ವಿದ್ಯಾರ್ಥಿಗಳಿಗೆ ಬಸ್ ಪಾಸ್ ಗೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ ವಿದ್ಯಾರ್ಥಿನಿಯರು ಸಹ ಅರ್ಜಿ ಸಲ್ಲಿಸಬೇಕಾ ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

0

ನಮಸ್ಕಾರ… ಕರ್ನಾಟಕದ ಜನರಿಗೆ ನಾವು ಇಂದು ಈ ಲೇಖನದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಬಸ್ ಪಾಸ್ ಕುರಿತಂತೆ ಮಾಹಿತಿಯನ್ನು ತಿಳಿಯೋಣ ಅರ್ಜಿ ಸಲ್ಲಿಸುವುದು ಹೇಗೆ?  ಎಷ್ಟು ತಿಂಗಳವರೆಗೆ ಬಸ್ ಪಾಸ್ ನೀಡುತ್ತಾರೆ?  ವಿದ್ಯಾರ್ಥಿನಿಯರು ಸಹ ಬಸ್  ಪಾಸ್ ಗೆ ಅರ್ಜಿ ಸಲ್ಲಿಸಬೇಕ 2023 24 ನೇ ಸಾಲಿನಲ್ಲಿ ಯಾವ ನಿಯಮಗಳನ್ನು ಜಾರಿ ಮಾಡಲಾಗಿದೆ ಎಂಬುವುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿದುಕೊಳ್ಳೋಣ

Free bus pass for students

ಕೆ ಎಸ್ ಆರ್ ಟಿ ಸಿ ವಿದ್ಯಾರ್ಥಿಗಳ ಬಸ್ ಪಾಸ್ -2023

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ಅನ್ನು ವಿತರಿಸುತ್ತದೆ ಅದೇ ರೀತಿ 2023 ನೇ ಸಾಲಿನಲ್ಲಿ ಪ್ರಾರ್ಥಮಿಕ ಕಿರಿಯ ಪ್ರಾಥಮಿಕ ಪ್ರೌಢಶಾಲೆ ಕಾಲೇಜು ವಿದ್ಯಾರ್ಥಿಗಳು ಡಿಪ್ಲೋಮೋ ಐಟಿಐ  ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ ಮಾಡುತ್ತದೆ ಹಾಗೆ ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನ ಅನುಕೂಲವಾಗುವಂತೆ ದರವನ್ನು ಸಹ ನಿಗದಿ ಮಾಡಲಾಗಿದೆ

ರಿಯಾಯಿತಿ  ಪಾಸ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ

  •  ವಿದ್ಯಾರ್ಥಿಯ ಕಾಯಂ ವಿಳಾಸ ಆಧಾರ್ ಕಾರ್ಡ್ ನಲ್ಲಿ ಇರುವ ಹಾಗೆ
  •  ದಾಖಲಾತಿ ಪ್ರಮಾಣ ಪತ್ರ ಪ್ರಸ್ತುತ ವರ್ಷದ್ದು
  •  ಎಸ್ಸಿ ಎಸ್ಟಿ ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರವನ್ನು ನೀಡಬೇಕು
  •  ನಿಮ್ಮ ಇತ್ತೀಚಿಗಿನ ಪಾಸ್ಪೋರ್ಟ್ ಅಳತೆಯ ಫೋಟೋ ಹಾಗೂ  ಸ್ಟಾಂಪ್ ಸೈಜ್ ಫೋಟೋ

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ಅರ್ಜಿ ಸಲ್ಲಿಸಲು ನೀವು ಎಲ್ಲ ದಾಖಲೆಗಳನ್ನು ಹೊಂದಿಸಿಕೊಳ್ಳಬೇಕು ನಂತರ ಸೇವಾ ಸಿಂಧು  ವೆಬ್ಸೈಟಿನಲ್ಲಿ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್  ಲಾಗಿನ್ ಆಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗೂ ಜೂನ್ 12ರಿಂದ ನಿಮಗೆ ಸೇವಾ ಸಿಂಧು ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು

ಸೇವಾ ಸಿಂಧು ಅಧಿಕೃತ ವೆಬ್ಸೈಟಿನಲ್ಲಿ ಅರ್ಜಿ ಸಲ್ಲಿಸಲು ಅನೇಕ ಹಂತಗಳನ್ನು ಪೂರೈಸಬೇಕು

 ಹಂತ -1 

ಸೇವಾ ಸಿಂಧು  ವೆಬ್ಸೈಟ್‌ಗೆ ಭೇಟಿ ನೀಡಿ ನಂತರ ನಿಮ್ಮ ಅಕೌಂಟನ್ನು ಕ್ರಿಯೇಟ್ ಮಾಡಿಕೊಳ್ಳಿ ನಂತರ ರಿಜಿಸ್ಟ್ರೇಷನ್ ಪ್ರಕ್ರಿಯೆಗೆ ಕ್ಲಿಕ್ ಮಾಡಿ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ ಲಾಗಿನ್ ಆಗಿ

 ಹಂತ -2

ನೀವು ಅಧಿಕೃತ ವೆಬ್ ಸೈಟ್ ಗೆ ಲಾಗಿನ್ ಆದ ನಂತರ ಮೊಬೈಲ್ ಸಂಖ್ಯೆ ಹಾಗೂ ಪಾಸ್ವರ್ಡ್ ಅನ್ನು ನಮೂದಿಸಬೇಕು ನಂತರ ಓಟಿಪಿ ದೊರೆಯುತ್ತದೆ ಅದನ್ನು ನೀಡಬೇಕು ನಂತರ ನಿಮಗೆ ಅನೇಕ ಆಯ್ಕೆಗಳು ಕಾಣುತ್ತವೆ ಅದರಲ್ಲಿ ಸ್ಟೂಡೆಂಟ್ ಬಸ್ ಪಾಸ್ ಅನ್ನು ಆಯ್ಕೆ ಮಾಡಿ

 ಹಂತ – 3

ನೀವೊಂದು ಅರ್ಜಿಯನ್ನು ಆಫ್ಲೈನ್ ಮೂಲಕ ಪೂರ್ಣ  ಭರ್ತಿ ಮಾಡಿ ಆನ್ ಲೈನ್ ನ ಮೂಲಕ ಅಪ್ಲೋಡ್ ಮಾಡಬೇಕಾಗುತ್ತದೆ ಆ ಅರ್ಜಿಯಲ್ಲಿ ನೀವು ನಿಮ್ಮ ಹೆಸರು ವಿಳಾಸ ಹಾಗೂ ನಿಮ್ಮ ಮೊಬೈಲ್ ಸಂಖ್ಯೆ ಜಿಮೇಲ್ ಐಡಿ ಇದ್ದರೆ ಹಾಕಿ ನಂತರ ಆಧಾರ್ ಕಾರ್ಡ್ ನ ಸಂಖ್ಯೆಯನ್ನು ನಮೂದಿಸಬೇಕು ಇದರೊಂದಿಗೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ

ಇದನ್ನು ಓದಿ : ಮಹಿಳೆಯರು ತಪ್ಪದೇ ನೋಡಿ, ಮಹಿಳಾ ಕಿಸಾನ್‌ ಸಮ್ಮಾನ್‌ ಜಾರಿ

 ಹಂತ -4

ನೀವು ಭರ್ತಿ ಮಾಡಿದ ನಂತರ ಸರಿಯಾಗಿದೆ ಎಂದು ಒಮ್ಮೆ ಪರಿಶೀಲಿಸಿ, ನಿಮ್ಮ ಶಾಲೆ ಅಥವಾ ಕಾಲೇಜಿಗೆ ಎಷ್ಟು ದೂರ ಆಗುತ್ತದೆ ಎಂಬುದನ್ನು ಸಹ ನಮೂದಿಸಬೇಕಾಗುತ್ತದೆ ಹಾಗೂ ನಿಮ್ಮ ಮೊಬೈಲ್ ನಂಬರ್ ಗೆ ಪಾಸ್ ಏನಾದರೂ ರಿಜೆಕ್ಟ್ ಆದರೆ ಯಾವ ಕಾರಣಕ್ಕೆ ರಿಜೆಕ್ಟ್ ಆಗಿದೆ ಎಂಬುದನ್ನು ಇಲಾಖೆ ತಿಳಿಸಲಿದ್ದು ಚಾಲ್ತಿಯಲ್ಲಿರುವ ನಂಬರನ್ನು ನೀಡಿ ಹಾಗೂ ನಿಮ್ಮ ಹತ್ತಿರದ ಕೆಎಸ್ಆರ್ಟಿಸಿ ಡಿಪೋಗು ಸಹ ಭೇಟಿ ನೀಡಬಹುದು

 ವಿದ್ಯಾರ್ಥಿನಿಯರು ಬಸ್  ಪಾಸ್ಗೆ ಅರ್ಜಿ ಸಲ್ಲಿಸಬೇಕಾ ?

 ವಿದ್ಯಾರ್ಥಿನಿಯರು ಬಸ್ ಪಾಸ್ ಗೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಏಕೆಂದರೆ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಾಯಣ ಇದ್ದು ಶಕ್ತಿ ಯೋಜನೆ ಅಡಿ ಅವರು ರಾಜ್ಯದಲ್ಲಿ ಎಲ್ಲಿ ಬೇಕಾದರೂ ಉಚಿತ ಪ್ರಯಾಣವನ್ನು ಮಾಡಬಹುದು ಹಾಗಾಗಿ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ನೀಡಲು ಕಾರಣ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ

 ಈ ಮೇಲ್ಕಂಡ ಮಾಹಿತಿಯು ಕೆಎಸ್ಆರ್ಟಿಸಿ ಬಸ್ ಪಾಸ್ಗೆ ಅರ್ಜಿ ಸಲ್ಲಿಸುವ ಬಗ್ಗೆ ನೀಡಲಾಗಿದ್ದು ಇದೇ ರೀತಿ ಅನೇಕ ಸರ್ಕಾರದ ಯೋಜನೆ ಹಾಗೂ ಇತರೆ ಮಾಹಿತಿಗಳನ್ನು ನಿಮಗೆ ಒದಗಿಸಲಾಗುವುದು ಹಾಗಾಗಿ ನಮ್ಮ ವೆಬ್ಸೈಟ್ಗೆ ಹಾಗಾಗಿ ಭೇಟಿ ನೀಡಿ ಧನ್ಯವಾದ

ಇತರ ವಿಷಯಗಳು :

ರೇಷನ್ ಕಾರ್ಡಿ ಗೆ ಹೊಸ ಸದಸ್ಯರ  ಸೇರ್ಪಡೆ ತುಂಬಾ ಸರಳ, ಸದಸ್ಯರ ಹೆಸರು ಸೇರ್ಪಡೆಗೆ ಇಲ್ಲಿ ಕ್ಲಿಕ್ ಮಾಡಿ

ಪ್ಯಾನ್‌ ಆಧಾರ್‌ ಲಿಂಕ್‌ ಮಾಡದೇ ಇದ್ದವರ ಬ್ಯಾಂಕ್‌ ಬ್ಯಾಲೆನ್ಸ್‌ ಖಾಲಿ!

Leave A Reply

Your email address will not be published.