ಒಡಿಶಾ ರೈಲು ಅಪಘಾತಕ್ಕೆ ಅಸಲಿ ಕಾರಣ ಏನು ಗೊತ್ತಾ? ಕೊನೆಗೂ ತನಿಖೆಯಿಂದ ಬಯಲಾಯ್ತು ರಹಸ್ಯ..!

0

ನಮಸ್ಕಾರ ಸ್ನೇಹಿತರೆ ಇತ್ತೀಚಿಗಷ್ಟೇ ಒಡಿಸ್ಸಾದ ಬಾಲಸೋರ್ನಲ್ಲಿ ರೈಲು ಅಪಘಾತದ ಬಗ್ಗೆ ನಾವು ನೋಡಿದೆವು. ಅದರಂತೆ ಬಾಲಸುನಲ್ಲಿ ಒಂದಲ್ಲ ಎರಡಲ್ಲ ಮೂರು ರೈಲುಗಳಿಗೆ ಅಪಘಾತವಾಗಿದ್ದು ಭೀಕರ ಸಾವು ನೋವುಗಳು ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಅದರಂತೆ ಸಾವಿರಕ್ಕೂ ಹೆಚ್ಚಿನ ಜನರು ಅಪಘಾತದಲ್ಲಿ ಗಾಯಗೊಂಡಿರುವುದನ್ನು ನಾವು ನೋಡಿದೆವು.

odisha-train-accident
odisha-train-accident

ಕವಚ ತಂತ್ರಜ್ಞಾನಗಳು ರೈಲು ಅಪಘಾತ ತಡೆಯುವ ಸಲುವಾಗಿ ಅಳವಡಿಸಿದ್ದು ಈ ತಂತ್ರಜ್ಞಾನಗಳು ಕೆಲಸ ಮಾಡದೇ ಇರುವುದು ಈ ಅಪಘಾತಕ್ಕೆ ಕಾರಣವಾಗಿತ್ತು ಎಂದು ಹೇಳಿರುವುದನ್ನು ನೋಡಬಹುದು. ಆದರೆ ಈ ತ್ರಿವಳಿ ರೈಲು ದುರಂತಕ್ಕೆ ಅಸಲಿ ಕಾರಣವೇ ಬೇರೆಯಾಗಿತ್ತು ಈ ಮಾಹಿತಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ನೀವು ಇದೀಗ ನೋಡಬಹುದು.

ತ್ರಿವಳಿ ರೈಲು ದುರಂತಕ್ಕೆ ಅಸಲಿ ಕಾರಣ :

ಒಡಿಸ್ಸಾದ ಬಾಲಸೂರ್ ನಲ್ಲಿ ತ್ರಿವಳಿ ರೈಲು ದುರಂತ ವಾಗಿದ್ದು ಇದರಿಂದ ಅಪಾರ ಸಾವು ನೋವು ಆಗಿರುವುದನ್ನು ನಾವು ನೋಡಿದ್ದೇವೆ. ಅದರಂತೆ ಈ ತ್ರಿವಳಿ ರೈಲು ದುರಂತಕ್ಕೆ ಸಂಬಂಧಿಸಿದಂತೆ ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ನಡೆಸಿದ್ದು ಈ ದುರಂತಕ್ಕೆ ಅಸಲಿ ಕಾರಣವೇ ಬೇರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೈಲ್ವೆ ಹಳಿ ವಿನ್ಯಾಸದಲ್ಲಿ ಮೂರು ವರ್ಷಗಳ ಹಿಂದೆ ಸುರಕ್ಷತೆಯ ಕಾರಣದಿಂದ ಬದಲಾವಣೆಯನ್ನು ಮಾಡಲಾಗಿತ್ತು.

ಹಳಿ ತಪಾಸಣೆ ನಡೆಸಲು ಅಧಿಕಾರಿಗಳು ಸುರಕ್ಷಣಾ ಕಾರ್ಯವಿಧಾನ ವನ್ನು ಅನುಸರಿಸಿಲ್ಲ ಹಾಗಾಗಿ ಈ ತ್ರಿವಳಿ ರೈಲು ದುರಂತವು ಅಧಿಕಾರಿಗಳ ನಿರ್ಲಕ್ಷದಿಂದ ಕಾರಣವಾಗಿದೆ ಎಂದು ಸಹ ಹೇಳಬಹುದು. ಅದರಂತೆ ಸುರಕ್ಷತೆಯ ಪ್ರಕ್ರಿಯೆಯ ಬಗ್ಗೆ ರೈಲ್ವೆ ಸಿಗ್ನಲ್ ವಿಭಾಗದವರು ಸೇರಿದಂತೆ ನಿರ್ಲಕ್ಷ ವಹಿಸಿದ ಕಾರಣ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಚಿವಾಲಯ ಮಾಹಿತಿ ನೀಡಿದೆ.

ಇತರೆ ವಿಷಯಗಳು : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ : ಈ ಕೂಡಲೇ ಹೊಸ ಲಿಂಕ್ ಗೆ ಅಪ್ಲೈ ಮಾಡಿ

ಹೊಸ ತಂತ್ರಜ್ಞಾನ ಅಳವಡಿಕೆ :

ಹೊಸ ತಂತ್ರಜ್ಞಾನ ಅಳವಡಿಕೆಯನ್ನು ಸುರಕ್ಷತೆಗಾಗಿ ರೈಲ್ವೆ ಇಲಾಖೆಯು ಹೆಚ್ಚಿನ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಿದ್ದು, ಉಕ್ಕಿನ ಉದ್ಯಮದಲ್ಲಿ ಬಳಸಲಾಗುವ ರೈಲ್ವೆ ತಂತ್ರಜ್ಞಾನಗಳು ಮತ್ತು ವಿಶ್ವದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಬಳಸಲಾಗುತ್ತಿರುವ ರೈಲ್ವೆ ಸುರಕ್ಷತಾ ಕ್ರಮಗಳ ಬಗ್ಗೆ ಸುರಕ್ಷತೆಗಾಗಿ ರೈಲ್ವೆ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಎಲೆಕ್ಟ್ರಾನಿಕ್ ರಿಲೇ ಸಿಸ್ಟಮ್ ಅನ್ನು ಹೆಚ್ಚಿನ ಸುರಕ್ಷತೆಗಾಗಿ ಜಾರಿಗೊಳಿಸುವ ಬಗ್ಗೆ ಸಿದ್ಧತೆ ನಡೆಯುತ್ತಿದೆ. ಕನಿಷ್ಠ ಮೂರು ವರ್ಷಗಳಾದರೂ ಈ ತಂತ್ರಜ್ಞಾನವನ್ನು ಅಳವಡಿಸಲು ಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೀಗೆ ಅಧಿಕಾರಿಗಳ ನಿರ್ಲಕ್ಷದಿಂದ ಒಡಿಸ್ಸಾದ ಬಾಲಸುರ್ನಲ್ಲಿ ಮೂರು ರೈಲುಗಳ ಅಪಘಾತವಾಗಿದ್ದು, ಇದು ಅಪಾರ ಸಾವು ನೋವುಗಳಿಗೆ ದಾರಿ ಮಾಡಿಕೊಟ್ಟಿದೆ. ಈ ರೈಲ್ವೆ ಅಪಘಾತದಿಂದ ದೇಶದಲ್ಲಿರುವ ಜನರು ಕಂಗಾಲಾಗಿದ್ದಾರೆ. ಹಾಗಾಗಿ ಇವರ ಸುರಕ್ಷತೆಗಾಗಿ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಸಹ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ನಿಮ್ಮ ಜಮೀನಿಗೆ ದಾರಿ ಮಾಡಿಕೊಳ್ಳಬೇಕಾದರೆ ಕೋರ್ಟಿಗೆ ಹೋಗುವ ಅವಶ್ಯಕತೆ ಇಲ್ಲ, ಇಲ್ಲಿದೆ ಹೊಸ ವಿಧಾನ

ಮಹಿಳೆಯರಿಗೆ ಉಚಿತ ಮೊಬೈಲ್ ಫೋನ್ ಹಾಗೂ ಎರಡು ವರ್ಷಗಳ ರಿಚಾರ್ಜ್

Leave A Reply

Your email address will not be published.