ಗೃಹಲಕ್ಷ್ಮಿ ಯೋಜನೆಗಾಗಿ ಪತಿಯ ಯಾವ ದಾಖಲೆಯನ್ನು ಸಲ್ಲಿಸಬೇಕು..! ಇಲ್ಲಿದೆ ಸಂಪೂರ್ಣ ಮಾಹಿತಿ
ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ಚುನಾವಣೆಗೂ ಪೂರ್ವದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಆ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದು ಮಹತ್ವಾಕಾಂಕ್ಷೆಯ ಯೋಜನೆ ಯಾಗಿತ್ತು. ಯೋಜನೆಗೆ ರಾಜ್ಯ ಸರ್ಕಾರದಿಂದ ಜೂನ್ 17ರಿಂದ ಚಾಲನೆ ದೊರಕಲಿದ್ದು ಜುಲೈ 19 ರಿಂದ ಅರ್ಜಿಗಳನ್ನು ಗೃಹಲಕ್ಷ್ಮಿ ಯೋಜನೆಗಾಗಿ ಸ್ವೀಕಾರ ಮಾಡಲಾಗುತ್ತದೆ. ತೆರಗಿದಾರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಅಲ್ಲದೆ ಅರ್ಜಿಯನ್ನು ಸಲ್ಲಿಸುತ್ತಿರುವ ಮಹಿಳೆಯ ಪತಿಯು ತೆರಿಗೆದಾರನಾಗಿದ್ದು ಿಎಸ್‌ಟಿ ಅನ್ನು ಪಾವತಿಸುತ್ತಿದ್ದರು ಅಂತಹ ಮಹಿಳೆಯರಿಗೂ ಸಹ ಗೃಹಲಕ್ಷ್ಮಿ ಯೋಜನೆಯ ಅನ್ವಯವಾಗುವುದಿಲ್ಲ. ಹಾಗಾಗಿ ಅರ್ಜಿ ಸಲ್ಲಿಸುವಾಗ ಪತ್ನಿಯು ಪತಿಗೆ ಸಂಬಂಧಿಸಿದ ಕೆಲವೊಂದು ವಿವರಗಳನ್ನು ನೀಡಬೇಕಾಗುತ್ತದೆ. ಅದರಂತೆ ಅರ್ಜಿ ಸಲ್ಲಿಸುವಾಗ ಪತಿಯ ಯಾವು ದಾಖಲೆಗಳು ಬೇಕಾಗುತ್ತದೆ ಎಂಬುದು ಮಾಹಿತಿಯನ್ನು ನೀವು ನೋಡಬಹುದು. ಅಲ್ಲದೆ ಅರ್ಜಿ ಸಲ್ಲಿಸಲು ಮಹಿಳೆಯು ವಿಚ್ಛೇದನವನ್ನು ಪಡೆದಿದ್ದರೆ ಎಂತಹ ದಾಖಲೆಗಳನ್ನು ಅರ್ಜಿ ಸಲ್ಲಿಸುವಾಗ ನೀಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈಗ ಮೀಸಲಾಗುತ್ತದೆ.
ಪತಿಯ ವಿವರಗಳು :
ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ಪತಿಯ ಆದಾಯ ಪ್ರಮಾಣ ಪತ್ರ ಹಾಗೂ ಅವರ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಗಳನ್ನು ಸಲ್ಲಿಸಬೇಕೆ ಎಂಬ ಹಲವಾರು ಗೊಂದಲಗಳು ಇದ್ದವು. ಏಕೆಂದರೆ ಮಹಿಳೆಯ ಪತಿಯು ಆದಾಯ ತೆರಿಗೆ ಪಾವತಿಸುವವರಾಗಿದ್ದರೆ ಅವರ ಅರ್ಜಿಯನ್ನು ಮಾನ್ಯ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರವು ಸ್ಪಷ್ಟವಾಗಿ ಹೇಳಿತ್ತು. ಹಾಗೆಯೇ ಪತಿಯಿಂದ ವಿಚ್ಛೇದನ ಪಡೆದಿರುವ ಮಹಿಳೆಯು ಮತ್ತು ಇತ್ತೀಚಿಗಷ್ಟೇ ಗಂಡನನ್ನು ಕಳೆದುಕೊಂಡಿರುವ ಮಹಿಳೆಯರು ಯಾವೆಲ್ಲಾ ದಾಖಲೆಗಳನ್ನು ಅರ್ಜಿ ಸಲ್ಲಿಸುವಾಗ ಕೊಡಬೇಕು ಎಂಬ ಮಾಹಿತಿಗಳನ್ನು ನೀವು ಈಗ ನೋಡಬಹುದು.
ಈ ಯೋಜನೆಗೆ ಸಂಬಂಧಿಸಿದಂತೆ ಮಹಿಳೆಯರು ಅರ್ಜಿ ಸಲ್ಲಿಸುವಾಗ ಪತಿಯ ಯಾವು ಎಲ್ಲಾ ದಾಖಲೆಗಳು ಕೊಡಬೇಕು ಎಂಬುದರ ಮಾಹಿತಿಯನ್ನು ಯೋಜನೆಯ ಹೆಲ್ಪ್ ಲೈನ್ ಸಂಖ್ಯೆಯಾದ 1902 ಸಂಖ್ಯೆಗೆ ಕರೆ ಮಾಡಿ ಅಲ್ಲಿನ ಸಿಬ್ಬಂದಿಯ ಜೊತೆಗೆ ಮಾತನಾಡಿ ಆ ಸಿಬ್ಬಂದಿಯು ಹೇಳಿದಂತಹ ಮಾಹಿತಿಗಳನ್ನು ತಿಳಿದುಕೊಂಡ ಮೇಲೆ ಅರ್ಜಿದಾರರು ಪತಿಯ ವಿವರಗಳನ್ನು ನೀಡಬೇಕಾಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಅರ್ಜಿ ನಮೂನೆ :
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರವು ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಅರ್ಜಿ ನಮೂನೆಯಲ್ಲಿ 11 ಹಂತಗಳಿದ್ದು ಅದರಲ್ಲಿ ಮಹಿಳೆಯು ಅರ್ಜಿ ಸಲ್ಲಿಸುವಾಗ ತನ್ನ ಹೆಸರು ಪತಿಯ ಹೆಸರು ವಿಳಾಸ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಸಂಖ್ಯೆ ಪಡಿತರ ಚೀಟಿಯ ಸಂಖ್ಯೆ ಮೊದಲಾದ ವಿವರಗಳನ್ನು ನಮೂದಿಸಬೇಕಾಗುತ್ತದೆ. ಹಾಗೆಯೇ ಅರ್ಜಿಯ ಕಡೆಯ ಭಾಗದಲ್ಲಿ ಅರ್ಜಿದಾರರ ಪತಿಯು ತೆರಿಗೆದಾರರಲ್ಲ ಎಂಬುದು ತಿಳಿದಿದ್ದರೆ ಆ ವಿವರವನ್ನು ಸಹ ನಮೂದಿಸಬೇಕಾಗುತ್ತದೆ.
ಅಂದರೆ ತಮ್ಮ ಪ್ರತಿಯು ತೆರಿಗೆದಾರರಲ್ಲ ಅಥವಾ ಜಿಎಸ್ಟಿ ಪಾವತಿದಾರರಲ್ಲ ಎಂಬುದನ್ನು ಅವಳೇ ಸ್ವಯಂ ಆಗಿ ಘೋಷಿಸಬೇಕಾಗುತ್ತದೆ. ಎಡಬಾಗದಲ್ಲಿ ಸ್ವಯಂ ಘೋಷಣೆಯ ಕೆಳಗೆ ಇರುವ ಅರ್ಜಿ ಬರ್ತೆ ಮಾಡಿದ ದಿನಾಂಕ ಹಾಗೂ ಸ್ಥಳವನ್ನು ನಮೂದಿಸಿ ಸಹಿ ಹಾಕಬೇಕು. ಸಹಿ ಹಾಕಲು ಬರದಿದ್ದರೆ ಎಡಗೈ ಅಥವಾ ಬಲಗೈ ಹೆಬ್ಬೆಟ್ಟಿನ ಗುರುತನ್ನು ನೀಡಬೇಕಾಗುತ್ತದೆ.
ಪತಿಯ ಯಾವು ದಾಖಲೆಗಳು :
ಗೃಹಲಕ್ಷ್ಮಿ ಯೋಜನೆಗಾಗಿ ಅರ್ಜಿ ಸಲ್ಲಿಸುವಂತಹ ಮಹಿಳೆಯರು ತಮ್ಮ ಪತಿಯ ಆಧಾರ್ ಕಾರ್ಡ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ ಏನಾದರೂ ಕುಂದು ಕೊರತೆಗಳು ಇದ್ದರೆ ವಿಭಾಗದ ಸಿಬ್ಬಂದಿಯೂ ನಿಮಗೆ ತಿಳಿಸುತ್ತಾರೆ. ಅರ್ಜಿ ಸಲ್ಲಿಸುವ ಮಹಿಳೆಯರು ಪತಿಯ ಆಧಾರ್ ಕಾರ್ಡ್ ಅನ್ನು ಹೊಂದಿದ್ದು ಹಾಗೂ ತೆರಿಗೆದಾರರಲ್ಲವೇ ಅಥವಾ ಜಿ ಎಸ್ ಟಿ ಪಾವತಿದಾರರಲ್ಲವೇ ಆಗಿದ್ದರೆ ಎಂಬುದನ್ನು ಸಿಬ್ಬಂದಿಗೆ ತಿಳಿಸಬೇಕಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದ ಕೆಲವು ಮಾಹಿತಿಗಳಲ್ಲಿ ಗಮನಿಸಬೇಕಾದ ಒಂದು ವಿಚಾರವೆಂದರೆ ಮಹಿಳೆಯರು ಅರ್ಜಿ ಸಲ್ಲಿಸುವಾಗ ತನ್ನ ಪತಿಯ ಪ್ಯಾನ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರವು ಸ್ಪಷ್ಟಪಡಿಸಿದೆ.
ಇದನ್ನು ಓದಿ : 32 ಇಂಚಿನ ಎಲ್ಇಡಿ ಟಿವಿಯನ್ನು 1199 ರೂಪಾಯಿಗೆ ಖರೀದಿಸಿ : ಫ್ಲಿಪ್ಕಾರ್ಟ್ ನ ಬಂಪರ್ ಆಫರ್
ಮಹಿಳೆಯೆ ಆದಾಯ ತೆರಿಗೆದಾರರಾಗಿದ್ದರೆ ಏನು ಮಾಡಬೇಕು :
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯ ತೆರಿಗೆದಾರರಾಗಿದ್ದರೆ ಅಥವಾ ಅವಳು ಾವುದಾದರೂ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಅದಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿಯನ್ನು ಪಾವತಿಸುತ್ತಿದ್ದರೆ ಆ ಮಹಿಳೆಗೆ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ಇದರ ಜೊತೆಗೆ ಮಹಿಳೆಯರು ಸರ್ಕಾರಿ ಕೆಲಸ ಮಾಡುತ್ತಿದ್ದರು ಸಹ ಗೃಹಲಕ್ಷ್ಮಿ ಯೋಜನೆಯ ಯಾವ ಲಾಭವೂ ಅವಳಿಗೆ ಸಿಗುವುದಿಲ್ಲ. ಈ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಧ್ಯಮ ಕೆಳ ಮಧ್ಯಮ ಹಾಗೂ ಬಡ ಮಹಿಳೆಯರ ಜೀವನಪಾಯಕ್ಕಾಗಿ ಈ ಯೋಜನೆಯನ್ನು ಜಾರಿಗೊಳಿಸಿದ್ದು ಅವರಿಗೆ ಪ್ರತಿ ತಿಂಗಳು 2000ಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಾಗಾಗಿ ಈ ಯೋಜನೆಗೆ ಸಂಬಂಧಿಸಿದಂತೆ ಬಡ ಮಹಿಳೆಯರಿಗೆ ಮಾತ್ರ ಈ ಯೋಜನೆಯ ಅನ್ವಯವಾಗುತ್ತದೆ.
ಹೀಗೆ ರಾಜ್ಯ ಸರ್ಕಾರವು ತನ್ನ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಸಹ ಒಂದಾಗಿದ್ದು ಈ ಯೋಜನೆಗೆ ಸಂಬಂಧಿಸಿ ದಂತೆ ಬಡ ಕುಟುಂಬದ ಮಹಿಳೆಯರಿಗೆ ಮಾತ್ರ ಈ ಯೋಜನೆಯ ಸಂಪೂರ್ಣ ಲಾಭವನ್ನು ಪಡೆಯುವಂತೆ ರಾಜ್ಯ ಸರ್ಕಾರವು ಮಾಡಿದೆ. ಹೀಗೆ ರಾಜ್ಯ ಸರ್ಕಾರದ ಈ ಗ್ಯಾರಂಟಿ ಯು ಬಡವರ ಜೀವನೋಪಾಯಕ್ಕಾಗಿ ಒಂದು ಉಪಯುಕ್ತ ಯೋಜನೆಯಾಗಿದೆ ಎಂದು ಹೇಳಬಹುದು. ಈ ಯೋಜನೆಯ ಸಂಬಂಧಿಸಿದಂತೆ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಉಚಿತ ಜ್ಯೋತಿ ಪಡೆಯಲು ಇಲ್ಲಿಂದಲೇ ಅಪ್ಲೈ ಮಾಡಿ..! ಅರ್ಜಿ ಸಲ್ಲಿಸಿಲ್ಲ ಎಂದರೆ ನಿಮಗೆ ಉಚಿತ ಜ್ಯೋತಿ ಇಲ್ಲ