂಕ್ ನಿಂದ ವಿದ್ಯಾರ್ಥಿ ವೇತನ :
ಕೆನರಾ ಬ್ಯಾಂಕ್ ಇಸ್ ಸ್ಕಾಲರ್ಶಿಪ್ 2022 ರಲ್ಲಿ ಪ್ರಾರಂಭಿಸಿತು. ಶೈಕ್ಷಣಿಕ ಕನಸುಗಳನ್ನು ವಿದ್ಯಾರ್ಥಿಗಳು ಸಾಧಿಸಲು ಕೆನರಾ ಬ್ಯಾಂಕ್, ಹಲವಾರು ವಿದ್ಯಾರ್ಥಿ ವೇತನಗಳನ್ನು ನೀಡುತ್ತಿದೆ. ಈ ವಿದ್ಯಾರ್ಥಿ ವೇತನವು ಪದವಿಯಿಂದ ಸ್ನಾತಕೋತ್ತರ ಹಂತದವರೆಗೂ ಎಲ್ಲರಿಗೂ ಸಿಗಲಿದೆ. ಅಲ್ಲದೆ ನೀವು ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಅಧ್ಯಯನ ಮಾಡಲು ಬಯಸಿದರೆ ಹಾಗೂ ಹೊಸ ಕೌಶಲ್ಯಗಳನ್ನು ಕಲಿಯಲು ಅಥವಾ ಆಧುನಿಕ ಜಗತ್ತಿನಲ್ಲಿ ಅಂದರೆ ವ್ಯಾಪಾರದ ಜಗತ್ತಿನಲ್ಲಿ ಅನುಭವ ಪಡೆಯಲು ಬಯಸುತ್ತಿದ್ದರೆ ಕೆನರಾ ಬ್ಯಾಂಕ್ ನಿಮಗೆ ರಕ್ಷಣೆಯನ್ನು ನೀಡುತ್ತದೆ. ಹಾಗಾಗಿ ಈ ಕೂಡಲೇ ಅರ್ಜಿ ಸಲ್ಲಿಸಿ, ನಿಮ್ಮ ಭವಿಷ್ಯವನ್ನು ರೂಪಿಸಲು ಮುಂದಾಗಿ.
ಕೆನರಾ ಬ್ಯಾಂಕ್ ಸ್ಕಾಲರ್ಶಿಪ್ ಪೋರ್ಟಲ್ :
2022 ರಲ್ಲಿ ಪ್ರಾರಂಭಿಸಿದ ಕೆನರಾ ಬ್ಯಾಂಕ್ ಸ್ಕಾಲರ್ಶಿಪ್ ಗೆ ಸಂಬಂಧಿಸಿದಂತೆ ಪ್ರತಿಯೊಂದು ಮಾಹಿತಿಯ ಅಗತ್ಯ ಮಾಹಿತಿಗಳನ್ನು ನೀವು ನೋಡಬಹುದು. ಹಾಗೂ ಅರ್ಜಿಯನ್ನು ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಇಲ್ಲಿ ತಿಳಿಸಲಾಗುತ್ತದೆ. ಕೆನರಾ ಬ್ಯಾಂಕ್ ಸ್ಕಾಲರ್ಶಿಪ್ 2022ರ ನೋಂದಣಿಯನ್ನು ವಿದ್ಯಾರ್ಥಿಗಳು ಕೆನರಾ ಬ್ಯಾಂಕ್ ಸ್ಕಾಲರ್ಶಿಪ್ ಪೋರ್ಟಲ್ ನಲ್ಲಿ ನಂದಾಯಿಸುವುದರ ಮೂಲಕ ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆಯಬಹುದು.
ಇದಕ್ಕಾಗಿಯೇ ಈ ಪೋರ್ಟಲ ಅನ್ನು ಕೆನರಾ ಬ್ಯಾಂಕ್ ಸ್ಥಾಪಿಸಿದೆ. ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಸ್ಕಾಲರ್ಶಿಪ್ ಪಡೆಯಲು ವಿದ್ಯಾರ್ಥಿಗಳು ಆನ್ಲೈನ್ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಇದಕ್ಕಾಗಿ ಕನಿಷ್ಠ 55 ಪರ್ಸೆಂಟ್ ಅಂಕಗಳನ್ನು ಅರ್ಜಿದಾರರು ಪರೀಕ್ಷೆಯಲ್ಲಿ ಹೊಂದಿರಬೇಕು. ಇದರಿಂದ ಅವರು ಐವತ್ತು ಸಾವಿರದವರೆಗೆ ಕೆನರಾ ಸ್ಕಾಲರ್ಶಿಪ್ ಅನ್ನು ಪಡೆಯುತ್ತಾರೆ.
ಕೆನರಾ ಬ್ಯಾಂಕ್ ವಿದ್ಯಾರ್ಥಿ ವೇತನಕ್ಕೆ ಕೊನೆಯ ದಿನಾಂಕ :
ಕೆನರಾ ಬ್ಯಾಂಕ್ ಸ್ಕಾಲರ್ಶಿಪ್ ಅನ್ನು ಪಡೆಯುವ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಗಾಗಿ ಅರ್ಜಿಯನ್ನು ಸಲ್ಲಿಸಲು ದಿನಾಂಕ 31 ಡಿಸೆಂಬರ್ ವರೆಗೆ ನೀಡಲಾಗಿದೆ. ವಿದ್ಯಾರ್ಥಿಗಳು ಕೊನೆಯ ದಿನಾಂಕದ ಮೊದಲೇ ಅರ್ಜಿಯನ್ನು ಸಲ್ಲಿಸಬೇಕು.
ಇದನ್ನು ಓದಿ : ಪೆಟ್ರೋಲ್ ಡೀಸೆಲ್ ವಾಹನಗಳು ದೇಶಾದ್ಯಂತ ಬ್ಯಾನ್ ! ಈ ವಾಹನಗಳು ಜುಲೈನಲ್ಲಿ ಬರಲಿದೆ
ಕೆನರಾ ಬ್ಯಾಂಕ್ ಸ್ಕಾಲರ್ಶಿಪ್ ಗಾಗಿ ಅಗತ್ಯವಿರುವ ದಾಖಲೆಗಳು :
ವಿದ್ಯಾರ್ಥಿಗಳು ಭಾರತೀಯ ನಾಗರಿಕನಾಗಿರಬೇಕು. ಅರ್ಜಿಯನ್ನು ಸಲ್ಲಿಸುವವರ ವಯಸ್ಸು 30 ವರ್ಷ ವಾದಕ್ಕಿಂತ ಕಡಿಮೆ ವಯಸ್ಸು ಹೊಂದಿರಬೇಕು. ಆನ್ಲೈನ್ ಮೂಲಕವೇ ವಿದ್ಯಾರ್ಥಿ ವೇತನವನ್ನು ಅನ್ವಯಿಸುವಾಗ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ವಿದ್ಯಾರ್ಥಿಗಳು ಸ್ನಾತಕೋತ್ತರ ಪದವೀಧರರಾಗಿರಬೇಕು. ಪಾಸ್ಪೋರ್ಟ್ ಸೈಜ್ನ ಭಾವಚಿತ್ರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ನಂಬರ್, ಇಮೇಲ್ ಐಡಿ ,ವಸತಿ ವಿಳಾಸ ಪ್ರಮಾಣ ಪತ್ರ, ಹತ್ತನೇ ತರಗತಿಯ, 12ನೇ ತರಗತಿಯ ಅಂಕಪಟ್ಟಿ ಮೊದಲಾದವು.
ಕೆನರಾ ಬ್ಯಾಂಕ್ ವಿದ್ಯಾರ್ಥಿ ವೇತನ ದ ಪೋರ್ಟಲ್ :
ಕೆನರಾ ಬ್ಯಾಂಕ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಸಲುವಾಗಿ ಒಂದು ಪೋರ್ಟಲ್ ಅನ್ನು ತೆರೆಯಲಾಗಿದೆ ಆ ಪೋರ್ಟಲ್ ಎಂದರೆ canarabank.in ಈ ಪೋರ್ಟಲ್ ನ ಮೂಲಕ ವಿದ್ಯಾರ್ಥಿಗಳು ಲಾಗಿನ್ ಆಗುವುದರ ಮೂಲಕ ತಮ್ಮ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ಕೆನರಾ ಬ್ಯಾಂಕ್ ನ ಈ ವಿದ್ಯಾರ್ಥಿ ವೇತನದ ಸೌಲಭ್ಯವು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವದೆಂದು ನನ್ನ ಅಭಿಪ್ರಾಯವಾಗಿದೆ. ಕೆನರಾ ಬ್ಯಾಂಕ್ ನ ಈ ಯೋಜನೆಯ ಬಗ್ಗೆ ನಿಮ್ಮ ಸ್ನೇಹಿತರಿಗೆ ತಿಳಿಸಿಕೊಡಿ. ಧನ್ಯವಾದಗಳು.
ಇತರೆ ವಿಷಯಗಳು :
ಏರ್ಟೆಲ್ ಕಂಪನಿಯು ತನ್ನ ಬಳಕೆದಾರರಿಗೆ 35 ದಿನಗಳ ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ
ಹೆಚ್ಚಾಗಲಿದೆ ನಂದಿನಿ ಹಾಲಿನ ದರ 5ರೂ ಕೆಎಂಎಫ್ ಅಧ್ಯಕ್ಷರು ಹೇಳೋದೇನು ..?