ಕಳೆದು ಹೋದ ಮೊಬೈಲ್ ಅನ್ನು ಸುಲಭವಾಗಿ ಹುಡುಕಬಹುದು ನಿಮಗಿದು ಗೊತ್ತೇ?
ನಮಸ್ಕಾರ ಸ್ನೇಹಿತರೇ, ಇಂದು ನಿಮಗೆ ತಿಳಿಸುತ್ತೀರುವ ವಿಷಯವೇನೆಂದರೆ ನಿಮ್ಮ ಮೊಬೈಲ್ ಕಳೆದು ಹೋಗಿದ್ದರೆ ಅದನ್ನು ಸುಲಭವಾಗಿ ಹುಡುಕಬಹುದು. ಇದಕ್ಕೆ ಸಂಬಂಧಿಸಿದ ಮಾಹಿತಿಯ ಬಗ್ಗೆ ಇಂದು ನಿಮಗೆ ತಿಳಿಸುತ್ತಿದ್ದೇವೆ. ನಮ್ಮ ಮೊಬೈಲ್ ಫೋನ್ ಕಳೆದು ಹೋದಾಗ ಏನು ಮಾಡಬೇಕು, ಕಳೆದು ಹೋದ ಮೊಬೈಲ್ ಅನ್ನು ಹೇಗೆ ಟ್ರ್ಯಾಕ್ ಮಾಡುವುದು, ಅದರಲ್ಲಿರುವ ಮಾಹಿತಿಯನ್ನು ಯಾರಿಗೂ ತಿಳಿಯದಂತೆ ಹೇಗೆ ನಿರ್ಬಂಧಿಸುವುದು ಅಲ್ಲದೆ ಕಳೆದು ಹೋದ IMEI ಸಂಖ್ಯೆಯನ್ನು ಹೇಗೆ ಕಂಡುಹಿಡಿಯುವುದು ಹೇಗೆ ಹಲವಾರು ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿಸಲಾಗಿದೆ.
ಕಳೆದು ಹೋದ ಮೊಬೈಲ್ ಅನ್ನು ಹೇಗೆ ಹುಡುಕುವುದು :
ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ನಮ್ಮ ದಿನಚರಿ ಪ್ರಾರಂಭವಾಗುವುದು ಹಾಗೂ ಮುಕ್ತಾಯವಾಗುವುದು ಮೊಬೈಲ್ ಫೋನ್ ಇಂದಲೇ ಆಗಿದೆ. ಅಲ್ಲದೆ ನಮ್ಮ ದಿನಚರಿಯ ಹೆಚ್ಚಾಗಿ ಮೊಬೈಲ್ ಮೂಲಕ ಹುಡುಕುವುದು, ಸಂದೇಶಗಳನ್ನು ಓದುವುದು, ಮಾತನಾಡುವುದು ಹಾಗೂ ನಮಗೆ ಅಗತ್ಯವಾದ ಮಾಹಿತಿಗಳನ್ನು ಹೆಚ್ಚಾಗಿ ಮೊಬೈಲ್ ನಲ್ಲಿಯೇ ಹುಡುಕಲಾಗುತ್ತದೆ.
ಇಂತಹ ದಿನನಿತ್ಯದ ಜೀವನದಲ್ಲಿ ಉಪಯೋಗಿಸುವ ಮೊಬೈಲ್ ಅನ್ನು ನಾವು ಕಳೆದುಕೊಂಡರೆ ಅಥವಾ ಕಳ್ಳತನವಾದರೆ ನಮ್ಮ ಮನಸ್ಸಿನಲ್ಲಿ ಹಲವಾರು ಗೊಂದಲ ಹಾಗೂ ಸ್ವಲ್ಪ ಸಮಯ ನಮ್ಮ ಬುದ್ಧಿಯೂ ಸಹ ಕೆಲಸ ಮಾಡುವುದಿಲ್ಲ. ನಮ್ಮ ಜೀವನವನ್ನು ಸುಲಭ ಹಾಗೂ ಸೀಮಿತವಾಗಿರುವಂತೆ ಈ ಮೊಬೈಲ್ ಕಾರ್ಯ ನಿರ್ವಹಿಸುತ್ತಿದೆ. ಹಾಗಾಗಿ ಕಳೆದು ಹೋದ ಮೊಬೈಲ್ ಅನ್ನು ಸುಲಭವಾಗಿ ಹುಡುಕಲು ನಮ್ಮ ಸರ್ಕಾರವು ಒಂದು ಪೋರ್ಟಲ್ ಅನ್ನು ಪ್ರಾರಂಭಿಸಿದೆ ಅಥವಾ ರಚನೆ ಮಾಡಿದೆ. ಹೀಗೆ ಸರ್ಕಾರ ರಚನೆ ಮಾಡಿದ ಪೋರ್ಟಲ್ ಎಂದರೆ CEIR.
CEIR ಪೋರ್ಟಲ್ ನ ಸಂಪೂರ್ಣ ಮಾಹಿತಿ :
ಎಲ್ಲ ರಾಜ್ಯಗಳಲ್ಲೂ ಈಗ CEIR ಸೇವೆಯನ್ನು ಸರ್ಕಾರ ಒದಗಿಸಿದ್ದು ಕಳೆದು ಹೋದ ಮೊಬೈಲ್ ಅನ್ನು ಸುಲಭವಾಗಿ ಹುಡುಕಿಕೊಡಲು ಸಹಕಾರಿಯಾಗಿದೆ. ಕಳೆದು ಹೋದ ಮೊಬೈಲ್ ಅನ್ನು ಹುಡುಕಲು ಅಥವ ಕಳ್ಳತನವಾದ ಸ್ಮಾರ್ಟ್ ಫೋನ್ ಅನ್ನು ವರದಿ ಮಾಡಲು ಕಳೆದು ಹೋದ ಮೊಬೈಲ್ ನಲ್ಲಿ ಇದ್ದ ಸಿಮ್ ಕಾರ್ಡ್ ನ ಮೊಬೈಲ್ ನಂಬರ್ ಹಾಗೂ IMEI ನಂಬರ್ ಮತ್ತು ಮೊಬೈಲ್ ಖರೀದಿಯ ಇನ್ವಾಯ್ಸ್ ನಂತಹ ವಿವರಗಳು ಅಗತ್ಯವಾಗಿ ಬೇಕು.
ಮೊಬೈಲ್ ಅನ್ನು CEIR ಪೋರ್ಟಲ್ ಇಂದ ನಿರ್ಬಂಧಿಸುವ ಮೊದಲು ಪೊಲೀಸ್ ಠಾಣೆಗೆ ಹೋಗಿ ಮೊಬೈಲ್ ಕಳೆದು ಹೋದ ಬಗ್ಗೆ ವರದಿಯನ್ನು ಸಲ್ಲಿಸಬೇಕು. ನಂತರ ಅರ್ಜಿಯನ್ನು ಪೋರ್ಟಲ್ ನಲ್ಲಿ ಸಲ್ಲಿಸುವಾಗ ದೂರಿನ ವರದಿ ಪ್ರತಿಯನ್ನು ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ.
CEIR ಪೋರ್ಟಲ್ ನ ಹಂತಗಳು :
ಕೆಲವು ಹಂತಗಳ ಮೂಲಕ CEIR ಪೋರ್ಟಲ್ ನಲ್ಲಿ ಕಳೆದು ಹೋದ ಮೊಬೈಲ್ ಅನ್ನು ನಿರ್ಬಂಧಿಸಬಹುದು. ಅಂತಹ ಹಂತವನ್ನು ಈ ಕೆಳಗಿನಂತೆ ನೋಡಬಹುದು.
ಹಂತ 01 : ಮೊದಲು CEIR ಪೋರ್ಟಲ್ ನ ಅಧಿಕೃತ ವೆಬ್ಸೈಟ್ ಗೆ ಹೋಗುವ ಮೂಲಕ ಕಳೆದು ಹೋದ ಮೊಬೈಲ್ ಅನ್ನು ನಿರ್ಬಂಧಿಸಬೇಕು. CEIR ಪೋರ್ಟಲ್ ನ ಅಧಿಕೃತ ವೆಬ್ ಸೈಟ್ ಎಂದರೆ https://www.ceir.gov.in/Home/index.jsp
ಹಂತ 02 : ವೆಬ್ಸೈಟ್ ಓಪನ್ ಆದ ನಂತರ ಲಾಸ್ಟ್ ಮೊಬೈಲ್ ಸಂಖ್ಯೆ ಅಥವಾ ಬ್ಲಾಕ್ ಸ್ಟೋಲನ್ ಅನ್ನು ನಾವು ನೋಡಬಹುದು
ಹಂತ 03 : ಅಪ್ಲಿಕೇಶನ್ ಓಪನ್ ಅದ ನಂತರ ಅರ್ಜಿ ನಮೂನೆಯು ತೆರೆಯುತ್ತದೆ. ಅದರಲ್ಲಿ ಕೇಳಿದಂತ ಎಲ್ಲ ಮಾಹಿತಿಯನ್ನು ನಮೂದಿಸಬೇಕು.
ಹಂತ 04 : ಲಿಂಕ್ ನಲ್ಲಿ ಕೇಳಿದ ಮಾಹಿತಿ ಜೊತೆಗೆ ಪೊಲೀಸ್ ಠಾಣೆ ಯಲ್ಲಿ ನೀಡಲಾದ ದೂರಿ ಪ್ರತಿಯನ್ನು ಅಪ್ಲೋಡ್ ಮಾಡಬೇಕು.
ಹಂತ 05 : ನಂತರ ಮೊಬೈಲ್ ನಂಬರ್ ಅನ್ನು ನಮೂದಿಸಬೇಕು. ಇದಾದ ನಂತರ ನೀವು ಕ್ಯಾಪ್ಚ ಕೊಡ್ ಭರ್ತಿ ಮಾಡಿದ ನಂತರ OTP ನಂಬರ್ ಪಡೆದು ಕ್ಲಿಕ್ ಮಾಡಬೇಕು.
ಹಂತ 06 : OTP ನಮೂದಿಸಿದ ಕ್ಲಿಕ್ ಮಾಡಬೇಕು.
ಹಂತ 07 : ಸಲ್ಲಿಸು ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಕಳೆದು ಹೋದ ಮೊಬೈಲ್ ಅನ್ನು ನಿರ್ಬಂಧಿಸಲು ವಿನಂತಿಯನ್ನು ಸ್ವೀಕರಿಸಲಾಗುತ್ತದೆ.
ಇದಷ್ಟೇ ಅಲ್ಲದೇ ಈ ಪೋರ್ಟಲ್ ನಿಂದ ಕಳೆದು ಹೋದ ಮೊಬೈಲ್ ಅನ್ನು ಮರಳಿ ಪಡೆದ ನಂತರ ಈ ಪೋರ್ಟಲ್ ನ ಸಹಾಯದಿಂದಲೇ ದನ್ನು ನೀವು ಅನ್ಬ್ಲೋಕ್ ಕೂಡ ಮಾಡಬಹುದು. ಅಲ್ಲದೆ ಕಳೆದು ಹೋದ ಮೊಬೈಲ್ ನ ಸ್ಟೇಟಸ್ ಅನ್ನು ಕೂಡ ಚೆಕ್ ಮಾಡಬಹುದಾಗಿದೆ.
ಇತರೆ ವಿಷಯಗಳು:
ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಸುಳಿವು ಕೊಟ್ಟ ಸಿದ್ಧರಾಮಯ್ಯ!