ಉಚಿತ ಪ್ರಯಾಣಕ್ಕೆ ಮೂಲ ದಾಖಲೆಗಳು ಕಡ್ಡಾಯವಲ್ಲ! ಸರ್ಕಾರದ ಕಡೆಯಿಂದ ರಾಜ್ಯದ ಜನರಿಗೆ ಗುಡ್ ನ್ಯೂಸ್

0

ನಮಸ್ಕಾರ… ಕರ್ನಾಟಕದ ಜನರಿಗೆ ಇಂದು ನಾವು ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದ್ದು ಈಗಾಗಲೇ ಈ ಸೇವೆಯನ್ನು ಪಡೆಯುತ್ತಿರುವ ಮಹಿಳೆಯರು ಬಸ್ಸಿನಲ್ಲಿ ಪ್ರಯಾಣವನ್ನು ಮಾಡುತ್ತಿದ್ದು ಗುರುತಿನ ಚೀಟಿ ತೋರಿಸುವ ಮೂಲಕ ಪ್ರಯಾಣಿಸಬೇಕಾಗಿದೆ ಆದರೆ ಮೂಲ ದಾಖಲೆಗಳು ಕಡ್ಡಾಯವಲ್ಲ ಎಂಬುದನ್ನು ಸರ್ಕಾರ ತಿಳಿಸಿದೆ ಈ ಲೇಖನದ ಬಗ್ಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

Free travel update for women

ಹೌದು ಮೂಲೆ ದಾಖಲೆಗಳನ್ನು ತೋರಿಸಿ ಪ್ರಯಾಣ ಮಾಡಬೇಕೆಂದು ಅನೇಕರು ತಿಳಿದುಕೊಂಡಿದ್ದಾರೆ ಆದರೆ ಮೂಲ ದಾಖಲೆಗಳು ಇಲ್ಲದೆ ಸಂಚಾರ ಮಾಡಬಹುದು ಹಾಗಿದ್ದರೆ ಮೂಲ ದಾಖಲೆಗಳನ್ನು ತೋರಿಸದೆ ಇದ್ದರೆ ನಾವು ಉಚಿತ ಪ್ರಯಾಣ ಮಾಡಬಹುದೇ ಎಂಬ ಗೊಂದಲಗಳು ಅನೇಕ ಮಹಿಳೆಯರಲ್ಲಿ ಇದ್ದು ಈ ಗೊಂದಲಗಳಿಗೆ ಸರ್ಕಾರದ ಅಧಿಸೂಚನೆಯಲ್ಲಿ ನೀಡಿರುವ ಮಾಹಿತಿಯನ್ನು ಒಮ್ಮೆ ನೋಡಿ ಪರಿಶೀಲಿಸಿ

ಮೂಲ ದಾಖಲೆಗಳು ಬೇಡ ನಕಲು ಪ್ರತಿ ಇದ್ರೆ ತೋರಿಸಿ

 ಕರ್ನಾಟಕ ರಾಜ್ಯದಲ್ಲಿ ಮಹಿಳೆಯರು ಸಂಚಾರ ಮಾಡಬೇಕಾದರೆ ಗುರುತಿನ ಚೀಟಿಯನ್ನು ತೋರಿಸುವುದು ಕಡ್ಡಾಯವಾಗಿರುತ್ತದೆ ಅದರಲ್ಲಿ ಅನೇಕ ರೀತಿಯ ದಾಖಲೆಗಳನ್ನು ಸಹ ತೋರಿಸಬಹುದು ಆಧಾರ ಕಾರ್ಡ್ ಪಾನ್ ಕಾರ್ಡ್ ಬಿಪಿಎಲ್ ಕಾರ್ಡ್ ಇತರ ದಾಖಲೆಗಳನ್ನು ತೋರಿಸಿ ಪ್ರಯಾಣಿಸಬಹುದು .ಆದರೆ ಮಹಿಳೆಯರು ಮೂಲ ದಾಖಲೆಗಳನ್ನು ತೋರಿಸಬೇಕೆಂದಿಲ್ಲ ನೀವು ನಕಲು ಪ್ರತಿಯನ್ನು ತೋರಿಸುವ ಮೂಲಕ ಬಸ್ಸಿನಲ್ಲಿ ಉಚಿತ ಪ್ರಯಾಣವನ್ನು ಮಾಡಬಹುದು. ಇದಕ್ಕೆ ಯಾವುದೇ ರೀತಿ ಅಡ್ಡಿಪಡಿಸುವಂತಿಲ್ಲ ನೀವು ನಿಮ್ಮ ಭಾವಚಿತ್ರವನ್ನು ಹೊಂದಿರುವಂತಹ ಆಧಾರ ಕಾರ್ಡ್ ಮತದಾರರ ಗುರುತಿನ ಚೀಟಿ ತೋರಿಸುವ ಮುಖಾಂತರ ಸಂಚರಿಸಬಹುದು.

ಡಿಜಿ ಲಾಕರ್ ನಲ್ಲಿರುವ ದಾಖಲೆಗಳನ್ನು ತೋರಿಸಿ ಸಂಚರಿಸಬಹುದು

ಹೌದು ಮಹಿಳೆಯರು ಸಂಚರಿಸುವ ಸಮಯದಲ್ಲಿ ಬಸ್ ನಿರ್ವಾಹಕರು,ಆಧಾರ ಕಾರ್ಡ್. ಅಥವಾ ಗುರುತಿನ ಚೀಟಿ. ವರ್ಜಿನಲ್ ಪ್ರತಿಯನ್ನು ತೋರಿಸಬೇಕೆಂದು ಕೇಳುತ್ತಾರೆ. ಆದರೆ ಇದಕ್ಕೆ ಮಹಿಳೆಯರು  ಮೂಲ ದಾಖಲೆ ಇಲ್ಲದ ಕಾರಣ ಟಿಕೆಟ್ ಅನ್ನು ಕರೆದಿಸುತ್ತಿದ್ದಾರೆ. ಆದರೆ ಇನ್ನೂ ಕೆಲವಡೆ ಮಹಿಳೆಯರನ್ನು ಬಸ್ಸಿನಿಂದ ಕೆಳಗೆ ಇಳಿಸಲಾಗಿದೆ ಈ ಎಲ್ಲ ಗೊಂದಲಗಳಿಗೆ ಸರ್ಕಾರವೇ ಅಧಿಸೂಚನೆಯನ್ನು ಹೊರಡಿಸುವ ಮುಖಾಂತರ ನಕಲು ಪ್ರತಿಯನ್ನು ತೋರಿಸುವ ಮುಖಾಂತರ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು. ಅಥವಾ ನಿಮ್ಮ ಮೊಬೈಲಿನಲ್ಲಿ ಡಿಜಿ ಲಾಕರಿನಲ್ಲಿರುವಂತಹ ನಿಮ್ಮ ಭಾವಚಿತ್ರ ಹೊಂದಿರುವ ಯಾವುದಾದರೂ ಒಂದು ದಾಖಲೆಯ ಜೆರಾಕ್ಸ್ ಪ್ರತಿಯನ್ನು ತೋರಿಸಿ ಉಚಿತ ಪ್ರಯಾಣ ಮಾಡಬಹುದು.

 ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಂಡು ಯಾವುದೇ ಮೂಲ ದಾಖಲೆಗಳು ಇಲ್ಲದೆಯೂ ನಕಲು ದಾಖಲೆಗಳನ್ನು ತೋರಿಸುವ ಮುಖಾಂತರ ರಾಜ್ಯದ ಯಾವುದೇ ಭಾಗದಲ್ಲಿ ಬೇಕಾದರೂ ಸಂಚರಿಸಬಹುದು. ಹಾಗೂ ಪ್ರತಿದಿನ ಎಲ್ಲಿ ಬೇಕಾದರೂ ಸಂಚರಿಸುವ ಅವಕಾಶವಿದ್ದು ಇಂತಿಷ್ಟೇ ಕಿಲೋಮೀಟರ್ ಎಂದು ನಿಗದಿ ಇಲ್ಲದ ಕಾರಣ ರಾಜ್ಯದಂತ ನೀವು ಸಂಚರಿಸಬಹುದು ಹಾಗಾಗಿ ನಕಲು ಪ್ರತಿಯನ್ನು ಇದ್ದರೆ ತೋರಿಸಿ ನಿರ್ವಾಹಕರು ನಿಮಗೆ ನಕಲು ಪ್ರತಿಯನ್ನು ನೋಡಿ ಟಿಕೆಟ್ ನೀಡಲು ಸರ್ಕಾರವು ಅವರಿಗೆ ಸೂಚನೆಯನ್ನು ಸಹ ನೀಡಿದೆ .

ಇದನ್ನು ಓದಿ :ದಿಢೀರನೆ 42% ರಿಂದ 50% ಗೆ ಸಂಬಳ ಹೆಚ್ಚಳ, ನೌಕರರಿಗೆ ಬಂಪರ್‌ ಗಿಫ್ಟ್‌ ಕೊಟ್ಟ ರಾಜ್ಯ ಸರ್ಕಾರ!

ಮಹಿಳೆಯರಿಗೆ ಉಚಿತ ಪ್ರಯಾಣ  ಮಾಡುವಾಗ ಈ ದಾಖಲೆಗಳನ್ನು ತೋರಿಸಿ

ನಿಮ್ಮ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ಅಥವಾ ರೇಷನ್ ಕಾರ್ಡ್ ತೋರಿಸಿ ಸಂಚರಿಸಿ ಮೂಲ ದಾಖಲೆಗಳನ್ನು ತೋರಿಸಬೇಕೆಂದು ಇಲ್ಲ ಹಾಗೂ ಮಹಿಳೆಯರಿಗೆ ರಾಜ್ಯದಲ್ಲಿ ಸಂಚರಿಸಲು ಅವಕಾಶ ಕೊಟ್ಟಿರುವುದರಿಂದ.

ಮೊದಲನೇ ದಿನವೇ ಸಾಕಷ್ಟು ಮಹಿಳೆಯರು ಪ್ರಯಾಣವನ್ನು ಮಾಡಿದ್ದು ಮಧ್ಯಾಹ್ನ 1:00 ಅಂದರೆ ಭಾನುವಾರ ಶಕ್ತಿ ಯೋಜನೆ ಅಧಿಕೃತವಾಗಿ ಚಾಲನೆಗೊಂಡು ಅರ್ಧ ದಿನದಲ್ಲಿಯೇ ಒಟ್ಟು 5,17, 023 ಮಹಿಳೆಯರು ಸಂಚರಿಸಿದ್ದಾರೆ. ಈ ಮೂಲಕ ಮಹಿಳೆಯರು ಯೋಜನೆಯ ಉಪಯೋಗ ಪಡೆದುಕೊಂಡು ಇದ್ದಾರೆ ಒಟ್ಟು ಮೊದಲನೇ ದಿನವೇ ಸರ್ಕಾರದ ಅಂದಾಜಿನ ಪ್ರಕಾರ 1.40 ಕೋಟಿ ಹಣವು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಹಣವನ್ನು ಸರ್ಕಾರವು ಸಾರಿಗೆ ನಿಗಮಗಳಿಗೆ ಹಣವನ್ನು ಮರುಪಾವತಿ ಮಾಡುತ್ತದೆ.

 ಒಟ್ಟಿನಲ್ಲಿ ಮೇಲ್ಕಂಡ ವಿಷಯಗಳನ್ನು ಗಮನಿಸಿದ ಹಾಗೆ ಮಹಿಳೆಯರು ಬಸ್ಸಿನಲ್ಲಿ ಸಂಚರಿಸುವಾಗ ಯಾವುದೇ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ತೋರಿಸಬೇಕೆಂದು ಇಲ್ಲ .ನಕಲು ಪ್ರತಿಯನ್ನು ತೋರಿಸುವ ಮುಖಾಂತರ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಸಂಚಾರ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.

ಇತರೆ ವಿಷಯಗಳು :

ವೃದ್ಧಾಪ್ಯದಲ್ಲಿ ಆದಾಯದ ಟೆನ್ಶನ್ ಬೇಡ! ಈ ಯೋಜನೆಯಲ್ಲಿ ಹಣ ಉಳಿಸಿ

ವಿವಾಹ ಸಮಯದಲ್ಲಿ ಸಿಗಲಿದೆ 25,000 ಅರುಂಧತಿ ಯೋಜನೆಯ ಮೂಲಕ ಉಚಿತವಾಗಿ ಕೂಡಲೇ ನೋಂದಾಯಿಸಿಕೊಳ್ಳಿ

Leave A Reply

Your email address will not be published.