ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ I Essay on Importance of National Festivals in Kannada

0

ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ, Essay on Importance of National Festivals Rastriya habbagala bagge prabandha in kannada

ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ

ಇಲ್ಲಾ ನನ್ನ ಓದುಗ ಮಿತ್ರರಿಗೆ ಈ ಸಂಚಿಕೆಗೆ ಆತ್ಮೀಯ ಸ್ವಾಗತ, ನಾವಿಂದು ಎಲ್ಲಾರೂ ಜೊತೆ ಸೇರಿ ಆಚರಿಸುವ ಹಬ್ಬದ ಬಗ್ಗೆ ಚರ್ಚೆ ಮಾಡುತ್ತಿದ್ದೆವೆ. ಅಂದರೆ ನಾವು ನಮ್ಮ ರಾಷ್ಟ್ರೀಯ ಹಬ್ಬದ ಬಗ್ಗೆ ಚರ್ಚೆ ಮಾಡುತ್ತಿದ್ದೆವೆ. ಈ ಹಬ್ಬಗಳ ಪ್ರಾಮುಖ್ಯತೆ, ಇದರ ಉದ್ದೇಶ, ಇದರ ಗುರಿ ನಮಗೆ ಇದರಿಂದ ಆಗುವ ಪ್ರಯೋಜನ ಇದೆಲ್ಲಾದರ ಬಗ್ಗೆ ನಾವಿಂದು ತಿಳಿದು ಕೊಳೊಣ. ಈ ವಿಷಯಗಳು ಕೇವಲ ಪುಸ್ತಕಕ್ಕೆ ಸಂಬಂದಿಸಿದಲ್ಲ ಇದು ಎಲ್ಲಾ ಭಾರತೀಯನ್ನುಆಚರಿಸಲೆ ಬೇಕಾದ ಹಬ್ಬಗಳು ಇದರ ಮಹತ್ವ ಅಪಾರವಾದುದ್ದಗಿದೆ. ಈ ಬಗ್ಗೆ ಮುಂದೆ ಪ್ರಬಂಧದಲ್ಲಿ ತಿಳಿಯೊಣ ಬನ್ನಿ.

Essay on Importance of National Festivals Kannada
Essay on Importance of National Festivals Kannada

ಪೀಠಕೆ:

ನಾವು ವಾಸಿಸುವ ಈ ಭಾರತ ದೇಶದಲ್ಲಿ ಸಾವಿರಾರು ಭಾಷೆಯಾಡುವ, ನೂರಾರು ಧರ್ಮಗಳು, ಲಕ್ಷಂತರ ಜಾತಿಗಳು ವಾಸಿಸುವ ಇಲ್ಲಿ ಒಂದೆ ಮನೋಭಾವ ಇರಲು ಹೇಗೆ ಸಾಧ್ಯ ಅಲ್ಲವೆ, ಹಾಗೇ ಈ ಇಲ್ಲಿ ಅನೇಕ ಆಚರಣೆ, ಆಚಾರ-ವಿಚಾರ, ಭಾಷೆ ಬೇಧದ ಮಧ್ಯದಲ್ಲಿಯು ಎಲ್ಲಾರು ಒಟ್ಟಾಗಿ ಬದುಕುವುದು ಕಷ್ಟಕರವಾದ ಮಾತು. ಅಂತದರಲ್ಲಿ ನಮ್ಮ ದೇಶದಲ್ಲಿ ಎಲ್ಲಾರು ಒಟ್ಟಾಗಿ ಕೇಲವು ಹಬ್ಬಗಳನ್ನು ಆಚರಣೆ ಮಾಡುತ್ತಾರೆ ಅಂತಹ ಹಬ್ಬಗಳನ್ನು ನಮ್ಮ ರಾಷ್ಟ್ರೀಯ ಹಬ್ಬ ಎಂದು ಕರೆಯುತ್ತಾರೆ, ಅಂತಹ ಹಬ್ಬಗಳು ಅನೇಕ ಅವುಗಳಲ್ಲಿ ಅತಿ ಮುಖ್ಯವಾದವು ಗಳ ಬಗ್ಗೆ ನಾವು ಚರ್ಚೆ ಮಾಡೋಣ.

ರಾಷ್ಟ್ರೀಯ ಹಬ್ಬಗಳು:

  1. ಗಣರಾಜ್ಯೋತ್ಸವ
  2. ಸ್ವಾತಂತ್ರ್ಯದಿನಾಚರಣೆ
  3. ಶಿಕ್ಷಕರ ದಿನಾಚರಣೆ
  4. ಗಾಂಧಿ ಜಯಂತಿ
  5. ಮಕ್ಕಳದಿನಾಚರಣೆ

ಇನ್ನೂ ಅನೇಕ ದಿನಗಳು ಇವೆ ಅದರೆ ಈ ಮೇಲಿನ ಕೆಲವು ದಿನಗಳನ್ನು ಅತಿ ಮುಖ್ಯಎಂದು ಷೋಷಿಸಲಾಗಿದೆ.

ಗಣರಾಜ್ಯೋತ್ಸವ:

ಈ ದಿನವನ್ನು ಆಚರಿಸಲು ಮುಖ್ಯ ಕಾರಣ ಎಂದರೆ, ಭಾರತ ಸ್ವಾತಂತ್ರ್ಯವಾಗಿ ತನ್ನದೇ ಆದ ಗಣರಾಜ್ಯವನ್ನು ಸ್ಥಾಪಿಸಿಕೊಂಡ ಸವಿದಿನವನ್ನೆ ಈ ಗಣರಾಜ್ಯ ದಿನ ಎಂದು ತಿಳಿಸಲಾಗಿದೆ, ಈ ದಿನ ಪ್ರತಿ ಭಾರತೀಯನಿಗೆ ಹೆಮ್ಮೆಯ ದಿನ , ಈ ದಿನದಿಂದಲೆ ನಿಜಾವಾದ ಆಧಿಕಾರವನ್ನು ಜನರು ನಿರ್ವಹಿಸತೊಡಗಿದರು.

ಭಾರತಕ್ಕೆ 15 ಆಗಸ್ಟ 1947ರಲ್ಲಿಯೇ ಸ್ವಾತಂತ್ರ್ಯ ಬಂದಿತ್‌ ಆದರು ಗಣರಾಜ್ಯ ಸ್ಥಾಪನೆಗೆ ಇನ್ನು ಎರಡುವರೆ ವರ್ಷಗಳ ಅವಧಿ ಬೇಕಾಗಿತ್ತು. ಅದರಂತೆ 1950 ರ ಜನವರಿ 26 ರಂದು ಭಾರತ ಸಂವಿಧಾನವು ಗಣರಾಜ್ಯ ವನ್ನು ಅಂಗೀಕರಿಸಿತು. ಇದರಿಂದಗಿ ಭಾರತ ಬೇರೆಯವರ ದಬ್ಬಳಿಕೆಯ ಹಂಗಿನಿಂದ ಹೋರಬಂದಿತು. ಈ ದಿನದ ಸವಿ ನೆನಪಿಗಾಗಿ ಜನವರಿ 26 ಅನ್ನು ಗಣರಾಜ್ಯೋತ್ಸವ ದಿನ ಎಂದು ಷೋಷಣೆ ಮಾಡಲಾಯಿತು. ಈ ದಿನದಂದು ಭಾರತದ ಎಲ್ಲಾ ಜನರು ತಮ್ಮ ಜಾತಿ,ಧರ್ಮ-ಭೇದವನ್ನು ಮರೆತು ಈ ದಿನವನ್ನು ಆಚರಿಸುತ್ತಾರೆ.

ಸ್ವಾತಂತ್ಯ್ರ ದಿನಾಚರಣೆ:

ಈ ದಿನ ಪ್ರತಿ ಯೊಬ್ಬ ಭಾರತಿಯನ್ನು ನೆನಪಿಡ ಬೇಕಾದ ದಿನ ಏಕೆಂದರೆ ಈ ದಿನದಂದು ನಮ್ಮ ದೇಶಕ್ಕೆ ಅಂಟಿದ ಗುಲಾಮಗಿರಿಯ ಕಳಂಕ ತೊಲಗಿದ ದಿನ, ಅದೆಷ್ಟೊ ಜನರ ತ್ಯಾಗ- ಬಲಿದಾನವು ಸಾರ್ಥಕವಾದ ದಿನ . ಸುಮಾರು ಎರಡು ದಶಕಗಳಿಂದ ಭಾರತ ವನ್ನು ಆಳಿದ ಬ್ರೀಟಿಷರಿಂದ ಮುಕ್ತಿ ಸಿಕ್ಕ ದಿನ . ಹೌದು ಈ ದಿನವೇ ನಮಗೆ ಸ್ವಾತಂತ್ಯ್ರ ಸಿಕ್ಕ ದಿನ 15 ಆಗಸ್ಟ್‌ 1947 .

ಈ ದಿನ ಸಂಭವಿಸಿದ ಹೋರಟದ ಫಲವಾಗಿಯೆ ಈ ದಿನ ವನ್ನು ಸ್ವಾತಂತ್ರ್ಯ ದಿನ ಎಂದು ಕರೆಯಲಾಯಿತು. ಈ ದಿನದಂದು ಅಷ್ಟೇ ಅಲ್ಲದೆ ಪ್ರತಿ ದಿನವು ಭಾರತದ ಪ್ರಜೆಗಳು ಅವರ ದೇಶ ಮತ್ತು ದೇಶದ ಸಂಸ್ಕೃತಿಯನ್ನು ಭಾಷೆಯನ್ನು ಗೌರವಿಸುತ್ತಾರೆ ಹಾಗಾಗಿಯೆ ಈ ದಿನವನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಹಾಗಾಗಿಯೇ ಈ ದಿನವನ್ನು ಅಂದರೆ 15 ಆಗಸ್ಟ್‌ 1947 ಅನ್ನು ಭಾರತದ ಸ್ವಾತಂತ್ರ್ಯ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

ಶಿಕ್ಷಕರ ದಿನಾಚರಣೆ:

ಶಿಕ್ಷಕರ ದಿನವನ್ನು ಕೇವಲ ಭಾರತದಲ್ಲಿ ಆಚರಣೆ ಮಾಡುವುದಿಲ್ಲ ಅನೇಕ ದೇಶಗಳಲ್ಲಿ ಆಚರಿಸುತ್ತಾರೆ ಆದರೆ ಭಾರತದಲ್ಲಿ ಸರ್ವಪಲ್ಲಿ ರಾಧಕೃಷ್ಣನ್ ರವರ ಜನ್ಮದಿನದ ಸವಿ ನೆನಪಿಗಾಗಿ ಮತ್ತು ಅವರ ಗೌರವಾರ್ಥವಾಗಿ ಶಿಕ್ಷಕರ ದಿನ ವನ್ನು ಆಚರಣೆ ಮಾಡಲಾಗುತ್ತದೆ. ಈ ಮಹಾನ್‌ ವ್ಯಕ್ತಿಯು ಭಾರತದ ರಾಷ್ಟ್ರಪತಿಯಾಗಿಯು ಮತ್ತು ಉಪರಾಷ್ಟ್ರ ಪತಿಯಾಗಿಯು ಸೇವೆ ಸಲ್ಲಿಸಿದ್ದಾರೆ.

ರಾಧಕೃಷ್ಣನ್‌ ರವರು ಸ್ವಯಂ1918 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹರಾಜ ಕಾಲೇಜಿನ ತತ್ವಜ್ಙಾನ ವಿಭಾಗದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. ಅದ್ದರಿಂದಲೆ ಇವರ ಜನ್ಮ ದಿನವನ್ನು ಶಿಕ್ಷಕರ ದಿನ ವನ್ನಾಗಿ ಆಚರಿಸಲಾಗಿತ್ತದೆ. ಸೆಪ್ಟೆಂಬರ್‌ 5 ಅನ್ನು ಭಾರತದಲ್ಲಿ ಆಚರಿಸಲಾಗುತ್ತದೆ. ಹಾಗೂ ವಿಶ್ವ ಶಿಕ್ಷಕರ ದಿನ ಎಂದು 5 ಅಕ್ಟೋಬರ್‌ ಅಂದು ಆಚರಿಸುತ್ತಾರೆ.

ಗಾಂಧಿ ಜಯಂತಿ:

ಭಾರತ ಅಷ್ಟೇ ಅಲ್ಲದೆ ಇಡೀ ವಿಶ್ವಕ್ಕೆ ಪರಿಚಯ ಇರುವ ಹೆಸರು ಎಂದರೆ ಅದು ಗಾಂಧೀಜಿ . ಇವರ ಸಾಧನೆ ಅಂತಹದ್ದು ಇವರು ದೇಶಕ್ಕಾಗಿ ಮತ್ತು ದೇಶದ ಜನರಿಗಾಗಿ ವಹಿಸಿರುವ ಕಷ್ಟ ಅಷ್ಟು ಎನ್ನಬಹುದು. ಗಾಂಧೀಜಿಯವರು ಅಕ್ಟೋಬರ್‌ 2 ರಂದು . ಇವರು ಒಬ್ಬ ಮಹನ್‌ ಜನನಾಯಕ ಮತ್ತು ಸ್ವಾತಂತ್ರ್ಯ ಹೋರಟಗಾರ ಇವರ ವಿಭಿನ್ನವಾದ ಹೋರಟದಿಂದಗಿಯೇ ಭಾರತ ಜನರ ಮನಸ್ಸನ್ನು ಗೆದ್ದಿರುವ ಇವರು ಕೇವಲ ಭಾರತವಷ್ಟೇಅಲ್ಲದೆ ವಿದೇಶಿಯರಲ್ಲಿಯು ಮನೆಮಾತಗಿದ್ದಾರೆ.

ಜನರು ಇವರ ಜನಪ್ರಿಯತೆಗೆ ತಕ್ಕಂತೆ ಇವರಿಗೆ ರಾಷ್ಟ್ರಪಿತಾ ಎಂಬ ಬಿರುದನ್ನು ನೀಡಿ ಆ ಹೆಸರಿನಿಂದಲೇ ಕರೆಯುತ್ತಾರೆ. ಇವರ ಜನ್ಮದಿನವಾದ 2 ಅಕ್ಟೋಬರ್‌ ಅನ್ನು ಗಾಂಧಿ ಜಯಂತಿ ಎಂದೇ ಆಚರಿಸುತ್ತಾರೆ,

ಮಕ್ಕಳ ದಿನಾಚರಣೆ:

ಈ ದಿನ ಪ್ರತಿಯೊಂದು ಮಗುವು ಖುಷಿಪಡುವ ದಿನ ಈ ದಿನ ಮಕ್ಕಳ ದಿನ ಆದರೆ ಈ ದಿನಕ್ಕೆ ಮುಖ್ಯ ಕಾರಣ ಎಂದರೆ ಅದು ನಮ್ಮ ದೇಶದ ಮೊದಲ ಪ್ರಧಾನಿಗಳದ ಪಂಡಿತ್‌ ಜವಹರ ಲಾಲ್‌ ನೆಹರೂ ಇವರಿಗೆ ಮಕ್ಕಳು ಎಂದರೆ ಬಹಳ ಇಷ್ಟ. ಇವರು ತಮ್ಮ ಜನ್ಮ ದಿನವನ್ನು ಮಕ್ಕಳ ದಿನ ಎಂದೇ ಆಚರಿಸಲು ತಿಳಿಸಿದ್ದಾರೆ.

ಇವರು ನವೆಂಬರ್‌ 14 ರಂದು ಇವರು ಜನಿಸಿದರು . ಇವರು ಯಾವಗಲು ಮಕ್ಕಳ ಬಗ್ಗೆ ಹೆಚ್ಚಿನ ಪ್ರೀತಿ ಹೊಂದಿದ್ದರು ಇದರಿಂದ ಆಗಿಯೆ ಭಾರತದ ಮಕ್ಕಳು ಜವಹರ ಲಾಲ್‌ ನೆಹರೂರನ್ನು ಪ್ರೀತಿಯಿಂದ ಚಾಚಾ ಪಂಡಿತ್‌ ಜವಹರ ಲಾಲ್‌ ನೆಹರೂ ಎಂದು ಕರೆಯುತ್ತಿದ್ದರು.

1964 ರಲ್ಲಿ ನೆಹರುರವರು ಅವರ ಕೊನೆಯುಸಿರೆಳೆದರು ಅನಂತರ ಅವರ ಜನ್ಮದಿನವಾದ ನವೆಂಬರ್‌ 14 ಅನ್ನು ಮಕ್ಕಳ ದಿನವಾಗಿ ಆಚರಿಸಲಾಯಿತು.

ಉಪಸಂಹಾರ:

ನಾವು ಇಂದು ರಾಷ್ಟ್ರೀಯ ಹಬ್ಬಗಳ ಬಗ್ಗೆ ಚರ್ಚೆ ಮಾಡಿದೆವು. ಈ ಮೇಲಿನ ಎಲ್ಲಾ ಹಬ್ಬಗಳು ಎಲ್ಲಾ ಭಾರತೀಯನು ಆಚರಿಸಲೆ ಬೇಕಾದ ಹಬ್ಬಗಳು ಭಾರತದಲ್ಲಿ ಇರುವ ಅನೇಕ ಬಗೆಯ ಜನರು ತಮ್ಮ ಜಾತಿ, ಧರ್ಮ, ಆಚರಣೆಗಳನ್ನು ಮರೆತು ಈ ಹಬ್ಬಗಳನ್ನು ಆಚರಣೆ ಮಾಡುತ್ತಾರೆ. ನಮಗಾಗಿ ಅದೆಷ್ಟೋ ಮಹಾನ್‌ ವ್ಯಕ್ತಿಗಳು ತಮ್ಮ ಜೀವ ತ್ಯಾಗ ಮಾಡಿದ್ದಾರೆ ಅವರ ತ್ಯಾಗ ಮತ್ತು ಬಲಿದಾನಗಳಿಗೆ ಗೌರವ ಸಲ್ಲಿಸುವುದು ಮತ್ತು ಅವರ ಆದರ್ಶಗಳನ್ನು ನಮ್ಮದಾಗಿಸಿ ಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.

ಸ್ವಾತಂತ್ರ್ಯ ದಿನಚರಣೆನ ಯಾವಗ?

15 ಆಗಸ್ಟ್‌

ಸರ್ವಪಲ್ಲಿ ರಾಧಕೃಷ್ಣನ್‌ ರವರು ಎಷ್ಟನೇ ರಾಷ್ಟ್ರಪತಿ ಯಾಗಿದ್ದರು?

2

ಗಾಂಧಿ ಜಯಂತಿಯನ್ನು ಯಾವಗ ಆಚರಿಸುತ್ತಾರೆ?

ಅಕ್ಟೋಬರ್‌ 2

ಇತರೆ ವಿಷಯಗಳು:

ಸ್ನೇಹಿತರ ಬಗ್ಗೆ ಪ್ರಬಂಧ

ಮತದಾನ ಪ್ರಬಂಧ 

 ರೈತರ ಬಗ್ಗೆ ಪ್ರಬಂಧ

ನಿರುದ್ಯೋಗದ ಬಗ್ಗೆ ಪ್ರಬಂಧ

Leave A Reply

Your email address will not be published.