ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ I Swami Vivekananda Essay in Kannada
ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ, Swami Vivekananda Essay in Kannada, swami vivekananda prabandha in kannada ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ
ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ
ನಮಸ್ತೆ ಬಂಧುಗಳೆ, ನಾವು ಇಂದು ಪುಣ್ಯ ಭಾರತ ಕಂಡ ಪ್ರತಿಭಾವಂತ ವ್ಯಕ್ತಿಯ ಬಗ್ಗೆ ನಾವಿಂದು ಮಾತನಾಡುತ್ತಿದ್ದೇವೆ. ಅವರೇ ನಮ್ಮ ದೇಶ ಕಂಡ ಮಹತ್ಮ ಸ್ವಾಮಿ ವಿವೇಕಾನಂದರುರವರು ತಮ್ಮ ಜೀವನವನ್ನು ಬಡವರ ಮತ್ತು ಧರ್ಮಗಳ ಉದ್ಧಾರಕ್ಕಾಗಿ ಮುಡಿಪಾಗಿಸಿದ್ದಾರೆ. ಈ ಪ್ರಬಂಧಲ್ಲಿ ಸ್ವಾಮಿ ವಿವೇಕಾನಂದರ ಜೀವನ, ಏಳಿಗೆ, ಸಾಧನೆ, ಪರಿಶ್ರಮದ ಬಗ್ಗೆ ವಿವರಿಸಲಾಗಿದೆ. ಈ ಪ್ರಬಂದವು ವಿದ್ಯಾರ್ಥಿಗಳಿಗೆ ಸಹಯಾಕವಾಗುತ್ತದೆ. ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಪೀಠಿಕೆ:
ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಸನ್ಯಾಸಿ ಮತ್ತು ಆಧ್ಯಾತ್ಮಿಕ ಚಿಂತಕರು ಹೌದು. ಸ್ವಾಮಿ ವಿವೇಕಾನಂದರ ಜೀವನ ಈಗೀನ ತಲೆಮಾರುಗಳಿಗೆ ಸ್ಪೂರ್ತಿ ಆಗಿದೆ ಅವರು ಇಂದು ನಮ್ಮ ಜೊತೆ ಇಲ್ಲದೆ ಇರಬಹುದು ಆದರೆ ಅವರ ಆದರ್ಶಯುಕ್ತವಾದ ಜೀವನ ಎಲ್ಲಾರಿಗು ಮಾದರಿಯಾಗಿದೆ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಹೊಗುವುದರಿಂದ ನಾವು ಜೀವನವನ್ನು ಹಸನುಗೊಳಿಸಿಕೊಳ್ಳಬಹುದು. ಇನ್ನು ಉಳಿದ ವಿಷಯವನ್ನು ಪ್ರಬಂಧದ ಒಳಗಡೆ ನೀಡಲಾಗಿದೆ.
ಸ್ವಾಮಿವಿವೇಕಾನಂದರು ಒಳ್ಳೆಯ ಬರಹಗಾರ, ಒಳ್ಳೆಯ ವಾಗ್ಮಿ, ಒಳ್ಳೆಯ ಮಾತುಗಾರ, ಚತುರ, ದೇಶಭಕ್ತ, ಚಿಂತಕನಾಗಿಯು ಅನೇಕ ಬಗೆಯಲ್ಲಿ ತಮ್ಮ ಸಾಧನ ಕ್ಷೇತ್ರ ಹೆಚ್ಚಿಸಿದ್ದಾರೆ. ಅಂತೆಯೇ ಅವರು ದೇಶದ ಯುವ ಜನರಿಗಂತು ಅಚ್ಚು-ಮೆಚ್ಚು. ಅವರ ಘೋಷಣೆಯಿಂದಲೆ ಯುವಕರನ್ನು ತನ್ನಕಡೆ ಸೆಳೆಯ ಬಲ್ಲ ಚತುರ. ಅದ್ದರಿಂದಲೆ ಇವರ ಹುಟ್ಟಿದ ದಿನವನ್ನು ಯುವದಿನ ಎಂದೆ ಆಚರಣೆ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಇವರು ಯುವಕರಿಗೆ ಹತ್ತಿರ ವಾಗಿದ್ದರು.ಇವರು ತಮ್ಮ ಗುರುಗಳಾದ ಪರಮಹಂಸರ ಚಿಂತನೆಯನ್ನು ಮುನ್ನಡೆಸಿದರು ಮತ್ತು ಹಿಂದೂ ಪರವಾಗಿ ಹೋರಟ ನಡೆಸಿದರು .ಯುವಕರಿಗೆ ಹುರಿದುಂಬಿಸುವ ಕಾರ್ಯನಡೆಸುತ್ತಿದ್ದರು. ಇವರು ಈ ಪುಣ್ಯ ಭೂಮಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಮಹತ್ಮ ಈ ಸ್ವಾಮಿವಿವೇಕಾನಂದರು.
ಆರಂಭಿಕ ಜೀವನ:
ವಿವೇಕಾನಂದರು 1863 ಜನವರಿ 12 ರಂದು ಕಲ್ಕತ್ತಾದ ಬಂಗಾಳಿಯಲ್ಲಿ ಒಂದು ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ತಂದೆ –ವಿಶ‍್ವನಾಥ ದತ್ತ ಹಾಗೂ ತಾಯಿ- ಭುವನೇಶ್ವರಿ ದೇವಿ. ಮೂಲತಃ ಇವರ ಮೊದಲ ಹೆಸರು ನರೇಂದ್ರನಾಥ ದತ್ತ ಎಂದು. ಇವರ ತಂದೆ ಸಮಾಜದಲ್ಲಿ ಪ್ರಭಾವಿ ವ್ಯಕ್ತಿ ಆಗಿದ್ದರು ಮತ್ತು ಒಬ್ಬ ಪ್ರಸಿದ್ದ ವಕೀಲರಗಿದ್ದರು, ತಾಯಿ ಕೂಡ ಒಬ್ಬ ದೈವಿಭಕ್ತರಾಗಿದ್ದರು ಮತ್ತು ಮಗ ನರೇಂದ್ರನಿಗೆ ಪ್ರಭಾವ ಬೀರುವಲ್ಲಿ ಹೆಚ್ಚಿನ ಪಾತ್ರವಹಿಸಿದ್ದರು. ಚಿಕ್ಕ ವಯಸ್ಸಿನಿಂದಲೆ ಓದುವುದರಲ್ಲಿ ಅಪಾರ ಆಸಕ್ತಿ ಹೊಂದಿದ ಇವರು ಚೇಷ್ಟೆ ಸ್ವಾಭಾವದರಾಗಿದ್ದರು. ಓದುವುದರಲ್ಲಿ ಉತ್ತಮ ಸಾಧನೆ ಮಾಡಿದ ಇವರು ನಂತರ ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತಮ್ಮ ವಿಧ್ಯಾಭ್ಯಾಸ ಮುಂದುವರೆಸಿ ನಂತರ ಪದವಿ ಪಡೆಯುವ ಹೊತ್ತಿಗೆ ಇವರು ಅನೇಕ ವಿಷಯಗಳಲ್ಲಿ ಆಸಕ್ತಿ ಹೊಂದದ್ದರು ಮತ್ತು ಅದರ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಿದ್ದರು ಆ ವಿಷಯಗಳೆಂದರೆ ಕ್ರೀಡೆ, ಜಿಮ್ನಾಸ್ಟಿಕ್ಸ್, ಕುಸ್ತಿ ಮತ್ತು ದೇಹದಾರ್ಢ್ಯದಲ್ಲಿ ಸಕ್ರೀಯರಾಗಿದ್ದರು. ಇವರು ಇಷ್ಟೇಅಲ್ಲದೆ ಹಿಂದೂ ಗ್ರಂಥಗಳನ್ನು ಅಧ್ಯಯನ ನಡೆಸಿದರು. ಮತ್ತೊಂದೆಡೆ ಪಾಶ್ಚಿಮಾತ್ಯ ಚಿಂತಕರ ಪುಸ್ತಕಗಳನ್ನು ಓದ ತೋಡಗಿದರು ಅವರುಗಳೆಂದರೆ, ಡೇವಿಡ್ ಹ್ಯೂಮ್, ಜೋಹಾನ್ ಗಾಟ್ಲೀಬ್ ಫಿಚ್ಚೆ ಹಾಗೂ ಎನ್ನು ಅನೇಕರ ಪುಸ್ತಕಗಳನ್ನು ಅಧ್ಯಯನ ಮಾಡಿದರು.
ಗುರು-ಶಿಷ್ಯರ ಸಂಬಂಧ:
ಸ್ವಾಮಿ ವಿವೇಕಾನಂದರ ಗುರುಗಳು ಶ್ರೀ ರಾಮಕೃಷ್ಣ ಪರಮಹಂಸರು ಇವರನ್ನು ಮೊದಲು ವಿವೇಕಾನಂದರು ನೋಡಲು ಕಾರಣ : ವಿವೇಕಾನಂದರಿಗೆ ಆಧ್ಯಾತ್ಮದ ಬಗ್ಗೆ ತಾಯಿ ಹೇಳಿದ ಮಾತು ಸಮಾಜ ಹಾಕಿಕೊಟ್ಟ ದಾರಿ ಯಿಂದ ಅವರು ದೇವರ ಅಸ್ತಿತ್ವದ ಬಗ್ಗೆ ಹೆಚ್ಚಿನ ಗಮನ ಹಾರಿಸಿದರು ಇದರಿಂದ ಎಲ್ಲಾ ಧರ್ಮದ ಗುರುಗಳ ಬಳಿಯಲ್ಲಿಯು ದೇವರ ಅಸ್ತಿತ್ವದ ಬಗ್ಗೆ ಚರ್ಚೆ ಮಾಡುತ್ತಿದ್ದನು. ತಮ್ಮ ಕಾಲೇಜ್ ಅದ ಸ್ಕಾಟಿಷ್ ಚರ್ಚ್ ಕಾಲೇಜಿನ ಪ್ರಾಂಶುಪಾಲರಾದ ವಿಲಿಯಂ ಹ್ಯಾಸ್ಟಿ ಅವರ ಬಳಿ ಶ್ರೀ ರಾಮಕೃಷ್ಣರ ಸಾಧನೆ ಮತ್ತು ಪರಿಶ್ರಮದ ಬಗ್ಗೆ ಮೊದಲ ಬಾರಿಗೆ ತಿಳಿದುಕೊಂಡರು. ಅವರ ಬಗ್ಗೆ ತಿಳಿದ ಅವರು ನನ್ನ ಇಷ್ಟು ವರ್ಷದ ಪ್ರಶ್ನೆಗೆ ಉತ್ತರ ಸಿಕ್ಕಂತೆ ಸಿದಾ ಅವರ ಮನೆಗೆ ಬಂದರು ಅವರಿಗೆ ಎನೋ ಒಂದು ಕುತುಹಲ ಏಕೆ ಎಂದರೆ ಇಟ್ಟು ದಿನವು ಕೂಡ ಇವರು ಹೋದ ಮನೆಯಲ್ಲಿ ಇವರು ಕೇಳಿದ ಮಾತಿಗೆ ಯಾರು ಇವರಿಗೆ ಸೂಕ್ತವಾದ ಉತ್ತರ ನೀಡಿರಲ್ಲಿಲ್ಲ. ಹಾಗೇ ಈ ದಿನ ದಕ್ಷಿಣೇಶ್ವರ ಕಾಳಿ ದೇವಸ್ಥಾನದ ಅವರಣದ ರಾಮಕೃಷ್ಣರ ನಿವಾಸದ ಮುಂದೆ ಬಂದು ಇದೆ ಪ್ರಶ್ನೇಯನ್ನು ಕೇಳಿದರು. “ನೀವು ದೇವರನ್ನು ನೋಡಿದ್ದೀರಾ?” ಆದರೆ ಒಂದು ಕ್ಷಣವು ಹಿಂಜರಿಯದೆ “ಹೌದು ನೋಡಿದ್ದೇನೆ, ನಾನು ನಿನ್ನನು ನೋಡುವಷ್ಟು ಸ್ಪಷ್ಟವಾಗಿ ದೇವರನ್ನು ನೋಡಿದ್ದೇನೆ ” ಎಂದು ಉತ್ತರಿಸಿದರು. ಹೀಗೆ ರಾಮಕೃಷ್ಣರು ನೀಡಿದ ಉತ್ತರ ಮತ್ತು ಅವರ ಸರಳತೆಗೆ ವಿವೇಕಾನಂದರು ಮರುಳದರು. ಅವರಿಗು ಕೊಡ ಈ ಬಾಲಕ ಹತ್ತಿರವಾದರು.
ಗುರುವನ್ನು ಕಳೆದುಕೊಂಡು ಒಬ್ಬಂಟಿಗನಾಗಿ ಆಶ್ರಮ ಕಟ್ಟಿದ ನರೇಂದ್ರ:
1885 ರ ಮಧ್ಯದಲ್ಲಿ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಾಮಕೃಷ್ಣರು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾದರು.1885 ರ ಸೆಪ್ಟಂಬರ್ ನಲ್ಲಿ ರಾಮಕೃಷ್ಣರನ್ನು ಶ್ಯಾಂಪುಕೊರ್ಗೆ ಸ್ಥಳಾಂತರಿಸಲಾಯಿತು, ಅದರೆ ವಿಧಿಯಾಟ ದಂತೆ 16 ಆಗಸ್ಟ್ 1886 ರಂದು ಶ್ರೀ ರಾಮಕೃಷ್ಣರು ತಮ್ಮ ಪಾರ್ಥಿವ ಶರೀರವನ್ನು ತ್ಯಜಿಸಿದರು,
ಶ್ರೀ ರಾಮಕೃಷ್ಣರ ನಿಧನ ನಂತರ ನರೇಂದ್ರನಾಥ ಸೇರಿದಂತೆ ಅವರ ಸುಮಾರು 17 ಶಿಷ್ಯರು ಉತ್ತರ ಕಲ್ಕತ್ತದ ಬಾರಾನಗರದಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸು ಶುರು ಮಾಡಿದರು ಇದನ್ನು ಅವರೆ ರಾಮಕೃಷ್ಣ ಮಠ ಎಂದು ಕರೆದುಕೊಂಡರು.ಇವರು ಲೋಕದ ಎಲ್ಲಾ ಆಸೆ, ಅಕಾಂಕ್ಷೆಯನ್ನು ಬಿಟ್ಟು ಕೇವಲ ಸಹೋದರತ್ವಕ್ಕೆ ಒತ್ತು ಕೊಟ್ಟರು. ಹೀಗೆ ಈ ಮಠದಲ್ಲಿಯೇ ಇವರ ಹೆಸರು ವಿವೇಕಾನಂದ ಎಂದು ಮರು ನಾಮಕರಣ ವಾಯಿತು, ವಿವೇಕಾನಂದ ಎಂದರೆ” ವಿವೇಚನಾಶೀಲ ಬುದ್ಧಿವಂತಿಕೆಯ ಆನಂದ”
ಬೋಧನೆ ಮತ್ತು ರಾಮಕೃಷ್ಣ ಮಿಷನ್ ಸ್ಥಾಪನೆ:
ಯುನೈಟೆಡ್ ಕಿಂಗ್ ಡಮ್ ಗೆ ಪ್ರಯಾಣಿಸಿದ ವಿವೇಕಾನಂದರು 1897ರಲ್ಲಿ ಮರಳಿ ಭಾರತಕ್ಕೆ ಬಂದರು. ಇವರಿಗಾಗಿ ರಾಜಮನೆತನಗಳು ಆತ್ಮೀಯವಾದ ಸ್ವಾಗತ ಮಾಡಿಕೊಂಡವು. ಹೀಗೆ ದೇಶದ ಎಲ್ಲಾಕಡೆಗಳಲ್ಲಿ ಸಂಚಾರಿಸಿ ಉಪನ್ಯಾಸಗಳನ್ನು ನೀಡಿದರು. ಕೊನೆಗೆ ಕಲ್ಕತ್ತಾವನ್ನು ತಲುಪಿದರು ಮತ್ತು ಮೇ 1, 1897 ರಂದು ಕಲ್ಕತ್ತಾ ಬಳಿಯ ಬೇಲೂರು ಮಠದಲ್ಲಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲ ಉದೇಶ ದೇಶದ ಬಡ ಮತ್ತು ಸಂಕಷ್ಟದಲ್ಲಿರುವ ಜನರಿಗೆ ಸೇವೆನೀಡುವುದೆ ಆಗಿತ್ತು. ಉದಾಹರಣೆಗೆ :- ಶಾಲೆಗಳು, ಆಸ್ಪತ್ರೆಗಳ ಸ್ಥಾಪನೆ ಮಾಡುವುದು ಮತ್ತು ಸೆಮಿನಾರ್‌ಗಳು, ಸಮ್ಮೇಳನಗಳು, ಕಾರ್ಯಾಗರಗಳನ್ನು ನಡೆಸುವುದು ಮತ್ತು ಜನರಿಗೆ ಸಹಾಯ ಮಾಡುವುದಗಿತ್ತು.
ಸ್ವಾಮಿ ವಿವೇಕಾನಂದರ ಮನಸ್ಸಿನಲ್ಲಿ ದೇಶದ ಯುವಶಕ್ತಿಯ ಬಗ್ಗೆ ಹೆಚ್ಚಿನ ಕಾಳಜಿ ಮತ್ತು ಉತ್ಸಹ ವನ್ನು ಹೊಂದಿದ್ದರು ಒಟ್ಟಾರೆ ಜನರ ಕಲ್ಯಾಣವನ್ನು ಬಯಸಿದ್ದರು.
” ಎದ್ದೇಳಿ, ಎಚ್ಚರಗೊಳ್ಳಿ ಮತ್ತು ಗುರಿಯನ್ನು ತಲುಪುವವರೆಗೆ ನಿಲ್ಲಬೇಡಿ” ಎಂದು ಕರೆನೀಡಿದರು.
ವಿವೇಕಾನಂದರ ಕೊನೆಯ ದಿನಗಳು:
ವಿವೇಕಾನಂದರು ಅವರು 40 ವರ್ಷಗಳವರೆಗೆ ಬದುಕುವುದಿಲ್ಲ ಎಂದು ಮೊದಲೇ ಭವಿಷ್ಯ ನುಡಿದಿದ್ದರು. ಜುಲೈ4, 1902 ರಂದು ಅವರು ಅವರೇ ನಿರ್ಮಿಸಿದ ಬೇಲೂರು ರಾಮಕೃಷ್ಣ ಮಠದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕ್ರತ ವ್ಯಾಕರಣವನ್ನು ಹೇಳಿಕೊಡುತ್ತಲೆ ತಮ್ಮ ಎಲ್ಲ ಕೆಲಸ ಮುಗಿಸಿ ರಾತ್ರಿ 9 ಗಂಟೆಗೆ ಧ್ಯಾನದಲ್ಲಿ ಇರುವಗಲೆ ತಮ್ಮ ಪ್ರಾಣ ತ್ಯಾಗ ಮಾಡಿದರು. ಇವರನ್ನು ಗಂಗಾ ನದಿ ದಂಡೆಯ ಮೇಲೆ ದಹಿಸಲಾಯಿತು ಎಂದು ಹೇಳಲಾಗಿದೆ.
ಉಪಸಂಹಾರ:
ಸ್ವಾಮಿ ವಿವೇಕಾನಂದರು ಮಹನ್ ವ್ಯಕ್ತಿ ಇವರ ಜೀವನ ಅನೇಕ ಯುವ ಸಮಾಜಕ್ಕೆ ಮಾದರಿಯಾಗಿದೆ. ಇವರು ನಡೆದು ಬಂದ ದಾರಿ ಮತ್ತು ಇವರ ನಡೆ- ನುಡಿ, ಸರಳತೆ, ವಿನಯತೆ, ಇವುಗಳು ಜನರಿಗೆ ಆದರ್ಶವಾಗಿದೆ. ಇಂತ ಪುಣ್ಯ ವ್ಯಕ್ತಿ ಹುಟ್ಟಿದ ನಾಡಿನಲ್ಲಿ ಹುಟ್ಟಿದ ನಾವು ಪುಣ್ಯವಂತರು.
FAQ:
ವಿವೇಕಾನಂದರ ಮೂದಲ ಹೆಸರೇನು??
ನರೇಂದ್ರನಾಥ ದತ್ತ.
ವಿವೇಕಾನಂದರ ಹುಟ್ಟಿದ ದಿನಾಂಕ?
1863 ಜನವರಿ 12
ವಿವೇಕಾನಂದರ ತಂದೆಯ ಹೆಸರು?
ವಿಶ್ವನಾಥ ದತ್ತ.
ವಿವೇಕಾನಂದರ ತಾಯಿಯ ಹೆಸರೇನು?
ಭುವನೇಶ್ವರಿ ದೇವಿ.