ಪ್ರತಿ ತಿಂಗಳು 200 ಯೂನಿಟ್ ಗಿಂತ ಕರೆಂಟ್ ಅನ್ನು ಬಳಸುವುದು ಹೇಗೆ ? ಎಷ್ಟು ಯೂನಿಟ್ ಬಳಸಿದ್ದೇವೆ ತಿಳಿದುಕೊಳ್ಳಿ

0

ನಮಸ್ಕಾರ ಸ್ನೇಹಿತರೇ , ಇಂದು ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಪ್ರತಿ ತಿಂಗಳು 200 ಯೂನಿಟ್ ಕರೆಂಟ್ ಅನ್ನು ಹೇಗೆ ಬಳಸುವುದು. ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಫ್ರೀಯಾಗಿ 200 ಯೂನಿಟ್ ಕರೆಂಟ್ ಅನ್ನು ಕೊಡುತ್ತಿದೆ. ಆದರೆ ನಮಗೆ 200 ಯೂನಿಟ್ ಕರೆಂಟ್ ಎಂದರೆ ಏನು ಎಂಬುದರ ಬಗ್ಗೆ ಸರಿಯಾಗಿ ತಿಳಿದಿಲ್ಲ.

Find out how many units have been used
Find out how many units have been used

ಅಲ್ಲದೆ ನಾವು ಈಗ ಎಷ್ಟು ಯೂನಿಟ್ ಕರೆಂಟ್ ಅನ್ನು ಬಳಸುತ್ತಿದ್ದೇವೆ ಹಾಗೂ ನಮ್ಮ ವಿದ್ಯುತ್ ಮೋಟರ್ ನಲ್ಲಿ ನಾವು ಬಳಸಿದ ಕರೆಂಟ್ ಅನ್ನು ಹೇಗೆ ತಿಳಿದುಕೊಳ್ಳುವುದು ಹಾಗೂ ನಾವು ಬಳಸುವ ವಿದ್ಯುತ್ 200 ಯೂನಿಟ್ ಮೀರದಂತೆ ನೋಡಿಕೊಳ್ಳುವುದು ಹೇಗೆ ಎಂಬುದರ ಪೂರ್ಣ ಮಾಹಿತಿಯನ್ನು ಕೆಳಗಿನಂತೆ ನೋಡಬಹುದು.

200 ಯೂನಿಟ್ ಕರೆಂಟ್ ನ ಬಗ್ಗೆ ಮಾಹಿತಿ :

ನಾವು ಮೊದಲು 200 ಯೂನಿಟ್ ಕರೆಂಟ್ ಎಂದರೇನು ಎಂಬುದರ ಬಗ್ಗೆ ತಿಳಿದುಕೊಳ್ಳುವ ಮೊದಲು ವಿದ್ಯುತ್ ಭಾಷೆಯಲ್ಲಿ 1 ಯೂನಿಟ್ ಕರೆಂಟ್ ಎಂದರೇನು ಎಂಬುದನ್ನು ತಿಳಿಯಬೇಕು. 1000 ಹವರ್ ಅಥವಾ 1 ಕಿಮೀ ವ್ಯಾಟ್ ಹವರ್ ಗೆ 1 ಯೂನಿಟ್ ಎಂದು ಅರ್ಥ. ಅಂದರೆ 10 ಬಲ್ಬ್ ಗಳನ್ನು 1 ಗಂಟೆಗೆ ಉರಿಸಿದರೆ 100 ವ್ಯಾಟ್ ನಷ್ಟು ಆಗುತ್ತದೆ ಅಥವಾ 1 ಗಂಟೆಯಲ್ಲಿ 50 ವ್ಯಾಟ್ ನ 20 ಬಲ್ಬ್ ಗಳನ್ನು ಉರಿಸಿದರೆ ಎಷ್ಟು ಯೂನಿಟ್ ಕರೆಂಟ್ ಖರ್ಚಾಗುತ್ತದೆ. ಇದರಂತೆ 1000 ವ್ಯಾಟ್ ಅಥವಾ 1 ಕಿಮೀ ವ್ಯಾಟ್ ಹವರ್ ಎಂದರೆ 1 ಯೂನಿಟ್ ಕರೆಂಟ್ ಎಂದರ್ಥ.

  1. 1000 watt hour = 1 ಯೂನಿಟ್
  2. 2,00,000 watt hour = 200 ಯೂನಿಟ್

ಒಂದು ಗಂಟೆ 100 ವ್ಯಾಟ್ ನ 2000 ಬಲ್ಬ್ ಗಳನ್ನು ಅಥವಾ 1 ಗಂಟೆಯಲ್ಲಿ 50 ವ್ಯಾಟ್ ನ 4000 ಬಲ್ಬ್ ಗಳನ್ನು ಅಥವಾ 1 ಗಂಟೆಯಲ್ಲಿ 10 ವ್ಯಾಟ್ ನ 20000 ಬಲ್ಬ್ ಗಳನ್ನು ಉರಿಸುವಷ್ಟು ಕರೆಂಟ್ ಎಂದರ್ಥ. ಅಂದರೆ 200 ಯೂನಿಟ್ ಕರೆಂಟ್ ಗೆ ಸುಮಾರು 1500 ರೂಪಾಯಿ ಆಗುತ್ತದೆ. ಇದು ಉಚಿತ ಗೃಹ ಬಳಕೆಯ 200 ಯೂನಿಟ್ ಕರೆಂಟ್ ಬಗ್ಗೆ ನೋಡಬಹುದು.

ಇದನ್ನು ಓದಿ : ಬಜಾಜ್‌ ತಂದಿದೆ ಹೊಸ ಸ್ಕೂಟರ್: ಇದಕ್ಕೆ ಪೆಟ್ರೋಲ್‌ ಬೇಡ, ಚಾರ್ಜ್‌ ಮಾಡೋದು ಬೇಡ, ಕೈಗೆಟುಕುವ ಬೆಲೆಯಲ್ಲಿ ಲಭ್ಯ!

ಪ್ರೆಸೆಂಟ್ ರೀಡಿಂಗ್

ಇಂದು ಡಿಜಿಟಲ್ ವಿದ್ಯುತ್ ಮೀಟರ್ ಗಳು ಅನೇಕ ಮನೆಗಳನ್ನು ಕಾಣಬಹುದು. ಅದರಲ್ಲಿ ಆಗಾಗ ಬ್ಲಿಂಕ್ ಹಾಗೂ ಕೆಂಪು ಲೈಟ್ ಮತ್ತು ಕಪ್ಪು ಬಣ್ಣದ ಬಟನ್ ಜೊತೆಗೆ ಗ್ರೀನ್ ಕಲರ್ ಬಣ್ಣದ ಬಟನ್ ಇರುತ್ತದೆ ಇದರಲ್ಲಿ ಹಿಂದಿನ ತಿಂಗಳ ಕರೆಂಟ್ ಬಿಲ್ ಬಂದ ನಂತರ ಸಾಮಾನ್ಯವಾಗಿ ನಾವು ಎಷ್ಟು ಯೂನಿಟ್ ಕರೆಂಟ್ ಅನ್ನು ಬಳಸಿದ್ದೇವೆ ಎಂಬುದನ್ನು ನೋಡಬಹುದು. ಅದರಂತೆ ನಾವು ನೋಡಲು ಹಿಂದಿನ ತಿಂಗಳ ಕರೆಂಟ್ ಬಿಲ್ ತೆಗೆದುಕೊಳ್ಳಬೇಕು ನಂತರ ಅದರಲ್ಲಿ ಪ್ರೆಸೆಂಟ್ ರೀಡಿಂಗ್ ಇರುವುದನ್ನು ನೋಡಿಕೊಳ್ಳಬೇಕು ನಂತರ ಮೀಟರ್ ಬಳಿ ಹೋಗಿ ನಾಲ್ಕೈದು ಬಾರಿ ಕಪ್ಪು ಬಣ್ಣದ ಬಟನ್ ಅನ್ನು ಪ್ರೆಸ್ಸ್ ಮಾಡಿದಾಗ ನಾವು ಹೋದ ತಿಂಗಳು ಎಷ್ಟು ಯೂನಿಟ್ ಕರೆಂಟ್ ಅನ್ನು ಬಳಸಿದ್ದೇವೆ ಎಂದು ತೋರಿಸುತ್ತದೆ.

ಹಾಗೆಯೇ ರಾಜ್ಯ ಸರ್ಕಾರ ನೀಡುತ್ತಿರುವ 200 ಯೂನಿಟ್ ಗಿಂತ ಹೆಚ್ಚು ಕರೆಂಟ್ ಅನ್ನು ಬಳಸಿರಬಾರದು ಹಾಗೂ ನಿಮ್ಮ ಮೀಟರ್ ರೀಡಿಂಗ್ ಅನ್ನು ವಾರಕ್ಕೆ ಒಂದು ಬಾರಿ ಆದರೂ ಚೆಕ್ ಮಾಡುತ್ತಿರಬೇಕು.

ಹೀಗೆ ಸರ್ಕಾರ ಉಚಿತವಾಗಿ ನೀಡುತ್ತಿರುವ ವಿದ್ಯುತ್ ಅನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕಾದರೆ ನಮಗೆ ಯೂನಿಟ್ ಕರೆಂಟ್ ನ ಬಗ್ಗೆ ಮಾಹಿತಿ ತಿಳಿದಾಗ ಮಾತ್ರ ಸರ್ಕಾರದ ಈ ಉಚಿತ ಯೋಜನೆಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬಹುದು.

ಆದ್ದರಿಂದ ನಿಮ್ಮ ಮನೆಯ ಅಕ್ಕ ಪಕ್ಕದ ಸ್ನೇಹಿತರಿಗೆ ಹಾಗೂ ಸಂಬoಧಿಕರಿಗೆ ಜೊತೆಗೆ ನಿಮ್ಮ ಪ್ರತಿಯೊಬ್ಬ ಸ್ನೇಹಿತರಿಗೂ ಈ ಮಾಹಿತಿಯನ್ನು ತಿಳಿಸಿ ಇದರಿಂದ ಅವರು ಪ್ರತಿ ತಿಂಗಳು ಎಷ್ಟು ಯೂನಿಟ್ ಕರೆಂಟ್ ಅನ್ನು ಉಪಯೋಗಿಸಿದ್ದಾರೆ ಎಂಬುದನ್ನು ಅವರು ಸುಲಭವಾಗಿ ತಿಳಿದುಕೊಳ್ಳಲು ನೆರವಾಗುತ್ತದೆ.

ಇತರೆ ವಿಷಯಗಳು :

ಗೃಹಲಕ್ಷ್ಮೀ ಯೋಜನೆಗೆ ನಿಮ್ಮ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು

ಮೊಬೈಲ್ ನಲ್ಲಿ RC ಕಾರ್ಡ್ ಮತ್ತು ಡಿ ಎಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

Leave A Reply

Your email address will not be published.