ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ I Essay On Wildlife Conservation in kannada
ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ, Essay On Wildlife Conservation vanya jeevi samrakshana in kannada
ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ
ನಮಸ್ತೆ ಗೆಳೆಯರೇ, ನಾವು ಇಂದು ವನ್ಯಜೀವಿಗಳ ಬಗ್ಗೆ ತಿಳಿದು ಕೊಳೋಣ. ಈ ಲೇಖನದಲ್ಲಿ ವನ್ಯಜೀವಿಗಳ ಜೀವನ ಅವುಗಳ ರಕ್ಷಣೆ, ಅವುಗಳಿಗಾಗಿ ಸರ್ಕಾರ ರೂಪಿಸಿರುವ ಕಾನೂನುಗಳು, ವನ್ಯಜೀವಿ ಎಂದರೇನು, ಅದನ್ನು ಸಂರಕ್ಷಿಸುವುದರಿಂದ ಅಗುವ ಪ್ರಯೋಜನಗಳು ಏನು ಎನ್ನುವ ಬಗ್ಗೆ ತಿಳಿದು ಕೊಳ್ಳ ಬೇಕಾಗಿದೆ. ವನ್ಯಜೀವಿಗಳ ರಕ್ಷಣೆಗೆ ನಾವು ಸಹಕಾರಿಸ ಬೇಕಾಗಿ ವಿನಂತಿಸುತ್ತ ಇನ್ನೂ ಉಳಿದ ವಿಷಯವನ್ನು ಪ್ರಬಂಧದ ಒಳಗಡೆ ತಿಳಿಯೊಣ.
ಪೀಠಿಕೆ:
ಪರಿಸರದಲ್ಲಿ ಮನುಷ್ಯಯಷ್ಟು ಮುಖ್ಯವೊ ಅಷ್ಟೇ ಮುಖ್ಯ ಈ ವನ್ಯಜೀವಿಗಳು. ಎಲ್ಲಾ ಜೀವಿಗಳು ದೇವರ ಸೃಷ್ಠಿ ಅಂತೆಯೇ ಎಲ್ಲಾ ಪ್ರಾಣಿ ಪಕ್ಷಿಗಳಿಗು ಬದುಕುವ ಹಕ್ಕಿದೆ. ಪ್ರತಿಯೊಂದು ಪ್ರಾಣಿ-ಪಕ್ಷಿಯು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮನುಷ್ಯ ಬೇರೆಲ್ಲ ಪ್ರಾಣಿಕ್ಕಿಂತ ಭಿನ್ನನಾದರಿಂದ ದೇವರರಂತೆ ಆಗಲಾರನಾದರು ಸಣ್ಣ ಕೊಡುಗೆಯಾದರು ನೀಡಬಲ್ಲನು. ಯಾವುದೇ ಪ್ರಾಣಿಗೆ ಹಾನಿ ಆಗದಂತೆ ನೋಡಿಕೊಳ್ಳ ಬಹುದು ಅಲ್ಲವೇ. ಮನುಷ್ಯ ಮತ್ತು ಪ್ರಾಣಿಗಳು ಸಮತೋಲನದಲ್ಲಿ ಇರದಿದ್ದರೆ ಈ ಸಮಾಜ ಯಾವತೊ ನಾಶವಾಗುತ್ತಿತ್ತು.
ಈ ಭೂಮಿ ಮೇಲೇ ಇರುವ ಪ್ರತಿಯೊಂದು ಪ್ರಾಣಿಯು ಆಹಾರ ಸರಪಳಿಯಲ್ಲಿಯೆ ಇದೆ ಅದನ್ನು ತಪ್ಪಿಸಲು ಯಾರಿಂದಲು ಸಾಧ್ಯವಿಲ್ಲ ಒಂದುವೇಳೆ ತಪ್ಪಿದರೆ ಮನುಕುಲ ಮತ್ತು ಪ್ರಾಣಿಕುಲ ನಾಶದ ಹಾದಿ ಹಿಡಿಯುವುದು ಕಂಡಿತ.
ವನ್ಯಜೀವಿ ನಾಶದಲ್ಲಿ ಮನುಷ್ಯನ ಪಾತ್ರ:
ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಎಲ್ಲಾವನ್ನು ನಾಶಮಾಡುತ್ತ ಬಂದಿದ್ದಾನೆ. ಪ್ರತಿಯೊಂದು ವಸ್ತುವಿನಲ್ಲಿಯು ವ್ಯಮೋಹ, ಆಸೆ, ದುರಾಸೆ, ಹಂಬಲಿಕೆ ಇದರಿಂದಾಗಿಯೇ ಮನುಷ್ಯ ಪ್ರಾಣಿಗಳ ನೈಸರ್ಗಿಕ ಅವಾಸಸ್ಥಾನವನ್ನು ನಾಶಮಾಡಿದ್ದಾನೆ. ಇದರಿಂದಾಗಿಯೆ ಎಲ್ಲಾ ಪ್ರಾಣಿಗಳು ಕಾಡು ತೋರೆದು ನಾಡಿಗೆ ಬರುತ್ತಿರುವುದು.
- ಆಭರಣಕ್ಕಾಗಿ ಪ್ರಾಣಿಗಳ ನಾಶ:
ಹೌದು ಮನುಷ್ಯನ ದುರಸೆಗೆ ಮಿತಿಯೆ ಇಲ್ಲ. ಅಂತೆಯೆ ತನ್ನ ಸೌದರ್ಯದ ಆಸೆಗಾಗಿ ವನ್ಯಪ್ರಾಣಿಗಳ ಕೊಂಬು, ದಂತ, ಉಗುರುಗಳನ್ನು ಬಳಸಿಕೊಳುವುದು ಇದಕ್ಕಾಗಿ ಪ್ರಾಣಿಗಳನ್ನು ನಾಶಗೊಳಿಸುವುದು.
- ಹವ್ಯಾಸಕ್ಕಾಗಿ ಪ್ರಾಣಿ ಬೇಟೆ:
ಕೆಲವರು ತಮ್ಮ ಹವ್ಯಾಸಕ್ಕಾಗಿ ಪ್ರಾಣಿಯನ್ನು ಬೇಟೆಯಾಡುತ್ತಾರೆ. ಇದೊಂದು ತರಹದ ಮೊಜಿನಂತೆ ಕಾರ್ಯನಿರ್ವಹಿಸುತ್ತದೆ. ಮತ್ತು ಅದರಲ್ಲಿ ಕೊಂದ ಪ್ರಾಣಿಯ ಮಾಂಸ, ಚರ್ಮ, ಮೂಳೆಗಳನ್ನು ದುಡ್ಡಿಗೆ ಮಾರುವುದು ಇದೊಂದು ತರಹದ ವ್ಯವಹಾರದಂತೆ ನಡೆಯುತ್ತಿದೆ.
- ವನ್ಯಜೀವಿಯ ಕಳ್ಳಸಾಗಾಟ:
ಅನೇಕ ಕಡೆಗಳಲ್ಲಿ ವನ್ಯಜೀವಿಗಳನ್ನು ಕಳ್ಳಸಾಗಾಟ ಮಾಡುವುದನ್ನು ನಾವು ನೋಡಿದ್ದೆವೆ. ಅದರೆ ಕೇಲವು ಕಡೆಗಳಲ್ಲಿ ಮಾತ್ರ ಅಂತವರು ಸಿಕ್ಕಿಬಿಳುವುದು. ಇನ್ನೂ ಎಷ್ಟೋ ಕಡೆಗಳಲ್ಲಿ ಅವರು ಅವರ ಪಡಿಗೆ ಅದನ್ನು ನಡೆಸುತ್ತಲೆ ಇರುತ್ತಾರೆ. ಕಾಡು ಮೊಲ, ಜಿಂಕೆ, ಹಂದಿ, ನವಿಲು, ಆಮೆಗಳ ಕಳ್ಳ ಸಾಕಾಣಿಕೆ ಅತಿಯಾಗಿ ಪ್ರಸ್ತುತ ಕೇಳಿಬರುತ್ತಿದೆ.
ವನ್ಯಜೀವಿ ಎಂದರೇನು ಮತ್ತುಯಾವುವು?
ನಮಗೆಲ್ಲ ತಿಳಿದಿರುವಂತೆ ವನ್ಯಜೀವಿ ಎಂದರೆ ನೈಸರ್ಗಿಕ ಸ್ಥಿತಿಯಲ್ಲಿ ಬದುಕುವ ಮತ್ತು ಅವುಗಳ ವಾಸಸ್ಥಾನ ಕಾಡು ಅಗಿರುವ ಪ್ರಾಣಿಗಳೆ ಆಗಿವೆ. ಇವುಗಳನ್ನು ಹೆಚ್ಚಾಗಿ ಕಾಡು ಪ್ರಾಣಿಯೆಂದೆ ಕರೆಯಬಹುದು.
ಕಾಡುಪ್ರಾಣಿಗಳೆಂದರೆ:
ಕಾಡು ಬೆಕ್ಕು, ಹುಲಿ, ಚಿರತೆ, ಸಿಂಹ, ಆನೆ, ಇನ್ನು ಅನೇಕ ಪ್ರಾಣಿಗಳು ಕೇವಲ ಪ್ರಾಣಿಗಳಲ್ಲ ಪಕ್ಷಿಗಳು ಇವೆ.
ಅಳಿವಿನಂಚಿನಲ್ಲಿರುವ ಪ್ರಾಣಿಗಳು ಎಂದರೇನು?
ಅಳಿವಿನಂಚಿನ ಪ್ರಾಣಿಗಳು ಎಂದರೆ ಹಿಂದೆ ಆ ಪ್ರಾಣಿಗಳು ಅನೇಕ ಸಂಖ್ಯೆಯಲ್ಲಿ ಇದ್ದು ಈಗ ಆ ಪ್ರಾಣಿಯ ಸಂಖ್ಯೆ ಪರಿಸರ, ಹವಮಾನಕ್ಕೆ ತಕ್ಕಂತೆ ಕ್ಷೀಣಿಸುತ್ತ ಹೊದರೆ ಅಂತಹ ಪ್ರಾಣಿಗಳನ್ನು ಅಳಿವಿನಂಚಿನ ಪ್ರಾಣಿ ಎನ್ನುವರು.
ವನ್ಯಜೀವಿ ಸಂರಕ್ಷಣೆಯ ಪ್ರಾಮುಖ್ಯತೆ:
ವನ್ಯ ಜೀವಿಯ ಬಗ್ಗೆ ಈಗಾಗಲೇ ತಿಳಿದು ಕೊಂಡಿದ್ದೆವೆ. ಅವುಗಳು ಪರಿಸರದ ಒಂದು ಭಾಗ ಅವುಗಳ ರಕ್ಷಣೆ ಅತಿ ಮುಖ್ಯವಾದ ಒಂದು ಕಾರ್ಯ, ಕೇವಲ ಪ್ರಾಣಿ-ಪಕ್ಷಿಗಳ ಬಗ್ಗೆ ಮಾತನಾಡದೆ ಈ ಪರಿಸರಕ್ಕೆ ಮರ- ಗಿಡಗಳು ಅತಿ ಮುಖ್ಯವಾಗಿದೆ, ಒಂದು ವೇಳೆ ಮರಗಳು ಇಲ್ಲಾವಾದರೆ ಮನುಷ್ಯ ಕ್ಷ಼ಣದಲ್ಲಿಯೆ ತನ್ನ ಜೀವವನ್ನು ಕಳೆದು ಕೊಳ್ಳುತ್ತಾನೆ.
ಹಾಗೇ ಕೀಟಗಳು ಇವುಗಳು ಪರಿಸರ ವ್ಯವಸ್ಥೆಯಲ್ಲಿ ಪ್ರಾಮುಖ ಪಾತ್ರವಿದೆ ಇದರಿಂದದಾಗಿಯೆ ಸಸ್ಯಗಳಲ್ಲಿ ದ್ಯುತಿಸಂಶ್ಲೇಷಣೆ ನಡೆಯುವುದು. ಇಂದಹ ಪರಿಸರ ಸಂರಕ್ಷಿಸದಿದ್ದರೆ ನಾವು ನೀವು ಮುಂದೆ ಬದುಕುವುದು ಸಾಧ್ಯವೆ ಇಲ್ಲ. ಅದಕ್ಕೆ ಹಾನಿ ಮಾಡಿದರೆ ಅದು ನಮ್ಮ ಮೇಲು ಪರಿಣಾಮ ಬೀರುತ್ತದೆ.
ವನ್ಯಜೀವಿ ಸಂರಕ್ಷಣೆಯ ವಿಧಾನಗಳು:
ವನ್ಯಜೀವಿಗಳನ್ನು ರಕ್ಷಿಸಲು ಸರ್ಕಾರವು ಅನೇಕ ತರಹದ ಕಾಯ್ದೆಯನ್ನು ಜಾರಿಗೆ ತಂದಿವೆ ಅವುಗಳ ಮೂಲಕ ವನ್ಯಜೀವಿಗಳ ರಕ್ಷಣೆಯನ್ನು ಮಾಡಲಾಗುತ್ತದೆ. ಅವುಗಳೆಂದರೆ..
ಜನ ಜಾಗೃತಿ:
ವನ್ಯಜೀವಿಗಳ ಬಗ್ಗೆ ಜನರಲ್ಲಿ ಜಾಗೃತಿ ಮುಡಿಸುವುದು ತುಂಬ ಮುಖ್ಯವಾಗುತ್ತದೆ, ವನ್ಯಜೀವಿಗಳ ಮಹತ್ವ ಮತ್ತು ಅವುಗಳ ಉಳಿವಿಕೆಗಾಗಿ ಬಂದಂತಹ ಕಾನೂನು , ಕಾಯ್ದೆಗಳ ಬಗ್ಗೆ ಅರಿವು, ವನ್ಯ ಜೀವಿಗಳನ್ನು ಬೇಟೆಯಾಡದಂತೆ ಮಾನವಿ ಪತ್ರಗಳು ಇತ್ಯಾದಿಗಳ ಮೂಲಕ ಜನರಲ್ಲಿ ಜಾಗೃತಿ ಮತ್ತು ಜನರಿಗೆ ಎಚ್ಚರಿಕೆ ನೀಡುವುದು.
ವನ್ಯಜೀವಿಗಳಿಗಾಗಿ ಸುರಕ್ಷಿತ ಪ್ರದೇಶಗಳ ಸ್ಥಾಪನೆ:
ವನ್ಯಜೀವಿಗಳು ಸುರಕ್ಷಿತವಾಗಿ ಇರಲು ಮುಖ್ಯವಾಗಿ ಬೇಕಾಗಿರುವುದೆ ಸಂರಕ್ಷಣೆ ಇರುವ ಪ್ರದೇಶ ಇವುಗಳನ್ನು ಈಗ ಸರ್ಕಾರವೇ ಮುನ್ನೆಚ್ಚರಿಕೆ ವಹಿಸಿ ನೋಡಿ ಕೊಳ್ಳುತ್ತಿದೆ. ಅನೇಕ ಕಡೆಗಳಲ್ಲಿ ವನ್ಯಜೀವಿಗಳಿಗಾಗಿ ಮೀಸಲು ಅರಣ್ಯ ವ್ಯವಸ್ಥೆ, ಆಭಯರಣ್ಯಗಳ ಸ್ಥಾಪನೆ. ಅರಣ್ಯ ಜೀವಿ ಸಂರಕ್ಷಣೆಗಾಗಿ ಅನೇಕ ಕಾನೂನುಗಳನ್ನು ಜಾರಿಗೊಳಿಸುವುದು ಹೀಗೆ ಅನೇಕ ಬಗೆಯಾಗಿ ವನ್ಯಜೀವಿಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ.
ಸಮಾಜದಲ್ಲಿ ಜನರು ಹೊಂದಿರುವ ಮೂಢನಂಬಿಕೆಯನ್ನು ತೋಲಗಿಸಲು ಪ್ರಯತ್ನ:
ಸಮಾಜದಲ್ಲಿ ಜನರಲ್ಲಿ ಮುಖ್ಯವಾಗಿ ತಲೆದುರಿರುವ ರೋಗ ಎಂದರೆ ಅದು ಮೂಢನಂಬಿಕೆ ಏಕೆಂದರೆ ಇದು ಪರಿಸರ ದ ನಾಶಕ್ಕೆ ಮೊದಲ ಕಾರಣವಾಗುತ್ತದೆ. ಜನರು ಯಾವುದೋ ಒಂದು ರೋಗಕ್ಕೆ ಒಂದು ಮರದ ಚಕ್ಕೆ, ಒಂದು ಪ್ರಾಣಿಯ ಮೂಳೆ, ಚರ್ಮ, ತುಪ್ಪಳ ಇವುಗಳಿಂದ ಆ ರೋಗ ವಾಸಿಆಗುತ್ತದೆ ಎಂದು ನಂಬಿದ್ದರೆ ಇದರಿಂದ ಎಲ್ಲಾ ಪ್ರಾಣಿಗಳನ್ನು ಬೇಟೇಯಾಡುವುದು ಇದು ಪರಸರಕ್ಕೆ ಮಾರಕವಾದ ಲಕ್ಷಣವಾಗಿದೆ . ಆದರೆ ಯಾವುದೆ ವೈಜ್ಙಾನಿಕ ದಾಖಲೆಕೂಡ ಈ ಬಗ್ಗೆ ಇಲ್ಲ. ಆದ್ದರಿಂದ ಮೊದಲು ಜನರಿಗೆ ಜಾಗೃತಿ ಮೂಡಿಸುವುದು ಅತಿ ಮುಖ್ಯವಾಗಿದೆ.
ಉಪಸಂಹಾರ:
ವನ್ಯಜೀವಿಯು ಪರಿಸರದ ಒಂದು ಅಂಗವೇ ಅಗಿದೆ ಇದು ಒಂದು ಸರಪಳಿಯಂತೆ ಕಾರ್ಯ ನಿರ್ವಹಿಸುತ್ತದೆ. ಹಾಗೆ ಇವುಗಳ ರಕ್ಷಣೆ ಬಹಳ ಮುಖ್ಯವಾಗಿದೆ . ಮುಂದೆ ಇವುಗಳನ್ನು ಸಹ ಅಳಿವಿನಂಚಿನಲ್ಲಿ ನೋಡಬೇಕಾದ ಪರಿಸ್ಥಿತಿ ಬರುವುದು ಕಂಡಿತ ಆದ್ದರಿಂದ ನಾವು ಈಗೀನಿಂದಲೇ ಏಚ್ಚರರಾಗೋಣ. ಮುಂದಿನ ಸಂತತಿಗೂ ನಾವು ಈಗ ಇರುವ ಪ್ರಾಣಿಗಳನ್ನು ನೋಡಲು ಅನುವು ಮಾಡಿಕೊಡಬೇಕಾಗಿದೆ.
FAQ:
ಯಾವ ಯಾವ ಕಾರಣಕ್ಕಾಗಿ ವನ್ಯಜೀವಿಯನ್ನು ಬೇಟೆಆಡಲಾಗುತ್ತದೆ?
1. ಮಾಂಸಕ್ಕಾಗಿ
2. ಆಭರಣಕ್ಕಾಗಿ
3. ದುಡ್ಡಿಗಾಗಿ
3. ಮೂಢನಂಬಿಕೆಗಳಿಂದ.
ವನ್ಯಜೀವಿ ಎಂದರೇನು?
ಕಾಡನ್ನು ತನ್ನ ಅವಾಸಸ್ಥಾನವಾಗಿಸಿ ಕೊಂಡು ಅಲ್ಲಿಯೇ ವಾಸಿಸುವ ಪ್ರಾಣಿಗಳನ್ನು ವನ್ಯಜೀವಿ ಎನ್ನಲಾಗುತ್ತದೆ.
ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳು ಎಂದರೇನು?
ಹಿಂದೆ ಆ ಪ್ರಾಣಿ ಅತ್ಯಂತ ಹೇರಳವಾಗಿಯು ಬರಬರುತ್ತ ಆ ಪ್ರಾಣಿಗಳ ಸಂಖ್ಯೇ ಕಡಿಮೆ ಅಗುತ್ತಿರುವಂತಹ ಪ್ರಾಣಿಗಳನ್ನೆ ಅಳಿವಿನ ಅಂಚಿನ ಪ್ರಾಣಿ ಎನ್ನುತ್ತಾರೆ.
ಇತರೆ ವಿಷಯಗಳು:
ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ