4 ವರ್ಷದ ಬದಲಿಗೆ 3 ವರ್ಷ ಪದವಿ ವ್ಯಾಸಂಗ! NEP ಶಿಕ್ಷಣ ನೀತಿ ರದ್ದು ಮಾಡಿದ ಕಾಂಗ್ರೆಸ್ ಸರ್ಕಾರ

0

ನಮಸ್ಕಾರ ಸ್ನೇಹಿತರೆ ನಿಮಗೀಗ ತಿಳಿಸುತ್ತಿರುವುದು ಮೊನ್ನೆ ಶುಕ್ರವಾರ ನಡೆದ ಬಜೆಟ್ ಆಗಿದೆವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರು ಯಾರಿಗೆ ಹಾಗೂ ಯಾವ ಕ್ಷೇತ್ರಕ್ಕೆ ಎಷ್ಟು ಎಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ ಎಂಬುದರ ಬಗ್ಗೆ ನಿಮಗೀಗ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುತ್ತದೆ. ರಾಜ್ಯ ಸರ್ಕಾರವು ಮಂಡಿಸಿದಂತಹ ಬಜೆಟ್ ನಲ್ಲಿ ಎನ್ ಇ ಪಿ ಶಿಕ್ಷಣ ನೀತಿಯನ್ನು ರದ್ದುಗೊಳಿಸಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಹೊಸ ಕರ್ನಾಟಕ ರಾಜ್ಯ ಸರ್ಕಾರವು ಮುಂದಾಗಿದೆ.

New Education Policy Karnataka
New Education Policy Karnataka

ಅದರಂತೆ ಬಜೆಟ್ ನಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿದಂತಹ ಗ್ಯಾರಂಟಿ ಯೋಜನೆಗಳಿಗೂ ಸಹ ಹಣವನ್ನು ಬಿಡುಗಡೆ ಮಾಡಲಾಗಿದ್ದು ಇಂದಿರಾ ಕ್ಯಾಂಟೀನ್ ಗೆ ಹೆಚ್ಚು ಅನುದಾನ ಸಿಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗೆ ಎಲ್ಲಾ ವಿಷಯಗಳ ಬಗ್ಗೆ ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಎಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ ಎಂಬುದರ ಬಗ್ಗೆ ನಿಮಗೆ ಈ ಮೊದಲೇ ಮಾಹಿತಿಯನ್ನು ನೀಡಲಾಗಿತ್ತು. ಅದರಂತೆ ಈಗ ಹೊಸ ಶಿಕ್ಷಣ ನೀತಿಯ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುತ್ತದೆ.

ಕರ್ನಾಟಕ ರಾಜ್ಯ ಬಜೆಟ್ 2023 :

ಕರ್ನಾಟಕದ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಅವರು ಮನ್ನಿ ಶುಕ್ರವಾರ ಮಂಡಿಸಿದ ಬಜೆಟ್ ಕಾಂಗ್ರೆಸ್ ಸರ್ಕಾರದ ಮೊದಲ ರಾಜ್ಯ ಬಜೆಟ್ ಆಗಿದೆ. ಅಲ್ಲದೆ ಸಿದ್ದರಾಮಯ್ಯ ಅವರು ಹಣಕಾಸು ಸಚಿವ ಹಾಗೂ ಮುಖ್ಯಮಂತ್ರಿ ಯಾಗಿ ಸಲ್ಲಿಸಿರುವ ಬಜೆಟ್ಗಳಲ್ಲಿ ಇದು ಅವರ 14ನೇ ಬಜೆಟ್ ಆಗಿದೆ.

ಹಣದುಬ್ಬರ ಪೆಡಿತ ನಾಗರೀಕರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಪರಿಹಾರವನ್ನು ಒದಗಿಸುವಲ್ಲಿ ಕಾಂಗ್ರೆಸ್ ಸರ್ಕಾರವು ಹೆಚ್ಚು ಗಮನಹರಿಸಿದೆ. ಹಾಗಾಗಿ ಒಂದು ಕೋಟಿಗೂ ಹೆಚ್ಚು ಕುಟುಂಬಗಳಿಗೆ 52,000 ಕೋಟಿ ರೂಪಾಯಿಗಳನ್ನು ನಮ್ಮ ಐದು ಗ್ಯಾರಂಟಿಗಳು ವರ್ಗಾಯಿಸುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಈ ಬಜೆಟ್ ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯ ಪ್ರಕಾರವಾಗಿದೆ ಎಂದು ತಿಳಿಸಿದ್ದು ಈ ಮೊದಲು ದೇಶದಲ್ಲಿ ಯಾರು ಜಾರಿಗೆ ತರತಂದಿರುವುದಿಲ್ಲ. ಇದು ಮೊದಲ ಬಾರಿಗೆ ನಮ್ಮ ದೇಶದಲ್ಲಿ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ತಿಳಿಸಿದರು.

ಕರ್ನಾಟಕ ಮುಖದಲ್ಲಿ nep ರದ್ದು :

ಕರ್ನಾಟಕದ ನೂತನ ಮುಖ್ಯಮಂತ್ರಿಯಾದ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಜಾರಿಗೆ ತಂದ nep ಶಿಕ್ಷಣ ನೀತಿಯನ್ನು ರದ್ದುಗೊಳಿಸಿ ಶಿಕ್ಷಣ ನೀತಿಗೆ ಬದಲಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ . ಹೀಗೆ ಶಿಕ್ಷಣ ಕ್ಷೇತ್ರಕ್ಕೆ 37 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಹೀಗೆ ಹೊಸ ಶಿಕ್ಷಣ ನೀತಿಯಿಂದ ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ಉಚಿತ ಸಮವಸ್ತ್ರ ,ಮೊಟ್ಟೆ , ಹಾಲು ಮೊದಲಾದ ವಸ್ತುಗಳನ್ನು ಕೊಡಲು ಸರ್ಕಾರವು ಮುಂದಾಗಿದೆ. ಹೀಗೆ ಪದವಿ ವಿದ್ಯಾರ್ಥಿಗಳಿಗೂ ಸಹ ನಾಲ್ಕು ವರ್ಷದ ಬದಲಿಗೆ ಮೂರು ವರ್ಷ ವ್ಯಾಸಂಗ ಮಾಡಲು ಹೊಸ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ಅಳವಡಿಸಿದೆ. ಇದರಿಂದ ಪದವಿ ವಿದ್ಯಾರ್ಥಿಗಳು ಸಹ ಸ್ವಲ್ಪಮಟ್ಟಿಗೆ ನಿರಳಾಗಿದ್ದಾರೆ.

ಇದನ್ನು ಓದಿ : ಬಿಯರ್ ಜೊತೆಗೆ ಈ ಆಹಾರವನ್ನು ಸೇವಿಸಲೇಬಾರದು! ಸೇವಿಸಿದರೆ ಕಾದಿದೆ ದೊಡ್ಡ ಕಂಟಕ !!

ಕೆಲವೊಂದು ವಿಷಯಗಳ ಬಗ್ಗೆ ಬಜೆಟ್ ನಲ್ಲಿ ಮಂಡನೆ :

ನಿಧನರಾದ ನಟ ಡಾಕ್ಟರ್ ಪುನೀತ್ ರಾಜಕುಮಾರ್ ರವರ ಹೆಸರಿನಲ್ಲಿ ಅವರ ಸ್ಮರಣಾರ್ಥವಾಗಿ ವಿವಿಧ ಆರೋಗ್ಯ ಯೋಜನೆಗಳ ಭಾಗವಾಗಿ ಎಲ್ಲ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸ್ವಯಂ ಚಾಲಿತ ಬಾಹ್ಯ ಡಿಫಿ ಬ್ರಿಲೆಟರ್ ಗಳನ್ನು ಅಳವಡಿಸಲು ರಾಜ್ಯ ಸರ್ಕಾರವು ಮುಂದಾಗಿದೆ. 70,427 ಕೋಟಿ ರೂಪಾಯಿಗಳನ್ನು ಮಹಿಳಾ ಆಧಾರಿತ ಯೋಜನೆಗಳಿಗೆ ಅನುದಾನ ನೀಡಲು ರಾಜ್ಯ ಸರ್ಕಾರ ಮೀಸಲಿಟ್ಟಿದೆ.

ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಾದಿತ ಮೇಕೆದಾಟು ಯೋಜನೆಯ ಬಗ್ಗೆ ಕುರಿತು ಮಾತನಾಡಿದ ಇವರು ಈ ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಹಾಗೂ ಭೂಮಿಯನ್ನ ಪರಿಹಾರ ಅರಣ್ಯೀಕರಣಕ್ಕಾಗಿ ಗುರುತಿಸಿ ಭೂಸ್ವಾಧೀನಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು. ಹೀಗೆ ಗ್ಯಾರಂಟಿ ಯೋಜನೆಗಳಿಗೂ ಸಹ ಎಂದು ಅನುದಾನವನ್ನು ನೀಡಲು, ರಾಜ್ಯ ಸರ್ಕಾರವು ಮುಂದಾಗಿದೆ.

ಬಡವರಿಗೆ ಹಲವಾರು ಯೋಜನೆಗಳನ್ನು ತರುವುದರ ಮೂಲಕ ಅವರಿಗೆ ಆರ್ಥಿಕ ನೆರವನ್ನು ನೀಡಲು ರಾಜ್ಯ ಸರ್ಕಾರವು ಶ್ರಮಿಸುತ್ತಿದೆ. ಹೀಗೆ ರಾಜ್ಯ ಬಜೆಟ್ ನಲ್ಲಿ ಹೆಚ್ಚಾಗಿ ರೈತರು ಹಾಗೂ ಬಡವರು ಹಾಗೂ ಕೃಷಿ ಕಾರ್ಮಿಕರಿಗೆ ಹೆಚ್ಚಿನ ಹಣವನ್ನು ಮೀಸಲಿಟ್ಟಿರುವುದನ್ನು ನಾವು ನೋಡಬಹುದು. ಹೀಗೆ ಈ ಬಜೆಟ್ ನಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿರುವುದು ಒಂದು ಒಳ್ಳೆಯ ಸಂಗತಿ ಆಗಿದೆ ಎಂದು ಹೇಳಬಹುದು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಅವರಿಗೂ ಸಹ ರಾಜ್ಯದ ಬಜೆಟ್ ನ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಮಧ್ಯಪ್ರಿಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ,  ಬಿಯರ್ ನ ಬೆಲೆ ಎಷ್ಟಾಗಿದೆ ನೋಡಿ!!

ಗೃಹಲಕ್ಷ್ಮಿ ಯೋಜನೆಗೆ ಹೊಸ ಕಂಡೀಶನ್ ! ಆನ್ಲೈನ್ ನೋಂದಣಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

Leave A Reply

Your email address will not be published.