ವಿಶ್ವ ಸಂತೋಷ ದಿನದ ಬಗ್ಗೆ ಮಾಹಿತಿ | Information about World Happiness Day in Kannada

0

ವಿಶ್ವ ಸಂತೋಷ ದಿನದ ಬಗ್ಗೆ ಮಾಹಿತಿ Information about World Happiness Day Vishwa Santhosha Dinada bagge Mahithi in Kannada

ವಿಶ್ವ ಸಂತೋಷ ದಿನದ ಬಗ್ಗೆ ಮಾಹಿತಿ

Information about World Happiness Day in Kannada
ವಿಶ್ವ ಸಂತೋಷ ದಿನದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ವಿಶ್ವ ಸಂತೋಷ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ವಿಶ್ವ ಸಂತೋಷ ದಿನ :

ವಿಶ್ವದಾದ್ಯಂತ ಜನರು ತಮ್ಮ ಜೀವನದಲ್ಲಿ ಸಂತೋಷದ ಮಹತ್ವವನ್ನು ಅರಿತುಕೊಳ್ಳುವ ಉದ್ದೇಶವನ್ನು ಈ ದಿನವನ್ನು ಹೊಂದಿದೆ. 2015 ರಲ್ಲಿ, ವಿಶ್ವಸಂಸ್ಥೆಯು ಜನರ ಜೀವನವನ್ನು ಸಂತೋಷದಿಂದ ಮಾಡಲು 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಪ್ರಾರಂಭಿಸಿತು. ಇದರ ಮುಖ್ಯ ಅಭಿವೃದ್ಧಿ ಗುರಿಗಳು ಬಡತನವನ್ನು ನಿರ್ಮೂಲನೆ ಮಾಡುವುದು, ಅಸಮಾನತೆಯನ್ನು ಕಡಿಮೆ ಮಾಡುವುದು ಮತ್ತು ನಮ್ಮ ಗ್ರಹವನ್ನು ರಕ್ಷಿಸುವುದು. ಸಂಯುಕ್ತ ರಾಷ್ಟ್ರ ಸಂಸ್ಥೆಯು ಎಲ್ಲಾ ವಯಸ್ಸಿನ ಜನರನ್ನು ಸಂತೋಷದ ಅಂತರರಾಷ್ಟ್ರೀಯ ದಿನವನ್ನು ಆಚರಿಸಲು ಸೇರಲು ಆಹ್ವಾನಿಸುತ್ತದೆ.

ನಗುತ್ತಾ ಇದ್ದರೆ ಆರೋಗ್ಯ ಚೆನ್ನಾಗಿರುತ್ತೆ, ಆಯಸ್ಸು ಹೆಚ್ಚಾಗುತ್ತೆ ಅಂತಾರೆ. ಆದರೆ ಹಾಗೇ ಇರುವುದಕ್ಕೆ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರಿಗೂ, ಪ್ರತಿದಿನ ಏನಾದರೊಂದು ಸಮಸ್ಯೆ ಇದ್ದೇ ಇರುತ್ತದೆ. ದಿನದ 24 ಗಂಟೆನೂ ಖುಷಿಯಾಗಿರಿ ಅಂದ್ರೆ ಯಾರಿಗೂ ಸಾಧ್ಯವಾಗುವುದಿಲ್ಲ. ಹೀಗಾಗಿ ಇರೋ ಸಮಸ್ಯೆಗಳ ಮಧ್ಯೆಯೂ ಪಾಸಿಟಿವ್ ಮೈಂಡ್ ಇಟ್ಕೊಂಡು ಖುಷಿಯಾಗಿರುವುದನ್ನು ಕಲಿತುಕೊಳ್ಳಬೇಕು. ನಿನ್ನೆಯದ್ದನ್ನು ಮರೆತು, ನಾಳಿನ ಬಗ್ಗೆ ಯೋಚಿಸದೆ ಇಂದು ಖುಷಿಯಿಂದ ಬದುಕಬೇಕು. ಹಾಗೆ ಮಾಡೋದು ಸ್ಪಲ್ಪ ಕಷ್ಟದ ವಿಚಾರವೇ ಆದರೂ ಹಾಗೇ ಇರುವುದು ಎಲ್ಲರಿಗೂ ಒಳಿತು.

ವಿಶ್ವ ಸಂತೋಷ ದಿನದ ಇತಿಹಾಸ :

ಸಾಮಾನ್ಯ ಸಭೆಯು, ಸಂತೋಷದ ಅನ್ವೇಷಣೆಯು ಮೂಲಭೂತ ಮಾನವ ಗುರಿಯಾಗಿದೆ ಎಂದು ಅರಿತಿದ್ದು, ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಸಂತೋಷ ಮತ್ತು ಎಲ್ಲಾ ಜನರ ಯೋಗಕ್ಷೇಮವನ್ನು ಉತ್ತೇಜಿಸುವ ಆರ್ಥಿಕ ಬೆಳವಣಿಗೆಗೆ ಹೆಚ್ಚು ಒಳಗೊಳ್ಳುವ, ಸಮಾನ ಮತ್ತು ಸಮತೋಲಿತ ವಿಧಾನದ ಅಗತ್ಯವನ್ನು ಗುರುತಿಸುತ್ತದೆ. ಮಾರ್ಚ್ 20 ಅನ್ನು ಅಂತರರಾಷ್ಟ್ರೀಯ ಸಂತೋಷದ ದಿನ ಎಂದು ಘೋಷಿಸಲು ನಿರ್ಧರಿಸುತ್ತದೆ, ಎಲ್ಲಾ ಸದಸ್ಯ ರಾಷ್ಟ್ರಗಳು, ಸಂಯುಕ್ತ ರಾಷ್ಟ್ರ ಸಂಸ್ಥೆ ವ್ಯವಸ್ಥೆಯ ಸಂಸ್ಥೆಗಳು ಮತ್ತು ಇತರ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಸಂಸ್ಥೆಗಳು, ಹಾಗೆಯೇ ಸರ್ಕಾರೇತರ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸೇರಿದಂತೆ ನಾಗರಿಕ ಸಮಾಜವನ್ನು ಅಂತರರಾಷ್ಟ್ರೀಯ ಸಂತೋಷದ ದಿನವನ್ನು ಶಿಕ್ಷಣ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಒಳಗೊಂಡಂತೆ ಸೂಕ್ತ ರೀತಿಯಲ್ಲಿ ಆಚರಿಸಲು ಆಹ್ವಾನಿಸುತ್ತದೆ.

  • ಒಟ್ಟು ರಾಷ್ಟ್ರೀಯ ಉತ್ಪನ್ನದ ರೀತಿಯಲ್ಲಿ ಒಟ್ಟು ರಾಷ್ಟ್ರೀಯ ಸಂತೋಷವನ್ನು ಅಳೆಯಲು ಮೊದಲು ಪ್ರಸ್ತಾಪ ಮಾಡಿದ ದೇಶ – ಭೂತಾನ್(1970ರ ದಶಕದಲ್ಲಿ)
  • ಒಟ್ಟು ರಾಷ್ಟ್ರೀಯ ಸಂತೋಷ ಪದ ಮೊದಲು ಬಳಸಿದವರು – ಭೂತಾನ್‌ ನ 4ನೇ ರಾಜ ಕಿಂಗ್‌ ಜಿಗ್ಮೆ ಸಿಂಗ್ಯೆ ವಾಂಗಚುಕ್‌
  • ವಿಶ್ವ ಸಂತೋಷ ದಿನವನ್ನು ಆಚರಿಸಲು ನಿರ್ಣಯ ಅಂಗೀಕರಿಸಿದ್ದು – 2012
  • ವಿಶ್ವ ಸಂತೋಷ ದಿನ ಆಚರಿಸಲು ಪ್ರಾರಂಭ – 2013
  • ವಿಶ್ವ ಸಂತೋಷ ದಿನದ ಧ್ಯೇಯವಾಕ್ಯ – “keep calm, stay wise and be kind”

ವಿಸ್ವ ಸಂತೋಷ ವರದಿ :

  • ಇದು 10ನೇ ವರ್ಷದ ವಿಶ್ವ ಸಂತೋಷದ ವರದಿ.
  • ಜಗತ್ತಿನ ಸಂತೋಷಮಯ ರಾಷ್ಟ್ರಗಳ ಪಟ್ಟಿ ಪ್ರಕಟವಾಗಿದ್ದು, ಸತತ 5ನೇ ವರ್ಷ ಮೊದಲನೇ ಸ್ಥಾನದಲ್ಲಿರುವ ಫಿನಲ್ಯಾಂಡ್‌ ಕೊನೆ ಸ್ಥಾನದಲ್ಲಿ ಅಫ್ಗಾನಿಸ್ತಾನ, ಇದೆ ಹಾಗೂ ಭಾರತ ಈ 146 ರಾಷ್ಟ್ರಗಳ ಪೈಕಿ 136ನೇ ಸ್ಥಾನ ಪಡೆದಿದೆ.
  • ಈ ಸೂಚ್ಯಾಂಕವು ಜನರ ಸಂತೋಷದ ಮೌಲ್ಯಮಾಪನ ಮತ್ತು ಆರ್ಥಿಕ ಮತ್ತು ಸಾಮಾಜಿಕ ಮಾಹಿತಿಯನ್ನು ಒಳಗೊಂಡಿರುತ್ತದೆ.
  • 136ನೇ ಸ್ಥಾನದಲ್ಲಿ ಭಾರತವಿದೆ.
  • 146 ರಾಷ್ಟ್ರಗಳ ಪೈಕಿ ಭಾರತ 136ನೇ ಸ್ಥಾನ ಪಡೆದಿದ್ದು, 10 ರೇಟಿಂಗ್‌ ಅಂಕಗಳ ಪೈಕಿ 3.8 ಅಂಕಗಳನ್ನು ಪಡೆದಿದೆ.
  • ಇದು ವಿಶ್ವಸಂಸ್ಥೆಯ ಸಹಭಾಗಿತ್ವದಲ್ಲಿ ಪ್ರಕಟವಾಗಿದ್ದು, ವಿಶ್ವಸಂಸ್ಥೆ ಈ ಸೂಚ್ಯಾಂಕವನ್ನುತಯಾರಿಸುವಾಗ ಪ್ರಜೆಯ ವೈಯಕ್ತಿಕ ಯೋಗಕ್ಷೇಮದ ಜೊತೆಗೆ, ಸಂತೋಷದ ಅಂಕ, ಆ ದೇಶದ ಜಿಡಿಪಿ, ಸಾಮಾಜಿಕ ಬೆಂಬಲ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಭ್ರಷ್ಚಾಚಾರದ ಮಟ್ಟವನ್ನು ಕೂಡ ಗಣನೆಗೆ ತೆಗೆದುಕೊಳ್ಳುತ್ತದೆ.
  • ಕಳೆದ ವರ್ಷ ಭಾರತ 3.819 ಅಂಕ ಪಡೆದು 139ನೇ ಸ್ಥಾನ ಪಡೆದಿತ್ತು.
  • ಪ್ರತಿ ವರ್ಷ ಮಾರ್ಚ್‌ 20ನ್ನು ಅಂತರಾಷ್ಟ್ರೀಯ ಸಂತೋಷ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯವಾಕ್ಯ – “Bulid Back Happier”

ಜಗತ್ತಿನ 10 ಸಂತೋಷದ ರಾಷ್ಟ್ರಗಳು :

  • ಫಿನಲ್ಯಾಂಡ್‌
  • ಡೆನ್ಮಾರ್ಕ್‌
  • ಐಸ್‌ ಲ್ಯಾಂಡ್‌
  • ಸ್ವಿಟ್ಜರ್‌ ಲ್ಯಾಂಡ್‌
  • ನೆದರ್‌ ಲ್ಯಾಂಡ್‌
  • ಲುಕ್ಸೆಮ್‌ ಬರ್ಗ್‌
  • ಸ್ವಿಡನ್‌
  • ನಾರ್ವೆ
  • ಇಸ್ರೇಲ್‌
  • ನ್ಯೂಜಿಲ್ಯಾಂಡ್

FAQ :

ವಿಶ್ವ ಸಂತೋಷ ವರದಿಯ ಪ್ರಕಾರ ಮೊದಲನೇ ಸ್ಥಾನ ಪಡೆದಿರುವ ದೇಶ ಯಾವುದು?

ಫಿನಲ್ಯಾಂಡ್

ವಿಶ್ವ ಸಂತೋಷ ವರದಿಯ ಪ್ರಕಾರ‌ ಭಾರತ ಎಷ್ಟನೇ ಸ್ಥಾನದಲ್ಲಿದೆ?

136ನೇ ಸ್ಥಾನ

ಇತರೆ ವಿಷಯಗಳು :

ಅಂತರ್ಜಾಲದ ಉಪಯೋಗಗಳು ಪ್ರಬಂಧ

ಪ್ರಾಮಾಣಿಕತೆಯ ಬಗ್ಗೆ ಪ್ರಬಂಧ

Leave A Reply

Your email address will not be published.