ಮತ್ತಷ್ಟು ತರಕಾರಿಗಳ ಬೆಲೆಯಲ್ಲಿ ಏರಿಕೆ, ತರಕಾರಿಗಳ ಜೊತೆಗೆ ಮೊಟ್ಟೆ ಮಾಂಸದ ಬೆಲೆಯು ಸಹ ಏರಿಕೆ

0

ನಮಸ್ಕಾರ ಸ್ನೇಹಿತರೆ ನಿಮಗೆ ತಿಳಿಸುತ್ತಿರುವುದು ಇಂದು ತರಕಾರಿಗಳ ಬೆಲೆಯಲ್ಲಿ ಗಣನೀಯ ಏರಿಕೆ ಆಗಿರುವುದರ ಬಗ್ಗೆ. ಕಳೆದ ವಾರದಿಂದ ಕೆಜಿಗೆ 20 ರಿಂದ 30 ದರ ತರಕಾರಿಗಳ ಬೆಲೆಗಳಲ್ಲಿ ಗಣನೀಯ ಏರಿಕೆ ಆಗಿದೆ. ಇವುಗಳ ಜೊತೆಗೆ ಮಾಂಸ ಹಾಗೂ ಮೊಟ್ಟೆಯಾದರೂ ಸಹ ಏರಿಕೆಯಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಇದೀಗ ನೋಡಬಹುದು.

increase-in-price-of-vegetables
increase-in-price-of-vegetables

ತರಕಾರಿಗಳ ಬೆಲೆಯಲ್ಲಿ ಏರಿಕೆ :

ಕಳೆದ ಕೆಲವು ದಿನಗಳಿಂದ ತರಕಾರಿಗಳ ಬೆಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 20 ರಿಂದ 30 ರೂಪಾಯಿಗಳಷ್ಟು ಕಳೆದ ವಾರಕ್ಕಿಂತ ಹೆಚ್ಚು ಬೆಲೆ ಯಾಗಿದೆ. ಅದರಂತೆ ತರಕಾರಿಗಳಲ್ಲಿ ಟೊಮೆಟೋ ರೇಟ್ ಹೆಚ್ಚಾಗಿದ್ದು, ಇದರ ದರ ರೂ.100 ದಾಟಿದೆ. ಈ ಟೊಮೆಟೊ ಜೊತೆಗೆ ಬೀನ್ಸ್ ಬೆಲೆಯೂ ಸಹ ಹೆಚ್ಚಾಗಿದ್ದು ಬೀನ್ಸ್ ಗೆ ಕೆಜಿ ಗೆ 120 ರೂಪಾಯಿಗಳು ಏರಿಕೆಯಾಗಿವೆ.

ಹೀಗೆ ತರಕಾರಿಗಳ ಬೆಲೆ ಗಳ ಪಟ್ಟಿಯನ್ನು ನೋಡಬಹುದು. ಟೊಮೊಟೊ ಒಂದು ಕೆಜಿಗೆ 110, ಬೀನ್ಸ್ ಗೆ 120, ಬೀನ್ಸ್ ಕಾಳು 110, ಕ್ಯಾರೆಟ್ 110, ಹಸಿಮೆಣಸಿನಕಾಯಿ 170, ಹಸಿರು ಬಟಾಣಿ 190 ಹೀಗೆ ಎಲ್ಲಾ ತರಕಾರಿಗಳ ಬೆಲೆ ಹೆಚ್ಚಾಗಿದ್ದು ಜನ ಕಂಗಲಾಗಿದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿ ಬೆಳೆ ಬರೆದ ಕಾರಣ ಉತ್ತರ ಪ್ರದೇಶ ಮಹಾರಾಷ್ಟ್ರ ಒಳಗೊಂಡಂತೆ ಹೊರ ರಾಜ್ಯದಿಂದ ಟೊಮೇಟೊ ಕ್ಯಾರೆಟ್ ಮೊದಲಾದ ತರಕಾರಿಗಳನ್ನು ಖರೀದಿಸಲಾಗುತ್ತಿದೆ. ಹೀಗಾಗಿ ತರಕಾರಿಗಳ ಬೆಲೆಯಲ್ಲಿ ಏರಿಕೆಯನ್ನು ಕಾಣಬಹುದು.

ಇದನ್ನು ಓದಿ : ಉಚಿತವಾಗಿ 5 ಲಕ್ಷ ರೂಪಾಯಿ ಕಾರ್ಡ್ ಇದ್ದವರಿಗೆ ಸಿಗಲಿದೆ : ಇದರ ಬಗ್ಗೆ ಶೇಕಡಾ 99% ರಷ್ಟು ಜನರಿಗೆ ತಿಳಿದಿಲ್ಲ

ಮಾಂಸದ ಬೆಲೆ :

ಒಂದೆಡೆ ತರಕಾರಿಗಳ ಬೆಲೆ ಹೆಚ್ಚಾದರೆ, ಮತ್ತೊಂದೆಡೆ ಮಾಂಸದ ಬೆಲೆಯೂ ಸಹ ಹೆಚ್ಚಾಗಿದೆ. ಈಗ ಮಳೆಗಾಲ ವಾಗಿದ್ದರಿಂದ ಸಮುದ್ರದ ಅಲೆಗಳ ಅಬ್ಬರ ಜೋರಾಗಿ ಅಲ್ಲದೆ ಮೀನುಗಳ ಸಂತಾನೋತ್ಪತ್ತಿಯ ಸಂದರ್ಭ ವಾಗಿದ್ದರಿಂದ ಈ ಸಮಯ ಜೂನ್ ನಿಂದ ಎರಡು ತಿಂಗಳುಗಳ ಕಾಲ ಯಾಂತ್ರಿಕೃತ ಮೀನುಗಾರಿಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸುತ್ತದೆ. ಹೀಗಾಗಿ ಮೀನುಗಳ ಲಭ್ಯತೆ ಮಾರುಕಟ್ಟೆಯಲ್ಲಿ ಕಡಿಮೆ ಇದ್ದು, ಮಟನ್ ಹಾಗೂ ಚಿಕನ್ ದರಗಳು ಸಹ ಏರಿಕೆಯಾಗಿದೆ. ಅದರಂತೆ ಕೆಜಿ ಚಿಕನ್ ಗೆ 300 ,ಮಟನ್ ಗೆ 800 ಗಳು ಆಗಿದೆ.

ಹೀಗೆ ಜನಸಾಮಾನ್ಯರ ಮೇಲೆ ತರಕಾರಿಗಳು ಹಾಗೂ ಮಾಂಸದ ದರವು ಸಹ ಏರಿಕೆಯಾಗಿರುವುದರಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಪಿಂಚಣಿಯ ಲಾಭ ಇನ್ನು ಮುಂದೆ ಅವಿವಾಹಿತರಿಗೂ ಸಿಗಲಿದೆ, ಅವಿವಾಹಿತ ಪಿಂಚಣಿ ಯೋಜನೆ ಜಾರಿ

ಭಾರತದಲ್ಲಿ 65 ಲಕ್ಷ ವಾಟ್ಸಪ್ ಖಾತೆಗೆ ಒಂದು ತಿಂಗಳಲ್ಲಿ ನಿರ್ಬಂಧ ಸಾಧ್ಯ : ಐಟಿ ನಿಯಮ ಉಲ್ಲಂಘಿಸಿದರೆ ಅಪಾಯ

Leave A Reply

Your email address will not be published.