ಹೆಚ್ಚಾದ ಟೊಮೊಟೊ ಬೆಲೆ! ಮುಂದಿನ ದಿನಗಳಲ್ಲಿ ಕೆಜಿಗೆ 300 ರೂಪಾಯಿ ಆಗಲಿದೆ

0

ನಮಸ್ಕಾರ ಸ್ನೇಹಿತರೆ ಇದೀಗ ನಿಮಗೆ ತಿಳಿಸುತ್ತಿರುವ ಪ್ರಮುಖ ವಿಷಯ ಏನೆಂದರೆ ಟೊಮೊಟೊ ಬೆಲೆ ಏರಿಕೆಯ ಬಗ್ಗೆ. ಟೊಮೊಟೊ ಬೆಲೆಯೂ ದೇಶದಲ್ಲಿದೆ ಆಗಸಕ್ಕೇರಿದ್ದು ಮುಂದಿನ ದಿನಗಳಲ್ಲಿ ಕೆಜಿಗೆ 300 ರೂಪಾಯಿಗಳು ಆಗುವ ಸಾಧ್ಯತೆ ಇದೆ ಎಂದು ತಜ್ಞರು ಒಬ್ಬರು ಹೇಳಿದ್ದಾರೆ. ತಜ್ಞರ ಪ್ರಕಾರ ಟೊಮೇಟೊ ಬೆಳೆಯು ಈಗಾಗಲೇ ಕೆಜಿಗೆ 200 ರೂಪಾಯಿಗಳಿದ್ದು ಮುಂದಿನ ದಿನಗಳಲ್ಲಿ 300 ತಲುಪಿದರು ಆಶ್ಚರ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹೀಗೆ ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಯನ್ನು ನೀವು ನೋಡಬಹುದು.

Tomato price hike
Tomato price hike

ಟೊಮೊಟೊ ಬೆಲೆ ಏರಿಕೆಗೆ ಕಾರಣ :

ದೇಶದಾದ್ಯಂತ ಗಗನ ಕೇರಿ ಇರುವ ಟೊಮ್ಯಾಟೋ ಬೆಲೆಯು 300 ರೂಪಾಯಿಗಳು ಮುಂದಿನ ದಿನಗಳಲ್ಲಿ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಒಬ್ಬರು ಅಭಿಪ್ರಾಯಪಟ್ಟಿದ್ದಾರೆ. ಜೂನ್ ತಿಂಗಳ ಆರಂಭದಲ್ಲಿ ಕೆಜಿಗೆ 40 ರೂಪಾಯಿ ಟೊಮೇಟೊ ಬೆಲೆಯು ಜುಲೈನ ಮೊದಲ ವಾರದಲ್ಲಿ ಏನು ನೂರು ರೂಪಾಯಿ ದಾಟಿದ್ದು ಕೆಲವೊಂದು ಭಾಗಗಳಲ್ಲಿ 200 ರೂಪಾಯಿವರೆಗೆ ತಲುಪಿದೆ ಇದಕ್ಕೆ ಮುಖ್ಯ ಕಾರಣ ದೇಶದ ಉತ್ತರ ಭಾಗದಲ್ಲಿ ಸುರಿಯುತ್ತಿರುವಂತಹ ಭಾರಿ ಮಳೆಯಿಂದಾಗಿ ಬೆಳೆ ಹಾನಿ ಪ್ರಮಾಣದಲ್ಲಿ ನಷ್ಟವಾಗುತ್ತಿದೆ ಎಂದು ರಾಷ್ಟ್ರೀಯ ಸರಕು ಸೇವೆ ನಿರ್ವಹಣಾ ನಿಯಮಿತದ ಮುಖ್ಯಸ್ಥ ಸಂಜಯ್ ಗುಪ್ತ ಅವರು ಟೊಮೇಟೊ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಈ ಕುರಿತು ಅಭಿಪ್ರಾಯ ಪಟ್ಟಿದ್ದಾರೆ.

ಅಲ್ಲದೆ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ವೈರಸ್ ಸೋಂಕಿಗೆ ಬೆಳೆ ಹಾನಿಯಾಗುತ್ತಿರುವುದು ಸಹ ಟೊಮ್ಯಾಟೋ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಭಾರಿ ಬಿಸಿಲಿಗೆ ಕೆಲವೊಂದು ಪ್ರದೇಶಗಳಲ್ಲಿ ಬೆಳೆಗಳು ನಾಶವಾಗಿದ್ದು ಹೆಚ್ಚಿನ ರೈತರು ಮುಂದೆ ನಮ್ಮ ಬೆಳೆಗೆ ಸರಿಯಾದ ಬೆಲೆ ಸಿಗುತ್ತದೆಯೋ ಇಲ್ಲವೋ ಎಂಬ ಕಾರಣದಿಂದ ಬಿತ್ತನೆಯನ್ನು ಮಾಡುತ್ತಿಲ್ಲ ಹಾಗಾಗಿ ಈ ಎಲ್ಲಾ ಕಾರಣಗಳಿಂದ ಟೊಮೇಟೊ ಬೆಲೆಯು ಮುಂದಿನ ದಿನಗಳಲ್ಲಿ ದೇಶದಲ್ಲಿ 300 ರೂಪಾಯಿಗಳು ಹಾಗೂ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಟೊಮೊಟೊ ಮಾರಾಟ 90 ರೂಪಾಯಿಗೆ ಶುರು :

ಕೇಂದ್ರ ಸರ್ಕಾರವು ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗಾಗಿ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಒಬ್ಬರಿಗೆ ಕೆಜಿಗೆ 90 ರೂಪಾಯಿಗಳ ಮಾರಾಟವನ್ನು ನಿಗದಿಪಡಿಸಿ ರಿಯಾಯಿತಿಯ ದರದಲ್ಲಿ ಕೇಂದ್ರ ಸರ್ಕಾರವು ಜನಸಾಮಾನ್ಯರಿಗೆ ಟೊಮೇಟೊವನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನು ಶುರು ಮಾಡಿದೆ. ಅದರಂತೆ ಕೇಂದ್ರ ಸರ್ಕಾರವು ದೆಹಲಿ ಹಾಗೂ ಉತ್ತರ ಭಾರತದ ಕೆಲವು ನಗರಗಳಲ್ಲಿ ಈ ಯೋಜನೆಯ ಮೂಲಕ ರಿಯಾಯಿತಿ ದರದಲ್ಲಿ ಟೊಮೊಟೊ ಮಾರಾಟ ಮಾಡುತ್ತಿದೆ.

ಇದನ್ನು ಓದಿ : ಉಚಿತ ಜ್ಯೋತಿ ಪಡೆಯಲು ಇಲ್ಲಿಂದಲೇ ಅಪ್ಲೈ ಮಾಡಿ..! ಅರ್ಜಿ ಸಲ್ಲಿಸಿಲ್ಲ ಎಂದರೆ ನಿಮಗೆ ಉಚಿತ ಜ್ಯೋತಿ ಇಲ್ಲ

ಆದರೆ ದುರುಪಯೋಗ ತಡೆಗೆ ಒಬ್ಬರಿಗೆ ಕೇವಲ 2 ಕೆಜಿ ಎಂದು ಕೇಂದ್ರ ಸರ್ಕಾರವು ಮಿತಿಯನ್ನು ನಿಗದಿಪಡಿಸಿದೆ. ಟೊಮೊಟೊ ಬೆಳೆಗೆ ಉತ್ತರ ಭಾರತದಲ್ಲಿ ಭಾರಿ ಬೇಡಿಕೆ ಇದ್ದು ದೆಹಲಿ ಹಾಗೂ ಉತ್ತರ ಪ್ರದೇಶಗಳಲ್ಲಿ ಟೊಮೊಟೋ ಬೆಲೆಯು ಕೆಜಿಗೆ 200 ರೂಪಾಯಿಗಳವರೆಗೆ ತಲುಪಿತ್ತು ಹಾಗಾಗಿ ಇದಕ್ಕೆ ಅಂಕುಶ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರವು ಉತ್ತರದ ನಗರಗಳಲ್ಲಿ ನಫೆಡ್ ಹಾಗೂ ಇತರ ಸಹಕಾರಿ ಸಂಘಗಳ ಮೂಲಕ ಟೊಮೊಟೊ ಮಾರಾಟವನ್ನು ಆರಂಭಿಸಿದೆ ಈ ಟೊಮೊಟೊ ಮಾರಾಟವನ್ನು ಮೊಬೈಲ್ ವ್ಯಾನ್ ಗಳಲ್ಲಿ ಮಾಡಲಾಗುತ್ತಿದೆ. ಅತಿ ಹೆಚ್ಚು ಬೆಳೆಯುವಂತಹ ಪ್ರದೇ ಪ್ರದೇಶಗಳಾದ ಆಂಧ್ರಪ್ರದೇಶ ಕರ್ನಾಟಕ ಹಾಗೂ ಮಹಾರಾಷ್ಟ್ರಗಳಿಂದ ಟೊಮೇಟೊಗಳನ್ನು ತರಿಸಿಕೊಳ್ಳುವುದರ ಮೂಲಕ ಅಗ್ಗದ ಬೆಲೆಗೆ ದೇಶದ ಪ್ರಮುಖ ನಗರಗಳಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರವು ಇತ್ತೀಚಿಗಷ್ಟೇ ನಿರ್ಧರಿಸಿದೆ.

ಸರ್ಕಾರವು ಜನಸಾಮಾನ್ಯರ ಅನುಕೂಲಕ್ಕಾಗಿ ಟೊಮೇಟೊವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಜನಸಾಮಾನ್ಯರಿಗೆ ಕೆಜಿಗೆ 90 ರೂಪಾಯಿಗಳಲ್ಲಿ ಟೊಮೆಟೋವನ್ನು ಮಾರಾಟ ಮಾಡಲಾಗುತ್ತಿದೆ. ಬೆಳೆ ಹಾನಿಯಿಂದಾಗಿ ಹಾಗೂ ವೈರಸ್ ನ ಹಾವಳಿ ಹೆಚ್ಚಾಗಿರುವುದರಿಂದ ಟೊಮೇಟೊ ಬೆಲೆಯು ಮುಂದಿನ ದಿನಗಳಲ್ಲಿ 300 ಆಗಲಿದೆ ಎಂದು ತಜ್ಞರ ಪ್ರಕಾರ ಅಂದಾಜಿಸಲಾಗಿದೆ. ಹೀಗೆ ತರಕಾರಿಗಳಲ್ಲಿ ಅತಿ ಹೆಚ್ಚಿನ ಬೆಲೆಯನ್ನು ಟೊಮೇಟೊ ಅಂದಿದ್ದು ಕೆಂಪು ರಾಣಿ ಎಂದು ಟೊಮೊಟೊವನ್ನು ಗುರುತಿಸಲಾಗಿದೆ. ಮಾಹಿತಿಯನ್ನು ನಿಮ್ಮ ಸ್ನೇಹಿತರು ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 22 ಲಕ್ಷ ಬಿಪಿಎಲ್ ಕುಟುಂಬಗಳಿಗೆ ತಕ್ಷಣವೇ ಹಣ ಸಿಗುವುದಿಲ್ಲ

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಚಿಂತೆಪಡಬೇಡಿ ಪ್ರಜಾ ಪ್ರತಿನಿಧಿ ನೇಮಕ ಮಾಡಲಾಗಿದೆ

Leave A Reply

Your email address will not be published.