ಪುಸ್ತಕಗಳ ಮಹತ್ವ ಪ್ರಬಂಧ | Books Importance Essay in Kannada

0

ಪುಸ್ತಕಗಳ ಮಹತ್ವ ಪ್ರಬಂಧ, Books Importance Essay in Kannada, pustakagala mahatva prabandha in kannada

ಪುಸ್ತಕಗಳ ಮಹತ್ವ ಪ್ರಬಂಧ

ಹಲೋ ನನ್ನ ಎಲ್ಲಾ ಓದುಗ ಮಿತ್ರರೇ, ನಾವಿಂದು ಚರ್ಚೆ ಮಾಡುತ್ತಿರುವ ವಿಷಯ ಎಂದರೆ ಅದು ಪುಸ್ತಕದ ಮಹತ್ವದ ಬಗ್ಗೆ ಯಾರಿಗೆ ತಿಳಿದಿಲ್ಲ ಪುಸ್ತಕದ ಬಗ್ಗೆ ನಾವು ನೀವು ಎಲ್ಲಾರು ಪುಸ್ತಕವನ್ನು ಪುಸ್ತಕದ ಮಹತ್ವವನ್ನು ಅರಿತವರೆ . ಮಹಾನ್‌ ವ್ಯಕ್ತಿಗಳೆ ಹೇಳಿದಂತೆ ಪುಸ್ತಕಕ್ಕಿಂತ ಒಳ್ಳೇಯ ಗೆಳೆಯ ಈ ಪ್ರಪಂಚದಲ್ಲಿ ಇಲ್ಲ ಎಂದು ಆ ಮಾತಿನಂತೆ ಪ್ರಸ್ತಕ ಎಂದು ನಮ್ಮನ್ನು ಮೇಲೆಯೆ ಎತ್ತುತ್ತದೆ ಎಂದು ಕೆಳಗಿಳಿಸುವುದಿಲ್ಲ. ಹಾಗೆ ಈ ಪ್ರಬಂಧದಲ್ಲಿ ನಾವು ಪುಸ್ತಕ ನಮ್ಮ ಜೀವನಕ್ಕೆ ಏಕೆ ಸಹಾಯಕ ಹಾಗೂ ಈ ಪುಸ್ತಕದಿಂದ ಸಿಗುವ ಉಪಯೋಗದ ಬಗ್ಗೆ ಚರ್ಚಿಸೋಣ.

Books Importance Essay in Kannada
Books Importance Essay in Kannada

ಪೀಠಿಕೆ:

ಪುಸ್ತಕಗಳನ್ನು ಓದುವುದರಿಂದ ನಾವು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಪುಸ್ತಕದ ಬಗ್ಗೆಯಷ್ಟು ಹೇಳಿದರು ಕಡಿಮೆ ಏಕೆಂದರೆ ಜೀವನವನ್ನು ಸುಂದರವಾಗಿಸಿಕೊಳ್ಳಲು ಪುಸ್ತಕ ಸಹಯಾಕವಾಗಿದೆ. ನೀವು ಇರುವ ಜಾಗದಿಂದಲೇ ಲೋಕ ಜ್ಞಾನಕ್ಕಾಗಿ ಪುಸ್ತಕ ಓದುವುದು ಅವಶ್ಯಕವಾಗಿದೆ. ಪುಸ್ತಕ ನಮ್ಮ ಜೀವನವನ್ನೆ ಬದಲಾಯಿಸುವ ಶಕ್ತಯನ್ನು ಹೊಂದಿದೆ ಎಂದರು ತಪ್ಪಾಗಲಾರದು.

ಏಪ್ರೀಲ್‌ 13ನ್ನು ವಿಶ್ವ ಪುಸ್ತಕದಿನ ಎಂದು ಘೋಷಣೆ ಮಾಡಲಾಗಿದೆ. ಈ ದಿನವನ್ನು ಆಯ್ಕೆಗೆ ಮುಖ್ಯಕಾರಣ ಎಂದರೆ ಈ ದಿನದಂದು ಜನಪ್ರೀಯ ಲೇಖಕರಾದ ವಿಲಿಯಂ ಷೇಕ್ಸಪಿಯರ್‌, ಮಿಗುಯೆಲ್‌ ಡಿ ಸರ್ವಾಂಟೆನ್‌, ವಿಲಿಯಂ ವರ್ಡ್ಸ್‌ ವರ್ತ್‌ ರ ಮರಣದ ದಿನಾಂಕವಾದ ಕಾರಣ ಈ ದಿನವನ್ನು ನೀಡಲಾಗಿದೆ.

ಪುಸ್ತಕದಿಂದ ಆಗುವ ಪ್ರಯೋಜನಗಳು:

1. ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ.

ಹೌದು ವಿದ್ಯರ್ಥಿ ಜೀವನದಲ್ಲಿಯಂತು ಬಹುಮುಖ್ಯ ಪಾಲನ್ನು ಈ ಪುಸ್ತಕವು ಪಡೆದುಕೊಳ್ಳುತ್ತದೆ. ಹೆಚ್ಚು ಹೆಚ್ಚು ವಿಷಯಗಳನ್ನು ತಿಳಿಸುವ ಮೂಲಕ ಅದನ್ನು ಮನಸ್ಸಿನಲ್ಲಿಯೇ ಇರುವಂತೆ ಮಾಡುತ್ತದೆ ಇದರಿಂದ ನಮ್ಮ ಜ್ಞಾನ ಸುಧಾರಣೆ ಸಾಧ್ಯ. ಪ್ರತಿನಿತ್ಯ ಓದುವುದರಿಂದ ಅವರ ಬುದ್ದಿಯು ಚುರುಕುತನವನ್ನು ಪಡೆದು ಕೊಳ್ಳುತ್ತದೆ. ಅನೇಕ ವಿಷಯವನ್ನು ನೆನಪಿನಲಲ್ಲಿ ಇಟ್ಟುಕೊಳ್ಳುವಂತೆ ಸಹಕಾರಿಯಾಗುತ್ತದೆ.

2. ಶಬ್ದಕೋಶ ಸುಧಾರಣೆ:

ಹೆಚ್ಚಿನ ಓದು ಪದ ಸಂಗ್ರಹಣೆಯ ಗುಡಗುತ್ತದೆ. ಇದರಿಂದ ನಾವೇಸ್ವತಃ ಕೃತಿ ರಚನೆಗೆ ಸಹಕಾರಿಯಾಗಿದೆ. ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ತಿಳಿಯಲು ಸಹಕಾರಿಯಾಗಿದೆ. ಮತ್ತು ಚುರುಕುತನವನ್ನು ನೋಡಬಹುದು ಇದು ಮನುಷ್ಯನಿಗೆ ಒಳ್ಳೇಯ ಹವ್ಯಾಸವಾಗಿದೆ.

3. ಪುಸ್ತಕಗಳಿಂದ ಒತ್ತಡ ನಿವಾರಣೆ.

ನಮ್ಮ ಈಗೀನ ಪೀಳಿಗೆಯು ಅತಿಯಾದ ಒತ್ತಡದಿಂದ ಬಳಲುತ್ತಿದೆ ಇದಕ್ಕೆ ಮುಖ್ಯ ಕಾರಣ ಎಂದರೆ ಅದು ಬದಲಾಗುತ್ತಿರುವ ಜನರ ಮನಸ್ಥಿತಿ. ಚಿಕ್ಕ-ಚಿಕ್ಕ ವಿಷಯಗಳಗೂ ಜೀವವನ್ನೇ ಕಳೆದು ಕೊಳ್ಳುವ ಮನಸ್ಸು ಈಗೀನವರಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ ಅದಕ್ಕಾಗಿ ಪುಸ್ತಕವು ಅಂತಹ ದುಡುಕು ನಿರ್ಧಾರಗಳಿಗೆ ಕಡಿವಾಣವನ್ನು ಹಾಕುತ್ತದೆ. ಒಳ್ಳೇಯ ಕಥೆ ಪುಸ್ತಕಗಳು, ನೈತಿಕ ವಿಚಾರ ಧಾರೆಗಳನ್ನು ಹೊಂದಿರುವ ಪುಸ್ತಕಗಳಿಂದ ಜೀವನದ ಮೌಲ್ಯವನ್ನು ಬದಲಾಯಿಸಿಕೊಳ್ಳಲು ಸಹಕಾರಿಯಾಗಿದೆ.

4. ಕೌಶಲ್ಯಗಳ ಅಭಿವೃದ್ಧಿಗೆ ಸಹಾಯಕ.

ಎಲ್ಲಾರ ಜೀವನದಲ್ಲಿ ಕೌಶಲ್ಯಗಳು ಅತಿ ಮುಖ್ಯವಾಗಿ ಬೇಕಾಗುತ್ತದೆ ಇದಕ್ಕೆ ಮುಖ್ಯ ಕಾರಣ ನಗರ ಅಭಿವೃದ್ಧಿಯಾದಂತೆ ನಗರದ ಜನರು ಕೂಡ ತಮ್ಮ ದೃಷ್ಠಿಕೋನವನ್ನು ಬದಲಿಸಿಕೊಂಡಿದ್ದರೆ ಅದಕ್ಕಾಗಿ ಪ್ರತಿಯೊಬ್ಬರಲ್ಲಿ ಯಾಬ ಪ್ರತಿಭೆ ಇದೆಯೋ ಅದಕ್ಕೆ ತಕ್ಕಂತೆ ಗೌರವ ಸೀಗುತ್ತದೆ. ಹಾಗಾಗಿ ನಾವು ನಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವುದು ಅತಿ ಮುಖ್ಯ ಇದಕ್ಕಾಗಿ ನಾವು ಅತಿ ಮುಖ್ಯವಾಗಿದೆ ಅದಕ್ಕಾಗಿ ನಾವು ಹೆಚ್ಚಿನ ಪುಸ್ತಕಗಳನ್ನುಓದುವುದು ಅವಶ್ಯಕ.

5. ಧನಾತ್ಮಕ ಮೌಲ್ಯವನ್ನು ಹೆಚ್ಚಿಸುತ್ತದೆ.

ಮನುಷ್ಯನ ಅಭಿವೃದ್ಧಿಗೆ ಇಂತಹ ಮೌಲ್ಯಗಳು ಸಹಕಾರಿಯಾಗಿವೆ. ಅದನ್ನು ಪುಸ್ತಕದಿಂದ ಪಡೆದುಕೊಳ್ಳಬಹುದು ಅದಕ್ಕಾಗಿಯೆ ಹೆಚ್ಚಿನ ಪುಸ್ತಕದ ಅಭ್ಯಾಸದಿಂದ ಜೀವದಲ್ಲಿ ಒಳ್ಳೇಯ ಅಂಶಗಳನ್ನು ನಮ್ಮದಾಗಿಸಿಕೊಳ್ಳ ಬಹುದು ಅದಕ್ಕಾಗಿ ನಾವು ಇನ್ನಾದರು ಪುಸ್ತಕ ಅಭ್ಯಾಸ ಮಾಡಿಕೊಳ್ಳೊಣ.

6. ಪುಸ್ತಕ ಉತ್ತಮ ಸ್ನೇಹಿತನಂತೆ.

ನಮಗೆಲ್ಲ ತಿಳಿದಿರುವಂತೆ ಪುಸ್ತಕಕ್ಕಿಂತ ಒಳ್ಳೇಯ ಗೆಳೆಯ ಇನ್ನು ಎಲ್ಲಿಯು ಸೀಗುವುದಿಲ್ಲ ಏಕೆಂದರೆ ಪುಸ್ತಕ ಯಾವತ್ತು ನಮ್ಮನ್ನು ಕೆಟ್ಟದಾರಿಗೆ ಕರೆದುಕೊಂಡು ಹೊಗುವುದಿಲ್ಲ. ಮತ್ತು ನಮ್ಮ ಯಶಸ್ವಿಗೆ ಪುಸ್ತಕ ಮೊದಲ ಮೆಟ್ಟಿಲಿನಂತೆ ಕಾರ್ಯನಿರ್ವಹಿಸುತ್ತದೆ.

7. ಪುಸ್ತಕಗಳು ನಮಗೆ ಇತಿಹಾಸದ ಬಗ್ಗೆ ತಿಳಿಸುತ್ತದೆ.

ನಾವು ಇತಿಹಾಸದ ಬಗ್ಗೆ ತಿಳಿಯಲು ಪುಸ್ತಕ ಸಹಕಾರಿ. ಇತಿಹಾಸದಲ್ಲಿ ಅದೆಷ್ಟು ಘಟನೆಗಳು ನಡೆದು ಹೋಗಿದೆ ಅದರ ಬಗ್ಗೆ ತಿಳಿಯಲು ಪುಸ್ತಕಗಳು ಸಹಯಾಕವಾಗಿದೆ.

ಉಪಸಂಹಾರ:

ಪುಸ್ತಕವನ್ನು ಓದುವುರಿಂದ ಅನೇಕ ಉಪಯುಕ್ತ ಮಾಹಿತಿಯನ್ನು ನಾವು ತಿಳಿದುಕೊಳ್ಳ ಬಹುದು ಮತ್ತು ನಾವು ಪುಸ್ತಕವನ್ನು ಓದುವುದರಿಂದ ನಮ್ಮ ಮಹತ್ವವು ಹೆಚ್ಚುತ್ತದೆ. ಹೊಸ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ತುಂಬನೇ ಸಹಕಾರಿಯಾಗಿದೆ. ಮತ್ತು ಮುಂದಿನ ಜೀವನದಲ್ಲಿಯು ಇದು ನಮಗೆ ಸಹಕಾರಿಯಾಗಿದೆ. ಮತ್ತು ಸುಭದ್ರ ದೇಶದ ಸ್ಥಾಪನೆಗೆ ಸಹಯಾಕವಾಗಿದೆ.

FAQ:

ವಿಶ್ವ ಪುಸ್ತಕ ದಿನ?

ಏಪ್ರೀಲ್‌ 23

ಪುಸ್ತಕದಿಂದ ಆಗುವ 2 ಪ್ರಯೋಜನ?

1.ಪುಸ್ತಕ ಉತ್ತಮ ಸ್ನೇಹಿತನಂತೆ.
2.ಪುಸ್ತಕಗಳಿಂದ ಒತ್ತಡ ನಿವಾರಣೆ.

ಪ್ರಪಂಚದಲ್ಲಿ ಮನುಷ್ಯನಿಗೆ ಉತ್ತಮ ಗೆಳೆಯ ಯಾರು?

ಪುಸ್ತಕ

ಇತರೆ ವಿಷಯಗಳು:

ಗ್ರಾಮ ಸ್ವರಾಜ್ಯ ಪ್ರಬಂಧ

ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ

ಸ್ನೇಹಿತರ ಬಗ್ಗೆ ಪ್ರಬಂಧ

Leave A Reply

Your email address will not be published.