ಪರಿಸರ ಮಾಲಿನ್ಯ ಪ್ರಬಂಧ | Essay On Environment Pollution in Kannada
ಪರಿಸರ ಮಾಲಿನ್ಯ ಪ್ರಬಂಧ
ನಮಸ್ತೆ ಗೆಳೆಯರೆ, ನಾವಿಂದು ಪರಿಸರಮಾಲಿನ್ಯದ ಬಗ್ಗೆ ವಿವರಿಸುತ್ತಿದ್ದೆವೆ ಇದು ಬೇರೆಯಲ್ಲಿಯೋ ಇರುವುದಲ್ಲ ಇದು ನಮ್ಮ ನಿಮ್ಮ ಸುತ್ತಮುತ್ತಲಿನ ಪರಿಸರವೇ ಆಗಿದೆ ಇದನ್ನು ಹಾಳು ಮಾಡುವವರು ನಾವೇ ಮತ್ತೆ ಅದರ ಬಗ್ಗೆ ಮಾಹಿತಿ ನೀಡುವವರು ನಾವೇ ಇದಕ್ಕೆಲ್ಲ ಮುಖ್ಯ ಕಾರಣ ಮನುಷ್ಯನ ದುರಾಸೆ, ನಾವಿಂದು ಈ ಪ್ರಬಂಧದಲ್ಲಿ ಪರಿಸರ ಎಂದರೇನು, ಆ ಪರಿಸರ ಮಾಲಿನ್ಯದ ವಿಧಗಳು ಯಾವುವು, ಅದನ್ನು ಹೇಗೆ ಮಾಲಿನ್ಯ ಮಾಡುತ್ತಿದ್ದಾರೆ ಮತ್ತು ಹೇಗೆ ನಾವು ಅದನ್ನು ಸಂರಕ್ಷಿಸ ಬೇಕು ಎನ್ನುವ ಬಗ್ಗೆ ತಿಳಿಯೋಣ.
ಪೀಠಿಕೆ:
ಮನುಷ್ಯನ ಆಸೆಗಳಿಗೆ ಮಿತಿಯೇ ಇಲ್ಲ. ಹೌದು ಮನುಷ್ಯ ಇನ್ನು ಮತ್ತಷ್ಟು ಎಂದು ಎಲ್ಲಾವನ್ನು ತನ್ನ ಮುತ್ತಿಗೆಗೆ ಹಾಕಿಕೊಳ್ಳಲು ನೋಡುತ್ತಾನೆ ಇದರಿಂದ ನಮ್ಮ ಸುತ್ತಮುತ್ತಲಿನ ಎಲ್ಲಾ ನೈಸರ್ಗಿಕ ಸಂಪತ್ತುಗಳು ನಾಶವಾಗುವುದು ಕಂಡಿತ. ಮನುಷ್ಯ ತನ್ನ ವೈಭವ ಪೂರಿತ ಜೀವನದ ಬಯಕೆ, ಆಸ್ತಿ, ಮನೆಗಳ ಆಸೆಯಿಂದ ಇರುವ ಎಲ್ಲಾ ಪರಿಸರವನ್ನು ತನ್ನ ಇಷ್ಟದಂತೆ ಕಡಿದು ನಾಶಮಾಡುತ್ತಿದ್ದಾನೆ. ಇದರಿಂದ ಮುಂದಿನ ಪೀಳಿಗೆ ಕೇವಲ ಚಿತ್ರ ಪಟಗಳಲ್ಲಿ ಮರ-ಗಿಡಗಳನ್ನು ನೋಡುವ ಪರಿಸ್ಥಿತಿ ಬರುವುದು ಕಂಡಿತ. ಎಲ್ಲಿಯೋ ಕೆಲ ಪರಿಸರ ಪ್ರೇಮಿಗಳು, ವಿದ್ಯಾವಂತರು, ಸರ್ಕಾರಗಳು ಕಾಲದಿಂದ ಕಾಲಕ್ಕೆ ಸರಿಯಾದ ಕಾನೂನುಗಗಳನ್ನು ತರುವ ಮೂಲಕ ಈಗ ಇರುವ ಕೆಲ ಮರ-ಗಿಡಗಳದರು ಉಳಿದುಕೊಂಡಿದೆ.
ಪರಿಸರ ಮಾಲಿನ್ಯ ಎಂದರೇನು?
ನಮ್ಮ ಸತ್ತ- ಮುತ್ತಲಿನ ಗಿಡ-ಮರ, ಪ್ರಾಣಿ-ಪಕ್ಷಿಗಳನ್ನು ನಮ್ಮ ಸ್ವರ್ಥಕ್ಕಾಗಿ ಮಲೀನ ಮಾಡುವುದನ್ನೆ ನಾವು ಪರಿಸರ ಮಾಲಿನ್ಯ ಎಂದು ಕರೆಯುತ್ತೇವೆ.
ಪರಿಸರ ಮಾಲಿನ್ಯದ ವಿಧಗಳು:
- ವಾಯು ಮಾಲಿನ್ಯ
- ಜಲ ಮಾಲಿನ್ಯ
- ಭೂ ಮಾಲಿನ್ಯ
- ಶಬ್ಧ ಮಾಲಿನ್ಯ
1. ವಾಯು ಮಾಲಿನ್ಯ:
ವಾಯು ಎಂದರೆ ಗಾಳಿ. ಹಾಗೇ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಗಾಳಿಯನ್ನು ವಿಷ ಅನಿಲಗಳನ್ನು ಬಿಡುವ ಮೂಲಕ ವಾತಾವರಣದ ಶುದ್ದಗಾಳಿಯನ್ನು ನಾಶ ಮಾಡುವುದನ್ನೆ ವಾಯು ಮಾಲಿನ್ಯ ಎನ್ನುವರು.
ವಾಯು ಮಾಲಿನ್ಯಕ್ಕೆ ಕಾರಣಗಳು:
- ನೈಸರ್ಗಿಕ ಜ್ವಾಲಾಮುಖಿಗಳು ಮತ್ತು ಕಾಡ್ಗಿಚ್ಚುಗಳು.
- ಮನುಷ್ಯ ನಿರ್ಮಿತ ಕೈಗಾರಿಕೆಗಳು ಹೊರಸೂಸುವ ವಿಷಪೂರಿತ ಅನಿಲಗಳು.
- ಮನುಷ್ಯನ ಬಳಕೆಗಾಗಿ ನಿರ್ಮಿಸುತ್ತಿರುವ ರಸ್ತೆ, ಜನವಸತಿ ಕೇಂದ್ರಗಳಿಗಾಗಿ ಕಾಡಿನ ಪ್ರಮಾಣವನ್ನು ಕಡಿಮೆ ಮಾಡುತ್ತಿರುವುದು.
- ಇನ್ನು ಪ್ಯಾಸ್ಟಿಕ್ ನಂತಹ ಮಾರಕಗಳನ್ನು ಪರಿಸರಕ್ಕೆ ಸೇರಿಸುತ್ತಿರುವುದು ಇದರಿಂದ ಪರಿಸರದ ವಾಯು ಮಂಡಲಲ್ಲಿ ಸ್ವಚ್ಛವಿಲ್ಲದೆ ಪರಿಸರದ ನಾಶಕ್ಕೆ ಕಾರಣವಾಗುತ್ತಿದೆ.
2. ಜಲ ಮಾಲಿನ್ಯ:
ಜಲ ಮಾಲಿನ್ಯ ಎಂದರೆ, ಜಲ ಎಂದರೆ ನೀರು, ಮಾಲಿನ್ಯ ಎಂದರೆ ನಾಶ. ಅಂದರೆ ಪರಿಸರದಲ್ಲಿರುವ ನೀರಿನ ಮಾಲಿನ್ಯವನ್ನೇ ನಾವು ಜಲ ಮಾಲಿನ್ಯ ಎನ್ನುತ್ತೇವೆ. ಪರಿಸರದಲ್ಲಿನ ನೀರಿನಲ್ಲಿ ವಿಷದ ಪ್ರಮಾಣ ಹೆಚ್ಚಾಗಿ ಅದು ವಿಷವಾಗಿ ಬದಲಾಗುವ ಪ್ರಕ್ರೀಯೆಯೆ ಆಗಿದೆ.
ಜಲ ಮಾಲಿನ್ಯಕ್ಕೆ ಕಾರಣಗಳು:
- ಜಲ ಮಾಲಿನ್ಯಕ್ಕೆ ಮುಖ್ಯ ಕಾರಣ ಎಂದರೆ ಅದು ಕೈಗಾರಿಕೆಗಳು ಕೈಗಾರಿಕೆಯಲ್ಲಿ ತಯಾರಿಸಿದ ವಸ್ತುವಿನಿಂದ ಹೋರಬಂದ ತ್ಯಾಜ್ಯವನ್ನು ಸಮುದ್ರ, ಕೆರೆಗಳಿಗೆ ಬೀಡುತ್ತಿರುವುದು ಇದರಿಂದ ಜಲಚರ ಪ್ರಾಣಿಗಳು ತಮ್ಮ ಪ್ರಾಣಿಗಳು ತಮ್ಮ ಆಸ್ಥಿತ್ವವನ್ನು ಕಳೆದುಕೊಳ್ಳುತ್ತಿದೆ.
- ಉಷ್ಣವಿದ್ಯುತ್ ಸ್ಥಾವರಗಳು, ಗಣಿಗಾರಿಕೆ, ತೈಲಬಾವಿಗಳಿಂದ ಹೊರಬರುವ ವಿಷಯುಕ್ತ ವಸ್ತುವನ್ನು ನೀರಿನೊಂದಿಗೆ ವಿಲೀನಿಕರಿಸುವುದು.
- ಮನುಷ್ಯನ ತ್ಯಾಜ್ಯ, ಪ್ಲಾಸ್ಟಿಕ್ ನಂತಹ ಮಾರಕಗಳನ್ನು ಸಾಗರಗಳ ಒಡಲನ್ನು ಸೇರಿಸುವುದು.
ಜಲಮಾಲಿನ್ಯದಿಂದ ಆಗುವ ಹಾನಿಗಳು:
- ಜಲಚರ ಜೀವಗಳ ನಾಶ
- ಆ ನೀರನ್ನು ಸೇವಿಸುವುದರಿಂದ ಮನುಷ್ಯನಲ್ಲಿ ಅನೇಕ ತರಹದ ಕಾಯಿಲೆಗಳು ಬರುವುದು.
- ಮುಂದಿನ ಪೀಳಿಗೆಯ ಮಕ್ಕಳು ಅಂಗ ವೈಫಲ್ಯದಿಂದ ಬಳಲುವುದು.
- ನೈಸರ್ಗಿಕ ಜಲಮೂಲಗಳ ನಾಶವಾಗುವುದು.
3. ಭೂ ಮಾಲಿನ್ಯ:
ನಮ್ಮ ಸುತ್ತಮುತ್ತಲಿನ ಪರಿಸರದ ಭೂಮಿಯ ನಾಶವನ್ನೇ ಭೂ ಮಾಲಿನ್ಯ ಎನ್ನುವರು. ಭೂಮಿಯರ ಆಸ್ತಿಯು ಅಲ್ಲ ಆದರು ಜನರು ತಮ್ಮದು ಎಂದು ಹೋಡೆದಡುತ್ತಾರೆ.
ಭೂ ಮಾಲಿನ್ಯಕ್ಕೆ ಕಾರಣಗಳು:
ಮುಖ್ಯವಾಗಿ 2 ಕಾರಣಗಳಿವೆ
1. ಅರಣ್ಯ ನಾಶ.
2. ತ್ಯಾಜ್ಯ ಪದಾರ್ಥಗಳ ಅನಿಮಿಯಮಿತ ಬಳಕೆ.
1. ಅರಣ್ಯ ನಾಶ:
ಮನುಷ್ಯ ತನ್ನ ಆಸೆಗಾಗಿ ಪರಿಸರವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾನೆ. ಇದರಿಂದ ಪರಿಸರದಲ್ಲಿನ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಇದೆ ಮುಖ್ಯ ಕಾರಣ ಭೂ ಮಾಲಿನ್ಯಕ್ಕೆ ಇಲ್ಲಿ ಮರ-ಗಿಡಗಳನ್ನು ಬಳಸುವುದರಿಂದ ಮರಗಳು ತನ್ನ ಬೇರಿನಲ್ಲಿ ನೀರನ್ನು ಮತ್ತು ಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತದೆ ಇದರಿಂದ ಭೂಮಿಯ ಮೇಲೆ ಹೆಚ್ಚಿನ ನೀರಿನ ಪ್ರಮಾಣ ಮತ್ತು ಮಣ್ಣು ಸವೇತವನ್ನು ತಪ್ಪಿಸಲು ಸಹಾಯಕವಾಗಿದೆ.
2. ತ್ಯಾಜ್ಯ ಪದಾರ್ಥಗಳ ಅನಿಯಮಿತ ಬಳಕೆ:
ಹೌದು ಈ ಸಮಾಜದಲ್ಲಿ ಹೆಚ್ಚು ಮಾಲಿಕ್ಕೆ ಕಾರಣವೇ ಪರಿಸರದಲ್ಲಿ ಬಳಕೆ ಆಗುವ ತ್ಯಾಜ್ಯವಸ್ತುಗಳ ಬಳಕೆ ಇದು ಭೂಮಿಯಲ್ಲಿ ಕರಗದೆ ಹಾಗೆ ಉಳಿಯುವುದರಿಂದಲೇ ಮಾಲಿನ್ಯಕ್ಕೆ ದಾರಿಯಾಗುತ್ತದೆ.
3. ಶಬ್ದ ಮಾಲಿನ್ಯ:
ಶಬ್ದ ಮಾಲಿನ್ಯ ಎಂದರೆ ನಾವು ದಿನನಿತ್ಯ ಬಳಸುವ ವಾಹನಗಳಿಂದ ಹೊರ ಬರುವ ಕಂಪನವೇ ಆಗಿದೆ ಇದನ್ನೆ ಶಬ್ದ ಮಾಲಿನ್ಯ ಎನ್ನುವರು.
ಶಬ್ದ ಮಾಲಿನ್ಯದ ಕಾರಣ:
- ವಾಹನ ದಟ್ಟತೆ, ಕೈಗಾರಿಕೆಗಳಿಂದ ಶಬ್ದ ಮಾಲಿನ್ಯ.
- ಯಂತ್ರಗಳು, ಧ್ವನಿವರ್ಧಕಗಳಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ.
- ಅತಿಯಾದ ವಾಹನಗಳ ಬಳಕೆ.
- ಅತಿಯಾದ ನಗರೀಕರಣ.
ಶಬ್ದ ಮಾಲಿನ್ಯದ ಪರಿಣಾಮಗಳು:
- ಮನುಷ್ಯನ ಮಾನಸಿಕ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ.
- ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳಿಗೆ ಶಬ್ದ ಮಾಲಿನ್ಯ ದಾರಿಯಾಗುತ್ತದೆ.
- ಕೇವಲ ಮನುಷ್ಯರಿಗೆ ಅಷ್ಟೇ ಅಲ್ಲದೆ ಪ್ರಾಣಿಗಳ ಜೀವನ ಶೈಲಿಗಳ ಮೇಲೆಯು ಪ್ರಭಾವ ಬೀರುತ್ತದೆ.
- ನಗರವನ್ನು ತೊರೆದು ಜನಗಳು ಮತ್ತೆ ಹಳ್ಳಿಗಳತ್ತ ಮನಸ್ಸು ಮಾಡುವ ಸಾಧ್ಯತೆ.
ಪರಿಸರ ಮಾಲಿನ್ಯವನ್ನು ತಡೆಯುವ ಕ್ರಮ:
- ಪ್ಲಾಸ್ಟಿಕ್ ಮರು ಬಳಕೆ ಮಾಡುವುದು.
- ಅರಣ್ಯ ನಾಶವನ್ನು ತಡೆಯುವುದು ಮತ್ತು ಇನ್ನು ಹೆಚ್ಚು ಮರ-ಗಿಡಗಳನ್ನು ಬೆಳೆಸಲು ಪ್ರೋತ್ಸಹಿಸುವುದು.
- ವಾಹನಗಳ ಬಳಕೆಯನ್ನು ಅದಷ್ಟು ಕಡಿಮೆ ಮಾಡುವ ಮೂಲಕ ಸಾರ್ವಜನಿಕ ವಾಹನವನ್ನು ಉಪಯೋಗಿಸುವುದು.
- ಇಂಧನಗನ್ನು ಕಡಿಮೆ ಬಳಸುವ ಮೂಲಕ ಮುಗಿದು ಹೊಗದ ಸಂಪತ್ತಾದ ಸೌರಶಕ್ತಿ, ವಾಯು ಶಕ್ತಿಯನ್ನು ಉಪಯೊಗಿಸಿಕೊಳ್ಳುವುದು.
ಉಪಸಂಹಾರ:
ಈ ಮಾಲಿನ್ಯಗಳಿಂದ ನಮ್ಮ ಭೂಮಿಯನ್ನು ಉಳಿಸುವುದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ ಇದು ಅವಶ್ಯಕ ಕೂಡ ಅಗಿದೆ. ಇದನ್ನು ಇಗೀನಿಂದಲೆ ತೊರೆದು ಹಾಕದಿದ್ದರೆ ಮುಂದಿನ ಪೀಳಿಗೆ ಮಕ್ಕಳು ಬೆನ್ನಿಗೆ ಆಕ್ಸಿಜನ್ ಅನ್ನು ಕಟ್ಟಿಕೊಂಡೆ ತಿರುಗುವ ಪರಿಸ್ಥಿತಿ ಬರುವುದು ಕಂಡಿತ. ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸಲು ಅನೇಕ ಕಾನೂನುಗಳನ್ನು ಮತ್ತು ಹೊಸ-ಹೊಸ ಮಾದರಿಯ ಕಾರ್ಯಕ್ರಮಗಳನ್ನು ತರುತ್ತಿವೆ ನಾವು ಕೂಡ ಈ ಕಾರ್ಯದಲ್ಲಿ ಕೈಜೊಡಿಸುವುದರಿಂದ ಕಂಡಿತ ನಾವು ನಮ್ಮ ದೇಶ, ನಮ್ಮ ವಿಶ್ವವನ್ನು ಕಾಪಾಡಿಕೊಳ್ಳಲು ಸಾಧ್ಯ.
FAQ:
ಪರಿಸರ ಮಾಲಿನ್ಯ ಎಂದರೇನು?
ನಮ್ಮ ಸತ್ತ- ಮುತ್ತಲಿನ ಗಿಡ-ಮರ, ಪ್ರಾಣಿ-ಪಕ್ಷಿಗಳನ್ನು ನಮ್ಮ ಸ್ವರ್ಥಕ್ಕಾಗಿ ಮಲೀನ ಮಾಡುವುದನ್ನೆ ನಾವು ಪರಿಸರ ಎಂದು ಕರೆಯುತ್ತೇವೆ.
ಪರಿಸರ ಮಾಲಿನ್ಯದ ವಿಧಗಳಾವುವು?
1.ವಾಯು ಮಾಲಿನ್ಯ
2.ಜಲ ಮಾಲಿನ್ಯ
3.ಭೂ ಮಾಲಿನ್ಯ
4.ಶಬ್ಧ ಮಾಲಿನ್ಯ
ಭೂ ಮಾಲಿನ್ಯದ ಮುಖ್ಯ 2 ವಿಧಗಳು ಯಾವುವು?
1. ಅರಣ್ಯ ನಾಶ.
2. ತ್ಯಾಜ್ಯ ಪದಾರ್ಥಗಳ ಅನಿಮಿಯಮಿತ ಬಳಕೆ.
ಇತರೆ ವಿಷಯಗಳು:
ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ
ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ