ವಿಶ್ವ ಜಲ ದಿನಾಚರಣೆಯ ಬಗ್ಗೆ ಮಾಹಿತಿ | Information about World Water Day in Kannada

0

ವಿಶ್ವ ಜಲ ದಿನಾಚರಣೆಯ ಬಗ್ಗೆ ಮಾಹಿತಿ Information about World Water Day Vishwa Jala Dinacharaneya bagge Mahithi in Kannada

ವಿಶ್ವ ಜಲ ದಿನಾಚರಣೆಯ ಬಗ್ಗೆ ಮಾಹಿತಿ

Information about World Water Day in Kannada
ವಿಶ್ವ ಜಲ ದಿನಾಚರಣೆಯ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ವಿಶ್ವ ಜಲ ದಿನಾಚರಣೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ವಿಶ್ವ ಜಲ ದಿನಾಚರಣೆ :

 • ಪ್ರತಿ ವರ್ಷ ಮಾರ್ಚ್‌ 22ನ್ನು ವಿಶ್ವ ದಿನಾಚರಣೆಯನ್ನಾಗಿ ಆಚರಿಸುತ್ತಾರೆ.
 • 2022 ವರ್ಷದ ಧ್ಯೇಯವಾಕ್ಯ – “Groundwater, Making The Invisible Visible”.
 • ಕಳೆದ ವರ್ಷ “Vlauing water” ಎಂಬ ಧ್ಯೇಯ ವಾಕ್ಯದಡಿಯಲ್ಲಿ ಈ ವರದಿಯನ್ನು ಈ ದಿನವನ್ನು ಆಚರಿಸಲಾಗಿತ್ತು.

ವಿಶ್ವ ಜಲ ದಿನಾಚರಣೆ ಹಿನ್ನಲೆ :

ಬ್ರೆಜಿಲ್‌ ನ ರಿಯೋ ಡಿ ಜನೈರೋದಲ್ಲಿ 1992ರಲ್ಲಿ ನಡೆದ ಪರಿಸರ ಮತ್ತು ಅಭಿವೃದ್ದಿ ಮೇಲಿನ ವಿಶ್ವ ರಾಷ್ಟ್ರಗಳ ಸಮ್ಮೇಳನದ ಫಲವಾಗಿ, ಹಾಗೂ 1992ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ 1993 ಮಾರ್ಚ್‌ 22ರಂದು ವಿಶ್ವ ಜಲ ದಿನವನ್ನು ಮೊದಲ ಬಾರಿಗೆ ಅಚರಿಸಲಾಯಿತು.

ವಿಶ್ವ ಜಲ ದಿನದ ಆಚರಣೆಗೆ ಸಂಬಂಧಿಸಿದ ಪ್ರಮುಖ ಅಂಶಗಳು :

 • 2021 ಮಾರ್ಚ್‌ 22 ರಂದು ಯುನೆಸ್ಕೋ, Toonzmedia ಸಹಭಾಗಿತ್ವದಲ್ಲಿ ಜಲ ಸಂರಕ್ಷಣಾ ಕಾರ್ಯಕ್ರಮಗಳು ಆಯೋಜನೆ ಆಗಿದ್ದವು.
 • 2020ರಲ್ಲಿ ಯುನೆಸ್ಕೋ ದೆಹಲಿಯಲ್ಲಿ H20ooohl ಎಂಬ ಅಭಿಯಾನವನ್ನು ಆರಂಭಿಸಿತ್ತು.
 • ಪ್ರಧಾನಿ ಮೋದಿಯವರು ಕೇಂದ್ರ ಜಲಶಕ್ತಿ ಸಚಿವಾಲಯದ ವತಿಯಿಂದ ರೂಪಿಸಿದ “Jal Shakti abhiyan : Catch the rain” ಎಂಬ ವೇದಿಕೆಯನ್ನು ಉದ್ಘಾಟಿಸಿದರು.
 • ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ Make in India ಯೋಜನೆ ಅಡಿಯಲ್ಲಿ ಮೈತ್ರಿ ಅಕ್ವಾಟಿಕ್‌ ನವೋದ್ಯಮ ವಿಶ್ವದ ಮೊದಲ ಮೊಬೈಲ್‌ ವಾಟರ್‌ ನ್ನು ಆರಂಭಿಸಿತ್ತು.
 • ಯುನಿಸೆಫ್‌ 2021 ಮಾರ್ಚ್‌ 22 ರಂದು Remagining wash : water security for all ಎಂಬ ಅಭಿಯಾನದ ಭಾಗವಾಗಿ ಒಂದು ವರದಿಯನ್ನು ಪ್ರಕಟಿಸಿದ್ದು.
 • ಪ್ರಸ್ತುತ 450 ಮಿಲಿಯನ್‌ ಗಿಂತ ಹೆಚ್ಚು ಮಕ್ಕಳು ಶುದ್ದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದೆ.
 • ಶುದ್ದ ಕುಡಿಯುವ ನೀರು ನೈರ್ಮಲ್ಯ ಮತ್ತು ಸ್ವಚ್ಛತೆ ಇದು ಸುಸ್ಥಿರ ಅಭಿವೃದ್ದಿಯ ಆರನೇ ಗುರಿಯಾಗಿದೆ.

ವಿಶ್ವ ಜಲ ಅಭಿವೃದ್ದಿ ವರದಿ :

 • ಪ್ರತಿ ವರ್ಷ ವಿಶ್ವಜಲ ಸಂಪನ್ಮೂಲ ಮಾಪನ ಕಾರ್ಯಕ್ರಮ ಸಂಸ್ಥೆ ವಿಶ್ವಜಲ ಅಭಿವೃದ್ದಿ ವರದಿಯನ್ನು ಪ್ರಕಟಿಸುತ್ತದೆ.
 • ಇದು ತನ್ನ ಮೊದಲ ವರದಿಯನ್ನು2003 ಮಾರ್ಚ್‌ 22 ರಂದು ಪ್ರಕಟಿಸಿತ್ತು.

ವಿಶ್ವಜಲ ವೇದಿಕೆ :

 • 1997 ರಿಂದ ಪ್ರತಿ 3 ವರ್ಷಗಳಿಗೊಮ್ಮೆ ವಿಶ್ವ ಜಲಮಂಡಳಿಯು ವಿಶ್ವ ಜಲ ವೇದಿಕೆಯನ್ನು ಸಂಘಟಿಸುತ್ತಿದೆ.
 • ಇದರ ಮೊದಲ ಸಭೆ 1997 ಮಾರ್ಚ್‌ 21ರಿಂದ 23ರವೆರೆಗೆ ಮೊರಾಕ್ಕೋದ ಮರಾಕೇಶನಲ್ಲಿ ನಡೆಯಿತು.
 • ಕಳೆದ ವರ್ಷ 2021ರಲ್ಲಿ ತನ್ನ ಒಂಬತ್ತನೇ ವಿಶ್ವಜಲ ವೇದಿಕೆಯನ್ನು ಸೆನೆಗಲ್‌ ನಲ್ಲಿ ನಡೆಸಲಾಯಿತು.

ನೀರು :

 • ಇದು ಎರಡು ಅನುಪಾತವನ್ನು ಹೈಡ್ರೋಜನ್‌ ಮತ್ತು 1 ಅನುಪಾತದಷ್ಟು ಆಕ್ಸಿಜನಗಳ ಒಗ್ಗೂಡುವಿಕೆಯಿಂದ ಉಂಟಾಗಿದೆ.
 • ಇದರ ರಾಸಾಯನಿಕ ಸೂತ್ರ H2O

ಹೆಚ್ಚುವರಿ ಮಾಹಿತಿ :

 • ಈ ವರ್ಷದ ವಿಶ್ವಜಲ ದಿನಾಚರಣೆ ಸಂದರ್ಭದಲ್ಲಿ ನೀರಿನ ಸಂರಕ್ಷಣೆಗೆ ಕೈಗೊಂಡ ಪ್ರಮುಖ ಕಾರ್ಯಕ್ರಮಗಳು :
 • ವಿಶ್ವದ ಒಟ್ಟಾರೆ ಶುದ್ದನೀರಿನ ಪೈಕಿ ಶೇಕಡ ನಾಲ್ಕರಷ್ಟು ನೀರು ಹೊಂದಿರುವ ಭಾರತ, ಜಾಗತಿಕ ಜನಸಂಖ್ಯೆಯ ಶೇಕಡ 16 ರಷ್ಟು ಜನಸಂಖ್ಯೆಯನ್ನು ಹೊಂದಿದೆ.
 • ಭೂಮಿಯ ಮೇಲೆ 220ಕೋಟಿಗಿಂತ ಹೆಚ್ಚು ಜನರು ಸುರಕ್ಷಿತ ನೀರಿನ ಪೂರೈಯಿಂದ ವಂಚಿತರಾಗಿದ್ದಾರೆ.
 • 2023 ರ ಒಳಗೆ ಯಮುನಾ ನದಿಯನ್ನು ಪೂರ್ತಿಯಾಗಿ ಶುದ್ದೀಕರಿಸಲಾಗಿದೆ.
 • ರಾಷ್ಟ್ರ ರಾಜಧಾನಿ ದೆಹಲಿ ವ್ಯಾಪ್ತಿಯಲ್ಲಿ ಹರಿಯುವ ಯಮುನಾ ನದಿಯನ್ನು ಶುದ್ದೀಕರಿಸಲಾಗುತ್ತದೆ.
 • ಇದರ ಜೊತೆಗೆ 2023ರ ಅಂತ್ಯದೊಳಗೆ ಮೀನಿನ ಸಂತಾನೋತ್ಪತ್ತಿಯನ್ನು ಆರಂಭಿಸಲಾಗುತ್ತದೆ.
 • 2025 ಕ್ಕೆ ಹೋಂದಿರುವ ಗುರಿಯನ್ನು 2023ಕ್ಕೆ ಪೂರ್ಣಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವರು ತಿಳಿಸಿದ್ದಾರೆ.
 • ಯಮುನಾ ನದಿಯ ದಡದ ಮೇಲೆ ಸ್ಥಾಪಿತವಾಗಿರುವ ಪ್ರಮುಖ ನಗರಗಳು : baghpat, Delhi, Noida, Mathura, Agra, Firozabad, Etawah, Kalpi, Hamirpur and Prayagraj
 • ಕೇಂದ್ರ ಸರ್ಕಾರದ ಜಲಜೀವನ್‌ ಮಿಷನ್‌ ಅಡಿಯಲ್ಲಿ ಹೆಚ್ಚುವರಿಯಾಗಿ ಗ್ರಾಮೀಣ ಪ್ರದೇಶದ ಆರುಕೋಟಿ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ.
 • ಇದನ್ನು 2019ರಲ್ಲಿ ಆರಂಭಿಸಲಾಗಿತ್ತು.
 • ಇಲ್ಲಿಯವರೆಗೆ ಒಂಬತ್ತು ಕೋಟಿಗೂ ಹೆಚ್ಚು ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ.

FAQ :

ವಿಶ್ವಜಲ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ?

ಮಾರ್ಚ್‌ 22

2022 ವಿಶ್ವಜಲ ದಿನಾಚರಣೆಯ ಥೀಮ್‌ ಏನು?

Groundwater, Making The Invisible Visible

ಇತರೆ ವಿಷಯಗಳು :

ಯುಗಾದಿ ಹಬ್ಬದ ಬಗ್ಗೆ ಮಾಹಿತಿ

ವಿಶ್ವ ಅರಣ್ಯ ದಿನಾಚರಣೆ ಬಗ್ಗೆ ಮಾಹಿತಿ

Leave A Reply

Your email address will not be published.