ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಪ್ರಬಂಧ | Fundamental Rights and Duties in Kannada

0

ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಪ್ರಬಂಧ/ Fundamental Rights and Duties in Kannada

ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಪ್ರಬಂಧ

ಹಲೋ ಗೆಳೆಯರೇ, ಈ ಲೇಖನದಲ್ಲಿ ನಾವು ಸಂವಿಧಾನದಲ್ಲಿ ನೀಡಿರುವಂತ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ವಿವರಣೆಯನ್ನು ನೀಡಲಾಗಿದೆ. ನಮಗೆ ಎಷ್ಟು ಹಕ್ಕುಗಳಿವೆ ಎಷ್ಟು ಕರ್ತವ್ಯಗಳಿವೆ ಹಾಗೂ ಅವುಗಳಿಂದ ನಮಗೆ ಏನು ಪ್ರಯೋಜನ ಮತ್ತು ಅದನ್ನು ಹೇಗೆ ನಾವು ಬಳಸಿಕೊಳ್ಳಬೇಕು, ವಿಧಿಗಳ ಬಗ್ಗೆಯು ಇಲ್ಲಿ ತಿಳಿದುಕೊಳ್ಳಬಹುದು. ಇದು ಎಲ್ಲಾ ಭಾರತದ ಪ್ರಜೆಗಳು ನೋಡಲೆಬೇಕಾದ ವಿಷಯ.

ಪೀಠಿಕೆ:

Fundamental Rights and Duties in Kannada
Fundamental Rights and Duties in Kannada

ಒಬ್ಬ ವ್ಯಕ್ತಿಯ ನಿಜಾವಾದ ಬೆಳವಣಿಗೆಗೆ ಈ ಮೂಲಭೂತ ಹಕ್ಕುಗಳು ತುಂಬನೇ ಸಹಕಾರಿಯಾಗಿದೆ ಒಬ್ಬ ವ್ಯಕ್ತಿ ಸರ್ವತೋಮುಖ ಅಭಿವೃದ್ದಿಗೆ ಮತ್ತು ಸಮಾಜದಲ್ಲಿ ಸ್ವಾತಂತ್ರ್ಯವಾಗಿ ಬದುಕಲು ಸಹಕಾರಿ. ಈ ಮೂಲಭೂತ ಹಕ್ಕುಗಳನ್ನು ಭಾರತದ ಸಂವಿಧಾನದ ಭಾಗ III(ಲೇಖನ 12 ರಿಂದ 35) ರಲ್ಲಿ ವಿವರಿಸಲಾಗಿದೆ. ಸಂವಿಧಾನವು ತನ್ನದೆ ಅದ ಚೌಕಟ್ಟನ್ನು ಹೊಂದಿದೆ. ಇದರಂತೆಯೇ ಮೂಲಭೂತ ಕರ್ತವ್ಯಗಳು ಕೂಡ ಅದರೆ ವಿಪರ್ಯಾಸ ಎಂದರೆ ಜನರಿಗೆ ಹಕ್ಕುಗಳ ಬಗ್ಗೆ ತಿಳಿದಷ್ಟು ಕರ್ತವ್ಯಗಳ ಬಗ್ಗೆ ತಿಳಿದಿರುವುದಿಲ್ಲ.

ಭಾರತ ಸಂವಿಧಾನವು ಭಾರತದ ಜನರನ್ನು ಆಳುವ ಸರ್ಕಾರದ ಸಾಧನವಾಗಿದೆ. ಈ ಸಂವಿಧಾನವು 9 ಡಿಸೆಂಬರ್‌ 1947 ರಿಂದ 26 ನವೆಂಬರ್‌ 1949ರ ಮಧ್ಯಭಾರತದ ಸಂವಿಧಾನವು ರಚನೆಗೊಂಡು, 26 ಜನವರಿ 1950 ರಂದು ಜಾರಿಗೆ ಬಂದಿತು. ಅದ್ದರಿಂದಲೆ 26 ಜನವರಿನಯನ್ನು ಪ್ರತಿ ವರ್ಷ ಭಾರತದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಪ್ರಸ್ತುತ ದಿನದ ವರೆಗೆ ಭಾರತ ಸಂವಿಧಾನದಲ್ಲಿ 365 ವಿಧಿಗಳು, 22 ಭಾಗಗಳು, 8 ಅನುಚ್ಛೇದಗಳನ್ನು ಹಾಗೂ 118 ತಿದ್ದುಪಡಿಗಳನ್ನು ಹೊಂದಿದೆ.

ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಮತ್ತು ಲಿಖಿತ ಸಂವಿಧಾನ ಎಂದರೆ ಅದು ಕೇವಲ ಭಾರತ ಸಂವಿಧಾನವಾಗಿದೆ. ಭಾರತವು ಸಾಂವಿಧಾನಿಕ ಸಂಸದೀಯ ಸಮಾಜವಾದಿ ಜಾತ್ಯತೀತ ಗಣರಾಜ್ಯವಾಗಿದೆ.

ಸಂವಿಧಾನವು 3 ಅಂಗಗಳ ಮೂಲಕ ಕಾರ್ಯ ನಿರ್ವಹಿಸುತ್ತದೆ ಅವುಗಳೆಂದರೆ:

 1. ಶಾಸಕಾಂಗ
 2. ಕಾರ್ಯಾಂಗ
 3. ನ್ಯಾಯಾಂಗ

ಮೂಲಭೂತ ಹಕ್ಕುಗಳು:

ಭಾರತದ ಸಂವಿಧಾನವು ಭಾರತೀಯರಿಗೆ ಈ ಹಕ್ಕುಗಳನ್ನು ನೀಡುತ್ತದೆ.

ಭಾರತದ ಮೂಲಭೂತ ಹಕ್ಕುಗಳನ್ನು ಭಾರತದ “ಮ್ಯಾಗ್ನಾ ಕಾರ್ಟ್‌” ಎಂದು ಕರೆಯುತ್ತಾರೆ.

 1. ಸಮಾನತೆಯ ಹಕ್ಕು:

14.15,16,17,18ನೇ ಪರಿಚ್ಛೇದದಲ್ಲಿ ವಿವರಿಸಲಾಗಿದೆ.

ಈ ಹಕ್ಕು ಭಾರತದ ಎಲ್ಲಾ ಪ್ರಜೆಗಳು ಕಾನೂನಿನ ಮುಂದೆ ಸಮಾನರು. ಕಾನೂನಿಗಿಂತ ಯಾರು ದೊಡ್ಡವರಿಲ್ಲ ಹಾಗಾಗಿ ಕಾನೂನಿಗೆ ಎಲ್ಲಾರು ತಲೆಬಾಗಲೇಬೇಕು. ಕಾನೂನು ಯಾರಿಗೂ ಅಸಮಾನತೆಯನ್ನು ಮಾಡುವುದಿಲ್ಲ. 14 ನೆ ವಿಧಿಯು ಇಂಗ್ಲೆಂಡಿನ ರೂಲ್‌ ಆಫ್‌ ಲಾ ಎಂಬುದಕ್ಕೆ ಹತ್ತಿರವಾಗಿದೆ.

 • ವಿಧಿ 14- ಕಾನೂನಿನ ಮುಂದೆ ಎಲ್ಲರು ಸಮಾನರು.
 • ವಿಧಿ 15- ಜಾತಿ, ಲಿಂಗ, ಭಾಷೆ, ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸಿದೆ.
 • ವಿಧಿ16- ಯಾವುದೇ ಸಾರ್ವಜನಿಕ ಹುದ್ದೆಗಳಲ್ಲಿ ಸಮಾನ ಅವಕಾಶವನ್ನು ನೀಡಬೇಕು.
 • ವಿಧಿ 17- ಮೇಲು-ಕೀಳು ಎಂದು ನೋಡುವುದನ್ನು ನಿಷೇಧಿಸಿದೆ/ ಅಸ್ಪಶ್ಯತೆಯನ್ನು ನಿಷೇಧಿಸಿದೆ.
 • ವಿಧಿ 18- ಯಾವುದೇ ಸಾಮಾನ್ಯ ವ್ಯಕ್ತಿಯು ಬಿರುದು ಬಾವಲಿಗಳನ್ನು ಹೊಂದುವುದು ಅಪರಾಧವಾಗಿದೆ.( ಸರ್ಕಾರಿ ಮತ್ತು ಮಿಲಿಟರಿ ಬಿರುದುಗಳನ್ನು ಹೊರತುಪಡಿಸಿ).

2. ಸ್ವಾತಂತ್ಯ್ರದ ಹಕ್ಕು:

19,20,21,22ನೇ ಪರಿಚ್ಛೇದದಲ್ಲಿ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ವಿವರಿಸಲಾಗಿದೆ.

ಯಾವುದೇ ಒಬ್ಬ ವ್ಯಕ್ತಿಯು ತನ್ನ ತಾಯಿ ಗರ್ಭದಲ್ಲಿ ಭ್ರೂಣ ರೂಪ ಪಡೆದುಕೊಂಡಗಿನಿಂದ ಅವನಿಗೆ ಸ್ವಯಂ ಸಾವು ಬರುವವರೆಗು ಅವನು ಸ್ವಾತಂತ್ರ್ಯನಾಗಿರುತ್ತಾನೆ.

 • ವಿಧಿ19- ಈ ವಿಧಿಯಲ್ಲಿ 6 ಸ್ವಾತಂತ್ರ್ಯಗಳನ್ನು ನೀಡಿದೆ ಅವುಗಳೆಂದರೆ…
 1. ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ಯ್ರ.
 2. ಯಾವುದೇ ಶಸ್ತ್ರಗಳನ್ನು ಹೊಂದದೆ ಒಂದೆಡೆ ಸೇರುವ ಸ್ವಾತಂತ್ರ್ಯ.
 3. ಸಂಘ ಮತ್ತು ಸಂಸ್ಥೆಗಳನ್ನು ರಚಿಸಿ ಮುನ್ನಡೆಸುವ ಸ್ವಾತಂತ್ರ್ಯ.
 4. ಭಾರತದ ಎಲ್ಲಾ ಕಡೆಗಳಲ್ಲಿ ಸಂಚರಿಸುವ ಸ್ವಾತಂತ್ರ್ಯ.
 5. ಭಾರತದ ಯಾವುದೇ ಭಾಗದಲ್ಲಿ ವಾಸಿಸುವ ಅಥವಾ ನೆಲೆನಿಲ್ಲುವ ಸ್ವಾತಂತ್ರ್ಯ.
 6. ಜನಸಾಮಾನ್ಯರು ತಮಗೆ ಇಷ್ಟ ಬಂದ ವೃತ್ತಿಯನ್ನು ಅಥವಾ ವ್ಯವಹಾರ ನಡೆಸುವ ಸ್ವಾತಂತ್ರ್ಯ.

3. ಶೋಷಣೆಯ ವಿರುದ್ದದ ಹಕ್ಕು:

23,24 ನೇ ಪರಿಚ್ಛೇದಗಳಲ್ಲಿ ಶೋಷಣೆಯ ವಿರುದ್ಧವಾಗಿ ವಿವರಿಸಲಾಗಿದೆ.

 • ವಿಧಿ 23- ಯಾವುದೇ ಒಬ್ಬ ವ್ಯಕ್ತಿಯನ್ನು ಅನೈತಿಕ ಕಾರ್ಯಗಳಿಗೆ ಹಾಕುವುದು ಅಥವಾ ಮಾರಾಟ ಮಾಡುವುದನ್ನು ನಿಷೇಧಿಸಿದೆ.
 • ವಿಧಿ24- 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕಾರ್ಖಾನೆಗಳಲ್ಲಿ, ಗಣಿಗಳಲ್ಲಿ ಅಥವಾ ಕೂಲಿ ಕೆಲಸಕ್ಕೆ ಹಾಕುವುದನ್ನು ನಿಷೇಧಿಸಿದೆ.

4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು:

25,26,27,28ನೇ ಪರಿಚ್ಛೇಧಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ವಿವರಿಸಲಾಗಿದೆ.

 • ವಿಧಿ25- ಯಾವುದೇ ಧರ್ಮ ಸ್ವಿಕರಿಸುವ, ಪಾಲಿಸುವ ಹಕ್ಕು/ ಸ್ವಾತಂತ್ರ್ಯ.
 • ವಿಧಿ26- ಯಾವುದೇ ನಿರ್ದಿಷ್ಟ ಧರ್ಮವನ್ನು ಪ್ರಚಾರ ಮಾಡುವ ಮತ್ತು ತೆರಿಗೆ ನೀಡುವಿಕೆಯಿಂದ ಮುಕ್ತ.
 • ವಿಧಿ27- ಧಾರ್ಮಿಕ ವಿಷಯಗಳ ನಿರ್ವಹಣೆಯ ಸ್ವಾತಂತ್ರ್ಯ.
 • ವಿಧಿ28- ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಬೋದನೆ ಅಥವಾ ಸಭೆಗಳಿಗೆ ಹಾಜರಾಗುವಿಕೆ ಯಲ್ಲಿ ವಿನಾಯಿತಿ.

5. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು:

29,30ನೇ ಪರಿಚ್ಛೇದಗಳಲ್ಲಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕನ್ನು ವಿವರಿಸಲಾಗಿದೆ.

 • ವಿಧಿ29- ಅಲ್ಪಸಂಖ್ಯಾತರ ಭಾಷೆ, ಹಸ್ತಾಕ್ಷರ ಮತ್ತು ಸಂಸ್ಕೃತಿಯ ರಕ್ಷಣೆ. ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ಮುನ್ನಡೆಸುವ ಹಕ್ಕು.
 • ವಿಧಿ 30- ಸರ್ಕಾರಿ ಅಥವಾ ಸರ್ಕಾರದಿಂದ ಧನ ಸಹಾಯ ಪಡೆಯುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಧರ್ಮ, ಜನಾಂಗ, ಜಾತಿ, ಕೋಮು ಅಥವಾ ಭಾಷೆಯ ಅಧಾರದ ಮೇಲೆ ಪ್ರವೇಶ ನಿರಾಕರಿಸುವ ಮೇಲೆ ನಿಷೇಧದ ಹಕ್ಕು.

6. ಸಂವಿಧಾನಾತ್ಮಕ ಪರಿಹಾರಗಳ ಹಕ್ಕು:

32 ನೇ ವಿಧಿಯಲ್ಲಿ ಈ ಹಕ್ಕನ್ನು ವಿವರಿಸಲಾಗಿದೆ.

ವಿಧಿ32- ಈ ಹಕ್ಕು ಮೇಲಿನ ಎಲ್ಲಾ ಹಕ್ಕುಗಳ ರಕ್ಷಣೆಗೆ ಈ ಹಕ್ಕು ಸಹಯಾಕವಾಗಿದೆ.ಈ ಮೇಲಿನ ಯಾವ ಹಕ್ಕಿಗೆ ದಕ್ಕೆಯಾದರು ಈ ಹಕ್ಕಿನ ಮೂಲಕ ನ್ಯಾಯ ಪಡೆದು ಕೊಳ್ಳಬಹುದು. ಈ ಹಕ್ಕಿನ ಬಗ್ಗೆ ಡಾ.ಬಿ.ಅರ್.‌ಅಂಬೇಡ್ಕರ್‌ ಅವರು 32 ನೇ ವಿಧಿಯನ್ನು ಸಂವಿಧಾನದ ಆತ್ಮ ಮತ್ತು ಹೃದಯ ಎಂದು ಕರೆದಿದ್ದಾರೆ.

ಮೂಲಭೂತ ಕರ್ತವ್ಯಗಳು

ಈ ಮೂಲಭೂತ ಕರ್ತವ್ಯಗಳನ್ನು ನಂತರದ ದಿನಗಳಲ್ಲಿ ಹಕ್ಕುಗಳ ಜೊತೆಯಲ್ಲಿಯೆ ಸೇರಿಸಲಾಗಿದೆ. ಹಾಗಾಗಿ ಹಕ್ಕುಗಳ ಜೊತೆಯಾಗಿಯೆ ಕರ್ತವ್ಯವು ಬರುತ್ತದೆ ಎಂದು ಭಾವಿಸಲಾಗಿದೆ.

ಸಂವಿಧಾನದ ತಿದ್ದುಪಡಿ (42ನೇ) ಕಾಯ್ದೆ, 1976ರ ನಂತರ ಸಂವಿಧಾನದ 4ಎ ಪ್ರಜೆಗಳಿಗೆ 11 ಮೂಲಭೂತ ಕರ್ತವ್ಯವನ್ನು ನೀಡಲಾಗಿದೆ ಅವುಗಳೆಂದರೆ.

 1. ಸಂವಿಧಾನಕ್ಕೆ ಗೌರವ ತೋರಿಸುವುದು ಮತ್ತು ಅದರ ಆದರ್ಶಗಳನ್ನು ಪಾಲಿಸುವುದು, ರಾಷ್ಟ್ರ ಧ್ವಜ ಮತ್ತು ರಾಷ್ಟ್ರ ಗೀತೆಗೆ ಗೌರವ ತೋರಿಸುವುದು.
 2. ಸ್ವಾತಂತ್ರ್ಯಕ್ಕಾಗಿ ಹೋರಟ ನಡೆಸಿ ಪ್ರಾಣಬಿಟ್ಟ ಮಹಾನ್‌ ವ್ಯಕ್ತಿಗಳನ್ನು ನೆನಪಿಸಿಕೊಳ್ಳವುದು ಮತ್ತು ಅವರ ಆದರ್ಶಗಳನ್ನು ಪಾಲಿಸುವುದು.
 3. ಭಾರತದ ಏಕತೆ ಮತ್ತು ಸಮಗ್ರತೆಯನ್ನು ಹಾಗೂ ಸಾರ್ವಭೌಮತ್ವವನ್ನು ಎತ್ತಿಹಿಡಿಯುವುದು ಮತ್ತು ರಕ್ಷಿಸುವುದು.
 4. ದೇಶದ ರಕ್ಷಣೆಮಾಡುವುದು ಹಾಗೂ ದೇಶದ ರಕ್ಷಣೆಗಾಗಿ ಕರೆ ಕೊಟ್ಟಗ ದೇಶದ ರಕ್ಷಣೆಗೆ ಮುಂದಗುವುದು.
 5. ದೇಶದ ಯಾವುದೇ ಮಹಿಳೆಯರ ಗೌರವಕ್ಕೆ ದಕ್ಕೆಬರದಂತೆ ಕಾಪಡುವುದು. ಭಾರತದಲ್ಲಿ ಭಾಷೆ, ಧರ್ಮ ಮತ್ತು ಪ್ರಾದೇಶಿಕ, ವಿಭಾಗೀಯ ವಿಭಿನ್ನತೆಯನ್ನು ಮೀರಿ ಎಲ್ಲಾ ಜನರೊಂದಿಗೆ ಸಾಮರಸ್ಯ ಮುಡಿಸುವುದು.
 6. ಭಾರತದ ಸಂಸ್ಕೃತಿ, ಸಂಪ್ರದಾಯ, ಮೌಲ್ಯ ಮತ್ತು ಪರಂಪರೆಯನ್ನು ಕಾಪಡುವುದು.
 7. ಅರಣ್ಯ ಸಂಪತ್ತು, ನದಿ, ಸರೋವರಗಳನ್ನು ಕಾಪಡುವುದು, ವನ್ಯ ಜೀವಿಗಳನ್ನು ಸಂರಕ್ಷಿಸಿ ಅವುಗಳ ಮೇಲೆ ದಯೆ ಇಡುವುದು.
 8. ಮಾನವಿಯತೆ, ಉತ್ಸಹ, ಶಾಂತ ಸ್ವಭಾವವನ್ನು ಹೊಂದುವುದು.
 9. ಸಾರ್ವಜನಿಕ ಆಸ್ತಿ ಅಂದರೆ ಬಸ್ಸ್‌ ನಿಲ್ದಾಣ, ಆಸ್ಪತ್ರೆ, ಶಾಲೆಗಳನ್ನು ಕಾಪಡುವುದು.
 10. ದೇಶದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವುದು ಮತ್ತು ದೇಶದ ಖ್ಯಾತಿಯನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸುವುದು.
 11. 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಯ ಶಿಕ್ಷಣ ನೀಡುವುದು.

ಉಪಸಂಹಾರ:

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಅತಿ ಮುಖ್ಯ ಮತ್ತು ತುಂಬ ಅವಶ್ಯಕವಾಗಿದೆ. ಹೀಗೆ ಈವರೆಗೆ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಮೂಲಭೂತ ಹಕ್ಕು ಮನುಷ್ಯನ ಅತಿ ಮುಖ್ಯವಾದ ಸಾಧನವಾಗಿದೆ. ಅದರಂತೆ ಈ ಮೇಲೆ ಅದರ ಬಗ್ಗೆ ಅದರ ವಿಧಿಗಳ ಬಗ್ಗೆ ಹಾಗೂ ಕರ್ತವ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.

FAQ:

ಸಂವಿಧಾನದಲ್ಲಿ ಎಷ್ಟು ಹಕ್ಕುಗಳಿವೆ?

6

ಸಂವಿಧಾನದಲ್ಲಿ ಜನ ಸಾಮಾನ್ಯರು ನಿರ್ವಹಿಸ ಬೇಕಾದ ಕರ್ತವ್ಯಗಳು ಎಷ್ಟು?

11

ಸಂವಿಧಾನವು ಯಾವ ಅಂಗಗಳ ಮೂಲಕ ಕಾರ್ಯ ನಿರ್ವಹಿಸುತ್ತದೆ?

3 ಅಂಗಗಳು ಅವುಗಳೆಂದರೆ
1. ಶಾಸಕಾಂಗ
2. ಕಾರ್ಯಾಂಗ
3.ನ್ಯಾಯ್ಯಾಂಗ

ಸಂವಿಧಾನದ 14ನೇ ವಿಧಿ ಎನ್ನನ್ನು ಸೂಚಿಸುತ್ತದೆ?

ಕಾನೂನಿನ ಮುಂದೆ ಎಲ್ಲಾರು ಸಮಾನರು

ಇತರೆ ವಿಷಯಗಳು

ರೈತರ ಬಗ್ಗೆ ಪ್ರಬಂಧ

ನಿರುದ್ಯೋಗದ ಬಗ್ಗೆ ಪ್ರಬಂಧ

ಶಿವರಾಮ ಕಾರಂತ ಜೀವನ ಚರಿತ್ರೆ

ಕುವೆಂಪು ಜೀವನ ಚರಿತ್ರೆ 

Leave A Reply

Your email address will not be published.