ಭಾರತದಲ್ಲಿ 65 ಲಕ್ಷ ವಾಟ್ಸಪ್ ಖಾತೆಗೆ ಒಂದು ತಿಂಗಳಲ್ಲಿ ನಿರ್ಬಂಧ ಸಾಧ್ಯ : ಐಟಿ ನಿಯಮ ಉಲ್ಲಂಘಿಸಿದರೆ ಅಪಾಯ
ನಮಸ್ಕಾರ ಸ್ನೇಹಿತರೆ ಇಂದು ಎಲ್ಲರೂ ಸ್ಮಾರ್ಟ್ ಫೋನ್ ಅನ್ನು ಬಳಸುತ್ತಿದ್ದು ಎಲ್ಲರೂ ಸಹ ವಾಟ್ಸಪ್ ಅನ್ನು ಉಪಯೋಗಿಸಲು ಕೆಲವೊಂದು ಐಟಂ ನಿಯಮಗಳನ್ನು ಐಟಿ ನಿಯಮಗಳನ್ನು ಉಲ್ಲಂಘಿಸಿದರೆ, ವಾಟ್ಸಪ್ ಬಳಕೆದಾರರ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಇದರ ಸಂಪೂರ್ಣ ಮಾಹಿತಿಯನ್ನು ನೀವು ನೋಡಬಹುದು.
ಐಟಿ ನಿಯಮ :
ಭಾರತದಲ್ಲಿ ಅತಿ ಹೆಚ್ಚು ಜನರು ವಾಟ್ಸಪ್ ಬಳಕೆಯನ್ನು ಬಳಸುತ್ತಿದ್ದು, ಐಟಿ ನಿಯಮವನ್ನು ಉಲ್ಲಂಗಿಸುವ ವಾಟ್ಸಪ್ ಬಳಕೆದಾರರಿಗೆ ಅಪಾಯ ಕಾದಿದೆ. ನಿಯಮ ಉಲ್ಲಂಘಿಸಿದ 65 ಲಕ್ಷ ವಾಟ್ಸಪ್ ಖಾತೆಗಳನ್ನು ಮೇ ತಿಂಗಳಿನಲ್ಲಿ ನಿಷ್ಕ್ರಿಯಗೊಳಿಸಲಾಗಿದೆ. ವಾಟ್ಸಾಪ್ ಬಳಕೆದಾರರ ಸಂಖ್ಯೆ ಭಾರತದಲ್ಲಿ ಪ್ರತಿದಿನ ಹೆಚ್ಚಾಗುತ್ತಲೇ ಇದೆ. ಅದರಂತೆ ಬರೋಬ್ಬರಿ ಐವತ್ತು ಕೋಟಿಗೂ ಹೆಚ್ಚು ಬಳಕೆದಾರರು ವಾಟ್ಸಾಪ್ ಅನ್ನು ಭಾರತದಲ್ಲಿ ಹೊಂದಿದ್ದಾರೆ.
ಈ ವಾಟ್ಸಪ್ ಬಳಕೆದಾರರು ಐ ಟಿ ನಿಯಮವನ್ನು ಉಲ್ಲಂಘಿಸಿದರೆ ಅವರಿಗೆ ಅಪಾಯ ಒದಗುತ್ತದೆ. ಹೀಗೆ 65 ಲಕ್ಷ ವಾಟ್ಸಪ್ ಖಾತೆಗಳನ್ನು ಮೇ ತಿಂಗಳಿನಲ್ಲಿ ಐಟಿ ನಿಯಮ ಉಲ್ಲಂಘಿಸಿದ ಕಾರಣ ನಿಷ್ಕ್ರಿಯಗೊಳಿಸಲಾಗಿದೆ. ಏಪ್ರಿಲ್ ನಿಂದ ಮೇ ತಿಂಗಳವರೆಗೆ ಸುಮಾರು 74ಲಕ್ಷ ವಾಟ್ಸಪ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಹಾಗೆಯೇ 3912 ಖಾತೆಗಳನ್ನು ಬ್ಯಾನ್ ಮಾಡಬೇಕೆಂಬ ಮನವಿಯು ಮೇ ತಿಂಗಳಲ್ಲಿ ಬಂದಿತ್ತು. ಇನ್ನು 97 ವಾಟ್ಸಪ್ ಖಾತೆಗಳನ್ನು ತನಿಖೆ ನಡೆಸುವುದರ ಮೂಲಕ ಬ್ಯಾನ್ ಮಾಡಲಾಗಿದೆ.
ಮೇ 1ರಿಂದ 31ರವರೆಗೆ 31650800 ಖಾತೆಗಳನ್ನು ವಾಟ್ಸಾಪ್ ಜಿ ಎಸ್ ಸಿ ಸಮಿತಿ ನೀಡಿದ ವರದಿಯ ಆಧಾರದ ಮೇಲೆ ನಿಷೇಧಿಸಲಾಗಿದೆ. ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ 2021ರ 18 ನಿಯಮದ ಪ್ರಕಾರ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ 18 ನಿಯಮದ ಪ್ರಕಾರ ನಿಂದನೆ ಅವಹೇಳನ ಕೋಮುಸಂಘರ್ಷ ಸೃಷ್ಟಿಸುವ ಕೆಲವೊಂದು ಕಾನೂನು ಬಾಹಿರ ಚಟುವಟಿಕೆಗಳನ್ನು ವಾಟ್ಸಾಪ್ ನಿಷ್ಕ್ರಿಯಗೊಳಿಸಲಿದೆ.
ವಾಟ್ಸಾಪ್ ಹೊಸ ಫೀಚರ್ಸ್:
ಬಳಕೆದಾರರ ಬೇಡಿಕೆ ಹಾಗೂ ಅನುಕೂಲಕ್ಕೆ ತಕ್ಕಂತೆ ಇತ್ತೀಚೆಗೆ ವಾಟ್ಸಾಪ್ ಹೊಸ ಹೊಸ ಫೀಚರ್ಸ್ ಗಳನ್ನು ಪರಿಚಯಿಸಿದೆ. ಕರೆ ಸೈಲೆಂಟ್ ಮಾಡುವ ಫೀಚರ್ಸ್ ಕೂಡ ಸೇರಿಸಲಾಗಿದೆ. ಬಳಕೆದಾರರಿಗೆ ಅಪರಿಚಿತ ಮತ್ತು ಸ್ಪಾನ್ ಕಾರ್ಯಗಳ ಕಿರಿಕಿರಿಯಿಂದ ಮುಕ್ತಿ ನೀಡುವ ಸಲುವಾಗಿ ಫೋನ್ನಲ್ಲಿ ಸೇವ್ ಆಗಿಲ್ಲದಂತಹ ನಂಬರ್ ಗಳಿಂದ ಬರುವ ಫೋನ್ ಕರೆಗಳನ್ನು ಸ್ವಯಂ ಚಾಲಿತವಾಗಿಯೇ ಸೈಲೆಂಟ್ ಮಾಡುವಂತಹ ಹೊಸ ಫೀಚರ್ ಅನ್ನು ವಾಟ್ಸಾಪ್ ಇದೀಗ ಬಿಡುಗಡೆ ಮಾಡಿತ್ತು. ಇದರಿಂದ ಗೊತ್ತಿಲ್ಲದ ನಂಬರ್ ಗಳಿಂದ ಬರುವ ಫೋನ್ ಗಳನ್ನು ವಾಟ್ಸಪ್ ಸೈಲೆಂಟ್ ಮಾಡುತ್ತದೆ. ಹೀಗೆ ಈ ಹೊಸ ಫೀಚರ್ ಗಳ ಬಗ್ಗೆ ಮಂಗಳವಾರ ಮೀಟರ್ ಸಿ ಈ ಓ ಮಾರ್ಕ್ ಜ್ಯೂಕರ್ ಬರ್ಗ್ ತಿಳಿಸಿದರು.
ಹೀಗೆ ಹೊಸ ಹೊಸ ಫೀಚರ್ಗಳನ್ನು ಮೇಟಾ ಕಂಪನಿಯ ಮಾಲೀಕತ್ವದಲ್ಲಿರುವ ವಾಟ್ಸಪ್ ನಲ್ಲಿ ನೋಡಬಹುದಾಗಿದೆ. ಹೀಗೆ ವಾಟ್ಸಪ್ ಉಪಯೋಗಿಸುವಂತಹ ನಿಮ್ಮ ಸ್ನೇಹಿತರಿಗೆ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಅವರು ಐಟಿ ನಿಯಮವನ್ನು ಉಲ್ಲಂಘಿಸಿದಂತೆ ನೋಡಿಕೊಳ್ಳಲು ಸಹಾಯ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಮಹಿಳೆಯರಿಗೆ ಉಚಿತ ಮೊಬೈಲ್ ಫೋನ್ ಹಾಗೂ ಎರಡು ವರ್ಷಗಳ ರಿಚಾರ್ಜ್
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ : ಈ ಕೂಡಲೇ ಹೊಸ ಲಿಂಕ್ ಗೆ ಅಪ್ಲೈ ಮಾಡಿ