Grama Swarajya Prabandha In Kannada | ಗ್ರಾಮ ಸ್ವರಾಜ್ಯ ಪ್ರಬಂಧ

0

Grama Swarajya Prabandha in Kannada, ಗ್ರಾಮ ಸ್ವರಾಜ್ಯ ಪ್ರಬಂಧ, ಗ್ರಾಮ ಸ್ವರಾಜ್ಯದ ಬಗ್ಗೆ ಪ್ರಬಂಧ, grama swarajyada bagge prabandha, grama swarajya essay in kannada

Grama Swarajya Prabandha In Kannada

ಹಲೋ ಗೆಳೆಯರೆ, ನಾವಿಂದು ಗ್ರಾಮ ಸ್ವರಾಜ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದೆವೆ. ಈ ಗ್ರಾಮ ಸ್ವರಾಜ್ಯ ಗಾಂಧೀಜಿರವರ ಕನಸಾಗಿತ್ತು. ಒಂದು ಗ್ರಾಮ ಬೆಳೆದಾಗ ಮಾತ್ರ ಆ ದೇಶದ ಬೆಳವಣಿಗೆ ಸಾಧ್ಯ ಎಂಬುವುದು ಅವರ ಕಲ್ಪನೆ. ನಾವು ಈ ಪ್ರಬಂಧದಲ್ಲಿ ಗ್ರಾಮ ಸ್ವರಾಜ್ಯ ಎಂದರೇನು, ದೇಶದಲ್ಲಿ ರೈತರ ಸ್ಥಿತಿ, ಈ ಕಲ್ಪನೆಯ ಯಶಸ್ಸಿಗೆ ಬೇಕಾದ ಅಂಶಗಳ ಬಗ್ಗೆ ಅಂದರೆ ಗ್ರಾಮ ಸ್ವರಾಜ್ಯದ ಬಗ್ಗೆ ತಿಳಿದುಕೊಳ್ಳೋಣ.

Grama Swarajya Prabandha In Kannada
Grama Swarajya Prabandha In Kannada

ಪೀಠಿಕೆ:

ಯಾವ ಹಳ್ಳಿ ಅಥವಾ ಗ್ರಾಮ ಸ್ವತಂತ್ರ್ಯವನ್ನು ಹೊಂದುತ್ತದೆಯೋ ಅಂತಹ ಗ್ರಾಮ ದೇಶದ ಅಭಿವೃದ್ದಿಗೆ ಸಹಕಾರಿಯಾಗುತ್ತದೆ. ತಮ್ಮ ಗ್ರಾಮಕ್ಕೆ ಬೇಕಾದ ಕೆಲಸವನ್ನು ಸ್ವತಃ ಗ್ರಾಮಸ್ಥರೆ ಮಾಡಿಕೊಳ್ಳಲು ಈ ಪರಿಕಲ್ಪನೆ ಸಹಕಾರಿಯಾಗಿದೆ. ಈ ಗ್ರಾಮ ಸ್ವರಾಜ್ಯ ಕಲ್ಪನೆಗೆ ಹೆಚ್ಚುಗಮನವನ್ನು ನೀಡಿದವರು ಗಾಂಧೀಜಿ ” ಗ್ರಾಮಗಳ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ” ಎಂಬುದು ಗಾಂಧೀಜಿ ಯಾವರ ಕಲ್ಪನೆ. ಸ್ವಾವಲಂಭಿ ಗ್ರಾಮದ ಕಲ್ಪನೆಯನ್ನು ಗಾಂಧೀಜಿ ಯಾವರು ಸ್ವಾತಂತ್ರ್ಯ ಮುಂಚೆಯೇ ಪ್ರಸ್ತಾಪಿಸಿದರು ಆದರೆ ಅದರ ಬಗ್ಗೆ ಯಾರು ತಮ್ಮ ಗಮನವನ್ನು ನೀಡದ ಕಾರಣ ಈ ಪ್ರಕ್ರೀಯೆಗೆ ಸಹಕಾರಿಯಾಗಿಲ್ಲ. ಆದರೆ ಈಗೀನ ಕಾಲಘಟದಲ್ಲಿ ಅದನ್ನು ಸರಿಯಾಗಿ ಬಳಸಿಕೊಳಲಾಗುತ್ತಿದೆ.

ಗ್ರಾಮ ಸ್ವರಾಜ್ಯ ಎಂದರೇನು?

ಗ್ರಾಮ ಮತ್ತು ಸ್ವರಾಜ್ಯ ಎಂದರೆ ಸ್ವಯಂ ಸಂಯಮ ಮತ್ತು ಸ್ವಯಂ ಆಡಳಿತ ಎಂದು ಅರ್ಥವನ್ನು ನೀಡುತ್ತದೆ.

ಗ್ರಾಮ ಪ್ರದೇಶಗಳಲ್ಲಿ ರೈತರ ಸ್ಥಿತಿ:

ಪ್ರತಿ ವರ್ಷ ದೇಶದಲ್ಲಿ ಗ್ರಾಮೀಣ ಜನರು ಹಳ್ಳಿಗಳನ್ನು ತೊರೆದು ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದರೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಅದು ಉದ್ಯೋಗ, ವ್ಯಾಪಾರ, ಶಿಕ್ಷಣ ಮತ್ತು ಮದುವೆಯಾ ಸಮಸ್ಯೆಗಳು.

ಗ್ರಾಮೀಣ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗಲಿಕ್ಕೆ ಕಾರಣ ಕೃಷಿಯಂತಹ ಗ್ರಾಮೀಣ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಆದಾಯದ ಮೂಲಗಳ ನಿರುದ್ಯೋಗ ಸಮಸ್ಯೆಗಳಿಗೆ ಪರಿಹರ ಪಡೆದುಕೋಳ್ಳಲು. ಗ್ರಾಮೀಣ ಪ್ರದೇಶಗಳಲ್ಲಿ ಯೋಗ್ಯವಾದ ಜೀವನಕ್ಕೆ ಅಗತ್ಯವಾದ ಆಧುನಿಕ ಸೌಕರ್ಯಗಳು ಮತ್ತು ಸೇವೆಗಳ ಕೊರತಯನ್ನು ನೀಗಿಸಿಕೊಳ್ಳಲು

ಹದಗೆಡುತ್ತಿರುವ ಆರ್ಥಿಕ ಸ್ಥಿತಿ ಮತ್ತು ಬೆಳೆ ವೈಫಲ್ಯಗಳಿಂದಾಗಿ ಅನೇಕ ಭಾರತೀಯ ರೈತರು ಪ್ರತಿವರ್ಷಹಳ್ಳಿಯ ಜನರು ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದರೆ. ಈ ಸಮಸ್ಯೆಯಿಂದಾಗಿ ದೇಶದ 10% ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದರೆ. ಇದು ದೇಶದ ಆರ್ಥಿಕ ಮತ್ತು ದೇಶದ ಅಭಿವೃದ್ದಿಗೆ ಮಾರಕ ಬೆಳವಣಿಗೆಯಾಗಿದೆ.

ಗ್ರಾಮ ಸ್ವರಾಜ್ಯ ಕಲ್ಪನೆ:

ಈ ಕಲ್ಪನೆಯು ಋಗ್ವೇದ ಕಾಲದಲ್ಲಿಯೆ ರಾಮಾಯಣ ಮತ್ತು ಮಹಾಭಾರತಗಳ ಕಾಲದಲ್ಲಿಯೇ ಈ ಪರಿಕಲ್ಪನೆ ಕಾಣಿಸಿಕೊಂಡಿದೆ.

ಭಾರತವನ್ನು ಆಳಿದ ಎಲ್ಲ ರಾಜಮನೆತನಗಳ ಕಾಲದಿಂದಲೂ ಗ್ರಾಮಗಳ ಸ್ವಯಂ ಆಡಳಿತಕ್ಕೆ ಗ್ರಾಮಸಭಾಗಳನ್ನು ರಚಿಸಿ ಸ್ಥಳೀಯವಾದ ಆಡಳಿತಕ್ಕೆ ಹೆಚ್ಚು ಅವಕಾಶಗಳನ್ನು ನೀಡಲಾಗುತ್ತಿತ್ತು.ಆದರೆ ಬ್ರಿಟಿಷರ ಆಳ್ವಿಕೆ ಪ್ರಾರಂಭವಾದ ನಂತರ ಕೇಂದ್ರೀಕೃತ ಆಧಿಕಾರವು ಪ್ರಾರಂಭವಾಯಿತು.

ಭಾರತವು ಹಲವು ಗ್ರಾಮಗಳಿಂದ ಕೂಡಿದ ದೇಶ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮವಾಸಿಗಳೆ ಆಗಿರುವುದರಿಂದ ಪ್ರತಿಯೊಂದು ಗ್ರಾಮವು ಮತ್ತು ಪ್ರತಿಯೊಂದು ಗ್ರಾಮಸ್ಥನು ತಮ್ಮ ಗ್ರಾಮವನ್ನು ತಾವೇ ಆಳ್ವಿಕೆ ನಡೆಸಿದರೆ ಗ್ರಾಮ ಸ್ವರಾಜ್ಯ ಕಲ್ಪನೆಯ ಸಾರ್ಥಕತೆಗೆ ಪೂರಕವಾಗಿದೆ.

ಗ್ರಾಮ ಸ್ವರಾಜ್ಯ ಕಲ್ಪನೆಯ ಯಶಸ್ಸಿಗೆ ಮುಖ್ಯ ಅಂಶಗಳು:

  1. ಗ್ರಾಮ ನೈರ್ಮಲ್ಯ ಆರೋಗ್ಯ ಶಿಕ್ಷಣ
  2. ಪ್ರತಿ ಮನೆಗು ನೀರು ಸರಬರಾಜು
  3. ಗ್ರಾಮದ ಪ್ರತಿ ಮನೆಗೂ ವಿದ್ಯುತ್‌
  4. ರಸ್ತೆಗಳ ಸೌಲಭ್ಯ
  5. ಮೂಲಭೂತ ಸೌಕರ್ಯಗಳು

ಇವೆಲ್ಲವನ್ನು ಮಾಡಿದಾಗ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸು ನನಸಾಗುತ್ತದೆ.

ಉಪಸಂಹಾರ:

ಹೆಚ್ಚು ಹೆಚ್ಚು ಸ್ವದೇಶಿ ವಸ್ತುಗಳನ್ನೆ ಉಪಯೊಗಿಸುವ ಮೂಲಕ ಸ್ವರಾಜ್ಯದ ಸ್ಥಾಪನೆಗೆ ನಾವು ಮುಂದಗೋಣ. ಹಾಗಾಗಿ ಗ್ರಾಹಕರು ಸ್ಥಳೀಯ ಉತ್ಪನ್ನಗಳಿಂದ ಮತ್ತು ಸ್ಥಳೀಯ ಉತ್ಪಾದಕರಿಂದ ತಮ್ಮ ಅವಶ್ಯಕತೆಗಳನ್ನುಪೂರೈಸಿದಾಗ ಅದು ನೇರವಾಗಿ ರೈತರ ಮತ್ತು ಕುಶಲಕರ್ಮಿಗಳ ಬೆಳವಣಿಗೆಗೆ ಸಹಾಯಕವಾಗುತ್ತದೆ.

FAQ:

ಗ್ರಾಮ ಸ್ವರಾಜ್ಯ ಎಂದರೇನು?

ಗ್ರಾಮ ಮತ್ತು ಸ್ವರಾಜ್ಯ ಎಂದರೆ ಸ್ವಯಂ ಸಂಯಮ ಮತ್ತು ಸ್ವಯಂ ಆಡಳಿತ ಎಂದರ್ಥ.

ಗಾಂಧೀಜಿಯವರ ಕನಸು ಏನಾಗಿತ್ತು?

ಗ್ರಾಮಗಳ ಅಭಿವೃದ್ಧಿಯೇ ಭಾರತದ ಅಭಿವೃದ್ಧಿ.

ಏಕೆ ರೈತರು ಗ್ರಾಮಗಳನ್ನು ತೊರೆದು ನಗರ ಪ್ರದೇಶಗಳಿಗೆ ತೆರಳುತ್ತಿದ್ದಾರೆ?

ಉದ್ಯೋಗ, ವ್ಯಾಪಾರ, ಶಿಕ್ಷಣ, ಆರ್ಥಿಕ ಪರಿಸ್ಥಿತಿ ಇತ್ಯಾದಿ.

ಇತರೆ ವಿಷಯಗಳು:

ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ

ಸ್ನೇಹಿತರ ಬಗ್ಗೆ ಪ್ರಬಂಧ

 ರೈತರ ಬಗ್ಗೆ ಪ್ರಬಂಧ

Leave A Reply

Your email address will not be published.