ಬಡತನದ ಬಗ್ಗೆ ಪ್ರಬಂಧ I Poverty Essay in Kannada | ಬಡತನ ನಿರ್ಮೂಲನೆ ಬಗ್ಗೆ ಪ್ರಬಂಧ,
ಬಡತನದ ಬಗ್ಗೆ ಪ್ರಬಂಧ, Poverty Essay in Kannada, ಬಡತನ ನಿರ್ಮೂಲನೆ ಬಗ್ಗೆ ಪ್ರಬಂಧ, badathana nirmulane bagge prabandha in kannada
ಬಡತನದ ಬಗ್ಗೆ ಪ್ರಬಂಧ
ನಮಸ್ತೆ ಸ್ನೇಹಿತರೆ, ನಾವಿಂದು ಬಡತನದ ಬಗ್ಗೆ ಚರ್ಚೆ ಮಾಡುತ್ತಿದ್ದೆವೆ. ಬಡತನ ಎನ್ನುವುದು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಬೇರೆ ದೇಶಗಳಲ್ಲಿಯು ಬಡತನ ತಲೆದುರಿದೆ ಎದರಿಂದಾಗಿ ನಮ್ಮ ದೇಶದಲ್ಲಿಯು ಬಡತನ ಎಂಬ ರೋಗ ಇದೆ. ಈ ಪ್ರಬಂಧದಲ್ಲಿ ನಾವು ಬಡತನ ಎಂದರೇನು, ಬಡತನಕ್ಕೆ ಕಾರಣಗಳು, ನಿರ್ಮೂಲನೆ ಹೇಗೆ ಎಂದು ನಾವಿಂದು ಚರ್ಚೆ ಮಾಡೋಣ.
ಪೀಠಿಕೆ:
ವಿಶ್ವದ ಎಲ್ಲಾ ಕಡೆಗಳಲ್ಲಿಯು ಬಡತನ ಬಹುಮುಖ್ಯವಾಗಿಯೇ ಕಂಡು ಬರುತ್ತದೆ. ಅದು ಅಲ್ಲದೆ ನಮ್ಮ ದೇಶ ಭಾರತ ಇಲ್ಲಿಯು ಬಹು ಮುಖ್ಯವಾಗಿಯೇ ಕಂಡುಬರುತ್ತದೆ. ಬಡತನವು ಒಂದು ಪಿಡುಗು ಇದು ಸಂಪೂರ್ಣವಾಗಿ ತೋಲಗುವುದು ಸ್ವಲ್ಪ ಕಷ್ಟದ ಕೆಲಸವಾಗಿದೆ.
ಭಾರತದ ಬಡತನ ಬಹು ದೊಡ್ಡದು ಮತ್ತು ಕಷ್ಟಕರವಾದುದು. ವಿಶ್ವದ ಬಡವರಲ್ಲಿ ಮೂರನೇ ಒಂದು ಭಾಗ ಭಾರತದಲ್ಲಿಯೇ ಇರುವುದನ್ನು ನೋಡಬಹುದು. ಭಾರತದಲ್ಲಿ ಜನಸಂಖ್ಯೆಯು ಹೆಚ್ಚು ಮತ್ತು ಬಡತನವು ಹೆಚ್ಚು. ಭಾರತದ ಜನಸಂಖ್ಯೆಯಲ್ಲಿ 75.6% ಜನರಿಗೆ ದಿನಕ್ಕೆ 100 ರೂಪಾಯಿ ಕಿನ್ನ ಕಡಿಮೆ ಆದಾಯವನ್ನು ಲಹೊಂದಿದ್ದಾರೆ.
ವಿಶ್ವಬ್ಯಾಂಕ್ 2005ರ ಪ್ರಕಾರ ಭಾರತದಲ್ಲಿ ಅಂತರಾಷ್ಟ್ರೀಯ ಬಡತನ ರೇಖೆಕ್ಕಿಂತ ಕೆಳಗಿರುವವರು ಎಂದು 42% ಜನರನ್ನು ಗುರುತಿಸಿದೆ.
ಬಡತನ ಎಂದರೇನು?
ನಿರ್ದಿಷ್ಟ ಪ್ರಮಾಣದಲ್ಲಿ ಹಣ ಅಥವಾ ದಿನನಿತ್ಯದ ವಸ್ತುಗಳಿಗೆ ಕೊರತೆಯನ್ನು ಅನುಭವಿಸುವ ಕುಟುಂಬವನ್ನು ಬಡ ಕುಟುಂಬ ಎಂದು , ವ್ಯಕ್ತಿಯನ್ನು ಬಡವ ಎಂದು ಕರೆಯಲಾಗುತ್ತದೆ.
ಬಡತನಕ್ಕೆ ಕಾರಣಗಳೆನು:
1.ಶಿಕ್ಷಣದ ಕೊರತೆ:
ಬಡವರು ಎಂಬ ಕಾರಣಕ್ಕೆ ಅವರ ಮಕ್ಕಳನ್ನು ಶಾಲೆಗಳಿಗೆ ಕಳುಹಿಸದೆ ಇರುವುದು. ಇದರಿಂದ ಭಾರತದಲ್ಲಿ ವಿದ್ಯಾವಂತರ ಪ್ರಮಾಣ ಕಡಿಮೆ ಆಗುತ್ತದೆ. ಶಿಕ್ಷಣ ಇಲ್ಲವಾದರಿಂದ ಜನರಲ್ಲಿ ಇನ್ನು ಮೂಡನಂಬಿಕೆ ಗಳು ಉಂಟಗುತ್ತದೆ. ಈ ಶಿಕ್ಷಣ ಕೊರತೆಗೆ ಮುಖ್ಯ ಕಾರಣ ಎಂದರೆ ಬ್ರಿಟಿಷರು ಭಾರತದಲ್ಲಿ ಹೇರಿದ ದಬ್ಬಳಿಕೆಯ ದೊರಣೆ.
2. ನಿರುದ್ಯೋಗ ಸಮಸ್ಯೆ:
ಭಾರತದಲ್ಲಿ ಬಡತನಕ್ಕೆ ಮುಖ್ಯ ಕಾರಣ ಎಂದರೆ ಅದು ನಿರುದ್ಯೋಗವು ಹೌದು. ಅದೆಷ್ಟೋ ವಿದ್ಯಾವಿದ್ಯರ್ಥಿಗಳು ಪದವಿ ಪಡೆದಿದ್ದರು ಕೂಡ ಉದ್ಯೋಗ ಸಮಸ್ಯೆಯಿಂದ ಮನೆಯಲ್ಲಿಯೆ ಕೂರುವ ಪರಿಸ್ಥಿತಿ ಬಂದು ಬಿಟ್ಟಿದೆ. ಹಾಗಾಗಿಯೆ ಸಮಾಜದಲ್ಲಿ ಇನ್ನು ಬಡತನವು ತಲೆ ಎತ್ತಿ ನಿಂತಿದೆ. ಸರಿಯಾದ ಓದಿಗೆ ಸರಿಯಾದ ಉದ್ಯೋಗ ಸಿಕ್ಕಿದ್ದರೆ ಬಡತನ ಎಂಬ ಪದ ಭಾರತದಲ್ಲಿ ಇರುತ್ತಲೆ ಇರಲಿಲ್ಲ. ದೇಶದ ಜನರ ಓದಿಗೆ ಸರಿ ಆದ ಉದ್ಯೋಗ ಸಿಕ್ಕಾಗ ಮಾತ್ರ ದೇಶ ಬಡತನದಿಂದ ಮುಕ್ತವಾಗ ಬಲ್ಲದು.
3. ಆಹಾರ ಸಮಸ್ಯೆ:
ಬಡತನಕ್ಕೆ ಮುಖ್ಯ ಕಾರಣ ಎಂದರೆ ಅದು ಕೇವಲ ಆಹಾರ ಸಮಸ್ಯೆ ಇದರಿಂದ ಬಡವರು ಸಾಯುವ ಸ್ಥಿತಿ ಬಂದಿದೆ ಇದಕ್ಕೆಲ್ಲ ಮುಖ್ಯ ಕಾರಣ ಎಂದರೆ ಅದು ಬಡತನ. ಒಂದು ಮಾತಿದೆ 10 ಜನರು ಅಜಿರ್ಣದಿಂದ ಸತ್ತರೆ 1ಜನರು ಹಸಿವಿನಿಂದ ಸತ್ತರಂತೆ ಎಂಬ ಮಾತಿನಂತೆ ಆಧಿಕಾರ ಉಳ್ಳವರ ಸಮಾಜವಾಗಿದೆ.
4. ಜಾತಿ ವ್ಯವಸ್ಥೆ:
ಬಡವ -ಶ್ರೀಮಂತಿಕೆಯ ನಡುವೆ ಬಡವರು ಶ್ರೀಮಂತರ ಕೈಆಳುಗಳಾಗಿ ಕಾರ್ಯನಿರ್ವಹಿಸಬೇಕಾಗಿದೆ. ಮೇಲು-ಕೀಳು ಎಂಬ ಭಾವನೆಗಳಿಗೆ ಮುಖ್ಯ ಕಾರಣ ಎಂದರೆ ಅವರು ಹೊಂದಿದ ಜಾತಿ ವ್ಯವಸ್ಥೆ ಆಗಿದೆ. 1950ರ ಹೊತ್ತಿಗೆ ಭಾರತದಲ್ಲಿ ಜಾತಿ ವ್ಯವಸ್ಥೆ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಅವಾಗಿನಿಂದ ಭಾರತದಲ್ಲಿ ಬಡವರನ್ನು ಎಂದು ಬಡವರಂತೆ ನೋಡುತ್ತಾರೆ.
ಬಡತನದ ನಿರ್ಮೂಲನೆಯ ಬಗೆಗಳು:
ಬಡತನ ನಿರ್ಮೂಲನೆ ಅತ್ಯಂತ ಮುಖ್ಯವಾದ ಅಂಶವಾಗಿದೆ. ಈ ಬಡತನ ನಿರ್ಮೂಲನೆಗಾಗಿಯೆ ವಿಶ್ವ ಮಟ್ಟದಲ್ಲಿ ಅಕ್ಟೋಬರ್ 17 ಅನ್ನು ವಿಶ್ವ ಬಡತನ ನಿರ್ಮೂಲನ ದಿನ ಎಂದು ಆಚರಿಸಲಾಗುತ್ತದೆ. ಇದರಿಂದ ದೇಶದ ಅಭಿವೃದ್ಧಿ ಸಾಧ್ಯ ಹಾಗಾಗಿ ಬಡತನ ನಿರ್ಮೂಲನೆಗೆ ವಹಿಸ ಬೇಕಾದ ಅಂಶಗಳೆಂದರೆ.
1.ಉದ್ಯೋಗಿಕರಣ:
ಭಾರತವನ್ನು ಉದ್ಯೋಗಿಕರಣ ವ್ಯವಸ್ಥೆ ಇದರಿಂದ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಬಹುದು. ಪ್ರತಿಯೊಬ್ಬರ ವಿದ್ಯಾಬ್ಯಾಸಕ್ಕೆ ತಕ್ಕಂತೆ ಅವರಿಗೆ ಉದ್ಯೋಗ ನೀಡುವ ಮೂಲಕ ಬಡತನವನ್ನು ತೊಲಗಿಸಬೇಕು.. ಗುಡಿ ಕೈಗಾರಿಕರಣದ ಮೂಲಕ ಎಲ್ಲಾರಿಗು ಅವಕಾಶ ನೀಡುವುದು.
2. ಮೂಲಭೂತ ಸೌಕರ್ಯಗಳ ಪೂರೈಕೆ:
ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಮೂಲಭೂತವಾಗಿ ಸಿಗಬೇಕಾದ ಎಲ್ಲಾ ಸೌಕರ್ಯಗಳು ಸಿಗಬೇಕು ಆಗ ಮಾತ್ರ ನಾವು ಬಡತನದಿಂದ ಮೇಲೆಬರಲು ಸಾಧ್ಯ. ಮೂಲಭೂತ ಸೌಕರ್ಯಗಳಾದ ನೀರು, ಗಾಳಿ, ಬೆಳಕು, ವಾಸಿಸಲು ವಾಸಸ್ಥಾನ, ಆಹಾರ, ಶಿಕ್ಷಣಗಳ ಸೌಲಭ್ಯ ಅತಿ ಮುಖ್ಯವಾದುದು ಹಾಗಾಗಿ ಇವುಗಳ ಸರಿಯಾದ ಪೂರೈಕೆಯಿಂದ ಭಾರತದಲ್ಲಿ ಬಡತನವನ್ನು ನಿರ್ಮೂಲನೆ ಮಾಡಲು ಸಾಧ್ಯ.
3. ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಸರಿಯಾದ ಬಳಕೆ:
ಇದರಿಂದ ಪ್ರತಿಯೊಬ್ಬ ವ್ಯತ್ತಿಯು ಮುಕ್ತವಾಗಿ ಬದುಕಲು ಸಾಧ್ಯ. ನಮ್ಮ ಸಂವಿಧಾನದಲ್ಲಿಯೋ ಪ್ರತಿಯೊಬ್ಬ ವ್ಯಕ್ತಿಗೂ ಹಕ್ಕು ಮತ್ತು ಕರ್ತವ್ಯವನ್ನು ನೀಡಲಾಗಿದೆ. ಅದರಂತೆ ಎಲ್ಲರಿಗೂ ಬದುಕುವ ಹಕ್ಕಿದೆ. ಹಾಗೆ ಬಡವರಗೆ ಇರಬೇಕು ಎಂದು ಏನು ಇಲ್ಲ ಎಲ್ಲಾರು ಸಮಾನರು.
4. ಮೂಢನಂಬಿಕೆಗಳನ್ನು ಕಿತ್ತುಹಾಕಬೇಕು:
ಕೆಲವರಲ್ಲಿ ಇರುವ ಮುಖ್ಯ ಪಿಡುಗು ಎಂದರೆ ಅದು ಮೂಢನಂಬಿಕೆ ಮಾತ್ರ ಅದ್ದರಿಂದಲೆ ಇನ್ನು ಬಡತನ ಹಾಗೇ ಇರುವುದು. ಬಡವರು ಎಂದು ಕೆಳಗೆ ಇರಬೇಕು ಎನ್ನುವುದು ಸರಿಯಲ್ಲ. 1950ರ ಹೊತ್ತಿಗಿದ್ದ ಜಾತಿ ವ್ಯವಸ್ಥೆ ಈಗ ಬದಲಾಗಿದೆ. 5G Net work ಕಾಲ ಇದು ಇಲ್ಲಿ ಜಾತಿ ವ್ಯವಸ್ಥೆಗೆ ಜಾಗ ಇಲ್ಲ. ಆದರು ಕೆಲವು ಕಡೆಗಳಲ್ಲಿ ಇನ್ನು ಅದನ್ನು ಆಚರಣೆ ಮಾಡುತ್ತಾರೆ ಅದರ ಬಗ್ಗೆ ಜನರಲ್ಲಿ ಮೊದಲು ಅರಿವು ಮುಡಿಸಬೇಕಾಗಿದೆ.
ಉಪಸಂಹಾರ:
ಬಡತನ ಎನ್ನುವುದು ಹೇಳಿದಷ್ಟು , ಕೇಳಿದಷ್ಟು ಸುಲಭವಲ್ಲ ಇದು ಒಬ್ಬ ವ್ಯಕ್ತಿಯ ಸಾವಿಗು ಸಹಕಾರ ನೀಡುತ್ತದೆ. ಒಂದು ಹೊತ್ತಿನ ಊಟಕ್ಕು ಪರದಡುವ ಸ್ಥಿತಿ ಆ ಕಷ್ಟದಲ್ಲಿ ಇರುವವರಿಗೆ ಗೊತ್ತು. ಈ ಪ್ರಬಂಧದ ಮೂಲಕ ನಾವು ನಮ್ಮ ಕೈಲಿ ಆದ ಸಹಾಯವನ್ನು ಮಾಡೊಣ. . ಬಡತನ ನಿರ್ಮೂಲನೆಯ ಹಾದಿಯಲ್ಲಿ ನಾವು ನಡೆಯೊಣ.
FAQ:
ವಿಶ್ವ ಬಡತನ ನಿರ್ಮೂಲನ ದಿನ ?
ಅಕ್ಟೋಬರ್ 17
ಬಡತನ ಎಂದರೇನು?
ನಿರ್ದಿಷ್ಟ ಪ್ರಮಾಣದಲ್ಲಿ ಹಣ ಅಥವಾ ದಿನನಿತ್ಯದ ವಸ್ತುಗಳಿಗೆ ಕೊರತೆಯನ್ನು ಅನುಭವಿಸುವ ಕುಟುಂಬವನ್ನು ಬಡ ಕುಟುಂಬ ಎಂದು , ವ್ಯಕ್ತಿಯನ್ನು ಬಡವ ಎಂದು ಕರೆಯಲಾಗುತ್ತದೆ.
ವಿಶ್ವ ಬ್ಯಾಂಕ್ ಪ್ರಕರ 2005ರಲ್ಲಿ ಬಡತನರೇಖೆಗಿಂತ ಕೆಳಗಿರುವವರ ಪ್ರಮಾಣ?
42%
ಇತರೆ ವಿಷಯಗಳು:
ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ