ಗೃಹಲಕ್ಷ್ಮೀ ಯೋಜನೆಗೆ ನಿಮ್ಮ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು
ನಮಸ್ಕಾರ ಸ್ನೇಹಿತರೇ ನಿಮಗೆ ಇಂದು ಒಂದು ಉಪಯುಕ್ತವಾದ ಮಾಹಿತಿಯನ್ನು ತಿಳಿಸುತ್ತಿದ್ದು, ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಗೆ ಯಾವ ರೀತಿ ನಾವು ಮನೆಳಲ್ಲಿಯೆ ಕುಳಿತು ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಹೇಳಗುತ್ತಿದೆ.
ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಕೆಲವು ಮಾಹಿತಿಗಳು :
2023 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಅನೇಕ ಯೋಜನೆಗಳಿಗೆ ಸಾಕ್ಷಿಯಾಗುತ್ತಿದೆ. ಅದರಲ್ಲಿ ಜಾರಿಗೊಳಿಸಲು ಸಿದ್ಧವಾಗಿರುವ ಗೃಹಲಕ್ಸ್ಮಿ ಯೋಜನೆಯು ಒಂದಾಗಿದೆ. ಕರ್ನಾಟಕ ಸರ್ಕಾರವು ಜಾರಿಗೆ ತರಲಿವ ಗೃಹ ಲಕ್ಷ್ಮಿ ಯೋಜನೆಯು ಲಿಂಗ ತಾರತಮ್ಯತೆಯನ್ನು ಹೋಗಲಾಡಿಸಿ ಸಮಾನತೆಯನ್ನು ತಿಳಿಸುತ್ತಿದೆ. ಅಲ್ಲದೆ ಈ ಯೋಜನೆಯು ಕರ್ನಾಟಕ ರಾಜ್ಯದ ಮಹಿಳೆಯರನ್ನು ಸಬಲೀಕರಣ ಗೊಳಿಸುವ ಪ್ರಯತ್ನದ ಫಲವಾಗಿ ಮಾರ್ಪಡುವುದಂತು ಸತ್ಯ. ಈ ಗೃಹ ಲಕ್ಮಿ ಯೋಜನೆಯ ಅಡಿಯಲ್ಲಿ ಕರ್ನಾಟಕ ಸರಕಾರವು ಪ್ರತಿ ಮನೆಯ ಮುಖ್ಯಸ್ಥ ಮಹಿಳೆಯರಿಗೆ ಆರ್ಥಿಕ ನೆರವು ನೀಡುತ್ತದೆ.
ಈ ಯೋಜನೆಯ ಮೂಲಕ ಭೂ ರಹಿತ ಮಹಿಳೆಯರು, ಗೃಹಣಿಯರು ಹಾಗೂ ಕೃಷಿ ಮಹಿಳಾ ಕಾರ್ಮಿಕರಿಗೆ ನೇರವಾಗಿ ಅವರ ಖಾತೆಗೆ ಹಣವನ್ನು ನೀಡುವ ಮೂಲಕ ಆರ್ಥಿಕ ನೆರವು ನೀಡಿ ಮಹಿಳೆಯರನ್ನು ಸಬಲೀಕರಣ ಗೊಳಿಸುವ ಗುರಿಯನ್ನು ಹೊಂದಿದೆ.
ಆಗಸ್ಟ್ 17 ಅಥವಾ 18 ರ ಒಳಗಾಗಿ ಪ್ರತಿ ಮಹಿಳೆಗೆ 2000 ರೂಪಾಯಿಗಳನ್ನು ಬರುವ ಹಾಗೆ ಈ ಯೋಜನೆಯನ್ನು ಮೊದಲು ಬೆಳಗಾವಿ ಅಥವಾ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೊಳಿಸುವ ಸಾಧ್ಯತೆ ಇದೆ. ಈ ಗೃಹ ಲಕ್ಷ್ಮೀ ಯೋಜನೆ ಜಾರಿಯಾದ ಕೂಡಲೇ ನೇರವಾಗಿ ಮಹಿಳಾ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಲಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ : ಮೊಬೈಲ್ ನಲ್ಲಿ RC ಕಾರ್ಡ್ ಮತ್ತು ಡಿ ಎಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಪ್ರಕ್ರಿಯೆಗಳನ್ನು ಅನುಸುವುದರ ಮೂಲಕ ಮಹಿಳೆಯರು ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು.
ಮೊದಲು ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಬೇಕು. ನಿಮ್ಮ ಈಮೇಲ್ ಐ ಡಿ ಅನ್ನು ಎಂಟರ್ ಮಾಡಿದ ನಂತರ OTP ನಂಬರ್ ಅನ್ನು ನಮೂದಿಸುವ ಮೂಲಕ ಲಾಗಿನ್ ಮಾಡಿಕೊಳ್ಳಬೇಕು.
ನೀವು ಮೊದಲ ಬಾರಿಗೆ ಬಳಕೆದಾರರಾಗಿದ್ದರೆ ಹೊಸ ಬಳಕೆದಾರ ? ಎಂಬ ನೋಂದಾಯಿಸಿ ಬಟನ್ ಅನ್ನು ಕ್ಲಿಕ್ ಮಾಡಿ ನಿಮ್ಮ ಆಧಾರ್ ಸಂಖ್ಯೆ ಹಾಗೂ ಅರ್ಜಿ ನಮೂನೆಯ ಅಗತ್ಯವಿರುವ ಎಲ್ಲ ವಿವರಗಳನ್ನು ನಮೂದಿಸುವುದರ ಮೂಲಕ ಪೋರ್ಟಲ್ ಗೆ ಲಾಗಿನ್ ಆಗಬೇಕು.
ಲಾಗಿನ್ ಆದ ನಂತರ ಹುಡುಕಾಟ ಬಾರ್ ನಲ್ಲಿ ಗೃಹಲಕ್ಷ್ಮೀ ಯೋಜನೆ ಎಂದು ಹುಡುಕಿ, ಯೋಜನೆ ಅಗತ್ಯವಾದ ಅರ್ಜಿಯು ಓಪನ್ ಆದ ನಂತರ ಯೋಜನೆಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ನಂತರ ಸಲ್ಲಿಸು ಮೇಲೆ ಕ್ಲಿಕ್ ಮಾಡಿ ಅಲ್ಲದೆ ಅರ್ಜಿ ನಮೂನೆಯ ಸಂಖ್ಯೆಯನ್ನು ನೀವು ಗಮನಿಸಬೇಕು.
ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿ ನಮೂನೆಯ ಪ್ರಿಂಟೌಟ್ ಅನ್ನು ತೆಗೆದುಕೊಳ್ಳಬೇಕು. ಪ್ರಿಂಟೌಟ್ ತೆಗೆದು ಕೊಂಡ ನಂತರ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಅಥವಾ ನಾಡ ಕಚೇರಿ ಅಥವಾ ಕೇಂದ್ರ ಅಥವಾ ಆಯಾ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
ಈ ಎಲ್ಲ ಪ್ರಕ್ರಿಯೆಯ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಪ್ರತಿ ಖಾತೆಗೆ 2000 ರೂಪಾಯಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಇತರೆ ವಿಷಯಗಳು :
Paytm ಮೂಲಕ 100 ರೂ ಉಚಿತವಾಗಿ ಎಲ್ಲರೂ ಪಡೆಯಬಹುದು, ಈ ಟ್ರಿಕ್ಸ್ ಉಪಯೋಗಿಸಿ
ಕಳೆದು ಹೋದ ಮೊಬೈಲ್ ಅನ್ನು ಸುಲಭವಾಗಿ ಹುಡುಕಬಹುದು ನಿಮಗಿದು ಗೊತ್ತೇ?