ವಿಶ್ವ ಕ್ಷಯರೋಗ ದಿನದ ಬಗ್ಗೆ ಮಾಹಿತಿ | Information about World Tuberculosis Day in Kannada

0

ವಿಶ್ವ ಕ್ಷಯರೋಗ ದಿನದ ಬಗ್ಗೆ ಮಾಹಿತಿ Information about World Tuberculosis Day Vishwa kshayaroga Dinada bagge Mahithi in Kannada

ವಿಶ್ವ ಕ್ಷಯರೋಗ ದಿನದ ಬಗ್ಗೆ ಮಾಹಿತಿ

Information about World Tuberculosis Day in Kannada
ವಿಶ್ವ ಕ್ಷಯರೋಗ ದಿನದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ವಿಶ್ವ ಕ್ಷಯರೋಗ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ವಿಶ್ವ ಕ್ಷಯರೋಗ ದಿನ :

 • ಪ್ರತಿ ವರ್ಷ ಮಾರ್ಚ್‌ 24 ನ್ನು ವಿಶ್ವ ಕ್ಷಯರೋಗ ದಿನವನ್ನು ಆಚರಿಸಲಾಗುವುದು.
 • 2022 ವರ್ಷದ ಧ್ಯೇಯವಾಕ್ಯ ” Invest to end TB : save lives”
 • ಕಳೆದ ವರ್ಷ the clock is ticking ಎಂಬ ಧ್ಯೇಯವಾಕ್ಯದಡಿಯಲ್ಲಿ ಆಚರಿಸಲಾಗಿತ್ತು.

ವಿಶ್ವ ಕ್ಷಯ ರೋಗದ ಆಚರಣೆಯ ಹಿನ್ನಲೆ :

 • ಜರ್ಮನಿಯ ವೈದ್ಯರಾದ ಡಾಕ್ಟರ್‌ ರಾಬರ್ಟ್‌ ಕೋಚ್‌ ವಿಜ್ಞಾನಿಯು ಕ್ಷಯ ರೋಗಕ್ಕೆ ಕಾರಣವಾದ mycobacterium tuberculosis ಎಂಬ ಬ್ಯಾಕ್ಟೀರಿಯಾವನ್ನು 1882 ಮಾರ್ಚ್‌ 24 ರಂದು ಕಂಡುಹಿಡಿದರು.
 • ಅವರಿಗೆ ಈ ಸಂಶೋಧನೆಗೆ 1905 ರಲ್ಲಿ ವೈಧ್ಯಕೀಯ ವಿಭಾಗದಲ್ಲಿ ನೊಬೆಲ್‌ ಪ್ರಶಸ್ತಿ ನೀಡಲಾಗಿತ್ತು.
 • ಈ ಸ್ಮರಣಾರ್ಥ ಪ್ರತಿವರ್ಷ ಮಾರ್ಚ್‌ 24 ಆಚರಣೆಗೆ ಆಯ್ದುಕೊಳ್ಳಲಾಗಿದೆ.
 • ವಿಶ್ವ ಆರೋಗ್ಯ ಸಂಸ್ಥೆಯು ನೆದರ್ಲ್ಯಾಂಡ್‌ ದೇಶದಲ್ಲಿ ಮೊದಲ ಬಾರಿಗೆ ಕ್ಷಯರೋಗ ದಿನವನ್ನು 1995 ರಲ್ಲಿ ಆಚರಿಸಿದ್ದು, 2022ರ ವೇಳೆಗೆ ಕ್ಷಯ ರೋಗಕ್ಕೆ ತುತ್ತಾದ ಜನಸಂಖ್ಯೆಯ ಪ್ರಮಾಣವನ್ನು ತಗ್ಗಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.

ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಸಂಸ್ಥೆ :

 • ಇದರ ಸ್ಥಾಪನೆ – 1959
 • ಕೇಂದ್ರ ಕಛೇರಿ – ಬೆಂಗಳೂರು
 • ಇದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತದೆ.
 • 2025ರ ವೇಳೆಗೆ ಭಾರತದಲ್ಲಿ ಸಂಪೂರ್ಣವಾಗಿ ಕ್ಷಯರೋಗದ ನಿಯಂತ್ರಣದ ಗುರಿ ಹಾಕಿಕೊಳ್ಳಲಾಗಿದೆ.
 • ವಿಶ್ವದಲ್ಲಿ 2030ರ ವೇಳೆಗೆ ಕ್ಷಯರೋಗ ನಿಯಂತ್ರಣ ಗುರಿ ಹಾಕಿಕೊಳ್ಳಲಾಗಿದೆ.
 • ಕೇಂದ್ರ ಸರ್ಕಾರ ಆಯುಷ್ಮಾನ್‌ ಭಾರತ್‌ ಮತ್ತು ಕ್ಷಯರೋಗ ಮುಕ್ತ ಭಾರತ ಅಭಿಯಾನದ ಮೂಲಕ ಕ್ಷಯ ರೋಗಿಗಳಿಗೆ ನೆರವು ಮತ್ತು ಭಾರತೀಯರ ಆರೋಗ್ಯ ಗುಣಮಟ್ಟ ಸುಧಾರಣೆಗೆ ಕೈಗೊಳ್ಳುತ್ತಿದೆ.
 • TB arogya Sathi application ಇದು ಭಾರತದಲ್ಲಿ ಕ್ಷಯರೋಗಕ್ಕೆ ಸಂಬಂಧಿಸಿದಂತೆ ಒಂದೇ ವೇದಿಕೆಯಲ್ಲಿ ಮಾಹಿತಿ ನೀಡುವ ಅಪ್ಲಿಕೇಷನ್‌ ಇದಾಗಿದೆ.

ಕ್ಷಯರೋಗ ನಿವಾರಣೆಗೆ BCG ಚುಚ್ಚುಮದ್ದು :

 • 1921 ರಲ್ಲಿ ಮೊದಲ ಬಾರಿಗೆ BCG ಚುಚ್ಚುಮದ್ದನ್ನು ಕ್ಷಯರೋಗ ನಿಯಂತ್ರಣಕ್ಕೆ ಬಳಸಲಾಯಿತು.
 • 1948 ರಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ಈ ಚುಚ್ಚುಮದ್ದು ನೀಡಲು ಆರಂಭಿಸಲಾಯಿತು.
 • DOTS : directly observed treatment short course ಕ್ಷಯರೋಗ ನಿವಾರಣಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಚಿಕಿತ್ಸಾ ಕ್ರಮಗಳಲ್ಲಿ ಇದು ಒಂದು.

ಕ್ಷಯರೋಗದ ಬಗ್ಗೆ ಮಾಹಿತಿ :

 • ಇದು “ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್”‌ ಎಂಬ ಬ್ಯಾಕ್ಟೀರಿಯಾದಿಂದ ಹರಡುವ ಒಂದು ಸೋಂಕು ರೋಗ.
 • ಕ್ಷಯರೋಗವಿರುವ ಒಬ್ಬ ವ್ಯಕ್ತಿ ಚಿಕಿತ್ಸೆ ಪಡೆಯದೇ ಇದ್ದರೆ ಒಂದು ವರ್ಷದಲ್ಲಿ ಕನಿಷ್ಟ 10ರಿಂದ 15 ಜನರಿಗೆ ಕ್ಷಯದ ಸೋಂಕನ್ನು ಹರಡುತ್ತಾನೆ.

ರೋಗದ ಲಕ್ಷಣಗಳು :

 • ತೂಕ ನಷ್ಟ
 • ಹಸಿವೆ ಇಲ್ಲ
 • ಮೂರು ವಾರದರೂ ಕೆಮ್ಮು ಇರುವುದು
 • ಕಫದಲ್ಲಿ ರಕ್ತ ಬರುವುದು
 • ರಾತ್ರಿ ವೇಳೆ ಜ್ವರ ಬರುವುದು
 • ರೋಗದ ಹೆಚ್ಚಳ :
 • ಪ್ರಾಥಮಿಕ ಸೊಂಕು ರಕ್ತದ ಅಥವ ಲಿಂಫಟಿಕ್ ಗ್ರಂಥಿಯ ಮೂಲಕ ಹರಡಬಹುದು. ಸಾಕಷ್ಟು ನಿರೋಧತೆ ಇದ್ದರೆ ಈ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ವ್ಯಕ್ತಿಗೆ ನಿರೋಧತೆಯ ಕೊರತೆ ಇದ್ದರೆ ಅವು ದೇಹದ ಒಂದು ಭಾಗದಲಿರುವುದು ರೋಗ ಹೊರ ಹೊಮ್ಮುವವರೆಗೆ ಆ ಭಾಗದಲ್ಲಿ ವರ್ಷಗಳವರೆಗೆ ಗುಪ್ತವಾಗಿರುವುದು
 • ಬ್ಯಾಕ್ಟೀರಿಯಾ ಬಾಯಿಯ ಮೂಲಕ ಮತ್ತು ಉಸಿರಾಟದ ಮೂಲಕ ದೇಹ ಸೇರಬಹುದು. ಅಲ್ಲಿಂದ ಲಿಂಫ್ ನೋಡ್ ಗಳಿಗೆ ಮತ್ತು ಜೀರ್ಣನಾಳಗಳಲ್ಲಿ ಸೇರುವವು.
 • ಸೊಂಕಿತ ಪ್ರಾಣಿಗಳ ಹಾಲಿನಿಂದಲೂ ಮಾನವರಿಗೆ ಸೊಂಕು ತಗುಲಬಹುದು.

ಸೋಂಕು ತಗುಲಬಹುದಾದ ಸ್ಥಳಗಳು :

 • ಲಿಂಫ್ ಗ್ರಂಥಿಗಳು ಮತ್ತು ಕತ್ತಿನ ಸುತ್ತಲಿರುವರುವ ಅಬಸ್ಕೆಸಸ್.
 • ಮೂಳೆಗಳು ಮತ್ತು ಕೀಲುಗಳು, ಅರ್ಧಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಬೆನ್ನು ಮೂಳೆಯ ಮೇಲೆ ಪರಿಣಾಮವಾಗುವುದು.
 • ಜಿನಿಟೊ ಯುರಿನರಿ ನಾಳ – ಮಹಿಳೆಯರಲ್ಲಿ ಗರ್ಭಾಶಯ ರೋಗಗಳು ಸಾಮಾನ್ಯವಾಗಿ ಕಾಣಿಸಿಕೊಂಡು ಗಂಡಸರಲ್ಲಿ ಎಪಿಡಿಡೈಮಿಸ್ ತೊಂದರೆ ಯಾಗುವುದು. ಇಬ್ಬರಲ್ಲಿ ರೀನಲ್, ಯುರೆಟರಿಕ್ ಮತ್ತು ಬ್ಲಾಡರ್ ತೊಂದರೆ ಬರಬಹುದು..
 • ಹೊಟ್ಟೆ – ಬೊವೆಲ್ ಮತ್ತು ಪೆರಿಟೊನಿಯಂ ಮೇಲೆ ಪರಿಣಾಮ ಬೀರುವುದು.
 • ಮೆನಂಜೈಟಿಸ್ – ಸಮಯದಲ್ಲಿ ಚಿಕೆತ್ಸೆ ಪಡೆಯದಿದ್ದರೆ ಪ್ರಾಣಾಪಾಯಕಾರಿ
 • ಪೆರಿಕಾರ್ಡಿಯಮ್- ಹೃದಯದ ಸಂಪೀಡಕವಾಗಿಸುವುದು.
 • ಚರ್ಮ – ಅನೇಕ ರೂಪದಲ್ಲಿ ಕಂಡುಬರುವುದು.

FAQ :

ವಿಶ್ವ ಕ್ಷಯರೋಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಮಾರ್ಚ್‌ 24

ಕ್ಷಯರೋಗಕ್ಕೆ ಕಾರಣವಾಗಿರುವ ಬ್ಯಾಕ್ಟೀರಿಯಾ ಯಾವುದು?

“ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್”‌

ಇತರೆ ವಿಷಯಗಳು :

ವಿಶ್ವ ಸಂತೋಷ ದಿನದ ಬಗ್ಗೆ ಮಾಹಿತಿ

ವಿಶ್ವ ಅರಣ್ಯ ದಿನಾಚರಣೆ ಬಗ್ಗೆ ಮಾಹಿತಿ

Leave A Reply

Your email address will not be published.