ಬ್ಯಾಂಕ್ ಲೈಸೆನ್ಸ್ ರದ್ದು ಮಾಡ್ತಾ RBI !!ಇಂದಿನಿಂದಲೇ ಎಲ್ಲಾ ವ್ಯವಹಾರ ಕ್ಯಾನ್ಸಲ್
ನಮಸ್ಕಾರ ಸ್ನೇಹಿತರೆ ನಿಮಗೆ ತಿಳಿಸುವುದೇನೆಂದರೆ ರಿಸೆರ್ವ್ ಬ್ಯಾಂಕ್ ಹೇಳಿಕೆಯ ಪ್ರಕಾರ ಇನ್ನು ಮುಂದೆ ಎರಡು ಬ್ಯಾಂಕುಗಳು ಯಾವುದೇ ರೀತಿಯ ಠೇವಣಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಮತ್ತು ಈಗಾಗಲೇ ಖಾತೆಗಳನ್ನು ಠೇವಣಿಗಳನ್ನು ಗ್ರಾಹಕರಿಗೆ ನೀಡಲು ಕೂಡ ಸಾಧ್ಯವಾಗುವುದಿಲ್ಲ ಎಂದು ತಿಳಿಸಲಾಗಿದೆ.
ಎರಡು ಬ್ಯಾಂಕ್ ಲೇಸನ್ಸ್ ರದ್ದು
ನಿಯಮಗಳನ್ನು ಪಾಲಿಸದ ಬ್ಯಾಂಕ್ ಗಳ ವಿರುದ್ಧ ಭಾರತೀಯ ರಿಜರ್ವ್ ಬ್ಯಾಂಕ್ ನಿರಂತರವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿಂದೆ ಎಚ್ ಡಿ ಎಫ್ ಸಿ ಮತ್ತು ಎಚ್ ಎಸ್ ಬಿ ಸಿ ಬ್ಯಾಂಕುಗಳಿಗೆ ತಂಡ ವಿಧಿಸಿದ ನಂತರ RBI ಈಗ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ಬ್ಯಾಂಕುಗಳ ಪರವಾನಗಿ ಗಳನ್ನು ರದ್ದುಗೊಳಿಸಿದೆ. ಜುಲೈ 5 2023 ರಂದು ಈ ಎರಡು ಬ್ಯಾಂಕುಗಳ ಲೈಸೆನ್ಸ್ ರದ್ದುಗೊಳಿಸಿದ . ನಂತರ ಯಾವುದೇ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನು ಮಾಡದಂತೆ ಎರಡು ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ ನೀಡಿದೆ.
ಯಾವುದೇ ರೀತಿಯ ಠೇವಣಿಯನ್ನು ಸ್ವೀಕರಿಸುವುದು ಸಾಧ್ಯವಾಗುವುದಿಲ್ಲ:
ಬುಲ್ಧಾನಾ ಮೂಲದ ಮಲ್ಕಾಪುರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮತ್ತು ಬೆಂಗಳೂರು ಮೂಲದ ಸುಶ್ರುತಿ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತ ಎರಡು ಬ್ಯಾಂಕುಗಳ ಬ್ಯಾಂಕಿಂಗ್ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ .ಎಂದು ಆರ್ ಬಿ ಐ ಹೇಳಿಕೆಯ ಪ್ರಕಾರ ಪರವಾನಗಿಗಳನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಎರಡು ಬ್ಯಾಂಕುಗಳು ಯಾವುದೇ ರೀತಿಯ ಠೇವಣಿಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ .ಅದಲ್ಲದೆ ಗ್ರಾಹಕರಿಗೆ ಠೇವಣಿ ನೀಡುವುದು ಕೂಡ ಸಾಧ್ಯವಾಗುತ್ತಿಲ್ಲ.
ಇದನ್ನು ಓದಿ : ಹೃದಯ ಘಾತ ತಪ್ಪಿಸಲು ಪುನೀತ್ ರಾಜಕುಮಾರ್ ಹೆಸರಿನಲ್ಲಿ ಬಜೆಟ್ ನಲ್ಲಿ ಹಣ ಮೀಸಲು
ಈ ಬ್ಯಾಂಕುಗಳಲ್ಲಿ ಹಣ ಜಮಾ ಮಾಡಿದವರ ಗತಿ ಏನು?
ಕೇಂದ್ರೀಯ ಬ್ಯಾಂಕ್ ಈ ಕ್ರಮವನ್ನು ಕೈಗೊಂಡಿದೆ ರಿಸರ್ವ್ ಬ್ಯಾಂಕ್ ಮಹಾರಾಷ್ಟ್ರದ ಸಹಕಾರಿ ಕಮಿಷನರ್ ಮತ್ತು ರಿಜಿಸ್ಟರ್ ಆಫ್ ಕೋ ಆಪರೇಟಿವ್ ಸೊಸೈಟಿಗಳಿಗೆ ಬ್ಯಾಂಕನ್ನು ಮುಚ್ಚಲು ಮತ್ತು ಬ್ಯಾಂಕ್ ಗೆ ಲಿಕ್ವಿಡೇಟರ್ ಅನ್ನು ನೇಮಿಸಲು ಆದೇಶವನ್ನು ನೀಡುವಂತೆ ಹೇಳಿಕೆ ನೀಡಿದೆ. ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಡಿಐಸಿಜಿಸಿ ಇಂದ 5 ಲಕ್ಷ ರೂಪಾಯಿಗಳ ಮಿತಿಯ ವರೆಗಿನ ತನ್ನ ಠೇವಣಿಯ ಠೇವಣಿ ವಿಮಾ ಕ್ಲೈಮ್ ಮೊತ್ತವನ್ನು ಸ್ವೀಕರಿಸಲು ಪ್ರತಿಯೊಬ್ಬ ಠೇವಣಿದಾರರು ಅರ್ಹರಾಗಿರುತ್ತಾರೆ. ಎಂದು ರಿಸರ್ವ್ ಬ್ಯಾಂಕ್ ಹೇಳಿದೆ .
ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ 97.60 ಪರ್ಸೆಂಟ್ ಠೇವಣಿದಾರರು ತಮ್ಮ ಠೇವಣಿಗಳ ಸಂಪೂರ್ಣ ಮೊತ್ತವನ್ನು ಡಿ ಐ ಸಿ ಜಿ ಸಿ ಇಂದ ಸ್ವೀಕರಿಸಲು ಅರ್ಹರಾಗಿರುತ್ತಾರೆ. ಮಲ್ಕಾಪುರ ಅರ್ಬನ್ ಕಾರ್ಪೊರೇಟಿವ್ ಬ್ಯಾಂಕ್ ಗೆ ಬ್ಯಾಂಕಿಂಗ್ ವ್ಯವಹಾರ ನಡೆಸಲು ಅವಕಾಶ ನೀಡಿದರೆ. ಅದು ಸಾರ್ವಜನಿಕ ಹಿತಾಸಕ್ತಿ ಮೇಲೆ ಪರಿಣಾಮ ಬೀರುತ್ತದೆ ಎಂದು ಆರ್ ಬಿ ಐ ಹೇಳಿದೆ ಮುಂಬರುವ ದಿನಗಳಲ್ಲಿ ಪ್ರಸ್ತುತ ಆರ್ಥಿಕ ಸ್ಥಿತಿಯೊಂದಿಗೆ ಬ್ಯಾಂಕ್ ತನ್ನ ಠೇವಣಿದಾರರಿಗೆ ಸಂಪೂರ್ಣ ಪಾವತಿಯನ್ನು ಮಾಡಲು ಸಾಧ್ಯವಾಗುವುದಿಲ್ಲ.
ಇದುವರೆಗೂ ನಮ್ಮ ಲೇಖನವನ್ನು ಓದಿದಂತಹ ನಿಮ್ಮೆಲ್ಲರಿಗೂ ಧನ್ಯವಾದಗಳು .ಸ್ನೇಹಿತರೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಫಾಲೋ ಮಾಡಿ ಮತ್ತು ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಮತ್ತು ಬಂಧುಗಳೊಂದಿಗೆ ಹಂಚಿಕೊಳ್ಳಿ ,
ಇತರೆ ವಿಷಯಗಳು :
ಮಧ್ಯಪ್ರಿಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ, ಬಿಯರ್ ನ ಬೆಲೆ ಎಷ್ಟಾಗಿದೆ ನೋಡಿ!!
ಉಚಿತ ಬಸ್ ಪ್ರಯಾಣದ ಬೆನ್ನಲ್ಲೇ ಮತ್ತೊಂದು ಸಿಹಿಸುದ್ದಿ, ರಾಜ್ಯದಲ್ಲಿ 100 ಸ್ಥಳಗಳಲ್ಲಿ ಪೆಟ್ರೋಲ್ ಬಂಕ್ ಗಳ ಸ್ಥಾಪನೆ,